ಸ್ಟೇಟ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ, ತಿಂಗಳಿಗೆ 63,000 ಸಂಬಳ! ಅರ್ಜಿ ಹಾಕಲು ಕೇವಲ 10 ದಿನ ಬಾಕಿ

ದೇಶದ ಅತಿದೊಡ್ಡ ಸಾಲದಾತ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State bank Of India) ಅಥವಾ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ ಸಾಕಷ್ಟು ಹುದ್ದೆಗಳು ಖಾಲಿ (Job opportunities) ಇದ್ದು ಅವುಗಳ ಭರ್ತಿಗೆ ಬ್ಯಾಂಕ್ ನಿರ್ಧರಿಸಿದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಬರೋಬ್ಬರಿ 2000 ಪ್ರೋಬೇಶನರಿ ಆಫೀಸರ್ (PO) ಹುದ್ದೆಗಳು ಖಾಲಿ ಇವೆ. ಉದ್ಯೋಗ ಹುಡುಕುತ್ತಿರುವವರಿಗೆ ಇದು ಸುವರ್ಣ ಅವಕಾಶ. ಹಾಗಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾರು ಅರ್ಹರು ಮೊದಲಾದ ಮಾಹಿತಿ ಈ ಲೇಖನದಲ್ಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ಅರ್ಹತೆಗಳು ಕೂಡ ಬೇಕು, ಹಾಗಾಗಿ ಆಸಕ್ತ ಅಭ್ಯರ್ಥಿಗಳು ಮೊದಲು ಈ ಹುದ್ದೆಯ ಬಗ್ಗೆ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ.

ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಎಲ್ಲರಿಗೂ ಹಬ್ಬದ ಭರ್ಜರಿ ಗಿಫ್ಟ್! ಒನ್ ಟು ಡಬಲ್ ಉಳಿತಾಯ

ವಿದ್ಯಾರ್ಹತೆ (Qualification) : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯನ್ನು ಈಗಾಗಲೇ ಹೊರಡಿಸಿದ್ದು ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಪದವಿ ಶಿಕ್ಷಣ (Degree) ಮುಗಿಸಿರಬೇಕು. ಹಾಗೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಮುಗಿಸಿರುವುದಕ್ಕೆ ಪ್ರಮಾಣ ಪತ್ರ (Education Certificate)ವನ್ನು ಒದಗಿಸಬೇಕು.

ವಯೋಮಿತಿ (Age): ಅಭ್ಯರ್ಥಿಗಳು ಏಪ್ರಿಲ್ 1, 2023ಕ್ಕೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಇನ್ನು ಅರ್ಜಿ ಸಲ್ಲಿಸಲು 30 ವರ್ಷಕ್ಕಿಂತ ಹೆಚ್ಚಿನ ವಯಸ್ಸು ಆಗಿರಬಾರದು. ಎಸ್ ಸಿ/ಎಸ್ ಟಿ (SC/ST) ಅಭ್ಯರ್ಥಿಗಳಿಗೆ ಐದು ವರ್ಷ ಓಬಿಸಿ (OBC) ಅಭ್ಯರ್ಥಿಗಳಿಗೆ ಮೂರು ವರ್ಷ PwBD ಅಭ್ಯರ್ಥಿಗಳಿಗೆ 10 ವರ್ಷ PWBD ) (OBC) ಅಭ್ಯರ್ಥಿಗಳಿಗೆ 13 ವರ್ಷ ಹಾಗೂ PwBD ,(SC/ST) ಅಭ್ಯರ್ಥಿಗಳಿಗೆ 15 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ವ್ಯಕ್ತಿ ಮೃತಪಟ್ಟ ಮೇಲೆ ಪ್ಯಾನ್ ಕಾರ್ಡ್ ಏನು ಮಾಡಬೇಕು? ಸರ್ಕಾರದಿಂದ ಹೊಸ ನಿಯಮ ಜಾರಿ

ಖಾಲಿ ಇರುವ ಹುದ್ದೆ ಹಾಗೂ ವೇತನ (Salary):

State Bank Of Indiaಎಸ್ ಬಿ ಐನಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳು ಆಯ್ಕೆಗೊಂಡಲ್ಲಿ 36,000 ರೂ. ಗಳಿಂದ 63,840 ರೂಪಾಯಿಗಳವರೆಗೆ ಸಂಬಳ ಪಡೆಯಬಹುದು.

ಬಿಪಿಎಲ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಆಫರ್! ಸರ್ಕಾರದಿಂದ ಸಿಗುತ್ತೆ 5 ಲಕ್ಷ

ಆಯ್ಕೆ ಪ್ರಕ್ರಿಯೆ (Selection):

ಈ ಪರೀಕ್ಷೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಭಾರತದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ:

ಪೂರ್ವಭಾವಿ ಪರೀಕ್ಷೆ
ಪ್ರಮುಖ ಪರೀಕ್ಷೆ
ಸೈಕೊಮೆಟ್ರಿಕ್ ಪರೀಕ್ಷೆ
ಗ್ರೂಪ್ ಟಾಸ್ಕ್
ಸಂದರ್ಶನ ಹಾಗೂ ಗ್ರೂಪ್ ಡಿಸ್ಕಶನ್
ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ
ಮೆಡಿಕಲ್ ಟೆಸ್ಟ್

ಈ ಎಲ್ಲಾ ಪರೀಕ್ಷೆಗಳನ್ನು ಪಾಸಾದರೆ ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಲು ಅರ್ಹತೆ ಪಡೆಯುತ್ತಾರೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Last date) ಸೆಪ್ಟೆಂಬರ್ 27, 2023. ಹೆಚ್ಚಿನ ಮಾಹಿತಿಗಾಗಿ ಆಸಕ್ತ ಅಭ್ಯರ್ಥಿಗಳು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ
ದೂರವಾಣಿ ಸಂಖ್ಯೆ 022-22820427.

Job Vacancy in State Bank of India, Salary Up To 63,000 per month

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories