ಈ ಕೆಲಸ ಮಾಡದೆ ಇದ್ದರೆ ನಿಮ್ಮ ಪ್ಯಾನ್ ಕಾರ್ಡ್ ಕ್ಯಾನ್ಸಲ್! ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ

ಪ್ರಸ್ತುತ ನಮ್ಮ ದೇಶದ ಜನರ ಮುಖ್ಯವಾದ ಗುರುತಿನ ಅಂಶಗಳಲ್ಲಿ ಪ್ಯಾನ್ ಕಾರ್ಡ್ (Pan Card) ಕೂಡ ಬಹಳ ಮುಖ್ಯವಾದದ್ದು. ಪ್ಯಾನ್ ಕಾರ್ಡ್ ಈಗ ಬ್ಯಾಂಕ್ ಕೆಲಸಗಳಿಗೆ, ತೆರಿಗೆ ಪಾವತಿ (Tax Paying) ಮಾಡುವುದಕ್ಕೆ ಮತ್ತು ಇನ್ನಿತರ ಕೆಲವು ಕೆಲಸಗಳಿಗೆ ಪ್ರಮುಖವಾಗಿ ಬೇಕಾಗುತ್ತದೆ.
ಹೀಗಿರುವಾಗ ಪ್ಯಾನ್ ಕಾರ್ಡ್ ಅನ್ನು ಹುಷಾರಾಗಿ ಇಟ್ಟುಕೊಳ್ಳುವುದು, ಅದಕ್ಕೆ ಸಂಬಂಧಿಸಿದ ನಿಯಮಗಳನ್ನ ಪಾಲಿಸುವುದು ಬಹಳ ಮುಖ್ಯವಾಗುತ್ತದೆ.
ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಸರ್ಕಾರ ಆಗಾಗ ಹೊಸ ನಿಯಮಗಳನ್ನ (New Rules) ಜಾರಿಗೆ ತರುತ್ತದೆ. ಸರ್ಕಾರವು ಈಗಾಗಲೇ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ (Pan Card Aadhaar Card Link) ಮಾಡಲು ತಿಳಿಸಿತ್ತು, ಈ ಕೆಲಸಕ್ಕೆ ಸಮಯದ ಗಡುವನ್ನು ಕೂಡ ನೀಡಿತ್ತು, ಈಗಾಗಲೇ ಈ ಗಡುವು ಮುಗಿದಿದ್ದು, ಇನ್ನು ಆಧಾರ್ ಕಾರ್ಡ್ ಗೆ ಪ್ಯಾನ್ ಲಿಂಕ್ ಮಾಡದೆ ಇದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಅನ್ನು ಸರ್ಕಾರ ಕ್ಯಾನ್ಸಲ್ ಮಾಡುತ್ತದೆ..
ಪ್ರತಿ ತಿಂಗಳು 12 ಸಾವಿರ ಸಿಗುತ್ತೆ ಅಂದ್ರೆ ಬೇಡ ಅಂತೀರಾ? ಹಾಗಾದ್ರೆ ಇಲ್ಲಿದೆ ಅಂತಹ ಎಲ್‌ಐಸಿ ಪಾಲಿಸಿ
ಸಾಕಷ್ಟು ತಿಂಗಳುಗಳ ಹಿಂದೆಯೇ ಈ ಲಿಂಕಿಂಗ್ ಕೆಲಸ ಮಾಡಲು ಸರ್ಕಾರ ಸೂಚನೆ ನೀಡಿತ್ತು. ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು 2023ರ ಮಾರ್ಚ್ 31ರ ವರೆಗು ಸಮಯ ನೀಡಲಾಗಿತ್ತು.
ಆದರೆ ಹೆಚ್ಚಿನ ಜನರಿಂದ ಈ ಸಮಯದವರೆಗು ಲಿಂಕ್ ಮಾಡಿಸಲು ಸಾಧ್ಯವಾಗದ ಕಾರಣ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವ ದಿನವನ್ನು ವಿಸ್ತರಿಸಲಾಯಿತು. 2023ರ ಜೂನ್ 30ರ ವರೆಗು ಸಮಯ ನೀಡಲಾಯಿತು. ಈ ದಿನಾಂಕದವರೆಗು ಜನರು ಲಿಂಕ್ ಮಾಡಬಹುದು, ಲಿಂಕ್ ಮಾಡಿಲ್ಲ ಎಂದರೆ ಪ್ಯಾನ್ ಕಾರ್ಡ್ ಕ್ಯಾನ್ಸಲ್ ಮಾಡಿಸುವುದಾಗಿ ಸರ್ಕಾರ ಸೂಚನೆ ನೀಡಿತ್ತು.
ಅದೇ ರೀತಿ ಈಗ ಲಿಂಕ್ ಮಾಡದವರ ಪ್ಯಾನ್ ಕಾರ್ಡ್ ಡೀಆಕ್ಟಿವೇಟ್ (Pan Card Deactivate) ಆಗಿದೆ. ಪ್ರಸ್ತುತ ಹಣಕಾಸಿಗೆ ಸಂಬಂಧಿಸಿದ ವಿಚಾರಗಳಿಗೆ ಬ್ಯಾಂಕ್ ಅಕೌಂಟ್ ಕಡ್ಡಾಯವಾಗಿ ಬೇಕಾಗುತ್ತದೆ. ಬ್ಯಾಂಕ್ ಕೆಲಸಗಳಿಗೆ (Bank Needs), ಹೂಡಿಕೆ ಮಾಡುವುದಕ್ಕೆ (Investment), ಟ್ಯಾಕ್ಸ್ ಕಟ್ಟುವುದಕ್ಕೆ ಇದೆಲ್ಲದಕ್ಕೂ ಪ್ಯಾನ್ ಕಾರ್ಡ್ ಪ್ರಮುಖವಾಗಿ ಬೇಕಾಗುತ್ತದೆ. ಹಾಗಾಗಿ ಪ್ಯಾನ್ ಕಾರ್ಡ್ ಇಲ್ಲ ಎಂದರೆ ಅದರಿಂದ ನಿಮಗೆ ಜಾಸ್ತಿ ನಷ್ಟವಾಗುತ್ತದೆ.

ಹಾಗಾಗಿ ಈ ಕಾರ್ಡ್ ನ ನಂಬರ್ ನಲ್ಲಿ ನಿಮ್ಮ ಕುರಿತಾದ ಎಲ್ಲಾ ಮಾಹಿತಿ ಲಭ್ಯವಿರುತ್ತದೆ. ಹಾಗಾಗಿ ಪ್ಯಾನ್ ಕಾರ್ಡ್ ಕ್ಯಾನ್ಸಲ್ ಆದರೆ ತೆರಿಗೆ ಕಟ್ಟುವವರು ಹೆಚ್ಚಿನ ನಷ್ಯವನ್ನು ಅನುಭವಿಸಬೇಕಾಗುತ್ತದೆ..
ಹೊಸ ಹೀರೋ ಗ್ಲಾಮರ್ ಪ್ರೀಮಿಯಂ ಲುಕ್‍ನಲ್ಲಿ ಮಾರುಕಟ್ಟೆಗೆ ಎಂಟ್ರಿ! ಡಿಜಿಟಲ್ ಕ್ಲಸ್ಟರ್ ಇದೆ, ಬೆಲೆ ಎಷ್ಟು ಗೊತ್ತಾ?
ಈಗ ಆದಾಯ ತೆರಿಗೆ ಇಲಾಖೆಯ ನಿಯಮದ ಅನುಸಾರ ಒಬ್ಬ ವ್ಯಕ್ತಿಯ ಪ್ಯಾನ್ ಕಾರ್ಡ್ ಕ್ಯಾನ್ಸಲ್ ಆದರೆ ಅವರು ಆದಾಯ ತೆರಿಗೆ ಪಾವತಿ ಮಾಡಲು ಆಗುವುದಿಲ್ಲ ಹಾಗೆಯೇ ಆದಾಯ ತೆರಿಗೆಯ ರಿಟರ್ನ್ಸ್ (IT Returns) ಯಾವುದಾದರೂ ಬಾಕಿ ಇದ್ದರೆ ಅದನ್ನು ಕೂಡ ಪಾವತಿ ಮಾಡಲು ಕಷ್ಟ ಆಗುತ್ತದೆ.
ಪ್ಯಾನ್ ಕಾರ್ಡ್ ಕ್ಯಾನ್ಸಲ್ ಆದರೆ ನಿಮ್ಮ ಬ್ಯಾಂಕ್ ವಹಿವಾಟುಗಳಿಗೆ (Bank Transactions) ತಡೆ ಆಗುವುದಿಲ್ಲ. ಆದರೆ ನಿಮ್ಮ ಸಂಬಳ ಅಕೌಂಟ್ ಗೆ ಬರಲು ಹೆಚ್ಚು ಸಮಯ ಬೇಕಾಗುತ್ತದೆ. ಹಾಗೆಯೇ ಸಂಬಳದ ಮೂಲಕ್ಕೆ ತೆರಿಗೆ ಕಡಿತ ಕೂಡ ಪಡೆಯಲು ಆಗುವುದಿಲ್ಲ.
important announcement from the central government on Pan Card



