Flight Ticket: ಕೇವಲ 1 ರೂಪಾಯಿಗೆ ವಿಮಾನ ಟಿಕೆಟ್! ಇಂಡಿಗೋ ಆಫರ್ ಸೇಲ್ಗೆ ಇಂದು ಕೊನೆಯ ಅವಕಾಶ
Flight Ticket: 2026ರ ಸ್ವಾಗತಕ್ಕಾಗಿ ಇಂಡಿಗೋ ‘Sail Into 2026’ ವಿಶೇಷ ಸೇಲ್ ಆರಂಭಿಸಿದ್ದು, ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನ ಟಿಕೆಟ್ಗಳನ್ನು ಅತಿ ಕಡಿಮೆ ದರದಲ್ಲಿ ಬುಕ್ ಮಾಡುವ ಅವಕಾಶ ನೀಡಿದೆ.

- ಇಂಡಿಗೋ ಸೇಲ್, ಕಡಿಮೆ ದರದ ವಿಮಾನ ಟಿಕೆಟ್
- 1 ರೂಪಾಯಿಗೆ ವಿಮಾನ ಟಿಕೆಟ್ – 2 ವರ್ಷದ ಮಕ್ಕಳಿಗೆ ಆಫರ್
- Sail Into 2026 ಸೇಲ್ನಲ್ಲಿ ಭಾರೀ ರಿಯಾಯಿತಿ
indigo Flight Tickets: 2026ರ ಹೊಸ ವರ್ಷಕ್ಕೆ ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಇಂಡಿಗೋ ಏರ್ಲೈನ್ಸ್ (IndiGo Airlines) ಭರ್ಜರಿ ನ್ಯೂ ಇಯರ್ ಸೇಲ್ ಆರಂಭಿಸಿದೆ. ‘Sail Into 2026’ ಹೆಸರಿನ ಈ ವಿಶೇಷ ಆಫರ್ನಲ್ಲಿ ವಿಮಾನ ಪ್ರಯಾಣವನ್ನು ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ನೀಡಲಾಗುತ್ತಿದೆ.
ಈ ಸೇಲ್ ಅಡಿಯಲ್ಲಿ ದೇಶೀಯ ವಿಮಾನ ಮಾರ್ಗಗಳಲ್ಲಿ ಒನ್ವೇ ಟಿಕೆಟ್ ದರಗಳು ₹1,499ರಿಂದ ಆರಂಭವಾಗುತ್ತಿವೆ. ಅದೇ ರೀತಿ, ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ₹4,499ರಿಂದ ಟಿಕೆಟ್ ಲಭ್ಯವಿದೆ. ಆಯ್ದ ದೇಶೀಯ ಮಾರ್ಗಗಳಲ್ಲಿ ಹೆಚ್ಚುವರಿ ಲೆಗ್ರೂಮ್ ಹೊಂದಿರುವ ಇಂಡಿಗೋ ಸ್ಟ್ರೆಚ್ ಸೀಟ್ಗಳು ₹9,999ರಿಂದ ಆರಂಭವಾಗುತ್ತವೆ.
ಬುಕಿಂಗ್ ಅವಧಿ ಮತ್ತು ಪ್ರಯಾಣ ಸಮಯ
ಈ ಆಫರ್ ಜನವರಿ 13ರಿಂದ 16ರವರೆಗೆ ಮಾತ್ರ ಲಭ್ಯ. ಈ ಅವಧಿಯಲ್ಲಿ ಬುಕ್ ಮಾಡಿದ ಟಿಕೆಟ್ಗಳನ್ನು ಜನವರಿ 20ರಿಂದ ಏಪ್ರಿಲ್ 30ರವರೆಗೆ ಪ್ರಯಾಣಕ್ಕೆ ಬಳಸಬಹುದು. ಬೇಸಿಗೆ ಆರಂಭಕ್ಕೂ ಮುನ್ನ ಕಡಿಮೆ ದರದಲ್ಲಿ ಪ್ರಯಾಣ ಯೋಜನೆ ರೂಪಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.
ಮಕ್ಕಳಿರುವ ಕುಟುಂಬಗಳಿಗೆ ವಿಶೇಷ ಸೌಲಭ್ಯ
ಎರಡು ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ದೇಶೀಯ ವಿಮಾನ ಟಿಕೆಟ್ನ್ನು ಕೇವಲ ₹1 ರೂಪಾಯಿಗೆ ಬುಕ್ ಮಾಡುವ ಅವಕಾಶವೂ ಈ ಸೇಲ್ನಲ್ಲಿ ಸೇರಿಸಲಾಗಿದೆ. ಜೊತೆಗೆ, ಆಯ್ದ 6E ಆಡ್-ಆನ್ಗಳ ಮೇಲೆ 70%ವರೆಗೆ ರಿಯಾಯಿತಿ, ಪ್ರೀಪೇಯ್ಡ್ ಹೆಚ್ಚುವರಿ ಬ್ಯಾಗೇಜ್ ಮೇಲೆ 50% ರಿಯಾಯಿತಿ, ಮತ್ತು ಆಯ್ದ ಸೀಟ್ ಸೆಲೆಕ್ಷನ್ಗಳ ಮೇಲೆ 15% ರಿಯಾಯಿತಿ ಲಭ್ಯವಿದೆ.
ಪ್ರಯಾಣಿಕರು ಇಂಡಿಗೋ ಅಧಿಕೃತ ವೆಬ್ಸೈಟ್, ಮೊಬೈಲ್ ಆ್ಯಪ್, 6ESkai AI ಅಸಿಸ್ಟೆಂಟ್, ವಾಟ್ಸಾಪ್ ಹಾಗೂ ಆಯ್ದ ಟ್ರಾವೆಲ್ ಪಾರ್ಟ್ನರ್ ಪ್ಲಾಟ್ಫಾರ್ಮ್ಗಳ ಮೂಲಕ ಟಿಕೆಟ್ ಬುಕ್ (Flight Ticket) ಮಾಡಬಹುದು.



