ಎಲ್ಲರಿಗೂ ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಂಡು ಆ ಮನೆಯಲ್ಲಿ ವಾಸ ಮಾಡುವುದು ಸಾಧ್ಯವಾಗುವುದಿಲ್ಲ, ಹಾಗಾಗಿ ನಗರ ಪ್ರದೇಶಗಳಲ್ಲಿ (city) ಉದ್ಯೋಗಕ್ಕೆ ಅಥವಾ ಶಿಕ್ಷಣ (Education) ಕಲಿಯುವುದಕ್ಕೆ ಬೇರೆ ಊರುಗಳಿಂದ ಬಂದವರು ಬಾಡಿಗೆ ಮನೆಯಲ್ಲಿ (Rent House) ವಾಸ ಮಾಡುವುದು ಸಹಜ
ಹೆಚ್ಚು ಆಸ್ತಿ ಹೊಂದಿರುವವರು ಒಂದಷ್ಟು ಆಸ್ತಿಯನ್ನು ಬಾಡಿಗೆ (rent house) ಮನೆ ಕಟ್ಟಿಸಿ ಬಾಡಿಗೆಯಿಂದ ಬರುವ ಹಣದ ಮೂಲಕವೇ ಜೀವನ ನಡೆಸುತ್ತಾರೆ. ಆದರೆ ಹೀಗೆ ಬಾಡಿಗೆ ಕೊಡುವುದು ಹಾಗೂ ತೆಗೆದುಕೊಳ್ಳುವುದರ ಹಿಂದೆಯೂ ಕೂಡ ಕೆಲವು ಕಾನೂನಾತ್ಮಕ ನಿಯಮಗಳು ಇವೆ
ಮುಂದೆ ಕಾನೂನಿನ ಸಮಸ್ಯೆ ಎದುರಾದಾಗ ಯಾವುದೇ ರೀತಿಯ ಸಹಾಯವು ಸರ್ಕಾರದಿಂದ ದೊರೆಯುವುದಿಲ್ಲ, ಹಾಗಾಗಿ ಪ್ರತಿಯೊಬ್ಬರೂ ಈ ನಿಯಮಗಳ ಬಗ್ಗೆ ತಿಳಿದುಕೊಂಡಿರಬೇಕು.
ಬಾಡಿಗೆ ಮನೆಯನ್ನು ಕೊಡುವ ಮಾಲೀಕರು ಹಾಗೂ ಬಾಡಿಗೆ ತೆಗೆದುಕೊಳ್ಳುವವರು ಆಸ್ತಿ ವಿಚಾರವಾಗಿ (Property) ಇರುವ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಹಾಗೂ ಈ ನಿಯಮಗಳನ್ನು ಅನುಸರಿಸಬೇಕಾಗುತ್ತದೆ
ಬಾಡಿಗೆದಾರರ ಹಕ್ಕುಗಳ ಬಗ್ಗೆ ಮಾಲೀಕರಿಗೆ ಗೊತ್ತಿರಬೇಕು. ಹಾಗೆ ಮಾಲೀಕರ ಆಸ್ತಿಯ ಬಗ್ಗೆ ಬಾಡಿಗೆದಾರರು ಕೂಡ ಕೆಲವು ಶರತ್ತುಗಳನ್ನು ಒಪ್ಪಿಕೊಂಡು ಬಾಡಿಗೆ ಪಡೆದುಕೊಳ್ಳಬೇಕಾಗುತ್ತದೆ.
ಬಾಡಿಗೆ ಮನೆಯಲ್ಲಿ ಇರುವವರಿಗೆ ಹೊಸ ನಿಯಮ;
ಮಡಿಗೆ ಮನೆಯಲ್ಲಿ ವಾಸಿಸುವವರೆಗೂ ಕೂಡ ಅವರದೇ ಆದ ಹಕ್ಕುಗಳು ಇರುತ್ತವೆ. ಮಾದರಿ ಹಿಡುವಳಿ ಕಾಯಿದೆ 2021ರ ಪ್ರಕಾರ, ಯಾವುದೇ ಭೂ ಮಾಲೀಕ (owner of the property) ಇದ್ದಕ್ಕಿದ್ದಂತೆ ಬಾಡಿಗೆ ಮನೆಯ ಬಾಡಿಗೆಯನ್ನು ಹೆಚ್ಚಿಸುವಂತಿಲ್ಲ.
ಒಂದು ವೇಳೆ ಬಾಡಿಗೆ ಹೆಚ್ಚಿಸುವುದಾದರೆ ಮೂರು ತಿಂಗಳ ನೋಟಿಸ್ ಪಿರಿಯಡ್ (notice period) ಕೊಡಬೇಕು. ಬಾಡಿಗೆ ಒಪ್ಪಂದಕ್ಕೂ ಮೊದಲು ಬಾಡಿಗೆದಾರ ಹಾಗೂ ಜಮೀನುದಾರ ಇಬ್ಬರು ಈ ಬಗ್ಗೆ ಮಾತುಕತೆ ನಡೆಸಿಕೊಳ್ಳಬೇಕು. ಒಪ್ಪಂದದಲ್ಲಿ ಎಷ್ಟು ಹಣ ಮೆನ್ಷನ್ ಆಗಿರುತ್ತದೆಯೋ ಅದಕ್ಕಿಂತ ಹೆಚ್ಚಿಗೆ ಬಾಡಿಗೆಯನ್ನು ಮಾಲಿಕ ಕೇಳುವ ಹಾಗಿಲ್ಲ.
ಒಬ್ಬ ಮನೆಯ ಮಾಲೀಕ ಅಥವಾ ಜಮೀನ್ದಾರ ಮನೆಯಲ್ಲಿ ವಾಸವಾಗಿರುವ ಬಾಡಿಗೆದಾರನ ಬಳಿ ಎರಡು ತಿಂಗಳಿಗಿಂತಲೂ ಹೆಚ್ಚಿನ ಮುಂಗಡ ಹಣವನ್ನು ಪಡೆದುಕೊಳ್ಳುವಂತಿಲ್ಲ, ಅಲ್ಲದೆ ಬಾಡಿಗೆದಾರ ಮನೆಯನ್ನು ಖಾಲಿ ಮಾಡುವುದಕ್ಕೂ ಮೊದಲೇ ತಿಳಿಸಿದಾಗ ಮಾಲೀಕರು ಡಿಪೋಸಿಟ್ (deposit money) ಹಣವನ್ನು ಒಂದು ತಿಂಗಳ ಒಳಗೆ ಹಿಂತಿರುಗಿಸಬೇಕು.
ಸೌಲಭ್ಯಗಳ ಕಡಿತ ಮಾಡುವಂತಿಲ್ಲ:
ಬಾಡಿಗೆದಾರ ಒಂದು ತಿಂಗಳು ಬಾಡಿಗೆ ಪಾವತಿಸಲು ಸಾಧ್ಯವಾಗಿಲ್ಲ ಎನ್ನುವ ಕಾರಣಕ್ಕೆ, ಆತ ವಾಸವಾಗಿರುವ ಮನೆಯ ವಿದ್ಯುತ್ (Electricity) ಅಥವಾ ನೀರಿನ ಸೌಲಭ್ಯವನ್ನು (Water Facility) ಮನೆಯ ಓನರ್ ಕಡಿತಗೊಳಿಸುವಂತಿಲ್ಲ, ಅಲ್ಲದೆ ಬಾಡಿಗೆದಾರನ ಅನುಪಸ್ಥಿತಿಯಿಲ್ಲದೆ ಆತನ ಮನೆಗೆ ಪ್ರವೇಶಿಸುವಂತಿಲ್ಲ.
ನೋಟಿಸ್ ಕೊಡದೆ ಮನೆ ಖಾಲಿ ಮಾಡಲು ಹೇಳುವಂತಿಲ್ಲ:
ಇನ್ನು ಯಾವುದಾದರೂ ಸಂದರ್ಭದಲ್ಲಿ ಮನೆ ಮಾಲೀಕ ಬಾಡಿಗೆದಾರನನ್ನು ಆ ಮನೆಯಿಂದ ಕಳುಹಿಸಬೇಕಿದ್ದರೆ ಏಕಾಏಕಿ ಬಾಡಿಗೆದಾರನನ್ನ ಮನೆ ಖಾಲಿ ಮಾಡು ಎಂದು ಹೇಳುವಂತಿಲ್ಲ, ಆತನಿಗೆ ಒಂದಿಷ್ಟು ಸಮಯವನ್ನು ಕೊಟ್ಟು ನಂತರ ಖಾಲಿ ಮಾಡಿಸಬೇಕಾಗುತ್ತದೆ.
ಬಾಡಿಗೆ ಮನೆಯ ಪೇಂಟಿಂಗ್ (painting) ಇರಬಹುದು ಅಥವಾ ಯಾವುದೇ ರಿಪೇರಿ ಕೆಲಸಗಳಿರಬಹುದು ಇದ್ಯಾವುದು ಬಾಡಿಗೆದಾರನ ಜವಾಬ್ದಾರಿ ಅಲ್ಲ ಯಾವುದೇ ವಸ್ತು ಹಾಳಾದರೂ ಮಾಲೀಕ ಜವಾಬ್ದಾರಿಯುತವಾಗಿ ಅದನ್ನು ರಿಪೇರಿ (house repair) ಮಾಡಿಸಿ ಕೊಡಬೇಕು, ಬಾಡಿಗೆದಾರನ ಬಳಿ ಹಣ ಕೇಳುವಂತಿಲ್ಲ.
ಅಗ್ರಿಮೆಂಟ್ ಬಳಿಕ ಶರತ್ತು ಹಾಕುವಂತಿಲ್ಲ: (no more conditions after agreement)
ಮನೆಯ ಓನರ್ ಯಾವುದೇ ಷರತ್ತು ಹಾಕುವುದಿದ್ದರೂ ಅಗ್ರಿಮೆಂಟ್ ನಲ್ಲಿ ಅವುಗಳನ್ನು ತಿಳಿಸಿರಬೇಕು ಹಾಗೂ ಇದು ಬಾಡಿಗೆದಾರನಿಗೆ ಒಪ್ಪಿಗೆ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು.
ಒಮ್ಮೆ ಅಗ್ರಿಮೆಂಟ್ ಮಾಡಿಕೊಂಡ ನಂತರ ಮತ್ತೆ ಯಾವುದೇ ಶರತ್ತನ್ನು ವಿಧಿಸುವಂತಿಲ್ಲ. ಹಾಗಾಗಿ ಬಾಡಿಗೆ ಮನೆಯಲ್ಲಿ ವಾಸಿಸುವವರು ಈ ನಿಯಮಗಳನ್ನು ತಿಳಿದುಕೊಂಡಿರಬೇಕು ಹಾಗೂ ಬಾಡಿಗೆ ಕೊಡುವ ಮನೆಯ ಮಾಲೀಕರು ಕೂಡ ಬಾಡಿಗೆದಾರರಿಂದ ಈ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ.
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019