ಜಸ್ಟ್ ಒಂದೇ ಕ್ಲಿಕ್! ವಾಟ್ಸಪ್ ಮೂಲಕವೇ ಸಿಗುತ್ತೆ ಹೋಂ ಲೋನ್, ಇಲ್ಲಿದೆ ವಿವರ
Home Loan : ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿರುವ ಎಚ್ ಡಿ ಎಫ್ ಸಿ (HDFC Bank) ಇದೀಗ ಗ್ರಾಹಕರಿಗೆ ಮಹತ್ವದ ಸೌಕರ್ಯ ಒಂದನ್ನು ಒದಗಿಸಿಕೊಡುತ್ತಿದೆ, ಈಗಾಗಲೇ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಿರುವ ಹೆಚ್ ಡಿ ಎಫ್ ಸಿ ಇದೀಗ ಸುಲಭವಾಗಿ ಸಾಲ (HDFC Bank Loan) ಪಡೆದುಕೊಳ್ಳುವಂತೆ ಗ್ರಾಹಕರಿಗೆ ಹೆಚ್ಚಿನ ಸೌಕರ್ಯವನ್ನು ಮಾಡಿಕೊಡುತ್ತಿದೆ.
ಇದೀಗ ಕೇವಲ 24 ಗಂಟೆಯ ಒಳಗೆ ನೀವು ನಿಮಗೆ ಬೇಕಾದ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಅದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.
ಮತ್ತೆ ಏರಿಕೆಯಾದ ಚಿನ್ನದ ಬೆಲೆ, ನಿಮ್ಮ ನಗರದಲ್ಲಿ ಹೇಗಿದೆ ಚಿನ್ನ ಮತ್ತು ಬೆಳ್ಳಿ ಬೆಲೆ! ಇಲ್ಲಿದೆ ಡೀಟೇಲ್ಸ್
ಸ್ಪಾಟ್ ಆಫರ್ ಆನ್ ವಾಟ್ಸಾಪ್ ಯೋಜನೆ (Spot offer on WhatsApp)
ಕೇವಲ ಕೆಲವೇ ನಿಮಿಷಗಳಲ್ಲಿ ವಾಟ್ಸಪ್ ಮೂಲಕವೇ ನೀವು ಸಾಲ ಸೌಲಭ್ಯ (Loan On WhatsApp) ಪಡೆದುಕೊಳ್ಳಬಹುದು. ಎಚ್ ಡಿಎಫ್‌ಸಿ ಬ್ಯಾಂಕ್ ಗೃಹಸಾಲ (home loan by HDFC) ಪಡೆದುಕೊಳ್ಳುವವರಿಗಾಗಿ ಸ್ಪಾಟ್ ಆಫರ್ ಆನ್ ವಾಟ್ಸಾಪ್ ಜಾರಿಗೆ ತಂದಿದೆ, ಇದರ ಮೂಲಕ ನೀವು ವಾಟ್ಸಪ್ ನಲ್ಲಿಯೇ ಸಾಲ ಪಡೆದುಕೊಳ್ಳಬಹುದು.
ವಾಟ್ಸಪ್ ಮೂಲಕ ಸಾಲ ಪಡೆದುಕೊಳ್ಳಲು ಏನು ಮಾಡಬೇಕು? (How to get HDFC WhatsApp home loan)
ಮೊದಲನೇದಾಗಿ ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಗ್ರಾಹಕರು ನೀವಾಗಿದ್ದರೆ, ನಿಮ್ಮ ಮೊಬೈಲ್ ನಲ್ಲಿ +91 9867000000 ಹೆಚ್ ಡಿ ಎಫ್ ಸಿ ಸಂಖ್ಯೆಗೆ ವಾಟ್ಸಪ್ ಮಾಡಿ ಸಾಲ ಪಡೆದುಕೊಳ್ಳಬಹುದಾಗಿದೆ.
ಈ ಸಂಖ್ಯೆಗೆ ನಿಮ್ಮ ಮೊಬೈಲ್ ನಿಂದ ವಾಟ್ಸಾಪ್ ಸಂದೇಶವನ್ನು (SMS) ಕಳುಹಿಸಬೇಕು ನಂತರ ನಿಮಗೆ ಅಗತ್ಯ ಇರುವ ಈ ಎಲ್ಲಾ ಮಾಹಿತಿಗಳನ್ನು ಕೂಡ ವಾಟ್ಸಪ್ ನಲ್ಲಿ ಪಡೆದುಕೊಳ್ಳಬಹುದು.
ವಾಟ್ಸಪ್ ನಲ್ಲಿ ಗೃಹ ಸಾಲ ಪಡೆದುಕೊಳ್ಳುವುದಕ್ಕೆ ಕೆಲವು ವಿವರ ಮತ್ತು ದಾಖಲೆಗಳನ್ನು ನೀಡಿದರೆ ಸಾಕು ಎಂದು ಬ್ಯಾಂಕ್ ಹೇಳಿಕೊಂಡಿದೆ. ಗ್ರಾಹಕರು ನೀಡಿರುವ ದಾಖಲೆಗಳನ್ನು (documents) ತಕ್ಷಣವೇ ಪರಿಶೀಲಿಸಿ ದಾಖಲೆಗಳು ಸರಿಯಾಗಿ ಇದ್ದಲ್ಲಿ ಕ್ಷಣಮಾತ್ರದಲ್ಲಿ ನಿಮಗೆ ಸಾಲ ಮಂಜೂರಾಗುತ್ತದೆ.
ಈ ಬ್ಯಾಂಕ್‌ಗಳಲ್ಲಿ ಕಾರ್ ಲೋನ್‌ಗಳ ಮೇಲೆ ಬಂಪರ್ ಆಫರ್! ಕಡಿಮೆ ಬಡ್ಡಿಗೆ ಕಾರು ಖರೀದಿಸಿ
ದಿನದ 24 ಗಂಟೆ ಕೂಡ ಈ ಸೌಲಭ್ಯ ಎಚ್ ಡಿ ಎಫ್ ಸಿ ಗ್ರಾಹಕರಿಗೆ (24 hours service) ನೀಡುತ್ತಿದೆ, ಇನ್ನು ತಿಂಗಳ ವೇತನ ಪಡೆದುಕೊಳ್ಳುವವರಿಗೆ (salaried person) ಈ ಸೌಲಭ್ಯ ಒದಗಿಸಲಾಗುತ್ತದೆ ಎಂದು ಎಚ್ ಡಿ ಎಫ್ ಸಿ ಬ್ಯಾಂಕ್ ತಿಳಿಸಿದೆ.
ಉದ್ಯೋಗಿಗಳು ವಾಟ್ಸಾಪ್ ಮೂಲಕ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಆರಂಭಿಕ ಪ್ರಕ್ರಿಯೆ ಹಾಗೂ ಸಾಲ ಮಂಜೂರಾತಿ ಪ್ರಕ್ರಿಯೆ ಮೊದಲಿಗಿಂತಲೂ ಬಹಳ ವೇಗವಾಗಿ ನಡೆಯುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಎಲ್ಲಾ ದಿನ ಸೌಲಭ್ಯ! (24/7 hours service)
ಎಚ್ ಡಿ ಎಫ್ ಸಿ ಬ್ಯಾಂಕ್ ವಾಟ್ಸಾಪ್ ವಸತಿ ಸಾಲಕ್ಕಾಗಿ ಜನರು ಅರ್ಜಿ ಸಲ್ಲಿಸಿದರೆ ತಕ್ಷಣವೇ ಸಾಲ ಮಂಜೂರು ಮಾಡಲು ವ್ಯವಸ್ಥೆ ಮಾಡಿದೆ. ಭಾರತೀಯ ನಿವಾಸಿಯಾಗಿರುವ ತಿಂಗಳ ವೇತನದ ಉದ್ಯೋಗಿಗಳು ಮಾತ್ರ ಈ ವಾಟ್ಸಪ್ ಮೂಲಕವೇ ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ವಸತಿ ಸಾಲಕ್ಕೆ ಯಾವುದೇ ರೀತಿಯ ವೈಟಿಂಗ್ ಪೆರಿಯಡ್ (no waiting period) ಇರುವುದಿಲ್ಲ ಹಾಗಾಗಿ ತಕ್ಷಣವೇ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಸಾಲವನ್ನು ಬ್ಯಾಂಕ್ ಮಂಜೂರು ಮಾಡುತ್ತದೆ.
ಬಡವರ ಸ್ವಂತ ಮನೆ ಕನಸು ನನಸಾಗಿಸಲು ಹೊರಟ ಕೇಂದ್ರ; 2,67 ಲಕ್ಷ ಸಾಲ, ಬಡ್ಡಿಯಲ್ಲೂ ಸಬ್ಸಿಡಿ
ಹಾಗಾಗಿ ಗೃಹ ಸಾಲ ಪಡೆದುಕೊಳ್ಳಲು ನೀವು ಯೋಚಿಸುತ್ತಿದ್ದರೆ ಎಚ್ ಡಿ ಎಫ್ ಸಿ ಅತ್ಯಂತ ಸುಲಭ ವಿಧಾನವನ್ನು ಪರಿಚಯಿಸಿದೆ, ಈ ಮೂಲಕ ನೀವು ಬ್ಯಾಂಕ್ ಹೋಗದೆ ಕುಳಿತಲ್ಲಿಯೇ ಗೃಹ ಸಾಲ (Home Loan) ಪಡೆದುಕೊಳ್ಳುವುದಕ್ಕೆ ಸಾಧ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಹೆಚ್ ಡಿ ಎಫ್ ಸಿ ಅಧಿಕೃತ ವೆಬ್ಸೈಟ್ ಪರಿಶೀಲಿಸಬಹುದು.
Just one click, Home loan available through WhatsApp, here are the details