ಜಿಯೋ ಬಂಪರ್ ಕೊಡುಗೆ, ಒಂದು ವರ್ಷಕ್ಕೆ ಪ್ರತಿದಿನ 2.5GB ಡೇಟಾ ಮತ್ತು ಕರೆ - Jio Recharge Plans
ರಿಲಯನ್ಸ್ ಜಿಯೋ ಎರಡು ವಾರ್ಷಿಕ ಪ್ಲಾನ್‌ಗಳನ್ನು ಪರಿಚಯಿಸಿದ್ದು, ವರ್ಷಪೂರ್ತಿ ದಿನಕ್ಕೆ 2.5GB ಡೇಟಾ, ಅನ್ಲಿಮಿಟೆಡ್ ಕರೆಗಳು, 5G ಸೌಲಭ್ಯ ಸೇರಿದಂತೆ ಹಲವು ಲಾಭಗಳಿವೆ.

- ಜಿಯೋ ವಾರ್ಷಿಕ ಪ್ಲಾನ್‌ನಲ್ಲಿ ದಿನಕ್ಕೆ 2.5GB ಡೇಟಾ
- ಅನ್ಲಿಮಿಟೆಡ್ ವಾಯ್ಸ್ ಕರೆ ಮತ್ತು 5G ಸೌಲಭ್ಯ
- ಕ್ರೀಡೆ ಪ್ರಿಯರಿಗೆ ಫ್ಯಾನ್‌ಕೋಡ್ ಸಬ್‌ಸ್ಕ್ರಿಪ್ಶನ್ ಲಾಭ
Jio Recharge Plans: ಪ್ರೀಪೇಯ್ಡ್ ಬಳಕೆದಾರರು ತಿಂಗಳು ತಿಂಗಳು ರೀಚಾರ್ಜ್ ಮಾಡುವ ತಲೆನೋವು ತಪ್ಪಿಸಿಕೊಳ್ಳಲು ಜಿಯೋ ಈಗ ಆಕರ್ಷಕ ವಾರ್ಷಿಕ ಪ್ಲಾನ್‌ಗಳನ್ನು ನೀಡುತ್ತಿದೆ. ಒಂದು ಬಾರಿ ಪ್ಲಾನ್ ರಿಚಾರ್ಜ್ (Prepaid Plan) ಮಾಡಿಸಿದರೆ ವರ್ಷಪೂರ್ತಿ ಡೇಟಾ, ಕರೆ, ಮನರಂಜನೆ ಎಲ್ಲವೂ ಸಿಗುತ್ತದೆ.
ಜಿಯೋ ನೀಡುತ್ತಿರುವ 3,599 ರೂ. ಪ್ಲಾನ್‌ನಲ್ಲಿ 365 ದಿನಗಳ ಕಾಲ ಪ್ರತಿದಿನ 2.5GB ಡೇಟಾ ಸಿಗುತ್ತದೆ. ಜೊತೆಗೆ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್ಲಿಮಿಟೆಡ್ ಕರೆ, ದಿನಕ್ಕೆ 100 SMS ಮತ್ತು ಅರ್ಹ ಬಳಕೆದಾರರಿಗೆ ಅನ್ಲಿಮಿಟೆಡ್ 5G ಡೇಟಾ ಸೌಲಭ್ಯ ಇದೆ. 5G ಪ್ರಯೋಜನ ಪಡೆಯಲು ಬಳಕೆದಾರರ ಪ್ರದೇಶದಲ್ಲಿ ಜಿಯೋ 5G ಸೇವೆ ಇರಬೇಕು ಹಾಗೂ 5G ಫೋನ್ ಅಗತ್ಯ.
ಇದನ್ನೂ ಓದಿ: 4 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಿ ಆದೇಶ! ಸರ್ಕಾರದ ಕಠಿಣ ಕ್ರಮ
ಕ್ರೀಡೆ ಪ್ರಿಯರಿಗೆ ವಿಶೇಷವಾಗಿ 3,999 ರೂ. ಪ್ಲಾನ್ ಹೆಚ್ಚು ಲಾಭದಾಯಕ. ಇದೂ ಸಹ 365 ದಿನಗಳ ಪ್ಲಾನ್ ಆಗಿದ್ದು, ಡೇಟಾ ಮತ್ತು ಕರೆ ಸೌಲಭ್ಯಗಳು ಹಿಂದಿನ ಪ್ಲಾನ್‌ನಂತೆಯೇ ಇರುತ್ತವೆ.
ಆದರೆ ಹೆಚ್ಚುವರಿಯಾಗಿ FanCode ವಾರ್ಷಿಕ ಸಬ್‌ಸ್ಕ್ರಿಪ್ಶನ್ ಉಚಿತವಾಗಿ ಸಿಗುತ್ತದೆ. ಇದರ ಮೂಲಕ ಇಷ್ಟದ ಕ್ರೀಡೆ ಕಾರ್ಯಕ್ರಮಗಳನ್ನು JioTV ಮೂಲಕ ವೀಕ್ಷಿಸಬಹುದು.
ಇದನ್ನೂ ಓದಿ: ಸಡನ್ ಹಾಗಿ ಅಕೌಂಟ್‌ಗೆ ಕೋಟಿ ಹಣ ಬಂದ್ರೆ ಏನ್ ಮಾಡ್ತೀರಾ? ಏನ್ ಮಾಡಬೇಕು ಗೋತ್ತಾ?
ಎರಡೂ ಪ್ಲಾನ್‌ಗಳಲ್ಲಿ 90 ದಿನಗಳ JioHotstar Mobile/TV ಸಬ್‌ಸ್ಕ್ರಿಪ್ಶನ್ ಹಾಗೂ JioAICloud ಆಪ್‌ನಲ್ಲಿ 50GB ಕ್ಲೌಡ್ ಸ್ಟೋರೇಜ್ ಉಚಿತವಾಗಿ ನೀಡಲಾಗುತ್ತದೆ. 5G ಯುಗದಲ್ಲಿ ಈ ರೀತಿಯ ಪ್ಲಾನ್‌ಗಳು ಹೆಚ್ಚಿನ ಬಳಕೆದಾರರಿಗೆ ಅನುಕೂಲಕರವಾಗಲಿವೆ ಎಂದು ನಿರೀಕ್ಷಿಸಲಾಗಿದೆ.
Jio Annual Plans with 2.5GB Daily Data and Free Calls



