ಹೊಸ ಮನೆ ಕಟ್ಟೋರಿಗೆ ಸಿಹಿ ಸುದ್ದಿ! ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ ಹೋಂ ಲೋನ್

Home Loan : ಅತಿ ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ ನೀಡುವ ಬ್ಯಾಂಕ್ ಗಳು ಇವು; ಹೊಸ ಮನೆ ಕಟ್ಟಿಸಿಕೊಳ್ಳುವುದಕ್ಕೆ ಇಂದೇ ಪ್ಲಾನ್ ಮಾಡಿ!

Home Loan : ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಮಾತೇ ಇದೆ. ಮನೆ ಕಟ್ಟಿಸುವುದು ಹಾಗೂ ಮದುವೆ ಮಾಡುವುದು ಇದೆರಡು ಕಷ್ಟದ ಕೆಲಸ. ಹಿಂದೆ ಹಣ ಇರ್ತಿರಲಿಲ್ಲ. ಆ ಕಾರಣಕ್ಕೆ ಈ ಎರಡು ಕೆಲಸಗಳು ಕಷ್ಟವಾಗುತ್ತಿತ್ತು. ಆದರೆ ಈಗ ಹಣ ಇದ್ರೂ ಕೂಡ ಒಂದು ಸರಿಯಾದ ಮದುವೆ ಮಾಡುವುದು ಅಥವಾ ಮನೆ ಕಟ್ಟಿಸುವುದು ಕಷ್ಟದ ಕೆಲಸವೇ ಆಗಿದೆ.

ಗೃಹ ನಿರ್ಮಾಣ, (own house) ಎನ್ನುವುದು ಹಲವರ ಕನಸು. ತಮ್ಮದೇ ಆಗಿರಬಹುದು ಒಂದು ಪುಟ್ಟ ಗೂಡು ಕಟ್ಟಿಕೊಂಡರೆ ಎಷ್ಟು ಚೆನ್ನಾಗಿ ಇರುತ್ತೆ ಅಂತ ಪ್ರತಿಯೊಂದು ಕುಟುಂಬವು ಭಾವಿಸುತ್ತೆ.

ಈ 2 ರೂಪಾಯಿ ನೋಟು ನಿಮ್ಮತ್ರ ಇದ್ರೆ ಸಿಗುತ್ತೆ ಲಕ್ಷಕ್ಕೂ ಅಧಿಕ ಹಣ! ಇಲ್ಲಿದೆ ಡೀಟೇಲ್ಸ್

ಹೊಸ ಮನೆ ಕಟ್ಟೋರಿಗೆ ಸಿಹಿ ಸುದ್ದಿ! ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ ಹೋಂ ಲೋನ್ - Kannada News

ಆದರೆ ಈ ಬಾರೀ ದುನಿಯಾದಲ್ಲಿ ಒಂದು ಹೊತ್ತಿನ ಊಟ ಮಾಡ್ಕೊಂಡು ಹೋಗೋದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಅಂತದ್ರಲ್ಲಿ ಹೇಗಪ್ಪಾ ಹೊಸ ಮನೆ ಕಟ್ಟಿಸುವುದು ಅಂತ ಯೋಚನೆ ಆಗೋದು ಸಹಜ. ಅದಕ್ಕಾಗಿ ಬ್ಯಾಂಕುಗಳು ಇದ್ಯಲ್ಲ!!

ಹೌದು, ಒಂದು ಮನೆ ಕಟ್ಟಿಸಲು ಬೇಕಾಗಿರುವಷ್ಟು ಹಣವನ್ನು ಬ್ಯಾಂಕ್ ಕಡಿಮೆ ಬಡ್ಡಿ (Bank low interest home loan) ದರದಲ್ಲಿ ಒದಗಿಸುತ್ತೆ. ನೀವು ಆದ್ದರಿಂದ ಇಪ್ಪತ್ತು ವರ್ಷಗಳ ಅವಧಿಗೆ ಇಎಂಐ (EMI) ಹಾಕಿಸಿಕೊಂಡು ಬ್ಯಾಂಕ್ ಲೋನ್ (Bank Loan) ಪಾವತಿ ಮಾಡಬಹುದು.

ಹಾಗಾಗಿ ಲಕ್ಷಗಟ್ಟಲೆ ಸುರಿದು ಮನೆ ನಿರ್ಮಾಣ ಮಾಡಿದ್ರೆ 20 ವರ್ಷಗಳಲ್ಲಿ ಆ ಮನೆ ಸಂಪೂರ್ಣವಾಗಿ ನಿಮ್ಮದಾಗಬಹುದು. ಹೀಗೆ ನೀವು ಕೂಡ ಗೃಹ ಸಾಲವನ್ನು (Home Loan) ತೆಗೆದುಕೊಂಡು ಮನೆ ಕಟ್ಟಿಸಲು ಯೋಚಿಸುತ್ತಿದ್ದರೆ ಯಾವ ಬ್ಯಾಂಕ್ ಎಷ್ಟು ಬಡ್ಡಿದರವನ್ನು ನಿಗದಿಪಡಿಸಿದೆ ಎನ್ನುವುದನ್ನು ನೋಡೋಣ.

35 ವರ್ಷದ ಹಿಂದೆ ಬುಲೆಟ್ ಬೆಲೆ ಎಷ್ಟಿತ್ತು ಗೊತ್ತಾ? ಇಲ್ಲಿದೆ ಸಿಕ್ಕಾಪಟ್ಟೆ ವೈರಲ್ ಆದ ಬಿಲ್

Home Loanಬ್ಯಾಂಕ್ ಆಫ್ ಇಂಡಿಯಾ

ಈ ಬ್ಯಾಂಕ್ ನಲ್ಲಿ ನೀವು ಆಸ್ತಿ ಅಡವಿದ್ದರೆ ಅದರ 90% ನಷ್ಟು ಮೊತ್ತಕ್ಕೆ ಸಾಲವನ್ನ ಪಡೆಯಬಹುದು. 8 – 9% ಬಡ್ಡಿ ದರದಲ್ಲಿ ಗೃಹ ಸಾಲ (Home Loan) ನೀಡಲಾಗುತ್ತದೆ. ಹಾಗೂ ಇದನ್ನು ಮರುಪಾವತಿ ಮಾಡುವುದಕ್ಕೆ 30 ವರ್ಷಗಳ ಸುಧೀರ್ಘ ಅವಧಿಯನ್ನು ಕೊಡಲಾಗುವುದು.

ನಿಮ್ಮ ಹೆಣ್ಣು ಮಗುವಿನ ಶಿಕ್ಷಣ, ಮದುವೆ ಖರ್ಚಿಗೆ ಸಿಗುತ್ತೆ ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ

ಪಂಜಾಬ್ ನ್ಯಾಷನಲ್ ಬ್ಯಾಂಕ್

ಈ ಬ್ಯಾಂಕ್ ನಲ್ಲಿ ಗೃಹ ಸಾಲದ ಮೇಲೆ 8.45% ನಿಂದ ಶೇಕಡಾ 10.5% ವರೆಗೆ ವಾರ್ಷಿಕ ಬಡ್ಡಿ ದರ ನಿಗದಿಪಡಿಸಲಾಗಿದೆ. ಹಾಗಾಗಿ ನೀವು ಇಲ್ಲಿ ಸುಲಭವಾಗಿ ಗೃಹ ಸಾಲ ತೆಗೆದುಕೊಳ್ಳಬಹುದು. ನಿಮ್ಮ ಕ್ರೆಡಿಟ್ ಸ್ಕೋರ್ (credit score) ಆಧಾರದ ಮೇಲೆ ಬಡ್ಡಿ ದರ ನಿಗದಿಯಾಗುತ್ತದೆ 30ರಿಂದ 75 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಒದಗಿಸಲಾಗುವುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ದೇಶದ ಜನಪ್ರಿಯ ಬ್ಯಾಂಕುಗಳಲ್ಲಿ ಒಂದಾಗಿರುವ ಎಸ್ ಬಿ ಐ ಇತ್ತೀಚಿಗೆ ಗೃಹ ಸಾಲದ ಅಭಿಯಾನ ಕೂಡ ನಡೆಸಿದೆ. ಇತರ ಬ್ಯಾಂಕುಗಳಿಗೆ ಹೋಲಿಸಿದರೆ ಕೇವಲ 8.4% ಬಡ್ಡಿ ದರದಲ್ಲಿ ಗೃಹ ಸಾಲವನ್ನು ನೀಡುತ್ತದೆ. ಅದರಲ್ಲೂ ಮಹಿಳಾ ಅರ್ಜಿದಾರರಾಗಿದ್ರೆ 0.05% ಬಡ್ಡಿದರ ಇನ್ನೂ ಕಡಿಮೆಯಾಗುತ್ತಿದೆ.

ತಿಂಗಳಿಗೆ ಕೇವಲ 500 ರೂಪಾಯಿ ಉಳಿತಾಯ ಮಾಡಿದ್ರೆ ಸಿಗುತ್ತೆ 2 ಲಕ್ಷ ರೂಪಾಯಿ!

ಬ್ಯಾಂಕ್ ಆಫ್ ಬರೋಡ

ನಿಮ್ಮ ಸಿಬಿಲ್ ಸ್ಕೋರ್ (CIBIL Score) ಚೆನ್ನಾಗಿದ್ರೆ ಟೆನ್ಶನ್ ಬೇಡ ಬ್ಯಾಂಕ್ ಆಫ್ ಬರೋಡ ಕೇವಲ 8.4% ಬಡ್ಡಿ ದರದಲ್ಲಿ ಗೃಹ ಸಾಲ ನೀಡುತ್ತದೆ, ಆದರೆ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಉತ್ತಮವಾಗಿ ಇಲ್ಲದೆ ಇದ್ರೆ 11%ವರೆಗೂ ಬಡ್ಡಿದರ ನಿಗದಿಪಡಿಸಲಾಗುತ್ತಿದೆ.

ಈ ಪ್ರಮುಖ ಬ್ಯಾಂಕುಗಳು ಗೃಹ ಸಾಲದ ಬಡ್ಡಿ ದರವನ್ನು ಇತ್ತೀಚಿಗೆ ಪರಿಷ್ಕರಿಸಿ ಕಡಿಮೆ ಮಾಡಿದೆ. ಹಾಗಾಗಿ ಗೃಹ ಸಾಲ ತೆಗೆದುಕೊಂಡು ನಿಮ್ಮ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಇದು ಸಕಾಲ.

ನಿಮ್ಮತ್ರ ಆಧಾರ್ ಕಾರ್ಡ್ ಇದ್ರೆ ಇನ್ಮುಂದೆ ಇನ್ನೂ 3 ತಿಂಗಳ ಕಾಲ ಈ ಸೇವೆ ಉಚಿತ

Home loan will be available at low interest rates in These Top Banks

Follow us On

FaceBook Google News

Home loan will be available at low interest rates in These Top Banks