ಗೋಲ್ಡ್ ಲೋನ್, ಪರ್ಸನಲ್ ಲೋನ್! ಯಾವುದು ಬೆಸ್ಟ್? ಯಾವುದು ಹೆಚ್ಚು ಬೆನಿಫಿಟ್

Gold Loan v/s Personal Loan : ವೈಯಕ್ತಿಕ ಸಾಲ ಅಥವಾ ಚಿನ್ನದ ಮೇಲಿನ ಸಾಲ ಇವೆರಡರಲ್ಲಿ ಯಾವುದು ಹೆಚ್ಚು ಬೆನಿಫಿಟ್ ಗೊತ್ತಾ?

Gold Loan v/s Personal Loan : ನಮಗೆ ಸಾಕಷ್ಟು ಸಂದರ್ಭದಲ್ಲಿ ಹಣದ ಅವಶ್ಯಕತೆ ಇರುತ್ತದೆ. ಆಗ ಯಾರನ್ನು ಹೋಗಿ ಸ್ವಲ್ಪ ಹಣ ಬೇಕು ಅಂತ ಕೇಳಿದ್ರೆ ಖಂಡಿತವಾಗಿಯೂ ಕೊಡುವುದಿಲ್ಲ.

ಅದರ ಬದಲು ನಾವು ಬ್ಯಾಂಕಿನಲ್ಲಿ ನಮ್ಮ ಅಗತ್ಯಕ್ಕೆ ತಕ್ಕ ಹಾಗೆ ತಕ್ಕಷ್ಟು ಮೊತ್ತವನ್ನು ಸಾಲವಾಗಿ (Bank Loan) ಪಡೆಯಬಹುದು. ಗೃಹ ಸಾಲ, ವಾಹನದ ಮೇಲಿನ ಸಾಲ, ಚಿನ್ನದ ಮೇಲಿನ ಸಾಲ, ವೈಯಕ್ತಿಕ ಸಾಲ, ವೇತನದ ಮೇಲಿನ ಸಾಲ, ಎಫ್ ಡಿ ಠೇವಣಿ ಮೇಲಿನ ಸಾಲ ಹೀಗೆ ಬ್ಯಾಂಕುಗಳು ಬೇರೆ ಬೇರೆ ರೀತಿಯ ಸಾಲ ಸೌಲಭ್ಯ (bank loan) ವನ್ನು ಒದಗಿಸುತ್ತವೆ.

ಹೊಸ ಮನೆ ಕಟ್ಟೋರಿಗೆ ಸಿಹಿ ಸುದ್ದಿ! ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ ಹೋಂ ಲೋನ್

ಗೋಲ್ಡ್ ಲೋನ್, ಪರ್ಸನಲ್ ಲೋನ್! ಯಾವುದು ಬೆಸ್ಟ್? ಯಾವುದು ಹೆಚ್ಚು ಬೆನಿಫಿಟ್ - Kannada News

ಇಂದು ನಾವು ಈ ಲೇಖನದಲ್ಲಿ ವೈಯಕ್ತಿಕ ಸಾಲ (personal loan) ಮತ್ತು ಚಿನ್ನದ ಮೇಲಿನ ಸಾಲ (gold loan) ಈ ಎರಡು ಸಾಲದಲ್ಲಿ ಯಾವುದು ಉತ್ತಮ ಎನ್ನುವುದನ್ನು ತಿಳಿದುಕೊಳ್ಳೋಣ.

ವೈಯಕ್ತಿಕ ಸಾಲ! (Personal loan)

ನೀವು ಯಾವುದಾದರೂ ಉದ್ಯಮ ಮಾಡ್ತಾ ಇದ್ರೆ ಅಥವಾ ನೀವು ಪ್ರತಿ ತಿಂಗಳು ಸಂಬಳ ಪಡೆದುಕೊಳ್ಳುವವರಾಗಿದ್ದರೆ ಸುಲಭವಾಗಿ ವೈಯಕ್ತಿಕ ಸಾಲವನ್ನು ಬ್ಯಾಂಕ್ ನಿಂದ ಪಡೆದುಕೊಳ್ಳಬಹುದು. ವೈಯಕ್ತಿಕ ಸಾಲವನ್ನು ಅಸುರಕ್ಷಿತ ಸಾಲ ಎಂದು ಕರೆಯಲಾಗುತ್ತೆ. ಹಾಗಾಗಿ ಇದರ ಬಡ್ಡಿದರ ಸ್ವಲ್ಪ ಜಾಸ್ತಿಯೇ ಎನ್ನಬಹುದು.

ವಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕೆ ನಿಮಗೆ ಬರುವ ಸಂಬಳ ಎಷ್ಟು ಮುಖ್ಯವೋ ಅಷ್ಟೇ ಕ್ರೆಡಿಟ್ ಸ್ಕೋರ್ (credit score) ಕೂಡ ಮುಖ್ಯ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ವಯಕ್ತಿಕ ಸಾಲದ ಬಡ್ಡಿ ದರವು ಕೂಡ ಹೆಚ್ಚಾಗುತ್ತದೆ.

ವೈಯಕ್ತಿಕ ಸಾಲವನ್ನು ನೀವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಪಡೆದುಕೊಳ್ಳಬಹುದು. 50,000 ಇಂದ 15 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ ನೀಡಲಾಗುತ್ತದೆ. ಹಾಗೂ ಇದರ ಮರುಪಾವತಿಗೆ ಐದರಿಂದ ಎಂಟು ವರ್ಷಗಳ ಅವಧಿಯನ್ನು ಕೊಡಲಾಗುತ್ತದೆ.

ಈ 2 ರೂಪಾಯಿ ನೋಟು ನಿಮ್ಮತ್ರ ಇದ್ರೆ ಸಿಗುತ್ತೆ ಲಕ್ಷಕ್ಕೂ ಅಧಿಕ ಹಣ! ಇಲ್ಲಿದೆ ಡೀಟೇಲ್ಸ್

Personal Loanವೈಯಕ್ತಿಕ ಸಾಲವನ್ನು ನೀವು ಯಾವುದೇ ಸಂದರ್ಭದಲ್ಲಿ ತೆಗೆದುಕೊಳ್ಳಬಹುದು ಹಾಗೂ ಯಾವುದೇ ಬ್ಯಾಂಕ್ ಅತ್ಯಂತ ತ್ವರಿತವಾಗಿ ನಿಮ್ಮ ಯಾವುದೇ ಆಸ್ತಿ ಅಡಮಾನ ಇಟ್ಟುಕೊಳ್ಳದೆ ವೈಯಕ್ತಿಕ ಸಾಲವನ್ನು ಕೊಡುತ್ತದೆ. ಅದರಲ್ಲೂ ಪ್ರತಿ ತಿಂಗಳು ಸಂಬಳ ಪಡೆದುಕೊಳ್ಳುವವರಿಗೆ ವೈಯಕ್ತಿಕ ಸಾಲ ಪಡೆಯುವುದು ಬಹಳ ಸುಲಭ.

35 ವರ್ಷದ ಹಿಂದೆ ಬುಲೆಟ್ ಬೆಲೆ ಎಷ್ಟಿತ್ತು ಗೊತ್ತಾ? ಇಲ್ಲಿದೆ ಸಿಕ್ಕಾಪಟ್ಟೆ ವೈರಲ್ ಆದ ಬಿಲ್

ಚಿನ್ನದ ಮೇಲಿನ ಸಾಲ! Gold loan

ಚಿನ್ನದ ಮೇಲಿನ ಸಾಲ ಹಾಗೂ ವೈಯಕ್ತಿಕ ಸಾಲದ ಬಡ್ಡಿದರ ಬಹುತೇಕ ಒಂದೆ ತರನಾಗಿ ಇರುತ್ತದೆ, ಆದರೆ ಗೋಲ್ಡ್ ಲೋನ್ ಅನ್ನು ಸುರಕ್ಷಿತ ಸಾಲ ಎಂದು ಪರಿಗಣಿಸಲಾಗುತ್ತದೆ. ಯಾಕಂದ್ರೆ ಸಾಲ ತೆಗೆದುಕೊಂಡ ವ್ಯಕ್ತಿ ಡಿಫಾಲ್ಟರ್ ಎಂದು ಘೋಷಣೆ ಆದಾಗ ಆತ ಅಡವಿಟ್ಟ ಚಿನ್ನವನ್ನ ಮಾರಾಟ ಮಾಡಿ ಬ್ಯಾಂಕ್ ಸಾಲದ ಮೊತ್ತಕ್ಕೆ ಅದನ್ನು ಜಮಾ ಮಾಡಿಕೊಳ್ಳಬಹುದು.

ಚಿನ್ನದ ಮೇಲಿನ ಸಾಲ ತೆಗೆದುಕೊಳ್ಳುವ ಒಂದು ಪ್ರಮುಖ ಬೆನಿಫಿಟ್ ಅಂದ್ರೆ ಇಲ್ಲಿ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಬಹಳ ಮುಖ್ಯವಲ್ಲ. ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಕೂಡ ಚಿನ್ನ ನಿಮ್ಮ ಬಳಿ ಇದ್ದರೆ ಸುಲಭವಾಗಿ ಸಾಲ ಪಡೆಯಬಹುದು.

ಕೇಂದ್ರ ಬ್ಯಾಂಕು ತಿಳಿಸಿರುವ ಪ್ರಕಾರ ನೀವು ತೆಗೆದುಕೊಳ್ಳುವ ಸಾಲ ಮತ್ತು ಚಿನ್ನದ ಮೊತ್ತ ದ ಅನುಪಾತ ಶೇಕಡ 75% ನಷ್ಟು ಸರಿ ಹೊಂದಬೇಕು. ಅಂದರೆ ನಿಮ್ಮ ಚಿನ್ನದ ವ್ಯಾಲ್ಯೂ ಎಷ್ಟಿದೆಯೋ ಅಷ್ಟು ಹಣವನ್ನು ನೀವು ಸಾಲವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ 75% ವರೆಗೆ ಸಾಲ ಸಿಗುತ್ತದೆ.

ನಿಮ್ಮ ಹೆಣ್ಣು ಮಗುವಿನ ಶಿಕ್ಷಣ, ಮದುವೆ ಖರ್ಚಿಗೆ ಸಿಗುತ್ತೆ ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ

ಚಿನ್ನದ ಮೇಲಿನ ಸಾಲ ಬಹಳ ಬೇಗ ಸಿಗುವಂತದ್ದು ವೈಯಕ್ತಿಕ ಸಾಲದಷ್ಟು ಸಮಯ ಕಾಯಬೇಕಿಲ್ಲ. ಅಷ್ಟೇ ಅಲ್ಲದೆ ಇದಕ್ಕೆ ಹೆಚ್ಚಿನ ದಾಖಲಾತಿಗಳನ್ನು ಕೂಡ ನೀವು ನೀಡಬೇಕಾಗಿಲ್ಲ.

ಚಿನ್ನದ ಮೇಲಿನ ಸಾಲ ತೆಗೆದುಕೊಂಡರೆ ಮೂರರಿಂದ ಐದು ವರ್ಷಗಳ ಅವಧಿಯಲ್ಲಿ ಮರುಪಾವತಿ ಮಾಡಬೇಕು ಹಾಗೂ ಪ್ರತಿ ತಿಂಗಳು ಹಣವನ್ನು ಮರುಪಾವತಿ ಮಾಡಬೇಕು.

ಇನ್ನು ವಯಕ್ತಿಕ ಸಾಲ ಮತ್ತು ಚಿನ್ನದ ಮೇಲಿನ ಸಾಲ ಇವೆರಡರಲ್ಲಿ ಯಾವುದು ಬೆಸ್ಟ್ ಎಂದು ಹೇಳುವುದಾದರೆ, ಇದು ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರುವಂತದ್ದು. ಯಾವ ಸಂದರ್ಭದಲ್ಲಿ ವೈಯಕ್ತಿಕ ಸಾಲ ಬೇಕಾಗಿರುವುದು ಆ ಸಂದರ್ಭದಲ್ಲಿ ನಿಮ್ಮ ಬಳಿ ಚಿನ್ನ ಇಲ್ಲದೆ ಇದ್ದಾಗ ವೈಯಕ್ತಿಕ ಸಾಲವನ್ನೇ ತೆಗೆದುಕೊಳ್ಳಬೇಕು.

ತಿಂಗಳಿಗೆ ಕೇವಲ 500 ರೂಪಾಯಿ ಉಳಿತಾಯ ಮಾಡಿದ್ರೆ ಸಿಗುತ್ತೆ 2 ಲಕ್ಷ ರೂಪಾಯಿ!

ಯಾವಾಗ ನಿಮಗೆ ಹಣದ ಅವಶ್ಯಕತೆ ಇರುತ್ತದೆಯೋ ಆಗ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿ ಇಲ್ಲದೆ ಇದ್ರೆ, ಚಿನ್ನವನ್ನು ಅಡವಿಟ್ಟು ಸಾಲ ಪಡೆಯಬಹುದು. ಹಾಗಾಗಿ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಲ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Which is the best, Gold Loan, Personal Loan, Which is more beneficial

Follow us On

FaceBook Google News