PAN Card: ನಿಮ್ಮ ಪ್ಯಾನ್ ಕಾರ್ಡ್ ಆಕ್ಟಿವ್ ಇದೆಯಾ? ಇಲ್ಲವಾ? ಈ ರೀತಿ ಚೆಕ್ ಮಾಡಿಕೊಳ್ಳಿ
PAN Card: ಆಧಾರ್-ಪ್ಯಾನ್ ಲಿಂಕ್ ಗಡುವು ಮುಕ್ತಾಯವಾದ ಹಿನ್ನಲೆಯಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಆಕ್ಟಿವ್ ಇದೆಯಾ ಎಂಬುದನ್ನು ಇಂದು ಆನ್ಲೈನ್ನಲ್ಲಿ ಸರಳವಾಗಿ ಪರಿಶೀಲಿಸಿ

- ಪ್ಯಾನ್ ಕಾರ್ಡ್ ಆಕ್ಟಿವ್ ಸ್ಥಿತಿ ಆನ್ಲೈನ್ನಲ್ಲಿ ಚೆಕ್ ಮಾಡಿಕೊಳ್ಳಿ
- ಆಧಾರ್-ಪ್ಯಾನ್ ಲಿಂಕ್ ಆಗದೇ ಇದ್ದರೆ ವಹಿವಾಟುಗಳಿಗೆ ಅಡ್ಡಿ
- ಪರಿಶೀಲನೆ ಮಾಡಿದರೆ ಹಣಕಾಸು ಸಮಸ್ಯೆ ತಪ್ಪಿಸಬಹುದು
Aadhaar–PAN linking: ಆಧಾರ್-ಪ್ಯಾನ್ ಲಿಂಕ್ಗೆ ನೀಡಿದ್ದ ಗಡುವು ಮುಕ್ತಾಯವಾದ ಬಳಿಕ, ಹಲವರಲ್ಲಿ ಪ್ಯಾನ್ ಕಾರ್ಡ್ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನ ಮೂಡಿದೆ.
ಪ್ಯಾನ್ ಇನ್ಯಾಕ್ಟಿವ್ ಆದರೆ ಬ್ಯಾಂಕ್ ವಹಿವಾಟು, ಐಟಿಆರ್ ಸಲ್ಲಿಕೆ ಸೇರಿದಂತೆ ದಿನನಿತ್ಯದ ಹಣಕಾಸು ಕಾರ್ಯಗಳಲ್ಲಿ ಅಡಚಣೆ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಮುಂಚಿತವಾಗಿ ಪ್ಯಾನ್ ಸ್ಥಿತಿ ತಿಳಿದುಕೊಳ್ಳುವುದು ಸುರಕ್ಷಿತ.
ಆನ್ಲೈನ್ನಲ್ಲಿ ಪ್ಯಾನ್ ಸ್ಥಿತಿ ಹೇಗೆ ತಿಳಿದುಕೊಳ್ಳುವುದು?
ಮೊದಲು Income Tax Department of India ನ ಅಧಿಕೃತ ಇ-ಫೈಲಿಂಗ್ ಪೋರ್ಟಲ್ಗೆ ಭೇಟಿ ನೀಡಿ. ಹೋಮ್ಪೇಜ್ನ ‘ಕ್ವಿಕ್ ಲಿಂಕ್ಸ್’ ವಿಭಾಗದಲ್ಲಿ Verify PAN Status ಆಯ್ಕೆಯನ್ನು ಆಯ್ಕೆಮಾಡಿ. ನಂತರ ಪಾನ್ ಸಂಖ್ಯೆ, ಹೆಸರು, ಜನ್ಮ ದಿನಾಂಕ ಮತ್ತು ಪ್ಯಾನ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮುಂದುವರಿಯಿರಿ.
OTP ಪರಿಶೀಲನೆಯ ನಂತರ, ನಿಮ್ಮ ಪ್ಯಾ ಕಾರ್ಡ್ ಆಕ್ಟಿವ್ ಅಥವಾ ಇನ್ಯಾಕ್ಟಿವ್ ಎನ್ನುವ ಸಂಪೂರ್ಣ ಮಾಹಿತಿ ತಕ್ಷಣ ಸ್ಕ್ರೀನ್ನಲ್ಲಿ ಕಾಣಿಸುತ್ತದೆ. ಲಿಂಕ್ ಪೂರ್ಣಗೊಳಿಸದಿದ್ದಲ್ಲಿ ಪ್ಯಾನ್ ಇನ್ಯಾಕ್ಟಿವ್ ಆಗುವ ಸಾಧ್ಯತೆ ಇರುವುದರಿಂದ, ಸ್ಥಿತಿಯನ್ನು ತಕ್ಷಣ ಪರಿಶೀಲಿಸುವುದು ಒಳಿತು.
ಆಧಾರ್ ಕಾರ್ಡ್ನೊಂದಿಗೆ ಪ್ಯಾನ್ ಕಾರ್ಡ್ಗಳನ್ನು ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಸರ್ಕಾರ ಈ ಹಿಂದೆ ಘೋಷಿಸಿತ್ತು. ಗಡುವು ವಿಸ್ತರಣೆಯ ಕುರಿತು ಯಾವುದೇ ಘೋಷಣೆ ಇಲ್ಲದ ಕಾರಣ, ತಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು ವಿಫಲರಾದ ಬಳಕೆದಾರರ ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸದೇ ಇರಬಹುದು.



