Business News

ಸ್ವಂತ ವ್ಯಾಪಾರಕ್ಕೆ ಸಿಗುತ್ತೆ ಸಾಲ ಸೌಲಭ್ಯ, ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ರೆ ಸಾಕು

Loan Scheme : ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ಯಾ? ಹಾಗಾದ್ರೆ ಬೇರೆ ಯಾವುದೇ ದಾಖಲೆಗಳನ್ನು ನೀಡದೆ ಬ್ಯಾಂಕ್ನಿಂದ ಸುಲಭವಾಗಿ ಸಾಲವನ್ನು (Bank Loan) ಪಡೆಯಬಹುದು. ನಿಮ್ಮದೇ ಆಗಿರುವ ಸ್ವಂತ ಉದ್ಯಮ ಮಾಡಲು ಹೊರಟಿದ್ದರೆ ಇದು ಖಂಡಿತವಾಗಿಯೂ ನಿಮಗೆ ಉಪಯೋಗಕ್ಕೆ ಬರುತ್ತದೆ. ಈ ಯೋಜನೆ ಯಾವುದು? ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಎನ್ನುವ ಎಲ್ಲಾ ವಿವರಗಳು ಇಲ್ಲಿವೆ.

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ! (Pradhanmantri SVANidhi Yojana)

ವಿಶೇಷವಾಗಿ ಬೀದಿ ವ್ಯಾಪಾರಿ (street vendors) ಗಳಿಗಾಗಿಯೇ ಈ ಯೋಜನೆ ಜಾರಿಗೆ ತರಲಾಗಿದೆ. 10,000 ಗಳಿಂದ 50,000ಗಳ ವರೆಗೆ ಈ ಯೋಜನೆಯ ಅಡಿಯಲ್ಲಿ ಯಾವುದೇ ಗ್ಯಾರೆಂಟಿ ಕೊಡದೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.

Aadhaar card is enough to get a loan of up to 10,000

ಈ ಯೋಜನೆಯಲ್ಲಿ ಸಿಗುತ್ತೆ 3,000 ರೂ.! ಮಹಿಳೆ ಮತ್ತು ಪುರುಷರಿಗೂ ಸಿಗುತ್ತೆ ಬೆನಿಫಿಟ್

ಬೀದಿಯಲ್ಲಿ ತರಕಾರಿ ಹಣ್ಣು ಮಾರಾಟ ಮಾಡುವವರು, ಇಸ್ತ್ರಿ ಅಂಗಡಿಯವರು, ಪಾನ್ ಶಾಪ್ ನವರು, ಫಾಸ್ಟ್ ಫುಡ್ ತಯಾರು ಮಾಡುವವರು ಹೀಗೆ ತಳ್ಳು ಗಾಡಿ ಇಟ್ಟುಕೊಂಡು ವ್ಯಾಪಾರ ಮಾಡುವವರು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಹತೆಯನ್ನು ಪಡೆದುಕೊಂಡಿರುತ್ತಾರೆ.

ಸಾಲದ ಮೊತ್ತ! (Loan amount)

ಮೊದಲ ಹಂತದಲ್ಲಿ 10 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಇದನ್ನು ನೀವು ನಿಗದಿತ ಅವಧಿಯಲ್ಲಿ ಪಾವತಿ ಮಾಡಿದರೆ 20,000ಗಳನ್ನ ಪಡೆದುಕೊಳ್ಳಬಹುದು. ಈ ಹಣವನ್ನು ಕೂಡ ಹಿಂತಿರುಗಿಸಿದ ನಂತರ 50,000ಗಳನ್ನ ಕೊಡಲಾಗುತ್ತದೆ.

ನಂತರ ಈ ಸಾಲ ಮೊತ್ತವನ್ನು ಮರುಪಾವತಿ ಮಾಡಿದ್ರೆ ಮತ್ತೆ ಸಾಲ ಸೌಲಭ್ಯ ಪಡೆಯಬಹುದು. ಇದಕ್ಕಾಗಿ ಸರ್ಕಾರ ಸಬ್ಸಿಡಿಯನ್ನು ಕೂಡ ನೀಡುತ್ತದೆ ಹಾಗಾಗಿ ನೀವು ಹೆಚ್ಚು ಬಡ್ಡಿ ಪಾವತಿ ಮಾಡುವ ಅಗತ್ಯವು ಇಲ್ಲ. ಇದು ಸಂಪೂರ್ಣ ಫ್ರೀ ಸಾಲ ಸೌಲಭ್ಯವಾಗಿದ್ದು ನಿಮ್ಮ ಆಧಾರ್ ಕಾರ್ಡ್ ಒಂದನ್ನ ಆಧಾರವಾಗಿ ಕೊಟ್ಟು ಸಾಲ ಪಡೆಯಬಹುದು.

ಹೊಸ ಸ್ಕೀಮ್! ವಿದ್ಯುತ್ ಬಿಲ್ ಕಟ್ಟೋದೆ ಬೇಡ; ವಿದ್ಯುತ್ ಉತ್ಪಾದಿಸಿ ಹಣವನ್ನು ಕೂಡ ಗಳಿಸಿ

Loan Schemeಅರ್ಜಿ ಸಲ್ಲಿಸುವುದು ಹೇಗೆ? (How to apply)

ನೀವು ಯಾವುದೇ ವಾಣಿಜ್ಯ ಬ್ಯಾಂಕ್, ಸಹಕಾರಿ ಬ್ಯಾಂಕ್ ಅಥವಾ ಗ್ರಾಮೀಣ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಅಧಿಕೃತ ಲಿಂಕ್ https://pmsvanidhi.mohua.gov.in/ ಇದಾಗಿದ್ದು ಇದರ ಮೇಲೆ ಕ್ಲಿಕ್ ಮಾಡಿ. ನೀವು ನಿಮಗೆ ಬೇಕಾಗಿರುವ ಮೊತ್ತ ಆಯ್ಕೆ ಮಾಡಿ ನಂತರ ಸರಿಯಾದ ಮಾಹಿತಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

ಮಹಿಳೆಯರಿಗೆ ಸಿಗಲಿದೆ ಪ್ರತಿ ತಿಂಗಳು 1000 ರೂಪಾಯಿ, ಕೇಂದ್ರದ ಬಂಪರ್ ಯೋಜನೆ

if you have Aadhaar card, You can get loan facility for your own business

Our Whatsapp Channel is Live Now 👇

Whatsapp Channel

Related Stories