ಸ್ವಂತ ಉದ್ಯಮ ಶುರು ಮಾಡುವುದಕ್ಕೆ ಸಾಲ ಯೋಜನೆ! ಸರ್ಕಾರವೇ ನೀಡುತ್ತೆ ವ್ಯಾಪಾರ ಸಾಲ
ಸ್ವಾನಿಧಿ ಯೋಜನೆಯನ್ನು ಸ್ವಂತ ಉದ್ಯಮ (Own Business) ಶುರು ಮಾಡುವುದಕ್ಕೆ ಸಾಲ (Loan) ನೀಡುವ ಸಲುವಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ.
Loan : ನಮ್ಮ ಕೇಂದ್ರ ಸರ್ಕಾರವು ಜನರಿಗೆ ಅನುಕೂಲ ಆಗುವ ಹಾಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಜನರು ಸ್ವಾವಲಂಬಿಯಾಗಿ ಬದುಕಲಿ, ಅರ್ಥಿಕವಾಗಿ ಸದೃಢವಾಗಿರಲಿ ಎಂದು ಯೋಜನೆಗಳು ಜಾರಿಗೆ ಬಂದಿದೆ.
ಅದರಲ್ಲೂ ಕೋವಿಡ್ ಸಮಯದಲ್ಲಿ ಹಲವು ಜನ ಕೆಲಸ ಕಳೆದುಕೊಂಡು ಬೀದಿಗೆ ಬರುವ ಪರಿಸ್ಥಿತಿ ಎದುರಾಯಿತು, ಆ ಕಾರಣಕ್ಕೆ ಪಿಎಮ್ ಮೋದಿ ಅವರು ಸ್ವಾನಿಧಿ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯ ಮೂಲಕ ಸಾಲ ಕೊಡುವುದಕ್ಕೆ ಶುರು ಮಾಡಿದರು..
ಕೆನರಾ ಬ್ಯಾಂಕ್ ಅಕೌಂಟ್ ಇದ್ದು ನಿಮ್ಮ ಫಿಕ್ಸೆಡ್ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಸ್ವಾನಿಧಿ ಯೋಜನೆ ನಿಮಗಾಗಿ!
ಸ್ವಾನಿಧಿ ಯೋಜನೆಯನ್ನು ಸ್ವಂತ ಉದ್ಯಮ ಶುರು ಮಾಡುವುದಕ್ಕೆ ಸಾಲ (Loan) ನೀಡುವ ಸಲುವಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಈಗಾಗಲೇ 63 ಸಾವಿರಕ್ಕಿಂತ ಹೆಚ್ಚು ಜನರಿಗೆ ಸಾಲ ಸೌಲಭ್ಯ ನೀಡಲಾಗಿದೆ.
ಹಾಗೆಯೇ 11 ಸಾವಿರ ಕೋಟಿ ರೂಪಾಯಿಗಳನ್ನು ಈ ಯೋಜನೆಯ ಫಲಾನುಭವಿಗಳಿಗಾಗಿ ಮೀಸಲು ಇಡಲಾಗಿದೆ. ಹಾಗಾಗಿ ದೇಶದ ಜನರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹದು. ಈ Loan ನೀಡುವುದಕ್ಕೆ ಯಾವುದೇ ಸೆಕ್ಯೂರಿಟಿ ಕೇಳುವುದಿಲ್ಲ.
ಮಹಿಳೆಯರ ಸ್ವಂತ ವ್ಯಾಪಾರಕ್ಕೆ ಸಿಗಲಿದೆ 5 ಲಕ್ಷ ಸಾಲ! ಬಂಪರ್ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ
ಸ್ವಾನಿಧಿ ಯೋಜನೆಯ ಬಗ್ಗೆ ಮಾಹಿತಿ
ಹಲವಾರು ಜನರಿಗೆ ಸ್ವಂತ ಕೆಲಸ ಮಾಡಬೇಕು, ಸ್ವಂತ ಉದ್ಯಮ ಶುರು (Own Business) ಮಾಡಬೇಕು ಎಂದು ಕನಸು ಕಂಡು, ಬಂಡವಾಳಕ್ಕೆ ಹಣ ಇಲ್ಲದೇ ಕಷ್ಟಪಡುತ್ತಿರುತ್ತಾರೆ. ಅಂಥವರು ಸ್ವಾನಿಧಿ ಯೋಜನೆಯ ಮೂಲಕ ಸಾಲ ಪಡೆದು, ನಿಮ್ಮ ಕನಸನ್ನು ಈಡೇರಿಸಿಕೊಳ್ಳಬಹುದು. ಹಾಗೆಯೇ ಸಣ್ಣ ವ್ಯಾಪಾರ ನಡೆಸುತ್ತಿರುವವರು ಈ ಯೋಜನೆಯ ಮೂಲಕ ಸಹಾಯ ಪಡೆದು ದೊಡ್ಡ ಮಟ್ಟದಲ್ಲಿ ಶುರು ಮಾಡಬಹುದು. 10 ರಿಂದ 50 ಸಾವಿರ ರೂಪಾಯಿಗಳವರೆಗು ಸಾಲ ಸಿಗುತ್ತದೆ.
ತುಸು ಏರಿಕೆಯಾದ ಚಿನ್ನದ ಬೆಲೆ, ಬುಧವಾರ ಚಿನ್ನ ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆ; ಇಲ್ಲಿದೆ ವಿವರ
ಎಷ್ಟು ಸಾಲ ಸಿಗುತ್ತದೆ?
ಪಿಎಮ್ ಸ್ವಾನಿಧಿ ಯೋಜನೆಯ ಮೂಲಕ ಸಾಲ ಪಡೆಯುವುದಾದರೆ, ಮೊದಲ ಬಾರಿಗೆ 10 ಸಾವಿರ ರೂಪಾಯಿ ಸಾಲ ಸಿಗುತ್ತದೆ. ಈ ಮೊತ್ತವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಿದರೆ ಎರಡನೇ ಹಂತದಲ್ಲಿ 20 ಸಾವಿರ ಸಾಲ ಸಿಗುತ್ತದೆ. ಇದನ್ನು ಕೂಡ ಸರಿಯಾಗಿ ಪಾವತಿಸಿದರೆ 50 ಸಾವಿರ ಸಾಲ ಸಿಗುತ್ತದೆ. ಇಷ್ಟು ಮೊತ್ತವನ್ನು ಸರಿಯಾಗಿ ಪಾವತಿ ಮಾಡಿದರೆ ದೊಡ್ಡ ಮೊತ್ತವನ್ನು ಸಾಲವಾಗಿ ಪಡೆಯಬಹುದು.
ಇನ್ನು ಯೋಜನೆಗೆ ಬಡ್ಡಿದರ ಎಷ್ಟು ಎಂದು ನೋಡುವುದಾದರೆ, 7% ಬಡ್ಡಿದರ ಇರಲಿದೆ. ಆದರೆ ಸಾಲದ ಅವಧಿ ಮುಗಿಯುವುದಕ್ಕಿಂತ ಮೊದಲೇ ಸಾಲ ಮರುಪಾವತಿ ಮಾಡಿಬಿಟ್ಟರೆ, ಬಡ್ಡಿಮೊತ್ತಕ್ಕೆ ಸಬ್ಸಿಡಿ ನೀಡಲಾಗುತ್ತದೆ. ಇದರ ಅರ್ಥ ನೀವು ಬಡ್ಡಿ ಕಟ್ಟುವ ಅವಶ್ಯಕತೆಯೇ ಇರುವುದಿಲ್ಲ. ಹಾಗೆಯೇ 10 ಸಾವಿರ ರೂಪಾಯಿಯವರೆಗಿನ ಬಡ್ಡಿಗೆ, ಬಡ್ಡಿ ಸಹಾಯಧನ ಕೂಡ ಸಿಗುತ್ತದೆ.
ಮನೆ ಇಲ್ಲದ ಬಡವರಿಗೆ ಸ್ವಂತ ಮನೆ ಭಾಗ್ಯ! ವಸತಿ ಯೋಜನೆಗೆ ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಕೆ ಹೇಗೆ?
ಒಂದು ವೇಳೆ ನೀವು ಸ್ವಾನಿಧಿ ಯೋಜನೆಯ ಮೂಲಕ ಸಾಲ ಪಡೆಯಲು ಬಯಸಿದರೆ, ಮೊದಲಿಗೆ ನೀವು ಹತ್ತಿರದ ಸರ್ಕಾರಿ Bank ಗೆ ಹೋಗಿ, ಈ ಯೋಜನೆಯ ಅಪ್ಲಿಕೇಶನ್ ಫಾರ್ಮ್ ಪಡೆದು ಅದನ್ನು ಫಿಲ್ ಮಾಡಿ, ಅಗತ್ಯವಿರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ. ನೀವು ನೀಡಿರುವ ಮಾಹಿತಿ ಎಲ್ಲವೂ ಸರಿ ಇದ್ದರೆ, ನಿಮಗೆ ಸಾಲ ಮಂಜೂರಾಗುತ್ತದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು https://pmsvanidih.mohua.gov.in/ ಸರ್ಕಾರದ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
Loan scheme for starting Your own business by the government