ಮದುವೆ ಆದ ಮಗ ಮರಣ ಹೊಂದಿದ್ರೆ ಆತನ ಆಸ್ತಿ, ತಂದೆ-ತಾಯಿಗೋ? ಹೆಂಡತಿಗೋ? ಕಾನೂನು ಏನು ಹೇಳುತ್ತೆ

ವ್ಯಕ್ತಿ ಮೃತಪಟ್ಟ ನಂತರ ಆತನ ಆಸ್ತಿ ಆನಂತರ ಹೆಂಡತಿಗೆ ಸೇರುತ್ತದೆಯೇ ಅಥವಾ ಆತನ ತಂದೆ ತಾಯಿ ಸಂಪೂರ್ಣ ಆಸ್ತಿಗೆ ಹಕ್ಕುದಾರರೇ (property rights) ಎನ್ನುವ ಗೊಂದಲ ಪ್ರತಿಯೊಬ್ಬರಲ್ಲೂ ಇರುತ್ತದೆ

ಮನುಷ್ಯ ಬದುಕಿರುವಷ್ಟು ದಿನ ತನಗಾಗಿ ತನ್ನವರಿಗಾಗಿ ದುಡಿಯುತ್ತಾನೆ, ಅದೆಷ್ಟೋ ಜನ ಸಾಕಷ್ಟು ಆಸ್ತಿಯನ್ನು (property) ಮಾಡಿರುತ್ತಾರೆ, ಆದರೆ ಆತ ಮರಣ ಹೊಂದಿದ ನಂತರ ಆ ಆಸ್ತಿಯನ್ನು (Wealth) ಅವನಂತೂ ಕೊಂಡೊಯ್ಯುವುದಿಲ್ಲ. ಬದಲಿಗೆ ತನ್ನವರಿಗಾಗಿ ತಾನು ದುಡಿದ ಆಸ್ತಿಯನ್ನು ಬಿಟ್ಟು ಹೋಗುತ್ತಾನೆ.

ವ್ಯಕ್ತಿ ಮೃತಪಟ್ಟ ನಂತರ ಆತನ ಆಸ್ತಿ ಆನಂತರ ಹೆಂಡತಿಗೆ ಸೇರುತ್ತದೆಯೇ ಅಥವಾ ಆತನ ತಂದೆ ತಾಯಿ ಸಂಪೂರ್ಣ ಆಸ್ತಿಗೆ ಹಕ್ಕುದಾರರೇ (property rights) ಎನ್ನುವ ಗೊಂದಲ ಪ್ರತಿಯೊಬ್ಬರಲ್ಲೂ ಇರುತ್ತದೆ, ಈಗ ಗೊಂದಲವನ್ನು ಪರಿಹರಿಸಲು ಈ ಲೇಖನ ಸಹಾಯವಾಗಬಹುದು.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಕೇವಲ ₹50 ರೂಪಾಯಿ ಉಳಿಸಿ, ₹35 ಲಕ್ಷ ಗಳಿಸಿ!

ಮದುವೆ ಆದ ಮಗ ಮರಣ ಹೊಂದಿದ್ರೆ ಆತನ ಆಸ್ತಿ, ತಂದೆ-ತಾಯಿಗೋ? ಹೆಂಡತಿಗೋ? ಕಾನೂನು ಏನು ಹೇಳುತ್ತೆ - Kannada News

ವ್ಯಕ್ತಿ ಮರಣ ಹೊಂದಿದರೆ ಆಸ್ತಿ ಯಾರಿಗೆ ಸಲ್ಲುತ್ತದೆ?

ಆಸ್ತಿ ಹಕ್ಕಿನ ಬಗ್ಗೆ ಹಿಂದು ಉತ್ತರಾಧಿಕಾರಿ ಕಾಯ್ದೆಯಲ್ಲಿ (Hindu uttradhikari rules) ಸಾಕಷ್ಟು ನಿಯಮಗಳು ಇವೆ, ಈ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಮರಣ ಹೊಂದಿದರೆ ಆತನ ಆಸ್ತಿಯನ್ನು ಮೂರು ಸಮಾನ ಹಂಚಿಕೆಯನ್ನು ಮಾಡಬೇಕಾಗುತ್ತದೆ.

ಮೊದಲ ಶ್ರೇಣಿಯ ಹಕ್ಕುದಾರರು ಆತನ ಹೆಂಡತಿ (wife and children) ಮತ್ತು ಮಕ್ಕಳು ಹಾಗೂ ಆತನ ತಾಯಿ (mother) ಆಗಿರುತ್ತಾರೆ. ಹಾಗಾಗಿ ಒಬ್ಬ ವೇಳೆ ವ್ಯಕ್ತಿ ಮೃತಪಟ್ಟರೆ ಆಸ್ತಿಯನ್ನು ಆತನ ಪತ್ನಿ, ಮಕ್ಕಳು ಹಾಗೂ ತಾಯಿ ಈ ಮೂವರಿಗೂ ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ.

ಯಾವುದೇ ಉಯಿಲು ಬರೆಯದೇ ಇದ್ದಾಗಲೂ ಕಾನೂನು ಪ್ರಕಾರ ಇದೇ ಹಕ್ಕು ಮುಂದುವರೆಯುತ್ತದೆ. ಇದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ.

ಇನ್ನು ಮದುವೆ ಆಗದೆ ಇರುವ ವ್ಯಕ್ತಿ ಮೃತಪಟ್ಟಿದ್ದು, ಆಸ್ತಿಯನ್ನು ಹೊಂದಿದ್ದರು ಅದರ ವಿಲ್ (property will) ಮಾಡಿಸದೆ ಇದ್ದಲ್ಲಿ, ಆಗ ಸಂಪೂರ್ಣ ಆಸ್ತಿ ಆತನ ತಂದೆ ತಾಯಿಗೆ ಸೇರುತ್ತದೆ.

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಡಬಹುದು? ಹೆಚ್ಚು ಹಣ ಇಟ್ರೆ ಏನಾಗುತ್ತೆ ಗೊತ್ತಾ?

ಒಂದು ವೇಳೆ ಉಯಿಲು ಬರೆದಿದ್ದರೆ ಅಂತವರ ಹೆಸರಿಗೆ ಆಸ್ತಿ (Property) ಸೇರುತ್ತದೆ ಎಂದು ಹಿಂದು ಉತ್ತರಾಧಿಕಾರಿ ಕಾಯ್ದೆಯಲ್ಲಿ ಹೇಳಲಾಗುತ್ತದೆ. ಹಿಂದೂ ಉತ್ತರಾಧಿಕಾರಿ ಕಾಯ್ದೆ 8ರ ಪ್ರಕಾರ, ಮಕ್ಕಳ ಆಸ್ತಿಯ ಮೊದಲ ಹಕ್ಕು ತಾಯಿಗೆ ಇರುವುದು, ಎರಡನೇ ಹಕ್ಕು ತಂದೆಗೆ ಹೋಗುತ್ತದೆ. ಆದರೆ ತಾಯಿ ಇಲ್ಲದೆ ಇರುವ ಸಂದರ್ಭದಲ್ಲಿ ಆ ಆಸ್ತಿಯ ಸಂಪೂರ್ಣ ಹಕ್ಕು ತಂದೆಗೆ ಹೋಗುತ್ತದೆ.

property New Rulesಆದರೆ ಆ ವ್ಯಕ್ತಿಗೆ ಮದುವೆಯಾಗಿದ್ದರೆ ಆಗ ತಾಯಿಯ ಜೊತೆಗೆ ತನ್ನ ಹೆಂಡತಿ ಮತ್ತು ಮಕ್ಕಳಿಗೂ ಕೂಡ ಮೊದಲ ದರ್ಜೆಯ ಹಕ್ಕುದಾರರನ್ನಾಗಿ ಕಾನೂನಾತ್ಮಕವಾಗಿ ಘೋಷಣೆ ಮಾಡಲಾಗುತ್ತದೆ.

ಇನ್ನು ಆಸ್ತಿ ನಿಯಮ ಅಥವಾ ಪ್ರಾಪರ್ಟಿ ರೂಲ್ಸ್ (property rules) ಆಯಾ ಸ್ಥಳಕ್ಕೆ ಪರಿಸ್ಥಿತಿಗೆ ಹಾಗೂ ವ್ಯಕ್ತಿಗೆ ಸಂಬಂಧಪಟ್ಟ ಹಾಗೆ ತುಸು ವ್ಯತ್ಯಾಸವು ಆಗಬಹುದು. ಆದರೆ ಪ್ರಾಥಮಿಕ ಹಕ್ಕು ಹಾಗೂ ನಿಯಮಗಳನ್ನು ನೋಡುವುದಾದರೆ ಮಗನ ಆಸ್ತಿಯಲ್ಲಿ ತಾಯಿ ಹೆಂಡತಿ ಹಾಗೂ ಮಕ್ಕಳಿಗೆ ಸಮಾನವಾದ ಪಾಲಿದೆ.

ನಿಮ್ಮ ಜೇಬಿನಲ್ಲಿ 50 ಸಾವಿರವಿದ್ರೆ ಈ ಬ್ಯುಸಿನೆಸ್ ಗಳನ್ನು ಆರಂಭಿಸಿ, ಗಳಿಸಬಹುದು ಲಕ್ಷ ಲಕ್ಷ ಹಣ

ನಾವು ಆಸ್ತಿ ಗಾಗಿ ಕಿತ್ತಾಡುವುದಕ್ಕೂ ಮೊದಲು ಕಾನೂನನ್ನು ತಿಳಿದುಕೊಂಡರೆ, ಆಸ್ತಿ ವಿವಾದಗಳು ಸುಲಭವಾಗಿ ಕಾನೂನಾತ್ಮಕವಾಗಿ ಪರಿಹರಿಸಿಕೊಳ್ಳಬಹುದು ಅಲ್ವೇ!

If a married son dies, does his property belong to his parents or wife

Follow us On

FaceBook Google News

If a married son dies, does his property belong to his parents or wife