ಸ್ವಂತ ವ್ಯಾಪಾರಕ್ಕೆ ಕೇಂದ್ರ ಸರ್ಕಾರದಿಂದಲೇ ಸಿಗುತ್ತೆ 50 ಸಾವಿರ ತನಕ ಸಾಲ! ಪಡೆದುಕೊಳ್ಳಿ
ಪ್ರತಿಯೊಬ್ಬ ವ್ಯಕ್ತಿಗೂ ಸ್ವಾವಲಂಬಿಯಾಗಿ (independent life) ಜೀವನ ನಡೆಸಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿಯೇ ಕೆಲವರು ವಿದ್ಯಾಭ್ಯಾಸ ಮುಗಿದ ತಕ್ಷಣ ಸಿಕ್ಕಿದ ಉದ್ಯೋಗಕ್ಕೆ ಸೇರುತ್ತಾರೆ. ಇನ್ನು ಕೆಲವರು ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ.
ಆದರೆ ಕೆಲವರಿಗೆ ಸ್ವ-ಉದ್ಯೋಗ ಮಾಡುವ ಆಸೆ ಇರುತ್ತದೆ. ಆದರೆ ಆರ್ಥಿಕ ಸಮಸ್ಯೆಯಿಂದಾಗಿ ಅದು ಸಾಧ್ಯವಾಗಿರುವುದಿಲ್ಲ. ಆದರೆ ಚಿಂತೆ ಬೇಡ. ಕೇಂದ್ರ ಸರ್ಕಾರ ನಿಮ್ಮ ನೆರವಿಗೆ ಬರುತ್ತದೆ.
ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆ (pradhanmantri svanidhi Yojana) ಅಡಿಯಲ್ಲಿ ನೀವು 5೦ ಸಾವಿರ ರೂ. ವರೆಗೆ ಸಾಲ (Loan) ಪಡೆದುಕೊಳ್ಳಬಹುದು. ಅದು ಯಾವುದೇ ಗ್ಯಾರಂಟಿ ನೀಡದೆ. ಹಾಗಾದರೆ ಅರ್ಜಿ ಸಲ್ಲಿಸುವುದು ಹೇಗೆ? ಯಾರೆಲ್ಲ ಈ ಯೋಜನೆ ಲಾಭ ಪಡೆಯಬಹುದು ಎಂದು ತಿಳಿದುಕೊಳ್ಳೋಣ.
ಇನ್ಮುಂದೆ ಕೋಳಿ ಸಾಕಾಣಿಕೆಗೂ ಬೇಕಾಗುತ್ತೆ ಪರ್ಮಿಷನ್; ಇಲ್ಲಿದೆ ಮಹತ್ವದ ಮಾಹಿತಿ
ಪ್ರಧಾನಮಂತ್ರಿ ಸ್ವನಿಧಿ ಯೋಜನೆ: (pradhanmantri Svanidhi Yojana)
ಪ್ರಧಾನಮಂತ್ರಿ ಸ್ವನಿಧಿ ಯೋಜನೆಗೆ 2020 ರಲ್ಲಿ ಚಾಲನೆ ನೀಡಲಾಯಿತು. ಬೀದಿ ಬದಿ ವ್ಯಾಪಾರಸ್ಥರು (roadside shopkeepers), ಸಣ್ಣ ವ್ಯಾಪಾರಿಗಳಿಗೆ ಈ ಯೋಜನೆ (small business) ಅಡಿಯಲ್ಲಿ ಯಾವುದೇ ದಾಖಲೆ ಇಲ್ಲದೆ 5೦ ಸಾವಿರ ರೂ.ಗಳ ವರೆಗೆ ಸಾಲ (Loan) ನೀಡಲಾಗುತ್ತದೆ. ಸರಿಯಾಗಿ ಮರುಪಾವತಿ ಮಾಡಿದವರಿಗೆ 1200 ರೂ. ಕ್ಯಾಶ್ಬ್ಯಾಕ್ (cashback) ಸಹ ಸಿಗುತ್ತದೆ.
ಅರ್ಜಿ ಸಲ್ಲಿಸಿದ ತಕ್ಷಣ ಮೊದಲ ಹಂತವಾಗಿ 10 ಸಾವಿರ ರೂ. ನೀಡಲಾಗುತ್ತದೆ. ಇದನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದಲ್ಲಿ ನಿಮಗೆ ಮತ್ತೆ ಅವಶ್ಯಕತೆ ಬಿದ್ದಾಗ 20 ಸಾವಿರ ರೂ. ವರೆಗೆ ಸಾಲ ನೀಡಲಾಗುತ್ತದೆ.
ಕೇವಲ 20 ಸಾವಿರಕ್ಕೆ ಮಾರಾಟಕ್ಕಿದೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್; ಸಿಂಗಲ್ ಓನರ್
ಇದನ್ನು ಸಹ ಸಮಯಕ್ಕೆ ಸರಿಯಾಗಿ ಹಿಂತಿರುಗಿಸಿದರೆ 50 ಸಾವಿರ ರೂ. ವರೆಗೂ ನೀವು ಸಾಲ ಪಡೆದು ಮರುಪಾವತಿ ಮಾಡಬಹುದು. ಎಲ್ಲವನ್ನು ಸರಿಯಾಗಿ ಹಿಂತಿರುಗಿಸಿದಲ್ಲಿ ನಿಮಗೆ 1,200 ರೂ. ಸಹಾಯಧನವಾಗಿ ವಾಪಸ್ ನೀಡಲಾಗುತ್ತದೆ. ಈ ಮೂಲಕ ಬೀದಿ ಬದಿ ವ್ಯಾಪಾರಸ್ಥರು ನೆಮ್ಮದಿಯಾಗಿ ಯಾರ ಬಳಿಯೂ ಕೈಚಾಚದೆ ವ್ಯಾಪಾರ (business) ಮಾಡಿಕೊಂಡು ಬದುಕು ಕಟ್ಟಿಕೊಳ್ಳಬಹುದಾಗಿದೆ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನಿಮ್ಮ ಮಗುವಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳು!
ಅರ್ಜಿ ಸಲ್ಲಿಸುವುದು ಹೇಗೆ? (How to apply)
ನೀವು ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಅಡಿಯಲ್ಲಿ ಪ್ರಯೋಜನ ಪಡೆಯಲು ಇಚ್ಚಿಸುವುದಾದರೆ ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಬಹುದಾಗಿದೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ https://pmsvanidhi.mohua.gov.in/ ಭೇಟಿ ನೀಡಿ ಅಲ್ಲಿ ಅರ್ಜಿ ಭರ್ತಿ ಮಾಡಬೇಕು. ಅಲ್ಲಿ ಕೇಳಲಾಗುವ ಮಾಹಿತಿ ಹಾಗೂ ದಾಖಲೆಗಳನ್ನು (information and documents) ಒದಗಿಸಬೇಕು. ನೀವು ಸಲ್ಲಿಸಿದ ಅರ್ಜಿ ಸರಿಯಾಗಿದ್ದಲ್ಲಿ ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ.
ಹಾಗಾದ್ರೆ ಇನ್ಯಾಕೆ ತಡ, ನೀವು ನಿಮ್ಮ ಕನಸಿನ ಉದ್ಯಮ ಆರಂಭಿಸಬೇಕು ಎಂದಿದ್ರೆ ಅಥವಾ ನೀವು ಆರಂಭಿಸಿರುವ ಉದ್ಯಮವನ್ನು ಇನ್ನಷ್ಟು ಬೆಳೆಸಬೇಕು ಎನ್ನುವುದಾದರೆ ಕೇಂದ್ರ ಸರ್ಕಾರದ ಸ್ವನಿಧಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.
Loans up to 50,000 are available from the central government for own business