ಈ ಮಾರ್ಕೆಟ್ ನಲ್ಲಿ ಮದುವೆ ಹೆಣ್ಣನ್ನೇ ಮಾರಾಟಕ್ಕೆ ಇಡಲಾಗುತ್ತೆ, ನಿಮಗೆ ಇಷ್ಟ ಆದ್ರೆ ದುಡ್ಡು ಕೊಟ್ಟು ಕರೆದುಕೊಂಡು ಹೋಗಬಹುದು
Bulgaria Bride Market : ಮದುವೆ ಆಗಬೇಕು ಎಂದುಕೊಂಡಿರುವ ಹುಡುಗ ಈ ಮಾರ್ಕೆಟ್ ಗೆ ತನ್ನ ಫ್ಯಾಮಿಲಿ ಜೊತೆಗೆ ಬರುತ್ತಾನೆ. ತನಗೆ ಇಷ್ಟವಾದ ಹುಡುಗಿಯನ್ನು ಬೆಲೆ ಕೊಟ್ಟು ಖರೀದಿ ಮಾಡುತ್ತಾನೆ.
Bulgaria Bride Market : ಮಾರ್ಕೆಟ್ ಎಂದರೆ ಅಲ್ಲಿ ದಿನಬಳಕೆ ವಸ್ತುಗಳು, ಹೂವು ಹಣ್ಣು, ದಿನಸಿ ಇದೆಲ್ಲಾ ಇರುವುದನ್ನು ನೋಡಿರುತ್ತೇವೆ. ಕೆಲವು ಕಡೆ ಬಟ್ಟೆಗಳಿಗೆ ಪ್ರತ್ಯೇಕವಾಗಿ ಮಾರುಕಟ್ಟೆಯನ್ನು ಮಾಡಲಾಗಿರುತ್ತದೆ. ಇನ್ನು ಕೆಲವು ಕಡೆ ಪುಸ್ತಕಗಳಿಗೆ ಪುಸ್ತಕಗಳಿಗೆ ವಿಶೇಷವಾಗಿ ಮಾರ್ಕೆಟ್ ಇರುತ್ತದೆ.
ಆದರೆ ಈ ದೇಶದಲ್ಲಿರುವ ಒಂದು ಮಾರ್ಕೆಟ್ ನಲ್ಲಿ ವಧುವನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ಕೇಳಿ ನಿಮಗೆ ಆಶ್ಚರ್ಯ ಅನ್ನಿಸಬಹುದು.
ಇದೇನು ಈ ಮಾರ್ಕೆಟ್ ನಲ್ಲಿ ವಧುವನ್ನು ಅಂದರೆ ಹೆಣ್ಣನ್ನು ಮಾರಾಟ ಮಾಡುತ್ತಾರಾ? ಇದೆಲ್ಲ ಹೇಗೆ? ಇದು ನಿಜಾನ ಎಂದು ನಿಮಗೆ ಆಶ್ಚರ್ಯ ಆಗಬಹುದು. ಆದರೆ ನೀವು ಕೇಳುತ್ತಿರುವ ವಿಚಾರ ನಿಜವೇ ಆಗಿದೆ, ಇಲ್ಲಿ ಮಾರ್ಕೆಟ್ ನಲ್ಲಿ ವಧುವನ್ನು ಮಾರಾಟ ಮಾಡಲಾಗುತ್ತದೆ.
ಅಷ್ಟಕ್ಕೂ ಈ ಮಾರ್ಕೆಟ್ ಇರುವುದು ಎಲ್ಲಿ ಎಂದು ನೀವು ಕೇಳಿದರೆ, ಇದು ಇರುವುದು ಬಲ್ಗೇರಿಯಾದಲ್ಲಿ, ವಧುವನ್ನು ಮಾರಾಟ ಮಾಡುವ ಈ ಮಾರ್ಕೆಟ್ ಕಾನೂನುಬದ್ಧವಾಗಿ ಇರುವ ಜಾಗ ಆಗಿದೆ.
ಆಸ್ತಿ ಖರೀದಿ ದುಬಾರಿ! ಹೊಸದಾಗಿ ಮನೆ, ಸೈಟ್, ಜಮೀನು ಖರೀದಿ ಮಾಡುವವರಿಗೆ ಹೊಸ ರೂಲ್ಸ್ ತಂದ ಸರ್ಕಾರ
ಈ ಮಾರ್ಕೆಟ್ ಗೆ ಬರುವ ಜನ ಒಂದು ರೌಂಡ್ ಎಲ್ಲವನ್ನು ನೋಡಿ, ತಮಗೆ ಇಷ್ಟ ಆಗುವ ಹೆಂಡತಿಯನ್ನು ಖರೀದಿ ಮಾಡುತ್ತಾರೆ. ಇಂದು ನಿಮಗೆ ಹೇಳುತ್ತಿರುವುದು ಬಲ್ಗೇರಿಯಾದಲ್ಲಿರುವ ಈ ವಧುವಿನ ಮಾರಾಟ ಸ್ಥಳದ ಬಗ್ಗೆ, ಹೆಂಡತಿ ಅಥವಾ ವಧುಗಳನ್ನು ಮಾರಾಟ ಮಾಡುವ ಈ ಮಾರ್ಕೆಟ್ ಬಲ್ಗೇರಿಯಾದ ಸ್ಟಾರಾ ಜಾಗೋರ್ ಎನ್ನುವ ಪ್ರದೇಶದಲ್ಲಿದೆ.
ಮದುವೆ ಆಗಬೇಕು ಎಂದುಕೊಂಡಿರುವ ಹುಡುಗ ಈ ಮಾರ್ಕೆಟ್ ಗೆ ತನ್ನ ಫ್ಯಾಮಿಲಿ (Family) ಜೊತೆಗೆ ಬರುತ್ತಾನೆ. ತನಗೆ ಇಷ್ಟವಾದ ಹುಡುಗಿಯನ್ನು ಬೆಲೆ ಕೊಟ್ಟು ಖರೀದಿ ಮಾಡುತ್ತಾನೆ.
ಹುಡುಗಿಯ ಕಡೆಯವರು ಹುಡುಗಿಗೆ ಇಷ್ಟು ಬೆಲೆ ಎಂದು ನಿಗದಿ ಮಾಡಿರುತ್ತಾರೆ, ಹುಡುಗ ಮತ್ತು ಅವನ ಕಡೆಯವರು ಬೆಲೆಯನ್ನು ಹೆಚ್ಚು ಕಡಿಮೆ ಮಾಡಲು ಮಾತನಾಡಬಹುದು, ಹುಡುಗಿ ಮನೆಯವರಿಗೆ ಬೆಲೆ ಒಪ್ಪಿಗೆಯಾದರೆ, ಹುಡುಗ ಅಷ್ಟು ಹಣ ಕೊಟ್ಟು ಹುಡುಗಿಯನ್ನು ಕರೆದುಕೊಂಡು ಹೋಗಬಹುದು.
ಆಸ್ತಿ ಖರೀದಿಸುವಾಗ ಆಸ್ತಿ ದಾಖಲೆ ಅಸಲಿಯೋ ನಕಲಿಯೋ ಈ ರೀತಿ ಚೆಕ್ ಮಾಡಿಕೊಳ್ಳಿ! ಏಕಾಏಕಿ ಹೊಸ ರೂಲ್ಸ್
ಹುಡುಗಿಯರ ಕುಟುಂಬದಲ್ಲಿ ಆರ್ಥಿಕವಾಗಿ ಅಥವಾ ಇನ್ನಿತರ ಸಮಸ್ಯೆಗಳಿದ್ದು ಕುಟುಂಬದವರಿಗೆ ಮದುವೆ ಮಾಡಲು ಆಗದೆ ಹೋದರೆ ಈ ರೀತಿ ಮಾರ್ಕೆಟ್ ಗೆ ಕರೆದುಕೊಂಡು ಬರುತ್ತಾರೆ.
ಬಳಿಕ ಈ ಮಾರ್ಕೆಟ್ ಗೆ ಬರುವ ಹುಡುಗರು ತಮಗೆ ಇಷ್ಟ ಅಗುವಂಥ ಹುಡುಗಿಯರನ್ನು ಆಯ್ಕೆ ಮಾಡಿಕೊಂಡು ಖರೀದಿ ಮಾಡುತ್ತಾರೆ. ಬಲ್ಗೇರಿಯಾದಲ್ಲಿ ಈ ರೀತಿ ಹುಡುಗಿಯನ್ನು ಖರೀದಿ ಮಾಡುವ ಅಭ್ಯಾಸ ಬಹಳಷ್ಟು ವರ್ಷಗಳಿಂದ ನಡೆಯುತ್ತಿದೆ.
ಈ ಮಾರ್ಕೆಟ್ ಗೆ ಸರ್ಕಾರ ಕೂಡ ಪರ್ಮಿಶನ್ ಕೊಟ್ಟಿದೆ ಎನ್ನುವುದು ಮತ್ತೊಂದು ವಿಚಾರ ಎಂದು ಹೇಳಬಹುದು. ಈ ಮಾರ್ಕೆಟ್ ಗೆ ಹೆಣ್ಣುಮಕ್ಕಳನ್ನು ಕರೆದುಕೊಂಡು ಬರುವವರು ಕಲೈಜಿ ಎನ್ನುವ ಸಮುದಾಯಕ್ಕೆ ಸೇರಿದ ಜನರು. ಅವರು ಇಲ್ಲಿ ತಮ್ಮ ಹೆಣ್ಣುಮಕ್ಳಳನ್ನು ಮಾರಾಟ ಮಾಡುತ್ತಾರೆ. ಖರೀದಿ ಮಾಡುವವರು ಕೂಡ ಅದೇ ಸಮುದಾಯಕ್ಕೆ ಸೇರಿದವರಾಗಿರಬೇಕು ಎನ್ನುವುದು ಕಡ್ಡಾಯ ಆಗಿದೆ.
Family Sells Daughter in Bulgaria Bride Market
Follow us On
Google News |