ತಿಂಗಳಿಗೆ ಕೇವಲ 500 ರೂಪಾಯಿ ಉಳಿತಾಯ ಮಾಡಿದ್ರೆ ಸಿಗುತ್ತೆ 2 ಲಕ್ಷ ರೂಪಾಯಿ!

ಪ್ರತಿ ತಿಂಗಳು ಕೇವಲ 500 ರೂಪಾಯಿಗಳನ್ನು ಹೂಡಿಕೆ (Investment) ಮಾಡಿ ನೀವು ಎರಡು ಲಕ್ಷ ರೂಪಾಯಿಗಳವರೆಗೆ ಜೀವ ಭದ್ರತೆಯನ್ನು ಪಡೆದುಕೊಳ್ಳಬಹುದು. ಹೌದು ಅತ್ಯಂತ ಸಣ್ಣ ಪಾಲಿಸಿ ಒಂದನ್ನ ಎಲ್ಐಸಿ ಪರಿಚಯಿಸಿದೆ ಇದರಲ್ಲಿ ಅತಿ ಕಡಿಮೆ ಸಂಬಳ ಪಡೆದುಕೊಳ್ಳುವವರು ವಿಮಾ ಸೌಲಭ್ಯವನ್ನು ಪಡೆಯಬಹುದು.
ಭಾರತೀಯ ಜೀವ ವಿಮಾ ಕಂಪನಿ (LIC) ಈಗಾಗಲೇ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಸಾಕಷ್ಟು ಪಾಲಿಸಿ ಅವುಗಳನ್ನ ಪರಿಚಯಿಸಿದೆ ಅವುಗಳಲ್ಲಿ ಇತ್ತೀಚಿಗೆ ಪರಿಚಯಿಸಲಾದ ಆಧಾರ್ ಸ್ತಂಭ (Aadhar stambh policy) ಪಾಲಿಸಿ ಕೂಡ ಒಂದು. ಇದು ವಿಶೇಷವಾಗಿ ಪುರುಷರಿಗಾಗಿಯೇ ವಿನ್ಯಾಸಗೊಳಿಸಲಾಗಿದ್ದು ಅತಿ ಕಡಿಮೆ ಸಂಬಳ ಬರುವವರು ಈ ಪಾಲಿಸಿ ಪಡೆದುಕೊಳ್ಳಬಹುದು.
ನಿಮ್ಮತ್ರ ಆಧಾರ್ ಕಾರ್ಡ್ ಇದ್ರೆ ಇನ್ಮುಂದೆ ಇನ್ನೂ 3 ತಿಂಗಳ ಕಾಲ ಈ ಸೇವೆ ಉಚಿತ
ಎಲ್ಐಸಿ ಆಧಾರ್ ಸ್ತಂಭ್ ಪಾಲಿಸಿ! (LIC Aadhar stambh policy)
ಇದೊಂದು ಅತಿ ಕಡಿಮೆ ಮೊತ್ತದ ಜೀವ ವಿಮಾ ಪಾಲಿಸಿ (Life Insurance Policy) ಆಗಿದ್ದು ವ್ಯಕ್ತಿ ಮರಣ ಹೊಂದಿದರೆ ಲಾಯಲ್ಟಿ ಜೊತೆಗೆ 1.5 ಲಕ್ಷ ರೂಪಾಯಿಗಳನ್ನು ಮನೆಯವರು ಪಡೆದುಕೊಳ್ಳಬಹುದು. ಇನ್ನು ಈ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು ಎನ್ನುವುದನ್ನು ನೋಡೋಣ.
* 8 ರಿಂದ 55 ವರ್ಷ ವಯಸ್ಸಿನವರೆಗೆ ಹೂಡಿಕೆ ಮಾಡಬಹುದು.
* ಹೂಡಿಕೆಯ ಅವಧಿ 10 ವರ್ಷದಿಂದ 20 ವರ್ಷಗಳ ವರೆಗೆ.
* ನೀವು ಎಷ್ಟು ವರ್ಷಗಳ ಅವಧಿಯ ಪಾಲಿಸಿ ತೆಗೆದುಕೊಳ್ಳುತ್ತೀರೋ, ಅಷ್ಟು ವರ್ಷ ಪ್ರೀಮಿಯಂ (premium) ಪಾವತಿಸಬೇಕು.
* ಒಮ್ಮೆ ಪ್ರೀಮಿಯಂ ಪಾವತಿಸಲು ಆರಂಭಿಸಿದರೆ ನಿಮ್ಮ ಖಾತೆಯಿಂದ ನೇರವಾಗಿ ಪಾಲಿಸಿಗೆ ವರ್ಗಾವಣೆ ಆಗುವಂತೆ ಮಾಡಿಕೊಳ್ಳಬಹುದು.
* ಇದು 75,000 ಪಾಲಿಸಿಯಾಗಿದ್ದು 3 ಲಕ್ಷ ರೂಪಾಯಿಗಳ ವರೆಗೆ ವಿಸ್ತರಿಸಿಕೊಳ್ಳಬಹುದು.
ಕೈತುಂಬಾ ಹಣ ಸಂಪಾದನೆ ಮಾಡೋದಕ್ಕೆ ಇದಕ್ಕಿಂತ ಬೆಸ್ಟ್ ಬಿಸಿನೆಸ್ ಪ್ಲಾನ್ ಇನ್ನೊಂದಿಲ್ಲ
ಎಷ್ಟು ಪ್ರೀಮಿಯಂ ಪಾವತಿಸಬೇಕು!
ಚಿಕ್ಕ ವಯಸ್ಸಿನಲ್ಲಿ ನೀವು ಈ ಪಾಲಿಸಿ ತೆಗೆದುಕೊಳ್ಳಬಹುದು ಪ್ರತಿ ತಿಂಗಳು 500 ರೂಪಾಯಿಗಳನ್ನು ಪಾವತಿಸಬೇಕು ಹಾಗೂ 20 ವರ್ಷಗಳ ಅವಧಿಗೆ ಈ ಯೋಜನೆ ಮೆಚೂರ್ಡ್ ಆಗುತ್ತದೆ. 40 ವರ್ಷ ವಯಸ್ಸಿನ ವ್ಯಕ್ತಿ 1.5 ಲಕ್ಷ ರೂಪಾಯಿಗಳ ಪಾಲಿಸಿ ತೆಗೆದುಕೊಂಡರೆ ಪ್ರತಿ ತಿಂಗಳು 500 ರೂಪಾಯಿಗಳನ್ನು ಪಾವತಿಸಬೇಕು. ಹಾಗೂ ಪಾಲಿಸಿದಾರ ಅಕಾಲಿಕ ಮರಣ ಹೊಂದಿದರೆ 1.5 ಲಕ್ಷ ರೂಪಾಯಿಗಳನ್ನು ಹಾಗೂ ಅದರ ಜೊತೆಗೆ ಲಾಯಲ್ಟಿ ಮೊತ್ತ 48,750ಗಳನ್ನು ಪಡೆದುಕೊಳ್ಳಬಹುದು.
ವಸತಿ ಯೋಜನೆಯಲ್ಲಿ ಉಚಿತ ಮನೆ ಸ್ಕೀಮ್! ಸಿಗಲಿದೆ 1 ಲಕ್ಷ ರೂಪಾಯಿ ಸಹಾಯಧನ
ಒಟ್ಟಾರೆ ಕೇವಲ 500 ರೂಪಾಯಿಗಳನ್ನು ಪ್ರತಿ ತಿಂಗಳು ಡೆಪಾಸಿಟ್ ಮಾಡ್ತಾ ಬಂದ್ರೆ ಎರಡು ಲಕ್ಷ ರೂಪಾಯಿಗಳನ್ನು ಪಾಲಿಸಿದ್ದಾರೆ ಪಡೆದುಕೊಳ್ಳಲು ಸಾಧ್ಯವಿದೆ. ಎಲ್ಐಸಿಯ ಆಧಾರಸ್ತಂಭ ಪಾಲಿಸಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಭೇಟಿ ನೀಡಿ ಅಥವಾ ಹತ್ತಿರದ ಎಲ್ಐಸಿ ಕಚೇರಿಯನ್ನು ಹಾಗೂ ಎಲ್ಐಸಿ ಏಜೆಂಟ್ ಗಳನ್ನು ಸಂಪರ್ಕಿಸಬಹುದು.
If you save only 500 rupees per month, you will get 2 lakh rupees
ಎಷ್ಟು ಪ್ರೀಮಿಯಂ ಪಾವತಿಸಬೇಕು!



