ನಿಮ್ಮ ಹೆಣ್ಣು ಮಗುವಿನ ಶಿಕ್ಷಣ, ಮದುವೆ ಖರ್ಚಿಗೆ ಸಿಗುತ್ತೆ ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ

ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಇದೊಂದು ಖಾತೆ ತೆರೆದರೆ ಆಕೆಯ ಶಿಕ್ಷಣ, ಮದುವೆ ಖರ್ಚಿಗೆ ಸಿಗುತ್ತೆ 70 ಲಕ್ಷ ರೂಪಾಯಿ!

ನಿಮ್ಮ ಹೆಣ್ಣು ಮಗುವಿನ ಭವಿಷ್ಯದ ಬಗ್ಗೆ ಚಿಂತೆ ಇರುವವರು ಒಮ್ಮೆ ಈ ಲೇಖನವನ್ನು ಓದಿ. ಹೆಣ್ಣು ಮಕ್ಕಳು ಓದಬೇಕು (Education), ಚೆನ್ನಾಗಿ ಓದಿ ಕೆಲಸ ಗಿಟ್ಟಿಸಿಕೊಳ್ಳಬೇಕು ಜೊತೆಗೆ ಉತ್ತಮವಾಗಿರುವ ವ್ಯಕ್ತಿಯ ಜೊತೆಗೆ ಮದುವೆ (Marriage) ಆಗಬೇಕು ಎಂದೆಲ್ಲ ತಂದೆ ತಾಯಿ ಬಯಸುವುದು ಸಹಜ.

ಅದಕ್ಕಾಗಿ ಮಕ್ಕಳ ಭವಿಷ್ಯಕ್ಕಾಗಿ (children’s future) ಒಂದಷ್ಟು ಹಣ ಕೂಡಿಡುವುದಕ್ಕೆ ಪ್ರಯತ್ನಿಸುತ್ತಾರೆ. ಈಗಂತೂ ಹೆಣ್ಣು ಮಕ್ಕಳ ಭವಿಷ್ಯಕ್ಕೆ ತಂದೆ ತಾಯಿ ಹೆಚ್ಚು ಚಿಂತೆ ಮಾಡುತ್ತಾರೆ. ಅದಕ್ಕಾಗಿ ತಾವು ದುಡಿದ ಹಣದಲ್ಲಿ ಒಂದಷ್ಟು ಹಣವನ್ನು ಉಳಿತಾಯ (savings) ಮಾಡಲು ಬಯಸುತ್ತಾರೆ.

ತಿಂಗಳಿಗೆ ಕೇವಲ 500 ರೂಪಾಯಿ ಉಳಿತಾಯ ಮಾಡಿದ್ರೆ ಸಿಗುತ್ತೆ 2 ಲಕ್ಷ ರೂಪಾಯಿ!

girl child Scheme

ಇಂತಹ ಸಂದರ್ಭದಲ್ಲಿ ನೀವು ನಿಮ್ಮ ಹೆಣ್ಣು ಮಗುವಿಗೆ ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಒದಗಿಸಬಹುದು ಅದುವೇ ಸುಕನ್ಯ ಸಮೃದ್ಧಿ ಯೋಜನೆ. ದೇಶದಲ್ಲಿ ವಾಸಿಸುವ ಹೆಣ್ಣು ಮಕ್ಕಳಿಗಾಗಿಯೇ ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪರಿಚಯಿಸಿದ್ದು ನೀವು ಅಂಚೆ ಕಚೇರಿಯಲ್ಲಿ (Post Office Scheme) ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಖಾತೆ ತೆರೆಯುವುದರ ಮೂಲಕ ಆಕೆಯ ಭವಿಷ್ಯವನ್ನು ಸುಭದ್ರವಾಗಿಸಿಕೊಡಬಹುದು.

ಸುಕನ್ಯಾ ಸಮೃದ್ಧಿ ಹೂಡಿಕೆ! (Sukanya samriddhi scheme)

ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಹೂಡಿಕೆ ಆರಂಭಿಸಿದರೆ ಆಕೆಗೆ 18 ವರ್ಷ ವಯಸ್ಸು ಆದಾಗ ಕೈತುಂಬ ಹಣ ಗಳಿಸಬಹುದು, ವಾರ್ಷಿಕವಾಗಿ ಕೇವಲ 250ಗಳಿಂದ ಹೂಡಿಕೆ (Investment) ಆರಂಭಿಸಿ 1,50,000 ವರೆಗೆ ಠೇವಣಿ (deposit) ಇಡಬಹುದು.

ಈ ಯೋಜನೆಯಲ್ಲಿ ನೀವು 15 ವರ್ಷಗಳ ಕಾಲ ಹೂಡಿಕೆ ಮಾಡಬೇಕು. ಮತ್ತು ನಿಮ್ಮ ಮಗುವಿಗೆ 21 ವರ್ಷ ವಯಸ್ಸಾದಾಗ ಈ ಯೋಜನೆ ಮುಗಿಯುತ್ತದೆ. ಹಾಗೂ ಸಂಪೂರ್ಣ ಹಣ ನಿಮ್ಮ ಕೈ ಸೇರುತ್ತದೆ.

ನಿಮ್ಮತ್ರ ಆಧಾರ್ ಕಾರ್ಡ್ ಇದ್ರೆ ಇನ್ಮುಂದೆ ಇನ್ನೂ 3 ತಿಂಗಳ ಕಾಲ ಈ ಸೇವೆ ಉಚಿತ

Sukanya Samriddhi YojanaSSY ಹೂಡಿಕೆ ಮಾಡಿದರೆ ಶೇಕಡಾ 8.5% ನಷ್ಟು ಬಡ್ಡಿ ದರವನ್ನು ಪಡೆಯಬಹುದು. ಇದು ವರ್ಷ ಹೂಡಿಕೆ ಮಾಡಿದ ಮೇಲೆ 21 ವರ್ಷಗಳವರೆಗೆ ಅಂದರೆ ಹೆಚ್ಚುವರಿ ಆಗಿ ಆರು ವರ್ಷಗಳವರೆಗೆ ನೀವು ಹೂಡಿಕೆ ಮಾಡದೆ ಬಡ್ಡಿಯನ್ನು ಪಡೆಯುತ್ತಿರುತ್ತೀರಿ. ಹತ್ತು ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಹೂಡಿಕೆ ಆರಂಭಿಸಬಹುದು. ಒಂದು ಕುಟುಂಬದಿಂದ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಬಹುದು.

ವಸತಿ ಯೋಜನೆಯಲ್ಲಿ ಉಚಿತ ಮನೆ ಸ್ಕೀಮ್! ಸಿಗಲಿದೆ 1 ಲಕ್ಷ ರೂಪಾಯಿ ಸಹಾಯಧನ

ಸಿಗಲಿದೆ 70 ಲಕ್ಷ ರೂಪಾಯಿ ರಿಟರ್ನ್!

ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಆದಾಯ ತೆರಿಗೆ ರಿಯಾಯಿತಿ ಕೂಡ ಸಿಗುತ್ತದೆ. ಇನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಎಷ್ಟು ಲಾಭ ಗಳಿಸಬಹುದು ಎನ್ನುವುದನ್ನು ನೋಡೋಣ.

ನೀವು 15 ವರ್ಷಗಳವರೆಗೆ ಪ್ರತಿ ವರ್ಷ 1.50 ಲಕ್ಷ ರೂಪಾಯಿಗಳನ್ನು ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡಿದ್ದೀರಿ ಎಂದು ಭಾವಿಸಿ. ಆಗ ಆಕೆಗೆ 21 ವರ್ಷ ವಯಸ್ಸಾದಾಗ ಮೆಚೂರ್ ಹಣ ನಿಮ್ಮ ಕೈ ಸೇರುತ್ತದೆ. 8.2% ಬಡ್ಡಿ ದರದಲ್ಲಿ 21 ವರ್ಷಗಳಿಗೆ 69,27,578 ರೂಪಾಯಿಗಳನ್ನು ಹಿಂಪಡೆಯಬಹುದು. ಅಂದರೆ 70 ಲಕ್ಷ ರೂಪಾಯಿಗಳು ನಿಮ್ಮ ಮಗಳ ವಿದ್ಯಾಭ್ಯಾಸ ಮದುವೆ ಮತ್ತು ಇತರ ಖರ್ಚಿಗೆ ಲಭ್ಯವಾಗುತ್ತದೆ.

ಕೈತುಂಬಾ ಹಣ ಸಂಪಾದನೆ ಮಾಡೋದಕ್ಕೆ ಇದಕ್ಕಿಂತ ಬೆಸ್ಟ್ ಬಿಸಿನೆಸ್ ಪ್ಲಾನ್ ಇನ್ನೊಂದಿಲ್ಲ

You will get lakhs of rupees for your girl child’s education and marriage expenses

Related Stories