ಈ ಯೋಜನೆಯಲ್ಲಿ ಸಿಗುತ್ತೆ 3,000 ರೂ.! ಮಹಿಳೆ ಮತ್ತು ಪುರುಷರಿಗೂ ಸಿಗುತ್ತೆ ಬೆನಿಫಿಟ್
ನಿಮ್ಮ ಖಾತೆಯಿಂದ (Bank Account) ನೇರವಾಗಿ ಪ್ರತಿ ತಿಂಗಳು PM Kisan madhan ಯೋಜನೆಗೆ ಪ್ರೀಮಿಯಂ ಮೊತ್ತ ಕಡಿತಗೊಳ್ಳುತ್ತದೆ.
ದುಡಿಯುವ ವಯಸ್ಸಿನಲ್ಲಿ ಚೆನ್ನಾಗಿ ದುಡಿಯುತ್ತೇವೆ. ಆದರೆ ವೃದ್ಧಾಪ್ಯದ (old age) ಸಮಯ ಬಂದಾಗ ಆರ್ಥಿಕವಾಗಿ ಸಂಕಷ್ಟ ಎದುರಿಸಬೇಕಾಗುತ್ತದೆ. ಯಾಕಂದರೆ ಇಂದಿನಿಂದಲೇ ಉಳಿತಾಯ ಮಾಡಬೇಕು ಎನ್ನುವ ಯೋಚನೆ ಸಾಕಷ್ಟು ಯುವಕರಿಗೆ ಇರುವುದಿಲ್ಲ. ಹೀಗಾಗಿ ಉಳಿತಾಯ ಮಾಡಿಕೊಂಡರೆ ಮಾತ್ರ ವೃದ್ಧಾಪ್ಯದಲ್ಲಿ ಆರ್ಥಿಕ ಸಮಸ್ಯೆ (financial problems) ಯಲ್ಲದೆ ಜೀವನ ನಡೆಸಲು ಸಾಧ್ಯವಿದೆ.
ಆದರೆ ಎಲ್ಲರಿಗೂ ಹೆಚ್ಚು ಮೊತ್ತದ ಉಳಿತಾಯ ಅಥವಾ ಹೂಡಿಕೆ (Investment) ಮಾಡಲು ಸಾಧ್ಯವಿಲ್ಲ, ಹೀಗಾಗಿ ಕೇಂದ್ರ ಸರ್ಕಾರ ರೈತರಿಗೆ ಮಾತ್ರ ಇಂತಹ ಒಂದು ಅದ್ಭುತ ಯೋಜನೆಯನ್ನು ಜಾರಿಗೆ ತಂದಿದ್ದು ರೈತರು ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 3,000 ಗಳ ಪಿಂಚಣಿ ಪಡೆದುಕೊಳ್ಳಬಹುದು.
ಹೊಸ ಸ್ಕೀಮ್! ವಿದ್ಯುತ್ ಬಿಲ್ ಕಟ್ಟೋದೆ ಬೇಡ; ವಿದ್ಯುತ್ ಉತ್ಪಾದಿಸಿ ಹಣವನ್ನು ಕೂಡ ಗಳಿಸಿ
ಪ್ರಧಾನ ಮಂತ್ರಿ ಕಿಸಾನ್ ಮನ್ ಧನ ಯೋಜನೆ!
ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಅಧಿಕಾರಕ್ಕೆ ಬಂದ ನಂತರ ರೈತರಿಗೆ ಅನುಕೂಲವಾಗುವ ಹಾಗೂ ಸಮಾಜದ ಪ್ರತಿಯೊಂದು ವರ್ಗದ ಜನರಿಗೆ ನೆರವಾಗುವ ಯೋಜನೆಗಳನ್ನು ಪರಿಚಯಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ರೈತರಿಗೆ ಪಿಂಚಣಿ ನೀಡುವ ಯೋಜನೆ ಆಗಿದೆ, ಪ್ರಧಾನಮಂತ್ರಿ ಕಿಸಾನ್ ಮನ್ ಧನ್ ಯೋಜನೆ.
ರೈತರು ಜೀವನಪೂರ್ತಿ ತಮ್ಮ ಜಮೀನಿನಲ್ಲಿ ದುಡಿದರು ಕೂಡ ಅವರಿಗೆ ಪಿಂಚಣಿ (pension) ಹಣವನ್ನು ಕೊಡುವವರು ಯಾರು ಇಲ್ಲ. ಹಾಗಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದಾಗಿ ಪ್ರತಿ ತಿಂಗಳು ಅತಿ ಕಡಿಮೆ ಹೂಡಿಕೆ ಮಾಡಿ 60 ವರ್ಷಗಳ ಬಳಿಕ ಪ್ರತಿ ತಿಂಗಳು 3 ಸಾವಿರ ರೂಪಾಯಿಗಳ ಪಿಂಚಣಿಯನ್ನು ಸುಲಭವಾಗಿ ಸರ್ಕಾರದಿಂದಲೇ ಪಡೆದುಕೊಳ್ಳಬಹುದು.
ಮಹಿಳೆಯರಿಗೆ ಸಿಗಲಿದೆ ಪ್ರತಿ ತಿಂಗಳು 1000 ರೂಪಾಯಿ, ಕೇಂದ್ರದ ಬಂಪರ್ ಯೋಜನೆ
ಪಿಂಚಣಿ ಪಡೆಯಲು ಯಾರು ಅರ್ಹರು?
* ಇದು ವಿಶೇಷವಾಗಿ ರೈತರಿಗಾಗಿ ಜಾರಿಗೆ ಬಂದಿರುವ ಯೋಜನೆಯಾಗಿದೆ.
* 18ರಿಂದ 40 ವರ್ಷ ವಯಸ್ಸಿನವರು ಹೂಡಿಕೆ ಮಾಡಬಹುದು.
* ಕಡಿಮೆ ವಯಸ್ಸಿನಲ್ಲಿ ಕಡಿಮೆ ಪ್ರೀಮಿಯಂ ಪಾವತಿ ಮಾಡಿ 60 ವರ್ಷಕ್ಕೆ 3000 ಪಡೆದುಕೊಳ್ಳಬಹುದು.
* ಯಾವುದೇ ಅಂಚೆ ಕಚೇರಿ ಅಥವಾ ಬ್ಯಾಂಕ್ಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಗೆ ಖಾತೆ ತೆರೆಯಬಹುದು.
ಇನ್ಮುಂದೆ ಬ್ಯಾಂಕ್ ಖಾತೆಯಿಂದ 50 ಸಾವಿರಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡೋ ಹಾಗಿಲ್ಲ
ಹೂಡಿಕೆಯ ಮೊತ್ತ!
18 ರಿಂದ 40 ವರ್ಷ ವಯಸ್ಸಿನ ಒಳಗಿನವರು ಈ ಯೋಜನೆಗೆ ಹೂಡಿಕೆ ಮಾಡಬಹುದು. ನೀವು ಯಾವ ವಯಸ್ಸಿನಲ್ಲಿ ಹೂಡಿಕೆ ಆರಂಭಿಸುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮ್ಮ ಪ್ರೀಮಿಯಂ ಮತ್ತು ನಿರ್ಧಾರವಾಗುತ್ತದೆ.
ಉದಾಹರಣೆಗೆ 18ನೇ ವರ್ಷದಲ್ಲಿ ಹೂಡಿಕೆ ಆರಂಭಿಸುತ್ತೀರಿ ಎಂದಾದರೆ ಮಾಸಿಕ 55 ರೂಪಾಯಿ ಪಾವತಿ ಮಾಡಿದ್ರೆ ಸಾಕು. 30 ವರ್ಷಕ್ಕೆ ಹೂಡಿಕೆ ಆರಂಭಿಸಿದರೆ ಮಾಸಿಕ 110 ರೂಪಾಯಿಗಳನ್ನು ಪಾವತಿ ಮಾಡಬೇಕು.
40ವರ್ಷಕ್ಕೆ ಹೂಡಿಕೆ ಆರಂಭಿಸಿದರೆ 220 ಮಾಸಿಕ ಪಾವತಿ ಮಾಡಬೇಕು. ಈ ರೀತಿ ಹೂಡಿಕೆ ಮಾಡುತ್ತಾ ಬಂದರೆ ನಿಮಗೆ 60 ವರ್ಷ ವಯಸ್ಸಾದಾಗ ಮೂರು ಸಾವಿರ ರೂಪಾಯಿಗಳನ್ನು ಪಿಂಚಣಿಯಾಗಿ ಪಡೆಯಬಹುದು.
ಮಹಿಳೆಯರಿಗೆ ಸಿಹಿ ಸುದ್ದಿ! ಸಿಗಲಿದೆ 2 ಉಚಿತ ಗ್ಯಾಸ್ ಸಿಲಿಂಡರ್; ಈ ರೀತಿ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವುದು ಹೇಗೆ?
ರೈತರು ತಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ, ವಯಸ್ಸಿನ ಪ್ರಮಾಣ ಪತ್ರ ಇವುಗಳನ್ನು ತೆಗೆದುಕೊಂಡು ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್ (Bank) ಹಾಗೂ ಸಹಕಾರ ಸಂಘಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದ್ದು https://maandhan.in/ ಸರಿಯಾದ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿದ ನಂತರ ನಿಮ್ಮ ಖಾತೆಯಿಂದ (Bank Account) ನೇರವಾಗಿ ಪ್ರತಿ ತಿಂಗಳು PM Kisan madhan ಯೋಜನೆಗೆ ಪ್ರೀಮಿಯಂ ಮೊತ್ತ ಕಡಿತಗೊಳ್ಳುತ್ತದೆ.
Get 3,000 rupees in this scheme, Both men and women will get the benefit