35 ವರ್ಷದ ಹಿಂದೆ ಬುಲೆಟ್ ಬೆಲೆ ಎಷ್ಟಿತ್ತು ಗೊತ್ತಾ? ಇಲ್ಲಿದೆ ಸಿಕ್ಕಾಪಟ್ಟೆ ವೈರಲ್ ಆದ ಬಿಲ್

ವೈರಲ್ ಆಯ್ತು 1986ನೇ ಇಸ್ವಿಯಲ್ಲಿ ಇದ್ದ ಬುಲೆಟ್ ಬೆಲೆ; ಆಗಿನ ಬೆಲೆ ಈಗಿನ ಕಾಲೇಜ್ ಮಕ್ಕಳ ಪಾಕೆಟ್ ಮನಿ ಅಷ್ಟೇ ಗೊತ್ತಾ?

Bengaluru, Karnataka, India
Edited By: Satish Raj Goravigere

ರಸ್ತೆಯಲ್ಲಿ ಗುಡುಗುಡು ಅಂತ ಸೌಂಡ್ ಮಾಡಿಕೊಂಡು ರಾಯಲ್ ಎನ್ಫೀಲ್ಡ್ ಬೈಕ್ (royal Enfield bike) ಹೋಗ್ತಾ ಇದ್ದರೆ ಈ ಕಡೆ ಮನೆಯಲ್ಲಿ ಕುಳಿತವರು ಒಂದಷ್ಟು ಬೈಕೋಬಹುದು ಎಂಥ ಸೌಂಡ್ ಮಾಡುತ್ತೆ ಈ ಬೈಕ್ ಅಂತ.. ಆದರೆ ಆ ಬೈಕ್ ಓಡಿಸ್ಕೊಂಡು ಹೋಗುವವರಿಗೆ ಮಾತ್ರ ಅದು ದೊಡ್ಡ ಕ್ರೇಜ್.

ಬಹಳ ಖುಷಿಯಿಂದ, ಮೋಜಿನಿಂದ ರಾಯಲ್ ಎನ್ಫೀಲ್ಡ್ ಬೈಕ್ (Bullet Bike) ಓಡಿಸುತ್ತಾರೆ, ಇತ್ತೀಚಿನ ಯುವಕರಿಂದ ಹಿಡಿದು ಮಧ್ಯ ವಯಸ್ಕರವರೆಗೂ ಕೂಡ ರಾಯಲ್ ಎನ್ಫೀಲ್ಡ್ ಬೈಕ್ ಇಷ್ಟಪಡುವವರ ಸಂಖ್ಯೆ ಜಾಸ್ತಿ.

Do you know how much a royal Enfield bike cost in 35 years ago, Bill Goes Viral

ನಿಮ್ಮ ಹೆಣ್ಣು ಮಗುವಿನ ಶಿಕ್ಷಣ, ಮದುವೆ ಖರ್ಚಿಗೆ ಸಿಗುತ್ತೆ ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ

ರಾಯಲ್ ಎನ್ಫೀಲ್ಡ್ ಬೈಕ್ ಬಹಳ ವರ್ಷಗಳ ಹಿಂದೆಯೇ ಪರಿಚಯಿಸಲ್ಪಟ್ಟಿತ್ತು. ಈಗ ಇದರಲ್ಲಿ ಸಾಕಷ್ಟು modulation ಮಾಡಲಾಗಿದೆ. ಬೇರೆ ಬೇರೆ ರೀತಿಯ ಬೇರೆ ಬೇರೆ ವೈಶಿಷ್ಟ್ಯತೆಗಳನ್ನು ಹೊಂದಿರುವ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ನೀವು ಈಗ ಖರೀದಿಸಬಹುದು. ರಾಯಲ್ ಎನ್ಫೀಲ್ಡ್ ಬೈಕ್ ತನ್ನ ಪವರ್ ಗೆ ಹೆಸರುವಾಸಿಯಾಗಿದೆ. ಹಾಗಾಗಿ ಲಾಂಗ್ ರೈಡ್ ಹೋಗುವವರಿಗೆ ರಾಯಲ್ ಎನ್ಫೀಲ್ಡ್ ಹೇಳಿ ಮಾಡಿಸಿದಂತಹ ಬೈಕ್.

ರಾಯಲ್ ಎನ್ಫೀಲ್ಡ್ ಬೈಕ್ ಪ್ರೈಸ್ ಹೆಚ್ಚಳ! (Royal Enfield Bike price increase)

ಸುಮಾರು 80ರ ದಶಕದಲ್ಲಿ (80th century) ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಬಿಡುಗಡೆ ಮಾಡಲಾಯಿತು. ಆ ಸಮಯದಿಂದ ಇಲ್ಲಿಯವರೆಗೆ ರಾಯಲ್ ಎನ್ಫೀಲ್ಡ್ ಬೈಕ್ ನಲ್ಲಿ ಸಾಕಷ್ಟು ವಿಶೇಷತೆಗಳನ್ನು ಅಳವಡಿಸಿಕೊಂಡು ಬರಲಾಗಿದೆ ಆದರೆ ಈ ಬೈಕ್ ಮೇಲೆ ಇರುವ ಪ್ರೀತಿ ಮಾತ್ರ ಜನರಿಗೆ ಕಡಿಮೆ ಆಗಿಲ್ಲ. ಲಾಂಗ್ ರೈಡ್ ಹೋಗುವವರಿಗೆ ಈ ಬೈಕ್ ಹೆಚ್ಚು ಸೂಕ್ತವಾಗಿದೆ. ಒಂಟಿ ಪ್ರಯಾಣಕ್ಕೂ ಜೊತೆಗಾರನಾಗುತ್ತಾನೆ ರಾಯಲ್ ಎನ್ಫೀಲ್ಡ್!

ಇಂದು ರಾಯಲ್ ಎನ್ಫೀಲ್ಡ್ ಹೈ ಎಂಡ್ ಬೈಕ್ ನೀವು ಖರೀದಿ ಮಾಡ್ತೀರಿ ಅಂದ್ರೆ ಲಕ್ಷಗಟ್ಟಲೆ ಹಣವನ್ನ ಸುರಿಬೇಕು. ಒಂದು ಸಾಮಾನ್ಯ ಕಾರು ಪರ್ಚೇಸ್ ಮಾಡಿದಷ್ಟು ರಾಯಲ್ ಎನ್ಫೀಲ್ಡ್ ಬೈಕ್ ದುಬಾರಿಯಾಗಿದೆ. ಆದರೆ ನಿಮಗೆ ಗೊತ್ತಾ? 80 – 90 ರ ದಶಕದಲ್ಲಿ ಈ ಬುಲೆಟ್ ಬೈಕ್ ಬೆಲೆ ಎಷ್ಟಿತ್ತು ಅಂತ?

ತಿಂಗಳಿಗೆ ಕೇವಲ 500 ರೂಪಾಯಿ ಉಳಿತಾಯ ಮಾಡಿದ್ರೆ ಸಿಗುತ್ತೆ 2 ಲಕ್ಷ ರೂಪಾಯಿ!

Royal Enfield Bike Old Bill goes viralವೈರಲ್ ಆಯ್ತು 37 ವರ್ಷದ ಹಿಂದಿನ ಬೈಕ್ ಬೆಲೆ!

ಹೌದು, ಕೇಳಿದೆ ನಿಮಗೆ ಖಂಡಿತ ಆಶ್ಚರ್ಯ ಆಗಬಹುದು. ಸುಮಾರು 37 ವರ್ಷದ ಹಿಂದೆ ಅಂದ್ರೆ 1986ರಲ್ಲಿ ಯಾವುದೋ ಒಬ್ಬ ವ್ಯಕ್ತಿ ರಾಯಲ್ ಎನ್ಫೀಲ್ಡ್ 350 ಬೈಕ್ ಖರೀದಿ ಮಾಡಿದ್ದು, ಅದರ ಬಿಲ್ ಈಗ ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗ್ತಾ ಇದೆ.

ಇವತ್ತು ಒಬ್ಬ ಸಾಮಾನ್ಯ ವ್ಯಕ್ತಿಯ ಸಂಬಳ ಅಥವಾ ಕಾಲೇಜು ವಿದ್ಯಾರ್ಥಿಯ ಪಾಕೆಟ್ ಮನಿ ಎಷ್ಟಿರುತ್ತೋ ಅಷ್ಟು ಕಡಿಮೆ ಬೆಲೆಗೆ ನೀವು ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಖರೀದಿಸಬಹುದಿತ್ತು. ಇಷ್ಟಕ್ಕೂ ಆಗಿನ ಕಾಲದಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ ಬೆಲೆ ಎಷ್ಟಿತ್ತು?

ಸಾಮಾನ್ಯವಾಗಿ ಹಿಂದೆಲ್ಲಾ ರಾಯಲ್ ಎನ್ಫೀಲ್ಡ್ ಬೈಕ್ ಖರೀದಿ ಮಾಡ್ತಾರೆ ಅಂದ್ರೆ ಅವರು ಶ್ರೀಮಂತರ ಮಕ್ಕಳು ಎಂದೆ ಗುರುತಿಸಿಕೊಳ್ಳುತ್ತಿದ್ದರು. ಆಗಿನ ಕಾಲದಲ್ಲಿ ಅದರ ಬೆಲೆ ಕಡಿಮೆ ಇದ್ದರೂ ಕೂಡ ಸಾಮಾನ್ಯರಿಗೆ ಅದನ್ನ ಖರೀದಿ ಮಾಡುವುದು ಸುಲಭ ಆಗಿರಲಿಲ್ಲ.

ನಿಮ್ಮತ್ರ ಆಧಾರ್ ಕಾರ್ಡ್ ಇದ್ರೆ ಇನ್ಮುಂದೆ ಇನ್ನೂ 3 ತಿಂಗಳ ಕಾಲ ಈ ಸೇವೆ ಉಚಿತ

37 ವರ್ಷಗಳ ಹಿಂದೆ ರಾಯಲ್ ಎನ್ಫೀಲ್ಡ್ 350 ಬೈಕ್ ನ ಬಿಲ್ ಒಂದು ಜಾರ್ಖಂಡ್ ಮೂಲದ ಸಂದೀಪ್ ಆಟೋ ಕಂಪನಿ ನೀಡಿರುವ ಬಿಲ್ ಆಗಿದೆ ಅದರಲ್ಲಿ ಬೈಕ್ ಬೆಲೆ ಕೇವಲ 18,700 ರೂಪಾಯಿಗಳು ಎಂದು ಬರೆಯಲಾಗಿದೆ.

ಹೌದು, ಇದನ್ನು ಕೇಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯ ಆಗಬಹುದು ಆಗ ಕೇವಲ 18 ರಿಂದ 19 ಸಾವಿರ ರೂಪಾಯಿಗಳಿಗೆ ರಾಯಲ್ ಎನ್ಫೀಲ್ಡ್ ಬೈಕ್ ಅನ್ನೇ ಖರೀದಿ ಮಾಡಬಹುದಿತ್ತು. ಆಗಿನ ಕಾಲದಲ್ಲಿ ಎನ್ ಫಿಲ್ಡ್ ಬೈಕ್ ಎಂದು ಕರೆಯಲ್ಪಟ್ಟಿತ್ತು. ಈ ಬೆಲೆಯನ್ನ ಕೇಳಿದ ನಿಮಗೆ ನಾವು ಕೂಡ ಆಗಿನ ಕಾಲದಲ್ಲಿ ಹುಟ್ಟಿದ್ರೆ ಎಷ್ಟು ಚೆನ್ನಾಗಿತ್ತು ಅಂತ ಅನ್ನಿಸದೆ ಇರಲ್ಲ ಅಲ್ವಾ?

Do you know how much a royal Enfield bike cost in 35 years ago, Bill Goes Viral