ಸಿಹಿ ಸುದ್ದಿ! ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹಣ ಡಬಲ್ ಆಗುತ್ತೆ
ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಯಾವುದೇ ಸಮಸ್ಯೆ ಇಲ್ಲದೆ ನಿಮ್ಮ ಹಣ ಸೇಪಾಗಿ ದುಪ್ಪಟ್ಟಾಗುತ್ತದೆ.
ಪುರುಷರು ದುಡಿಯುತ್ತಾರೆ, ಹಣ ಸಂಪಾದನೆ (earnings) ಮಾಡುತ್ತಾರೆ. ಹಾಗೆ ಅಗತ್ಯ ಇದ್ದಾಗ ಸೇವಿಂಗ್ಸ್ (savings) ಕೂಡ ಮಾಡುತ್ತಾರೆ. ಆದರೆ ಸಾಕಷ್ಟು ಮಹಿಳೆಯರು ಮನೆಯಲ್ಲಿಯೇ ಇರುವುದರಿಂದ ಅವರ ಕೈಗೆ ಹಣ ಬರುವುದಿಲ್ಲ… ಬಂದರು ಅದನ್ನ ಯಾವುದಾದರೂ ಸಾಸಿವೆ ಡಬ್ಬಿಯಲ್ಲಿ, ಅಕ್ಕಿ ಡಬ್ಬಿಯಲ್ಲೊ ಹಾಕಿ ಇಡುತ್ತಾರೆ. ಹೀಗೆ ಮಾಡಿದರೆ ಹಣ ಮರಿ ಹಾಕುತ್ತಾ?
ಖಂಡಿತವಾಗಿಯೂ ಇಲ್ಲ. ಹಾಗಾಗಿ ನೀವು ಬ್ಯಾಂಕ್ (Bank) ಅಥವಾ ಅಂಚೆ ಕಚೇರಿಗಳಲ್ಲಿ (Post Office) ಹೂಡಿಕೆ ಮಾಡಿದರೆ ಉತ್ತಮ ಲಾಭವನ್ನು ಪಡೆದುಕೊಳ್ಳಬಹುದು.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹತ್ತು ಸಾವಿರ ಡಿಪಾಸಿಟ್ ಇಟ್ರೆ 7 ಲಕ್ಷ ಸಿಗಲಿದೆ
ಅಂದ್ರೆ ನೀವು ಇಟ್ಟ ಹಣ ಡಬಲ್ ಆಗಬಹುದು. ಮನೆಯಲ್ಲಿ ಪೆಟ್ಟಿಗೆಯಲ್ಲಿ ಹಣ ಇಡುವುದಕ್ಕಿಂತ ಯಾವುದಾದರೂ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಅಲ್ಪ ಹಣಕ್ಕೂ ಜಾಸ್ತಿ ಲಾಭ ಪಡೆದುಕೊಳ್ಳಲು ಸಾಧ್ಯವಿದೆ. ಹಾಗಾದ್ರೆ ಅಂತಹ ಯೋಜನೆಗಳು ಯಾವವು ಎಂಬುದನ್ನು ನೋಡೋಣ.
ಸಾರ್ವಜನಿಕ ಭವಿಷ್ಯ ನಿಧಿ (PPF) ಮ್ಯೂಚುಯಲ್ ಫಂಡ್‌ಗಳು (Mutual Fund), ರಾಷ್ಟ್ರೀಯ ಪಿಂಚಣಿ ಯೋಜನೆ (NPS), ಸ್ಥಿರ ಠೇವಣಿಗಳು (Fixed Deposit), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ,ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ
ಮ್ಯೂಚುವಲ್ ಫಂಡ್ ಹೂಡಿಕೆ!
ಇತ್ತೀಚೆಗೆ ಹೆಣ್ಣು ಮಕ್ಕಳು ಕೂಡ ದುಡಿಯುತ್ತಾರೆ. ಕೆಲಸಕ್ಕೆ ಹೋಗುತ್ತಾರೆ ಅಂತಹ ಸಂದರ್ಭದಲ್ಲಿ ನೀವು ಗಳಿಸಿದ ಹಣವನ್ನು ಮ್ಯೂಚುವಲ್ ಫಂಡ್ (mutual fund) ನಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಆದಾಯ ಗಳಿಸಬಹುದು.
ಗೋಲ್ಡ್ ಲೋನ್, ಪರ್ಸನಲ್ ಲೋನ್! ಯಾವುದು ಬೆಸ್ಟ್? ಯಾವುದು ಹೆಚ್ಚು ಬೆನಿಫಿಟ್
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ (MSSC)!
ಇದು ವಿಶೇಷವಾಗಿ ಕೇಂದ್ರ ಸರ್ಕಾರ ಮಹಿಳೆಯರಿಗಾಗಿಯೇ ಆರಂಭಿಸಿದ ಯೋಜನೆ ಆಗಿದೆ ಇಲ್ಲಿ ನೀವು ಕನಿಷ್ಠ ಸಾವಿರ ರೂಪಾಯಿಗಳಿಂದ ಗರಿಷ್ಠ ಎರಡು ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಬಹುದು. ಇದು ಎರಡು ವರ್ಷಗಳ ಯೋಜನೆ ಆಗಿದ್ದು 8.4% ಬಡ್ಡಿ ದರದಲ್ಲಿ ಆದಾಯವನ್ನು ಹಿಂಪಡೆಯುತ್ತೀರಿ.
ಹೊಸ ಮನೆ ಕಟ್ಟೋರಿಗೆ ಸಿಹಿ ಸುದ್ದಿ! ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ ಹೋಂ ಲೋನ್
ಸಾರ್ವಜನಿಕ ಭವಿಷ್ಯ ನಿಧಿ (PPF)
ಇಲ್ಲಿ ಹಣಕಾಸು ವರ್ಷದ ಅವಧಿಯಲ್ಲಿ ಕನಿಷ್ಠ 200 ರೂಪಾಯಿಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಪಿಪಿ ಎಫ್ ಹೂಡಿಕೆ ತೆರಿಗೆ ಮುಕ್ತವಾಗಿದೆ. ಇಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಲಾಭ ಪಡೆಯಬಹುದು. ಮೂರು ಹಣಕಾಸು ವರ್ಷದಿಂದ ಆರು ಹಣಕಾಸು ವರ್ಷದವರೆಗೆ ಸಾಲ ಸೌಲಭ್ಯ (Loan) ಪಡೆಯಬಹುದು ಹಾಗೂ 7ನೇ ಹಣಕಾಸಿನ ವರ್ಷದಲ್ಲಿ ನಿಮ್ಮ ಹೂಡಿಕೆಯ ಬಹು ಭಾಗವನ್ನು ಹಿಂಪಡೆಯಬಹುದು.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)!
ಇದು ದೀರ್ಘಾವಧಿಯ ಉಳಿತಾಯ ಯೋಜನೆ ಆಗಿದ್ದು ನಿವೃತ್ತಿ ನಂತರ ಉತ್ತಮ ಪಿಂಚಣಿ ಹಣವನ್ನು ಪಡೆಯಲು ಬಯಸಿದರೆ ಇಲ್ಲಿ ಹೂಡಿಕೆ ಮಾಡಬಹುದು. ಪ್ರತಿ ತಿಂಗಳು ಪಿಂಚಣಿ (Pension) ಪಡೆದುಕೊಳ್ಳಲು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅಂಚೆ ಕಚೇರಿಯಲ್ಲಿ ಖಾತೆ ಆರಂಭಿಸಬಹುದು.
ಈ 2 ರೂಪಾಯಿ ನೋಟು ನಿಮ್ಮತ್ರ ಇದ್ರೆ ಸಿಗುತ್ತೆ ಲಕ್ಷಕ್ಕೂ ಅಧಿಕ ಹಣ! ಇಲ್ಲಿದೆ ಡೀಟೇಲ್ಸ್
ಎಫ್ ಡಿ! (Fixed deposit)
ಯಾವುದೇ ಬ್ಯಾಂಕ್ ನಲ್ಲಿ (Bank) ನೀವು ಸ್ಥಿರ ಠೇವಣಿ ಇಡಬಹುದು ನೀವು ಎಷ್ಟು ಹಣವನ್ನು ಇಡುತ್ತೀರೋ ಎಷ್ಟು ಅವಧಿಗಳ ವರೆಗೆ ಇಡುತ್ತಿರೋ ಅದಕ್ಕೆ ಸರಿಯಾಗಿ ಬ್ಯಾಂಕ್ ಗಳು ಉತ್ತಮ ಬಡ್ಡಿ ದರದಲ್ಲಿ ಆದಾಯವನ್ನು ನೀಡುತ್ತವೆ.
ಇವಿಷ್ಟು ಉತ್ತಮ ಹೂಡಿಕೆ ಯೋಜನೆಗಳಾಗಿದ್ದು ಮಹಿಳೆಯರು ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ ತಮ್ಮ ಭವಿಷ್ಯವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಬಹುದು.
If women invest in this scheme, the money will double