ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ 87 ರೂಪಾಯಿ ಹೂಡಿಕೆ ಮಾಡಿ ಸಾಕು; ಸಿಗುತ್ತೆ 11 ಲಕ್ಷ ರೂಪಾಯಿ

Story Highlights

ಒಂದು ಹೆಣ್ಣು ಮಗು 15ನೇ ವಯಸ್ಸಿನಲ್ಲಿ ಪ್ರತಿದಿನ 87 ಉಳಿತಾಯ (Small savings Scheme) ಮಾಡಲು ಆರಂಭಿಸಿದ್ರೆ ವರ್ಷಕ್ಕೆ 31,755 ಉಳಿತಾಯ ಆಗುತ್ತದೆ.

LIC Policy : ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಂದೆ ತಾಯಿ ಒಂದಿಷ್ಟು ಹಣವನ್ನು ಉಳಿತಾಯ ಮಾಡಲು ಬಯಸುತ್ತಾರೆ, ಎಲ್ಲರೂ ದೊಡ್ಡ ಮೊತ್ತದ ಹಣ ಉಳಿತಾಯ (savings Scheme) ಮಾಡಲು ಸಾಧ್ಯವಿಲ್ಲ ಹಾಗಾಗಿ ಕಡಿಮೆ ಹೂಡಿಕೆ ( low investment) ಮಾಡಿದರು ಹೆಚ್ಚು ಆದಾಯ ಬರುವಂತಹ ಜೊತೆಗೆ ಹೆಚ್ಚು ನಂಬಿಕಸ್ಥ ಯೋಜನೆಯನ್ನು ಹುಡುಕುತ್ತಾರೆ.

ಹಾಗೆ ನೀವು ಕೂಡ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಅದರಲ್ಲೂ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಯೋಚಿಸುತ್ತಿದ್ದರೆ ಭಾರತೀಯ ಜೀವ ವಿಮಾ ಕಂಪನಿ (LIC) ಅತ್ಯುತ್ತಮ ಯೋಜನೆ ಯೊಂದಿಗೆ ಬಂದಿದೆ.

₹500 ರೂಪಾಯಿ ನೋಟುಗಳ ಬಗ್ಗೆ ಮಹತ್ವದ ಆದೇಶ; ಬಳಕೆಗೂ ಮೊದಲು ನಿಯಮ ತಿಳಿದುಕೊಳ್ಳಿ

ಎಲ್ ಐ ಸಿ ಯು ಆಧಾರ್ ಶೀಲಾ ಯೋಜನಾ! (LIC Aadhaar shila policy)

ಎಲ್ಐಸಿಯ ಬಹಳ ಮುಖ್ಯವಾಗಿರುವ ಹಾಗೂ ಉತ್ತಮ ಲಾಭ (Income) ನೀಡುವಂತಹ ಯೋಜನೆ ಇದಾಗಿದ್ದು ನೀವಿನ್ನು ಹೂಡಿಕೆ ಮಾಡದೇ ಇದ್ದರೆ ದೀಪಾವಳಿಯ ಶುಭ ಸಂದರ್ಭದಲ್ಲಿ ಈ ಹೂಡಿಕೆಯನ್ನು ಆರಂಭಿಸಿ.

ಇದರಲ್ಲಿ ನೀವು ದಿನಕ್ಕೆ ಕೇವಲ 87 ರೂಪಾಯಿಗಳನ್ನು ಉಳಿತಾಯ ಮಾಡಲು ಆರಂಭಿಸಿದರೆ ಪಾಲಿಸಿ ಮುಗಿಯುವ ಹೊತ್ತಿಗೆ ನಿಮ್ಮ ಕೈಯಲ್ಲಿ 11 ಲಕ್ಷ ರೂಪಾಯಿಗಳು ಇರುತ್ತವೆ.

ಆಧಾರ್ ಶೀಲಾ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?

ಎಂಟರಿಂದ 55 ವರ್ಷ ವಯಸ್ಸಿನ ಮಹಿಳೆಯು ಕೂಡ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಹೂಡಿಕೆಯ ಅವಧಿ 10 ರಿಂದ 20 ವರ್ಷಗಳು. ಈ ಯೋಜನೆಯ ಪ್ರಯೋಜನ ನೋಡುವುದಾದರೆ ಒಂದು ಹೆಣ್ಣು ಮಗು 15ನೇ ವಯಸ್ಸಿನಲ್ಲಿ ಪ್ರತಿದಿನ 87 ಉಳಿತಾಯ (Small savings Scheme) ಮಾಡಲು ಆರಂಭಿಸಿದ್ರೆ ವರ್ಷಕ್ಕೆ 31,755 ಉಳಿತಾಯ ಆಗುತ್ತದೆ.

ಕೇವಲ ₹24 ಸಾವಿರಕ್ಕೆ ಮಾರಾಟಕ್ಕಿದೆ ಸ್ಪ್ಲೆಂಡರ್ ಪ್ಲಸ್ ಬೈಕ್; 70 ಕಿಲೋ ಮೀಟರ್ ಮೈಲೇಜ್

ಕೇವಲ 87 ರೂಪಾಯಿ ಹೂಡಿಕೆಗೆ 11 ಲಕ್ಷ ರೂಪಾಯಿ ಸಿಗಲಿದೆ!

LIC Policyಈ ಯೋಜನೆಯಲ್ಲಿ ಪ್ರತಿದಿನ 87ಗಳನ್ನ ಹೂಡಿಕೆ ಮಾಡಿದರೆ 10 ವರ್ಷಗಳಲ್ಲಿ 3,17,550 ರೂಪಾಯಿಗಳನ್ನು ಹೂಡಿಕೆ ಮಾಡಿರುತ್ತೀರಿ. ಯೋಜನೆಯ ಮುಕ್ತಾಯದ ಹಂತದಲ್ಲಿ ಬಡ್ಡಿ ಎಲ್ಲವನ್ನು ಸೇರಿಸಿ 11 ಲಕ್ಷ ರೂಪಾಯಿಗಳನ್ನು ಪಡೆಯಬಹುದು. ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಕಂತುಗಳನ್ನು (premium) ಆಯ್ಕೆ ಮಾಡಿಕೊಳ್ಳಬಹುದು.

ಯೋಜನೆಯಲ್ಲಿ ಕನಿಷ್ಠ ಹೂಡಿಕೆಯ ಮೊತ್ತ 75,000 ವಾಗಿದ್ದರೆ ಗರಿಷ್ಠ ಮೂರು ಲಕ್ಷ ರೂಪಾಯಿಗಳು. ಮಹಿಳೆಯರು ಮನಸ್ಸು ಮಾಡಿದ್ರೆ ದಿನಕ್ಕೆ 87 ರೂಪಾಯಿಗಳನ್ನ ಉಳಿತಾಯಕ್ಕಾಗಿ ಎತ್ತಿಡುವುದು ದೊಡ್ಡ ವಿಷಯವೇನು ಅಲ್ಲ ಮತ್ತು ಈ ವೇಳೆ ನೀವು ಹೀಗೆ ಉಳಿತಾಯ ಮಾಡುತ್ತಾ ಹೋದರೆ 20 ವರ್ಷಗಳಲ್ಲಿ ಹೆಚ್ಚಿನ ಮೊತ್ತದ ಹಣವನ್ನು ಹಿಂಪಡೆಯಬಹುದು.

ವಯಸ್ಸಾದ ಮಹಿಳೆಯರು ತಮ್ಮ ವೃದ್ಧಾಪ್ಯವನ್ನು ಆರ್ಥಿಕ ತೊಂದರೆ ಇಲ್ಲದೆ ಸುಲಭವಾಗಿ ಕಳೆಯಲು ಕೂಡ ಯೋಜನೆ ಸಹಾಯ ಮಾಡುತ್ತದೆ. ಆಧಾರ್ ಶೀಲಾ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದ ಎಲ್ಐಸಿ ಏಜೆಂಟ್ ಗಳನ್ನ ಸಂಪರ್ಕಿಸಬಹುದು ಅಥವಾ ಎಲ್ಐಸಿ ಕಚೇರಿಗೆ ಭೇಟಿ ನೀಡಬಹುದು.

Just invest 87 rupees in your girl child’s name, You will get 11 lakh rupees

Related Stories