3 ಲಕ್ಷದವರೆಗೆ ಸಿಗುತ್ತೆ ಕಿಸಾನ್ ಲೋನ್; ಉಪಕಸುಬು ಮಾಡೋ ರೈತರಿಗೆ ಗುಡ್ ನ್ಯೂಸ್

Loan : ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಅಂದರೆ ಎಸ್ ಬಿ ಐ (SBI), ಎಚ್ ಡಿ ಎಫ್ ಸಿ (HDFC), ಎಕ್ಸಿಸ್ ಬ್ಯಾಂಕ್ (Axis Bank) ಮೊದಲಾದ ಬ್ಯಾಂಕುಗಳಲ್ಲಿ ಕೆಸಿಸಿ ಸಾಲ ಪಡೆಯಬಹುದು.

Kisan Loan : ರೈತ (farmer) ದೇಶಕ್ಕೆ ಬಹು ದೊಡ್ಡ ಆಸ್ತಿ, ರೈತರು ಬೆಳೆಯುವ ಬೆಳೆಗಳೇ ದೇಶದ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ ಎನ್ನಬಹುದು. ಹಾಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರೈತರ ಉದ್ಧಾರಕ್ಕಾಗಿ ಬೇರೆಬೇರೆ ರೀತಿಯ ಉಪಕ್ರಮ  (initiative) ಗಳನ್ನು ಕೈಗೊಳ್ಳುತ್ತವೆ.

ರೈತರು ಮಳೆಯನ್ನು ನಂಬಿಕೊಂಡು ಬೆಳೆ ಬೆಳೆಯುತ್ತಾರೆ. ಹಾಗಾಗಿ ವರ್ಷವಿಡೀ ಏಕ ಬೆಳೆ (single crop) ನಂಬಿಕೊಂಡು ಜೀವನ ಮಾಡಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ರೈತರು ಉಪಕಸುಬವನ್ನು ಕೂಡ ಮಾಡುತ್ತಾರೆ. ಉದಾಹರಣೆಗೆ ಹೈನುಗಾರಿಕೆ (dairy farming), ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಜೇನು ಸಾಕಾಣಿಕೆ ಹೀಗೆ ಬೇರೆ ಬೇರೆ ಉದ್ಯಮಗಳನ್ನು ಕೂಡ ಮಾಡಿ ತಮ್ಮ ಆರ್ಥಿಕ ಭದ್ರತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.

ಸ್ವಂತ ವ್ಯಾಪಾರಕ್ಕೆ ಕೇಂದ್ರ ಸರ್ಕಾರದಿಂದಲೇ ಸಿಗುತ್ತೆ 50 ಸಾವಿರ ತನಕ ಸಾಲ! ಪಡೆದುಕೊಳ್ಳಿ

3 ಲಕ್ಷದವರೆಗೆ ಸಿಗುತ್ತೆ ಕಿಸಾನ್ ಲೋನ್; ಉಪಕಸುಬು ಮಾಡೋ ರೈತರಿಗೆ ಗುಡ್ ನ್ಯೂಸ್ - Kannada News

ರೈತರಿಗಾಗಿ ಕೆಸಿಸಿ ಸಾಲ! (KCC loan for farmers)

ಕೇಂದ್ರ ಸರ್ಕಾರ ರೈತರಿಗಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card) ಬಿಡುಗಡೆ ಮಾಡಿದೆ. ಯಾವ ರೈತರ ಬಳಿ ಕಿಸಾನ್ ಕ್ರೆಡಿಟ್ ಕಾರ್ಡ್ ಇರುತ್ತದೆಯೋ ಅಂತವರು ಸರ್ಕಾರದಿಂದ ಬಿಡುಗಡೆ ಆಗುವ ಯಾವುದೇ ಯೋಜನೆಯ ಪ್ರಯೋಜನಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಅದು ಅಲ್ಲದೆ, ಕೆಸಿಸಿ ಇರುವ ರೈತರಿಗೆ ಅತಿ ಕಡಿಮೆ ಬಡ್ಡಿ ದರಕ್ಕೆ ಸಾಲವನ್ನು ಕೂಡ ಸರ್ಕಾರ ಒದಗಿಸುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಬಳಸಿ ಪಡೆದುಕೊಳ್ಳಿ 3 ಲಕ್ಷ ರೂಪಾಯಿ ಸಾಲ – Loan

Kisan Loanಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಕಿಸಾನ್ ಯೋಜನೆ ಕೂಡ ಒಂದು. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರು ಸುಲಭವಾಗಿ 3 ಲಕ್ಷ ರೂಪಾಯಿಗಳ ವರೆಗೆ ತಮ್ಮ ಉಪಕಸುಬಿಗಾಗಿ ಸಾಲ ಪಡೆಯಬಹುದಾಗಿದೆ.

ಕೆಸಿಸಿ ಸಾಲ ಪಡೆದುಕೊಳ್ಳಲು ರೈತರು 1.6 ಲಕ್ಷ ರೂಪಾಯಿಗಳ ಸಾಲಕ್ಕೆ ಯಾವುದೇ ಅಡಮಾನ ಇಡಬೇಕಾಗಿಲ್ಲ ಅಥವಾ ಯಾವುದೇ ದಾಖಲೆಗಳನ್ನು ಕೊಡಬೇಕಾಗಿಲ್ಲ. ಅದೇ ರೀತಿ ಕೆಸಿಸಿ ಇರುವವರಿಗೆ 4% ದರದಲ್ಲಿ ಈ ಸಾಲ ಸೌಲಭ್ಯ ದೊರೆಯುತ್ತದೆ. ಆದರೆ ಕಿಸಾನ್ ಕಾರ್ಡ್ ಇಲ್ಲದೆ ಇರುವ ರೈತರು 7% ವರೆಗೆ ಈ ಸಾಲಕ್ಕೆ ಬಡ್ಡಿ (loan interest) ಪಾವತಿಸಬೇಕಾಗುತ್ತದೆ.

ಇನ್ಮುಂದೆ ಕೋಳಿ ಸಾಕಾಣಿಕೆಗೂ ಬೇಕಾಗುತ್ತೆ ಪರ್ಮಿಷನ್; ಇಲ್ಲಿದೆ ಮಹತ್ವದ ಮಾಹಿತಿ

ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು

ಜಮೀನಿನ ಪಹಣಿ ಪತ್ರ
ಆಧಾರ್ ಕಾರ್ಡ್
ರೈತರ ಫೋಟೋ
ಆರ್ ಸಿ ಸಂಖ್ಯೆ
ಕಂದಾಯ ಇಲಾಖೆ ನೀಡಿರುವ ಭೂಮಿ ಪತ್ರ
ಸಾಗುವಳಿ ಪತ್ರ
ಸಾಲ ಮಿತಿಗೆ ಭದ್ರತಾ ದಾಖಲೆಗಳು
ಈ ಮೊದಲಾದ ದಾಖಲೆಗಳನ್ನು ಕೊಡಬೇಕು.

ಕೇವಲ 20 ಸಾವಿರಕ್ಕೆ ಮಾರಾಟಕ್ಕಿದೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್; ಸಿಂಗಲ್ ಓನರ್

ಕೆಸಿಸಿ ಸಾಲ ಎಲ್ಲಿ ಸಿಗುತ್ತೆ? (Where you can apply for KCC loan)

ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಅಂದರೆ ಎಸ್ ಬಿ ಐ (SBI), ಎಚ್ ಡಿ ಎಫ್ ಸಿ (HDFC), ಎಕ್ಸಿಸ್ ಬ್ಯಾಂಕ್ (Axis Bank) ಮೊದಲಾದ ಬ್ಯಾಂಕುಗಳಲ್ಲಿ ಕೆಸಿಸಿ ಸಾಲವನ್ನು ರೈತರು ಸುಲಭವಾಗಿ ಪಡೆದುಕೊಳ್ಳಬಹುದು.

Kisan loan available up to 3 lakhs, Good news for farmers

Follow us On

FaceBook Google News

Kisan loan available up to 3 lakhs, Good news for farmers