ಹೊಸ ಸ್ಕೀಮ್! ವಿದ್ಯುತ್ ಬಿಲ್ ಕಟ್ಟೋದೆ ಬೇಡ; ವಿದ್ಯುತ್ ಉತ್ಪಾದಿಸಿ ಹಣವನ್ನು ಕೂಡ ಗಳಿಸಿ

Solar Electricity : ವಿದ್ಯುತ್ ಬಿಲ್ ಕಟ್ಟುವುದೇ ಬೇಡ ಮನೆಯಲ್ಲಿಯೇ ವಿದ್ಯುತ್ ಉತ್ಪಾದಿಸಿ ಹಣವನ್ನು ಗಳಿಸಿ!

Bengaluru, Karnataka, India
Edited By: Satish Raj Goravigere

Solar Electricity : ದಿನದಿಂದ ದಿನಕ್ಕೆ ವಿದ್ಯುತ್ ಬಳಕೆ (electricity usage) ಜಾಸ್ತಿ ಆಗ್ತಾ ಇದೆ. ಈಗಾಗಲೇ ಬಂದಿರುವ ಮಾಹಿತಿಯ ಪ್ರಕಾರ ಬೇಸಿಗೆ ಕಾಲದ ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರತಿ ತಿಂಗಳಿಗಿಂತ ಮಾರ್ಚ್ ತಿಂಗಳಿನಲ್ಲಿ 20% ನಷ್ಟು ವಿದ್ಯುತ್ ಅನ್ನು ಹೆಚ್ಚುವರಿಯಾಗಿ ಜನ ಬಳಕೆ ಮಾಡುತ್ತಿದ್ದಾರೆ.

ಆದರೆ ಜನರ ಬೇಡಿಕೆ ಎಷ್ಟಿದೆಯೋ ಅಷ್ಟು ವಿದ್ಯುತ್ ತಯಾರಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅಷ್ಟು ಪ್ರಮಾಣದ ನೀರು ಸಂಗ್ರಹವಾಗಿಲ್ಲ ಎಂದು ಸರ್ಕಾರ ತಿಳಿಸಿದೆ.

Solar electricity, Solar Panel

ವಿದ್ಯುತ್ ಎಲ್ಲದಕ್ಕೂ ಬೇಕು. ಕೃಷಿ ಚಟುವಟಿಕೆಗೂ ಬೇಕು. ನಗರ ಪ್ರದೇಶದ ವಾಣಿಜ್ಯ ಉದ್ಯಮಗಳಿಗೂ ಬೇಕು. ಹೀಗಾಗಿ ಪ್ರತಿಯೊಬ್ಬರಿಗೂ ಕೂಡ ಸೋಲಾರ್ ಕರೆಂಟ್ ಉತ್ಪಾದನೆ (solar electricity) ಮಾಡುವ ಬಗ್ಗೆ ಸರ್ಕಾರ ಮಾಹಿತಿ ನೀಡುತ್ತಿದ್ದು, ಇದರಿಂದ ನೀವು ಹಣವನ್ನು ಸಂಪಾದಿಸಬಹುದು. ಜೊತೆಗೆ ಉಚಿತವಾಗಿ ವಿದ್ಯುತ್ ಬಳಕೆ ಮಾಡಬಹುದು ಎಂದು ಸರ್ಕಾರ ನಾಗರಿಕರಿಗೆ ಮಾಹಿತಿ ನೀಡುತ್ತಿದೆ.

ಮಹಿಳೆಯರಿಗೆ ಸಿಗಲಿದೆ ಪ್ರತಿ ತಿಂಗಳು 1000 ರೂಪಾಯಿ, ಕೇಂದ್ರದ ಬಂಪರ್ ಯೋಜನೆ

ಸೋಲಾರ್ ಕರೆಂಟ್ ಕೃಷಿ ಆರಂಭಿಸಿ! (Solar Electricity farming)

ಬೆಸ್ಕಾಂ ಸೋಲಾರ್ ರೂಫ್ ಟಾಪ್ (BESCOM solar roof top project) ಪ್ರಾಜೆಕ್ಟ್ ಆರಂಭಿಸಿದೆ ಇದರಲ್ಲಿ ನೀವು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸುವುದರ ಮೂಲಕ ವಿದ್ಯುತ್ ಉತ್ಪಾದನೆ ಮಾಡಬಹುದು ಇದರ ಜೊತೆಗೆ ಮಾರಾಟ ಮಾಡಬಹುದು. ಹಾಗಾಗಿ ಕೈತುಂಬ ಹಣ ಸಂಪಾದನೆ ಮಾಡುವುದಕ್ಕೂ ಕೂಡ ಈ ಯೋಜನೆ ಉತ್ತೇಜನ ನೀಡುತ್ತದೆ.

Solar Panelಸೂರ್ಯನೆ ಕೊಡುತ್ತಾನೆ ವಿದ್ಯುತ್!

ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿಯೂ ಕೂಡ ಸೋಲಾರ್ ಪ್ಯಾನೆಲ್ ಅಳವಡಿಕೆಯ ಬಗ್ಗೆ ಜನರು ಜಾಗೃತರಾಗಿದ್ದಾರೆ. ರಾಜ್ಯದಲ್ಲಿ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆ ಜಾರಿಗೆ ಬಂದಿರುವುದು ನಿಮಗೆಲ್ಲಾ ಗೊತ್ತೇ ಇದೆ, ಇದರಿಂದ ಸಾಕಷ್ಟು ಜನ ಉಚಿತ ವಿದ್ಯುತ್ ಪಡೆದುಕೊಳ್ಳುತ್ತಿದ್ದಾರೆ.

ಆದರೆ ಈ ವರ್ಷ ವಿದ್ಯುತ್ ಸಮಸ್ಯೆ ಹಾಗೂ ವಿದ್ಯುತ್ ಅತಿಯಾದ ಬಳಕೆಯಿಂದಾಗಿ ಹಲವರಿಗೆ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತಿಲ್ಲ. ಜೀವನಪರ್ಯಂತ ವಿದ್ಯುತ್ ಬಿಲ್ ಪಾವತಿಸಲೇಬೇಕು ಎಂದೇನು ಇಲ್ಲ, ಸ್ವಲ್ಪ ಮುತುವರ್ಜಿಯಿಂದ ನಿಮ್ಮ ಮನೆಯಲ್ಲಿಯೇ ಸೋಲಾರ್ ಪ್ಯಾನೆಲ್ (Solar Panel) ಅಳವಡಿಸಿಕೊಂಡರೆ ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್ ಪಾವತಿಸಬೇಕಾಗುವುದಿಲ್ಲ. ಅಷ್ಟೇ ಅಲ್ಲ ಕೃಷಿಗೆ ಬೇಕಾಗಿರುವ ನೀರಾವರಿ ಘಟಕ ಸ್ಥಾಪನೆಗೂ ಕೂಡ ಅಗತ್ಯ ಇರುವ ವಿದ್ಯುತ್ತನ್ನು ಸೋಲಾರ್ ಮೂಲಕವೇ ಪಡೆದುಕೊಳ್ಳಬಹುದು.

ಇನ್ಮುಂದೆ ಬ್ಯಾಂಕ್ ಖಾತೆಯಿಂದ 50 ಸಾವಿರಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡೋ ಹಾಗಿಲ್ಲ

ಆರಂಭಿಸಿ ಸೌರ ವಿದ್ಯುತ್ ಕೃಷಿ!

ನಗರ ಪ್ರದೇಶದಲ್ಲಿ ಆಗಿರಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿಯೇ ಆಗಿರಲಿ ಸಣ್ಣ ಜಾಗ ಇದ್ದರೂ ಸಾಕು ಮನೆಯ ಮೇಲ್ಚಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪನೆ ಮಾಡಿ ವಿದ್ಯುತ್ ಉತ್ಪಾದನೆ ಮಾಡಬಹುದು.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, (BESCOM) ಸೌರ ವಿದ್ಯುತ್ ಫಲಕ ಅಳವಡಿಕೆಗೆ ಉತ್ತೇಜನ ನೀಡುತ್ತಿದೆ. ನೀವು ವಿದ್ಯುತ್ ಉತ್ಪಾದನೆ ಮಾಡಿ ಬಳಕೆ ಮಾಡಿದ ನಂತರ ಉಳಿದ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡಬಹುದು. ಇದೀಗ ಬೆಸ್ಕಾಂ ಬೆಂಗಳೂರಿನಲ್ಲಿ ಟೆರೇಸ್ ಮೇಲೆ ಸೌರ ಘಟಕಗಳನ್ನು ಅಳವಡಿಸಿಕೊಳ್ಳಬಹುದು ಎಂದು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ.

ಮಹಿಳೆಯರಿಗೆ ಸಿಹಿ ಸುದ್ದಿ! ಸಿಗಲಿದೆ 2 ಉಚಿತ ಗ್ಯಾಸ್ ಸಿಲಿಂಡರ್; ಈ ರೀತಿ ಅರ್ಜಿ ಸಲ್ಲಿಸಿ

ಪಡೆಯಬಹುದು ಸಬ್ಸಿಡಿ! (Subsidy for solar panel installation)

ಬೆಸ್ಕಾಂ ಇದೀಗ ಸೌರ ಗೃಹ ಯೋಜನೆ ಅಥವಾ ಸೌರ ವಿದ್ಯುತ್ ಯೋಜನೆಯನ್ನು ಆರಂಭಿಸಿದ್ದು, ಮನೆಯ ಮಾಲೀಕರು ಮಾತ್ರವಲ್ಲದೆ ಬಾಡಿಗೆ ಮನೆಯಲ್ಲಿ ಇರುವವರು ಕೂಡ ಸೌರ ಶಕ್ತಿ ಮೂಲಕ ವಿದ್ಯುತ್ ತಯಾರಿಸಿಕೊಳ್ಳಬಹುದು ಎಂದು ತಿಳಿಸಿದೆ.

ವಿದ್ಯುತ್ ಮಾರಾಟ ಮಾಡುವುದು ಹೇಗೆ?

ನೀವು ಸೋಲಾರ್ ಪ್ಯಾನೆಲ್ ಘಟಕವನ್ನು ಅಳವಡಿಸಿಕೊಂಡರೆ ಸ್ವಂತ ವಿದ್ಯುತ್ ಉತ್ಪಾದಿಸಬಹುದು. ಜೊತೆಗೆ ಹೆಚ್ಚುವರಿ ವಿದ್ಯುತ್ತನ್ನು ಬೆಸ್ಕಾಂ ಗ್ರಿಡ್ ಗೆ ಸೇರಿಸಬಹುದು. ಕೇವಲ ಒಂದು ವ್ಯಾಟ್ ಘಟಕ ಸ್ಥಾಪನೆ ಮಾಡುವುದಿದ್ದರೆ, 10 ಚದರ್ ಮೀಟರ್ ಜಾಗ ಸಾಕು. ಇದರಿಂದ ನೀವು ನಾಲ್ಕು ಯೂನಿಟ್ ವಿದ್ಯುತ್ತನ್ನು ಪ್ರತಿದಿನ ಉತ್ಪಾದನೆ ಮಾಡಬಹುದು.

ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳುವ ಗ್ರಾಹಕರಿಗೆ ಬೆಸ್ಕಾಂ ನೀಡಿರುವ ಗುಡ್ ನ್ಯೂಸ್ ಅಂದ್ರೆ, ನಿಮ್ಮಿಂದ ವಿದ್ಯುತ್ ಖರೀದಿ ಮಾಡುವುದಾಗಿ ಮುಂದಿನ 25 ವರ್ಷಗಳವರೆಗೆ ಒಪ್ಪಂದ ಮಾಡಿಕೊಳ್ಳುತ್ತದೆ ಬೆಸ್ಕಾಂ.

ಸ್ವಂತ ಬಿಸಿನೆಸ್ ಮಾಡೋ ಆಲೋಚನೆ ಇದ್ರೆ, ಸರ್ಕಾರದಿಂದಲೇ ಸಿಗಲಿದೆ ಬಡ್ಡಿಯಿಲ್ಲದೆ ಸಾಲ

ಸಬ್ಸಿಡಿ ಬಗ್ಗೆ ಮಾತನಾಡುವುದಾದರೆ ಒಂದರಿಂದ ಮೂರು ಕಿಲೋ ವ್ಯಾಟ್ ಉತ್ಪಾದಿಸಲು ಪ್ರತಿ ಕಿಲೊವ್ಯಾಟ್ ಗೆ 18 ಸಾವಿರ ರೂಪಾಯಿಗಳ ಸಬ್ಸಿಡಿ, ಮೂರರಿಂದ ಹತ್ತು ಕಿಲೋವ್ಯಾಟ್ ನಡುವಿನ ಸೋಲಾರ್ ಘಟಕ ಸ್ಥಾಪನೆಗೆ ಪ್ರತಿ ಕಿಲೋ ವ್ಯಾಟ್ ಗೆ ರೂ 9,000 ರೂಪಾಯಿಗಳ ಸಬ್ಸಿಡಿ ಪಡೆಯಬಹುದು. ಸೋಲಾರ್ ವಿದ್ಯುತ್ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಬೆಸ್ಕಾಂ ಅನ್ನು ಸಂಪರ್ಕಿಸಿ.

Generate Solar electricity, no electricity bill and earn money too