ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿದ್ಯಾ? ಡೂಪ್ಲಿಕೇಟ್ ಕಾರ್ಡ್ ಪಡೆಯಲು ಹೀಗೆ ಮಾಡಿ

Pan Card : ಪ್ಯಾನ್ ಕಾರ್ಡ್ ಕಳೆದು ಹೋದರೆ ಡೂಪ್ಲಿಕೇಟ್ ಕಾರ್ಡ್ ಸಿಗುತ್ತೆ (get duplicate PAN card if you lost original)

Pan Card : ನಾವು ಯಾವುದೇ ರೀತಿಯ ಹಣಕಾಸಿನ ವ್ಯವಹಾರ (financial transaction) ಮಾಡುವುದಿದ್ದರೆ ಅಥವಾ ಪ್ರಮುಖ ರಿಜಿಸ್ಟ್ರೇಷನ್ (registration) ಮಾಡಿಸಿಕೊಳ್ಳುವುದಿದ್ದರೆ ಕೆಲವು ಪುರಾವೆಗಳನ್ನು, ಗುರುತಿನ ಆಧಾರವನ್ನು ಒದಗಿಸಬೇಕು.

ಇದಕ್ಕೆ ಮುಖ್ಯವಾಗಿ ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ (Aadhaar Card) ಹಾಗೂ ಪ್ಯಾನ್ (PAN Card ) ಕಾರ್ಡ್ ಮಾಡಲಾಗಿದೆ, ಯಾರ ಬಳಿ ಆಧಾರ್ ಕಾರ್ಡ್ ಇರುತ್ತದೆಯೋ ಅವರು ಯಾವುದೇ ಸಮಸ್ಯೆ ಇಲ್ಲದೆ ಸರ್ಕಾರದ ಪ್ರತಿಯೊಂದು ಕೆಲಸಗಳನ್ನು ಕೂಡ ಮಾಡಿಕೊಳ್ಳಬಹುದು. ಅದರಲ್ಲೂ ನೀವು ಟ್ಯಾಕ್ಸ್ ಪೇಯರ್ (tax payer) ಆಗಿದ್ದರೆ ನಿಮಗೆ ಪ್ಯಾನ್ ಕಾರ್ಡ್ ಎನ್ನುವುದು ಅತಿ ಮುಖ್ಯವಾಗಿರುವ ದಾಖಲೆ ಆಗಿರುತ್ತದೆ.

ಚಿನ್ನ ಅಡವಿಟ್ಟು ಸಾಲ ಮಾಡಿದ್ದೀರಾ? ಗೋಲ್ಡ್ ಲೋನ್ ನಿಯಮಗಳಲ್ಲಿ ಧಿಡೀರ್ ಬದಲಾವಣೆ

ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿದ್ಯಾ? ಡೂಪ್ಲಿಕೇಟ್ ಕಾರ್ಡ್ ಪಡೆಯಲು ಹೀಗೆ ಮಾಡಿ - Kannada News

ಆದರೆ ಎಷ್ಟೋ ಸಾರಿ ಇಷ್ಟು ಅಮೂಲ್ಯವಾದ ದಾಖಲೆಗಳನ್ನು ನಾವು ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತದೆ. ಉದಾಹರಣೆಗೆ ನಿಮ್ಮ ಪಾನ್ ಕಾರ್ಡ್ ಕಳೆದು ಹೋಗಿರಬಹುದು ಅಥವಾ ನಿಮ್ಮ ಪ್ಯಾನ್ ಕಾರ್ಡ್ ಇಟ್ಟು ಕೊಂಡಿರುವ ಪರ್ಸ್ ಕಳುವಾಗಿರಬಹುದು, ಒಟ್ಟಿನಲ್ಲಿ ನಿಮ್ಮ ಒರಿಜಿನಲ್ ಪ್ಯಾನ್ ಕಾರ್ಡ್ ನಿಮ್ಮ ಕೈಯಿಂದ ಮಿಸ್ ಆಗಿರಬಹುದು.

ಆಗ ಖಂಡಿತವಾಗಿಯೂ ಟೆನ್ಶನ್ ಹಾಗೆ ಆಗುತ್ತೆ. ಯಾಕೆಂದರೆ ಪ್ಯಾನ್ ಕಾರ್ಡ್ (Pan Card) ಇಲ್ಲದೆ ಇದ್ದರೆ ನೀವು ಸಾಕಷ್ಟು ವ್ಯವಹಾರಗಳನ್ನು ಮಾಡಲು ಸಾಧ್ಯವೇ ಇಲ್ಲ ಇಂಥ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ಇದಕ್ಕೆ ಈ ಲೇಖನದಲ್ಲಿದೆ ಸಂಪೂರ್ಣ ವಿವರ ಇದೆ, ಮುಂದೆ ಓದಿ.

ರೈತರಿಗಾಗಿ ಕ್ರೆಡಿಟ್ ಕಾರ್ಡ್ ಯೋಜನೆ! ಕೃಷಿ ಅಗತ್ಯಗಳಿಗಾಗಿ ಪಡೆಯಬಹುದು ಸಾಲ

Pan Cardಪ್ಯಾನ್ ಕಾರ್ಡ್ ಕಳೆದು ಹೋದರೆ ಡೂಪ್ಲಿಕೇಟ್ ಕಾರ್ಡ್ ಸಿಗುತ್ತೆ (get duplicate PAN card if you lost original)

ಹೌದು, ನಿಮ್ಮ ಒರಿಜಿನಲ್ ಪ್ಯಾನ್ ಕಾರ್ಡ್ ಅಕಸ್ಮಾತ್ ಆಗಿ ಕಳೆದು ಹೋದರೆ ತಕ್ಷಣ ನೀವು ಅದೇ ಸಂಖ್ಯೆ ಇರುವ ಪ್ಯಾನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು

ಈ ರೀತಿ ನಿಮ್ಮದೇ ಪ್ಯಾನ್ ಕಾರ್ಡ್ ನ ನಕಲಿ ಪ್ರತಿ ಪಡೆದುಕೊಳ್ಳಲು ಯಾವ ಸೇವ ಕೇಂದ್ರಕ್ಕೂ ಅಲೆದಾಡಬೇಕಿಲ್ಲ. ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು.

ಚಿನ್ನ ಅಸಲಿಯೋ ನಕಲಿಯೋ ಗುರುತಿಸುವುದು ಹೇಗೆ? ಶುದ್ಧತೆ ಚೆಕ್ ಮಾಡಲು ಸುಲಭ ವಿಧಾನ

ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಪಡೆದುಕೊಳ್ಳಲು ಏನು ಮಾಡಬೇಕು? (How to get duplicate PAN card)

*ಮೊದಲನೆಯದಾಗಿ ಪ್ಯಾನ್ ಕಾರ್ಡ್ ವಿತರಣೆ ಮಾಡುವ ಅಧಿಕೃತ ವೆಬ್ ಪೋರ್ಟಲ್ https://www.pan.utiitsl.com/ ಮೇಲೆ ಕ್ಲಿಕ್ ಮಾಡಿ.

*ಈ ವೆಬ್ ಸೈಟ್ ನಲ್ಲಿ ಸರ್ವಿಸ್ (service) ವಿಭಾಗಕ್ಕೆ ಹೋಗಿ.

*ಸರ್ವಿಸ್ ವಿಭಾಗದಲ್ಲಿ ಪ್ಯಾನ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

*ಇಲ್ಲಿ ರಿಪ್ರಿಂಟ್ ಪ್ಯಾನ್ (reprint PAN) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

*ನಂತರ ಫಾರ್ಮ್ ನಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಸಬ್ಮಿಟ್ ಎಂದು ಕ್ಲಿಕ್ ಮಾಡಿದರೆ ನಿಮಗೆ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಸಿಗುತ್ತದೆ.

ಗೋಲ್ಡ್ ಲೋನ್ ಬೇಕಾದ್ರೆ ಚಿನ್ನ ಖರೀದಿ ಮಾಡಿರೋ ರಶೀದಿ ಇರಬೇಕಾ? ಇಲ್ಲಿದೆ ಮಾಹಿತಿ

ಪ್ಯಾನ್ ಕಾರ್ಡ್ ಮರು ಮುದ್ರಣಕ್ಕೆ ಐವತ್ತು ರೂಪಾಯಿಗಳ ಶುಲ್ಕವನ್ನು ಪಾವತಿಸಬೇಕು. ಆನ್ಲೈನ್ ಮೂಲಕವೇ ಶುಲ್ಕ ಪಾವತಿಸಿದರೆ ನಿಮಗೆ ನಿಮ್ಮ ಪ್ಯಾನ್ ಕಾರ್ಡ್ ನಂಬರ್ ನ ಡೂಪ್ಲಿಕೇಟ್ ಪ್ಯಾನ್ ಕಾರ್ಡ್ ಲಭ್ಯವಾಗುತ್ತದೆ.

Lost your PAN card, Do this to get a duplicate card

Follow us On

FaceBook Google News

Lost your PAN card, Do this to get a duplicate card