ನಿಮ್ಮ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಇದ್ರೆ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್! ಬಂಪರ್ ಅವಕಾಶ

LPG Gas Cylinder : ನಮಗೆಲ್ಲ ಗೊತ್ತಿರುವ ಹಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಆಡಳಿತ ಅವಧಿಯಲ್ಲಿ ಸಾಕಷ್ಟು ಪ್ರಮುಖ ಯೋಜನೆಗಳು ಜಾರಿಗೆ ಬಂದಿವೆ, ಮಹಿಳೆಯರ ಸಬಲೀಕರಣ ಹಾಗೂ ಮಹಿಳೆಯರ ಆರ್ಥಿಕ ಶಕ್ತಿಯನ್ನು ಉತ್ತಮಗೊಳಿಸುವುದು ಕೇಂದ್ರ ಸರ್ಕಾರದ ಪ್ರಮುಖ ಗುರಿ ಆಗಿದೆ

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವರ್ಗಕ್ಕೂ ಸಂಬಂಧ ಪಟ್ಟ ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಮುಖ್ಯವಾಗಿ ಮಹಿಳೆಯರು ಇಲ್ಲಿಯವರೆಗೆ ಪಡುತ್ತಿರುವ ಕಷ್ಟಕ್ಕೆ ಬ್ರೇಕ್ ಹಾಕುವಂತ ಒಂದು ಪ್ರಮುಖ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಅದುವೇ ಪ್ರದಾನ ಮಂತ್ರಿ ಉಜ್ವಲ ಯೋಜನೆ.

ಕೇಂದ್ರ ಸರ್ಕಾರದಿಂದ ಇಂತಹ ಮಹಿಳೆಯರಿಗೆ ಸಿಗಲಿದೆ 5 ಲಕ್ಷ ರೂಪಾಯಿ! ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆ

ಇಂದು ಕೋಟ್ಯಂತರ ಮಹಿಳೆಯರು ನೆಮ್ಮದಿಯಿಂದ ಮನೆಯಲ್ಲಿ ಅಡುಗೆ ಮಾಡಿ ಕುಟುಂಬದ ಸದಸ್ಯರಿಗೆ ಬಡಿಸಲು ಸಾಧ್ಯವಾಗಿದೆ, ಅಂದ್ರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅದಕ್ಕೆ ಪ್ರಮುಖ ಕಾರಣ ಎನ್ನಬಹುದು.

ಹೌದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ (free gas connection) ಕೊಡಲಾಗುತ್ತಿದೆ, ಇದರ ಜೊತೆಗೆ ಸಬ್ಸಿಡಿ ಸಿಲಿಂಡರ್ (subsidy cylinder) ಹಾಗೂ ಇತ್ತೀಚಿಗೆ ಪ್ರಧಾನಮಂತ್ರಿಯವರು ಘೋಷಿಸಿರುವಂತೆ ಒಂದರ ಬದಲು ಎರಡು ಉಚಿತ ಸಿಲಿಂಡರ್ ಕೂಡ ನೀಡಲಾಗುತ್ತಿದೆ.

ಉಳಿದ ಎಲ್ಪಿಜಿ ಗ್ಯಾಸ್ ಬಳಕೆ ಮಾಡುವವರಿಗೆ 200 ರೂಪಾಯಿಗಳ ಸಬ್ಸಿಡಿ ಒದಗಿಸಲಾದರೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿರುವ ಮಹಿಳೆಯರು 300 ರೂಪಾಯಿಗಳ ಸಬ್ಸಿಡಿ ಪಡೆದುಕೊಳ್ಳುತ್ತಾರೆ, ಕೇವಲ 603 ರೂಪಾಯಿಗಳಿಗೆ ವರ್ಷಕ್ಕೆ 12 ಸಿಲಿಂಡರ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿರುವವರಿಗೆ ಬಿಗ್ ರಿಲೀಫ್! ಆರ್‌ಬಿಐ ಹೊಸ ರೂಲ್ಸ್

Gas Cylinder subsidyಈ ರೀತಿ ನೀವು ಅರ್ಜಿ ಸಲ್ಲಿಸಿ!

ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಇದ್ರೆ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಅರ್ಜಿ ಸಲ್ಲಿಸಲು ಅರ್ಹರು. ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಮಹಿಳಾ ಅಭ್ಯರ್ಥಿಯೇ ಆಗಿರಬೇಕು. ಭಾರತೀಯ ನಿವಾಸಿ ಆಗಿರಬೇಕು. 18 ವರ್ಷದ ನಂತರದ ಹೆಣ್ಣು ಮಕ್ಕಳು ಅರ್ಜಿ ಸಲ್ಲಿಸಬಹುದು.

ಬಡತನ ರೇಖೆಗಿಂತ ಕೆಳಗಿರುವವರು ಹಾಗೂ ಬಿಪಿಎಲ್ ಕಾರ್ಡ್ ಕಡ್ಡಾಯವಾಗಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಇನ್ನು ಗ್ರಾಮೀಣ ಪ್ರದೇಶದಲ್ಲಿ ಕುಟುಂಬದ ವಾರ್ಷಿಕ ವರಮಾನ ಒಂದು ಲಕ್ಷ ರೂಪಾಯಿಗಳ ಒಳಗೆ ಇರಬೇಕು ಹಾಗೂ ನಗರ ಪ್ರದೇಶಗಳಲ್ಲಿ ಇದರ ಮಿತಿ ಎರಡು ಲಕ್ಷ ರೂಪಾಯಿಗಳು. ಈ ಎಲ್ಲಾ ಅರ್ಹತೆಗಳು ನಿಮ್ಮಲ್ಲಿ ಇದ್ದರೆ ನೀವು ತಕ್ಷಣ ಉಚಿತ ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

ಈ ಬ್ಯಾಂಕಿನಲ್ಲಿ ಕ್ಷಣಮಾತ್ರದಲ್ಲಿ ಸಿಗಲಿದೆ ಕಡಿಮೆ ಬಡ್ಡಿಗೆ 10 ಲಕ್ಷ ಪರ್ಸನಲ್ ಲೋನ್!

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ಬಿಪಿಎಲ್ ರೇಷನ್ ಕಾರ್ಡ್
ಆಧಾರ್ ಕಾರ್ಡ್
ಮನೆಯ ವಿಳಾಸ
ಬ್ಯಾಂಕ ಖಾತೆಯ ವಿವರ
ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ

ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

* ಈ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲು https://www.pmuy.gov.in/index.aspx ಈ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

* HP, Inden ಅಥವಾ Bharat Gas ಈ ಮೂರು ಗ್ಯಾಸ್ ವಿತರಕರ ಹೆಸರನ್ನು ಕಾಣುತ್ತೀರಿ.

* ಅದರಲ್ಲಿ ನಿಮ್ಮ ಆಯ್ಕೆಯ ವಿತರಕರ ಮೇಲೆ ಕ್ಲಿಕ್ ಮಾಡಿ

* ಈಗ ನಿಮ್ಮ ಆಧಾರ್ ಸಂಖ್ಯೆ ಮೊಬೈಲ್ ಸಂಖ್ಯೆ ಮೊದಲಾದ ವಿವರಗಳನ್ನು ನೀಡಬೇಕು.

* ಬಳಿಕ ಗ್ಯಾಸ್ ಉಚಿತವಾಗಿ ಪಡೆದುಕೊಳ್ಳಲು ಒಂದು ಅರ್ಜಿ ಫಾರಂ ಸಿಗುತ್ತದೆ ಅದನ್ನು ಭರ್ತಿ ಮಾಡಬೇಕು.

* ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಗಳನ್ನು ನೀಡಿದ ನಂತರ ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ ಬಳಿಕ ಉಚಿತ ಗ್ಯಾಸ್ ವಿತರಣೆ ಮಾಡಲಾಗುವುದು

ಹೊಸ ಮನೆ ಕಟ್ಟುತ್ತಿರುವವರಿಗೆ ಈ ಬ್ಯಾಂಕುಗಳಲ್ಲಿ ಸಿಗುತ್ತಿದೆ ಕಡಿಮೆ ಬಡ್ಡಿಗೆ ಹೋಮ್ ಲೋನ್

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ನೀವು ನಿಮ್ಮ ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಭೇಟಿ ನೀಡಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

If you have a BPL card in your name, you will get a free LPG gas cylinder

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories