ನೀವು ಅತಿ ಕಡಿಮೆ ಹೂಡಿಕೆ (low investment) ಮಾಡಿ ಹೆಚ್ಚು ಲಾಭ ಗಳಿಸಬೇಕು ಅಂದುಕೊಂಡಿದ್ದೀರಾ? ನೀವು ಮಾಡಿರುವ ಹೂಡಿಕೆ ಹೆಚ್ಚು ಸೇಫ್ ಆಗಿರಬೇಕು ಎಂದು ಬಯಸುವಿರಾ?
ಹಾಗಾದ್ರೆ ಚಿಂತೆ ಬೇಡ ಭಾರತೀಯ ಅಂಚೆ ಕಚೇರಿಯಲ್ಲಿ (Post Office Scheme) ನೀವು ಅತಿ ಕಡಿಮೆ ಹಣ ಉಳಿಸುವುದರ ಮೂಲಕ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು.
ಭಾರತೀಯ ಅಂಚೆ ಕಚೇರಿ ಇತ್ತೀಚಿನ ದಿನಗಳಲ್ಲಿ ಹೂಡಿಕೆ ಯೋಜನೆಯನ್ನು ಹೆಚ್ಚು ಹೆಚ್ಚು ಪರಿಚಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ನಿಧಿ ಸಂಗ್ರಹಣೆಗಾಗಿ ಜನ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಬಳಸುತ್ತಾರೆ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಡಬಹುದು? ಹೆಚ್ಚು ಹಣ ಇಟ್ರೆ ಏನಾಗುತ್ತೆ ಗೊತ್ತಾ?
ಪೋಸ್ಟ್ ಆಫೀಸ್ ನ ಹೂಡಿಕೆ ಯೋಜನೆ: (Post Office Investment Schemes)
ಪೋಸ್ಟ್ ಆಫೀಸ್ ನಲ್ಲಿ ಅತಿ ಹೆಚ್ಚು ಲಾಭ ನೀಡುವಂತಹ ಯೋಜನೆಗಳು ಇವೆ. ಇಂಡಿಯನ್ ಪೋಸ್ಟ್ ಆಫೀಸ್ (Indian post office) ಜನಸಾಮಾನ್ಯರಿಗಾಗಿ ಅತ್ಯಂತ ಸುರಕ್ಷಿತ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದ್ದು ಅವುಗಳಲ್ಲಿ ಮುಖ್ಯವಾಗಿರುವ ಯೋಜನೆ ಗ್ರಾಮ ಸುರಕ್ಷಾ ಯೋಜನೆ.
ಈ ಯೋಜನೆ ಸಾಕಷ್ಟು ವರ್ಷಗಳಿಂದಲೂ ಪೋಸ್ಟ್ ಆಫೀಸ್ನಲ್ಲಿ ಜಾರಿಯಲ್ಲಿದ್ದು ಗ್ರಾಮೀಣ ಪ್ರದೇಶದ ಜನರಿಗಾಗಿ ಹೆಚ್ಚು ಉತ್ತಮ ಆಯ್ಕೆ ಎನ್ನಬಹುದು.
ನಿಮ್ಮ ಜೇಬಿನಲ್ಲಿ 50 ಸಾವಿರವಿದ್ರೆ ಈ ಬ್ಯುಸಿನೆಸ್ ಗಳನ್ನು ಆರಂಭಿಸಿ, ಗಳಿಸಬಹುದು ಲಕ್ಷ ಲಕ್ಷ ಹಣ
ಗ್ರಾಮ ಸುರಕ್ಷಾ ಯೋಜನೆ (Gram Suraksha Yojana)
ಈ ಅಂಚೆ ಕಚೇರಿಯ ಯೋಜನೆ ಆರಂಭವಾಗಿದ್ದು 1995ರಲ್ಲಿ. ಗ್ರಾಮೀಣ ಭಾಗದಲ್ಲಿ, ಅದರಲ್ಲೂ ಮಧ್ಯಮ ವರ್ಗದವರಿಗೆ ಇದು ಬೆಸ್ಟ್ ಹೂಡಿಕೆಯ ಯೋಜನೆ (Investment Plan) ಎನ್ನಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬೇಕಾಗುವ ಅರ್ಹತೆಗಳನ್ನು ನೋಡುವುದಾದರೆ,
• ಹೂಡಿಕೆದಾರನ ವಯಸ್ಸು ಕನಿಷ್ಠ 19 ವರ್ಷ ಹಾಗೂ ಗರಿಷ್ಠ 55 ವರ್ಷಗಳು.
• ವಿಮಾ (Insurance) ಮತ್ತು ಕನಿಷ್ಠ 10,000 ಗಳಿಂದ ಗರಿಷ್ಠ 10 ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಬಹುದು.
• ನಾಲ್ಕು ವರ್ಷಗಳ ಕವರೇಜ್ ಬಳಿಕ ಸಾಲ ಸೌಲಭ್ಯವನ್ನು (loan) ಕೂಡ ಈ ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದು.
• ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಹಾಗೂ ವಾರ್ಷಿಕ ಪ್ರೀಮಿಯಂ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
ಎರಡಕ್ಕಿಂತ ಹೆಚ್ಚು ಮನೆ ಬಾಡಿಗೆಗೆ ಕೊಟ್ಟಿರುವ ಮಾಲೀಕರಿಗೆ ಹೊಸ ನಿಯಮಗಳು! ಹೊಸ ರೂಲ್ಸ್
50 ರೂಪಾಯಿ ಹೂಡಿಕೆ ಮಾಡಿದ್ರೆ 35 ಲಕ್ಷ ರೂಪಾಯಿ ಸಿಗುತ್ತೆ;
ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಗ್ರಾಮ ಸುರಕ್ಷಾ ಯೋಜನೆಯ ಅಡಿಯಲ್ಲಿ ಕೇವಲ ಐವತ್ತು ರೂಪಾಯಿಗಳಿಂದ ಪಾಲಿಸಿ ಆರಂಭಿಸಬಹುದು.
ನಿಮ್ಮ 19ನೇ ವಯಸ್ಸಿನಲ್ಲಿ 10 ಲಕ್ಷ ರೂಪಾಯಿಗಳ ಗ್ರಾಮ ಸುರಕ್ಷಾ ಯೋಜನೆಯ ಪಾಲಿಸಿ ಮಾಡಿಸಿದರೆ ದಿನಕ್ಕೆ 50 ರೂಪಾಯಿಗಳಂತೆ ಪ್ರತಿ ತಿಂಗಳು 1515 ರೂಪಾಯಿಗಳನ್ನು ಉಳಿತಾಯ (Savings) ಮಾಡಿ ಪಾವತಿ ಮಾಡಬೇಕು.
ಈ ರೀತಿ ಉಳಿತಾಯ ಮಾಡಿದರೆ ನೀವು ಪಾಲಿಸಿ ಮೆಚುರಿಟಿ ಸಮಯದಲ್ಲಿ 34.60 ಲಕ್ಷ ರೂಪಾಯಿಗಳನ್ನು ಪಡೆಯಬಹುದು. ಒಂದು ವೇಳೆ ಐದು ವರ್ಷಗಳಲ್ಲಿ ಈ ಯೋಜನೆಯಿಂದ ಹೊರಬರಲು ನಿರ್ಧರಿಸಿದರೆ ಬೋನಸ್ ಮೊತ್ತ (bonus amount) ಸಿಗುವುದಿಲ್ಲ.
ಇಲ್ಲವಾದಲ್ಲಿ ಪ್ರತಿ ಸಾವಿರ ರೂಪಾಯಿಗೆ 60 ರೂಪಾಯಿಗಳಂತೆ ಬೋನಸ್ ಪಡೆದುಕೊಳ್ಳಬಹುದು. ಹಾಗಾಗಿ ಪ್ರತಿದಿನ ಒಂದು ಚಹಾಕ್ಕೆ ಖರ್ಚು ಮಾಡುವಷ್ಟು ಹಣವನ್ನು ಉಳಿತಾಯ ಮಾಡಿ ಭವಿಷ್ಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಿ.
Save just 50 Rupees in this post office scheme and earn 35 lakh
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.