ಇನ್ಮುಂದೆ ಕೋಳಿ ಸಾಕಾಣಿಕೆಗೂ ಬೇಕಾಗುತ್ತೆ ಪರ್ಮಿಷನ್; ಇಲ್ಲಿದೆ ಮಹತ್ವದ ಮಾಹಿತಿ

Story Highlights

Poultry Farming : ಕೋಳಿ ಫಾರಂ ಆರಂಭಿಸಲು ವಿವಿಧ ಬ್ಯಾಂಕ್ (Bank) ಗಳಿಂದ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Subsidy Loan) ಪಡೆದುಕೊಳ್ಳಬಹುದು

Poultry Farming : ರೈತರು (farmers) ವರ್ಷವಿಡಿ ಒಂದೇ ಬೆಳೆ (single crop) ಬೆಳೆಯಲು ಸಾಧ್ಯವಿಲ್ಲ ಅಥವಾ ಒಂದೇ ಬೆಳೆ ನಂಬಿಕೊಂಡು ಜೀವನ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಹೈನುಗಾರಿಕೆ, ಪ್ರಾಣಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಹೀಗೆ ಬೇರೆ ಬೇರೆ ಉಪಕಸುಬು (sub profession) ಕೂಡ ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ಯುವಕರು ಕೂಡ 9 -5 ಜಾಬ್ (job) ಬಿಟ್ಟು ಕೋಳಿ ಸಾಕಾಣಿಕೆ (poultry farming) ಯಂತಹ ಅತ್ಯಂತ ಲಾಭದಾಯಕ ಕಸಬು ಮಾಡಲು ಶುರು ಮಾಡಿದ್ದಾರೆ.

ಕೋಳಿ ಸಾಕಾಣಿಕೆ ಹೆಚ್ಚು ಲಾಭವನ್ನು ತಂದು ಕೊಡುವಂತಹ ಉದ್ದಿಮೆ ಆಗಿದ್ದರೂ ಕೂಡ, ಕೋಳಿ ಫಾರ್ಮ್ ಆರಂಭಿಸುವುದಿದ್ದರೂ ಪರವಾನಿಗೆ ಪಡೆದುಕೊಳ್ಳಬೇಕಾಗುತ್ತದೆ.

ಕೇವಲ 20 ಸಾವಿರಕ್ಕೆ ಮಾರಾಟಕ್ಕಿದೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್; ಸಿಂಗಲ್ ಓನರ್

ಕೋಳಿ ಸಾಕಾಣಿಕೆಗೆ ಬೇಕು ಪರ್ಮಿಷನ್! (Need permission for poultry farming)

ಕೋಳಿ ಸಾಕಾಣಿಕೆ ಕೂಡ ಕೃಷಿ ಚಟುವಟಿಕೆಯ ಒಂದು ಭಾಗವಾಗಿದ್ದು, ಕೋಳಿ ಫಾರಂ ಆರಂಭಿಸುವುದಕ್ಕೆ ವಿಶೇಷವಾದ ಪರವಾನಿಗೆ ಪಡೆದುಕೊಳ್ಳುವ ಅಗತ್ಯ ಇಲ್ಲ. ಆದರೆ ಕೋಳಿ ಫಾರಂ ಕಟ್ಟಡ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ ನಿಂದ ಏನ್ ಓ ಸಿ (no objection certificate) ಪಡೆದುಕೊಳ್ಳಬೇಕು ಅಷ್ಟೇ ಅಲ್ಲದೆ ತಹಶೀಲ್ದಾರರು ಇದಕ್ಕೆ ಅಪ್ರುವಲ್ ನೀಡಬೇಕು. ಇದರ ಜೊತೆಗೆ ಪರಿಸರ ರಕ್ಷಣಾ ವೇದಿಕೆ ಕೂಡ ಕೋಳಿ ಸಾಕಾಣಿಕೆಗೆ ಏನ್ ಓ ಸಿ ನೀಡಬೇಕಾಗುತ್ತದೆ.

ಇನ್ನು ಕೋಳಿ ಸಾಕಾಣಿಕೆ ಫಾರ್ಮ್ ಆರಂಭಿಸುವುದಕ್ಕೆ ಬೇಕಾಗಿರುವ ವಿದ್ಯುತ್ ಕನೆಕ್ಷನ್ (electricity) ಪಡೆದುಕೊಳ್ಳಲು ತಹಶೀಲ್ದಾರರ ಸಹಿ ಇರುವ ಒಪ್ಪಿಗೆ ಪ್ರಮಾಣ ಪತ್ರವನ್ನು ವಿದ್ಯುತ್ ಇಲಾಖೆಗೆ ನೀಡಬೇಕಾಗುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬಹುದು.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನಿಮ್ಮ ಮಗುವಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳು!

Poultry Farming Loan Detailsಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಿಗುತ್ತೆ ಸಬ್ಸಿಡಿ! (Subsidy Loan for poultry farming)

ಯುವಕರು ಕೂಡ ಕೋಳಿ ಫಾರಂ ಆರಂಭಿಸಿ ಉತ್ತಮ ಸ್ವಾವಲಂಬನೆಯ ಜೀವನ ಕಂಡುಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಸರ್ಕಾರ ಕೋಳಿ ಫಾರಂ ಆರಂಭಿಸುವವರಿಗೆ ಶೇಕಡ 50. ವರೆಗೆ ಸಬ್ಸಿಡಿ ಸಾಲ (Subsidy Loan) ನೀಡುತ್ತದೆ. ಅದೇ ರೀತಿ ಅಗ್ರೀ ಬಿಸಿನೆಸ್ (agri business) ಯೋಜನೆಯ ಅಡಿಯಲ್ಲಿ ತರಬೇತಿ (training) ಪಡೆದುಕೊಂಡವರಿಗೆ 36% ನಿಂದ 44% ವರೆಗೆ ಸಹಾಯಧನ ನೀಡಲಾಗುತ್ತದೆ. ಎರಡು ತಿಂಗಳ ತರಬೇತಿಯನ್ನು ಕೊಡಲಾಗುತ್ತದೆ.

ಇನ್ನು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಹೊಂದಿರುವ ರೈತರು ಕೋಳಿ ಫಾರಂ ಆರಂಭಿಸಲು ವಿವಿಧ ಬ್ಯಾಂಕ್ (Bank) ಗಳಿಂದ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Subsidy Loan) ಪಡೆದುಕೊಳ್ಳಬಹುದು. ಜೊತೆಗೆ ಸರ್ಕಾರದಿಂದ ಸಬ್ಸಿಡಿ ಕೂಡ ಈ ಸಾಲಕ್ಕೆ ಅನ್ವಯವಾಗುತ್ತದೆ.

ಜಸ್ಟ್ 3 ನಿಮಿಷಗಳಲ್ಲಿ ಸಿಗುತ್ತೆ 3 ಲಕ್ಷ ಪರ್ಸನಲ್ ಲೋನ್; ಪಡೆದುಕೊಳ್ಳಲು ಹೀಗೆ ಮಾಡಿ

ಕೋಳಿ ಸಾಕಾಣಿಕೆಗೆ ತರಬೇತಿ ಪಡೆದುಕೊಳ್ಳಲು ಈ ಕೇಂದ್ರಗಳನ್ನು ಸಂಪರ್ಕಿಸಿ!

ದಕ್ಷಿಣ ಕನ್ನಡ, ಉತ್ತರ ಕನ್ನಡ, ರಾಯಚೂರು, ವಿಜಯಪುರ, ಕೋಲಾರ ಜಿಲ್ಲೆಗಳಲ್ಲಿ ಕೋಳಿ ಸಾಕಾಣಿಕೆಗೆ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ ಆಸಕ್ತ ರೈತರು ಅಥವಾ ಯುವಕರು ಈ ತರಬೇತಿ ಕೇಂದ್ರಗಳಲ್ಲಿ ಎರಡು ತಿಂಗಳುಗಳ ಕಾಲ ತರಬೇತಿ ಪಡೆದು ಅತ್ಯಂತ ಯಶಸ್ವಿಯಾಗಿ ಕೋಳಿ ಫಾರಂ ಆರಂಭಿಸಲು ಸಾಧ್ಯವಿದೆ.

permission will be required for Poultry Farming, Here is the information

Related Stories