ಇನ್ಮುಂದೆ ಇದಕ್ಕಿಂತ ಹೆಚ್ಚಿನ ಹಣ ಮನೆಯಲ್ಲಿ ಇಡುವ ಹಾಗಿಲ್ಲ! ಬಂತು ಹೊಸ ರೂಲ್ಸ್
ಸ್ಮಾರ್ಟ್ ಫೋನ್ (smartphone) ಹಾಗೂ ಯುಪಿಐ ಪಾವತಿ (UPI payment) ಮಾಡುವ ಅಪ್ಲಿಕೇಶನ್ಗಳು ಇದ್ರೆ ಸಾಕು, ನೇರವಾಗಿ ನಮ್ಮ ಬ್ಯಾಂಕ್ ಖಾತೆಯಿಂದ (Bank Account) ಹಣವನ್ನು ನಾವು ಯಾವುದೇ ಖರೀದಿಗೆ ಪಾವತಿ ಮಾಡಬಹುದು.
ಸಾಮಾನ್ಯವಾಗಿ ಇಂದು ಪ್ರತಿಯೊಬ್ಬರು ಡಿಜಿಟಲೀಕರಣದತ್ತ (digitalisation) ಮುಖ ಮಾಡಿದ್ದಾರೆ, ಅಂದ್ರೆ ಆನ್ಲೈನ್ (online payment);ಮೂಲಕವೇ ಎಲ್ಲ ರೀತಿಯ ಪೇಮೆಂಟ್ ಗಳನ್ನು ಮಾಡಲಾಗುತ್ತದೆ.
ನಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ (smartphone) ಹಾಗೂ ಯುಪಿಐ ಪಾವತಿ (UPI payment) ಮಾಡುವ ಅಪ್ಲಿಕೇಶನ್ಗಳು ಇದ್ರೆ ಸಾಕು, ನೇರವಾಗಿ ನಮ್ಮ ಬ್ಯಾಂಕ್ ಖಾತೆಯಿಂದ (Bank Account) ಹಣವನ್ನು ನಾವು ಯಾವುದೇ ಖರೀದಿಗೆ ಪಾವತಿ ಮಾಡಬಹುದು.
ಹಾಗಂದ ಮಾತ್ರಕ್ಕೆ 100% ಎಲ್ಲರೂ ಯುಪಿಐ ಪೇಮೆಂಟ್ ಮಾಡುತ್ತಾರೆ ಎಂದಲ್ಲ, ಸ್ವಲ್ಪ ಜನರು ಮನೆಯಲ್ಲಿ ಅನಿವಾರ್ಯ ಸಂದರ್ಭದಲ್ಲಿ ಬೇಕು ಎನ್ನುವ ಕಾರಣಕ್ಕೆ ಒಂದಿಷ್ಟು ನಗದು (cash) ಹಣವನ್ನು ಕೂಡ ಇಟ್ಟುಕೊಂಡಿರುತ್ತಾರೆ. ಆದರೆ ನೀವು ಹೀಗೆ ಮನೆಯಲ್ಲಿ ನಗದು ಹಣ ಇಟ್ಟುಕೊಳ್ಳುತ್ತೀರಿ ಅಂದ್ರೆ ಆದಾಯ ತೆರಿಗೆಯ ನಿಯಮಗಳನ್ನ ಪಾಲಿಸಬೇಕು
ಇನ್ಮುಂದೆ ಈ ಕೆಲಸಕ್ಕೆ ಆಧಾರ್ ಕಾರ್ಡ್ ಅಗತ್ಯ ಇಲ್ಲ! ಆಧಾರ್ ಕಾರ್ಡ್ ನಿಯಮದಲ್ಲಿ ಬದಲಾವಣೆ
ಎಷ್ಟು ಹಣ ಮನೆಯಲ್ಲಿ ಇದ್ದರೆ ಆದಾಯ ತೆರಿಗೆ ಪ್ರಶ್ನೆ ಮಾಡುವುದಿಲ್ಲ!
ಸಾಮಾನ್ಯವಾಗಿ ಮನೆಯಲ್ಲಿ ಎಷ್ಟು ಹಣವನ್ನು ಬೇಕಾದರೂ ಇಟ್ಟುಕೊಳ್ಳಬಹುದು, ಆದರೆ ಎಲ್ಲದಕ್ಕೂ ಸರಿಯಾದ ದಾಖಲೆಗಳು (proof) ಇರಬೇಕು. 20 ಲಕ್ಷಕ್ಕೂ ಅಧಿಕ ಹಣವನ್ನು ಮನೆಯಲ್ಲಿ ಇಟ್ಟುಕೊಂಡರೆ ಅಂತವರನ್ನ ಪ್ರಶ್ನೆ ಮಾಡಲಾಗುತ್ತದೆ
ಹಾಗೂ ನೀವು ಮನೆಯಲ್ಲಿ ಇಟ್ಟುಕೊಂಡ ಹಣಕ್ಕೆ ಸರಿಯಾದ ದಾಖಲೆಗಳನ್ನು ನೀಡಬೇಕು, ಆ ಹಣ ಎಲ್ಲಿಂದ ಬಂತು ಹೇಗೆ ಬಂತು ಎಲ್ಲಾ ಮಾಹಿತಿಗಳನ್ನು ನೀಡಬೇಕು. ಇಷ್ಟೇ ಅಲ್ಲ ನೀವು ಒಂದು ವೇಳೆ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ (income tax return file) ಮಾಡಿದ್ದರೆ ತೆರಿಗೆ ಪಾವತಿ ಮಾಡುತ್ತಿದ್ದರೆ ನಗದು ಹಣ ಇಟ್ಟುಕೊಂಡಿದ್ದಕ್ಕೆ ಭಯಪಡುವ ಅಗತ್ಯ ಇಲ್ಲ. ಯಾವಾಗ ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳು ನಿಮ್ಮನ್ನ ಪ್ರಶ್ನೆ ಮಾಡುತ್ತಾರೋ ಆಗ ನೀವು ಸರಿಯಾದ ದಾಖಲೆಗಳನ್ನು ನೀಡಬೇಕಾಗುತ್ತದೆ.
ಬ್ಯಾಂಕ್ ನಲ್ಲಿಯೂ ನಗದು ವ್ಯವಹಾರಕ್ಕೆ ಇದೆ ಲಿಮಿಟ್!
ದಾಖಲೆ ರಹಿತ ಹಣಕ್ಕೆ 137% ವರೆಗೂ ದಂಡ ಪಾವತಿ (penalty) ಮಾಡಬೇಕಾಗುತ್ತದೆ. ಬ್ಯಾಂಕ್ ನಲ್ಲಿ 20 ಲಕ್ಷ ರೂಪಾಯಿಗಳನ್ನು ಒಂದೇ ಬಾರಿಗೆ ಇರುವುದು ಅಥವಾ ಏಕಕಾಲಕ್ಕೆ 50,000ಗಳನ್ನ ಹಿಂಪಡೆಯುವುದು ಈ ಎರಡು ವ್ಯವಹಾರಗಳಿಗೆ ಸಂಬಂಧಪಟ್ಟ ಹಾಗೆ ಆಧಾರ್ ಕಾರ್ಡ್ (Aadhaar card), ಪ್ಯಾನ್ ಕಾರ್ಡ್ (PAN card) ಒದಗಿಸಬೇಕು. ಜೊತೆಗೆ ನಿಮಗೆ ಆ ಹಣ ಎಲ್ಲಿಂದ ಬಂತು ಎನ್ನುವುದರ ಬಗ್ಗೆಯೂ ದಾಖಲೆ ನೀಡಬೇಕು.
ಎರಡು ಕೋಟಿಗಿಂತಲೂ ಹೆಚ್ಚಿನ ವ್ಯವಹಾರ ಮಾಡುವುದಾದರೆ ಟಿಡಿಎಸ್ (TDS) ಪ್ರತಿ ನೀಡಬೇಕು. ಒಂದು ವೇಳೆ ಹೆಚ್ಚಿನ ಹಣಕಾಸಿನ ವ್ಯವಹಾರ ಮಾಡುವುದಾದರೆ ಬ್ಯಾಂಕಿಗೆ ಸರಿಯಾದ ಮಾಹಿತಿ ಸಿಗದೇ ಇದ್ದಾಗ ಬ್ಯಾಂಕ್, ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರುತ್ತದೆ ಆಗ ಆದಾಯ ತೆರಿಗೆ ಇಲಾಖೆ ನಿಮಗೆ ನೋಟಿಸ್ ಜಾರಿಗೊಳಿಸಬಹುದು ಅಥವಾ ನಿಮ್ಮನ್ನ ನೇರವಾಗಿ ಸಂಪರ್ಕಿಸಿ ಪ್ರಶ್ನೆ ಮಾಡಬಹುದು.
ಒಂದರಿಂದ ಎರಡು ತಿಂಗಳುಗಳ ಒಳಗೆ ನಿಮ್ಮ ವಿಚಾರಣೆ ನಡೆಸಬಹುದು ಅಥವಾ ಈ ವಿಚಾರಣೆಗೆ 8 ವರ್ಷಗಳ ಅವಕಾಶ ಇರುತ್ತದೆ ಹಾಗಾಗಿ ಇಂದು ಮಿತಿಗಿಂತಲೂ ಹೆಚ್ಚಿನ ಹಣಕಾಸು ವ್ಯವಹಾರ ಮಾಡಿ ಆದಾಯ ತೆರಿಗೆ ಇಲಾಖೆಯಿಂದ ತಪ್ಪಿಸಿಕೊಂಡಿದ್ದೇನೆ ಎಂದು ಕೊಳ್ಳಬೇಡಿ ಎಂಟು ವರ್ಷಗಳ ಅವಧಿಯಲ್ಲಿ ನೀವು ಇಂದು ಕೊಡದೆ ಇರುವ ದಾಖಲೆಗೆ ಮುಂದೆ ಒಂದು ದಿನ ಬಾರಿ ಮೊತ್ತದ ದಂಡ ತೆರಬೇಕಾದೀತು.
Money more than this should not be kept at home
Follow us On
Google News |