ಮೋದಿ ಸರ್ಕಾರದಿಂದ ಸಿಹಿ ಸುದ್ದಿ! ಈ ಸ್ಕೀಮ್ ಮೂಲಕ ಹೆಣ್ಣುಮಕ್ಕಳಿಗೆ ಇನ್ನಷ್ಟು ಬೆನಿಫಿಟ್
ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿದರ ಹೆಚ್ಚಳ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ದೇಶದಲ್ಲಿ ವಾಸಿಸುವ ಬಡ ಹೆಣ್ಣು ಮಕ್ಕಳಿಗಾಗಿ ತಂದೆ ತಾಯಿ ಅವರ ವಿದ್ಯಾಭ್ಯಾಸ (girl child education) ಹಾಗೂ ಮದುವೆ ಖರ್ಚಿಗಾಗಿ ಹಣ ಉಳಿಸಲು ಯೋಚಿಸಿದರೆ ಅದಕ್ಕೆ ಸುಕನ್ಯಾ ಸಮೃದ್ಧಿ ಯೋಜನೆ (Sukanya samriddhi Yojana) ಗಿಂತ ಮಿಗಿಲಾದ ಯೋಜನೆ ಇನ್ನೊಂದಿಲ್ಲ ಎನ್ನಬಹುದು.
ಇದು ಕೇಂದ್ರ ಸರ್ಕಾರ (central government) ಪರಿಚಯಿಸಿರುವ ಯೋಜನೆ ಆಗಿದ್ದು , ದೇಶದಲ್ಲಿ ವಾಸಿಸುವ ಬಡ ಹೆಣ್ಣು ಮಕ್ಕಳ ಜನನದಿಂದಲೇ ಈ ಯೋಜನೆ ಪ್ರಯೋಜನ ಪಡೆಯಬಹುದು.
ನಿಮ್ಮ ಬ್ಯಾಂಕ್ ಖಾತೆಗೆ ಬೇರೆ ಯಾರದ್ದೋ ಹಣ ಮಿಸ್ ಆಗಿ ಬಂದ್ರೆ ಏನ್ ಮಾಡಬೇಕು ಗೊತ್ತಾ?
ಸುಕನ್ಯಾ ಸಮೃದ್ಧಿ ಯೋಜನೆ ಆರಂಭಿಸಿದವರಿಗೆ ಗುಡ್ ನ್ಯೂಸ್!
ನೀವು ಕೂಡ ನಿಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಆರಂಭಿಸಿದ್ದರೆ ನಿಮಗೆ ಇದು ಖುಷಿ ಕೊಡುವ ವಿಚಾರ. ಯಾಕೆಂದರೆ ಕೇಂದ್ರ ಸರ್ಕಾರ ಇದೀಗ ಸುಕನ್ಯಾ ಸಮೃದ್ಧಿ ಯೋಜನೆಗೆ ನೀಡಲಾಗುವ ಬಡ್ಡಿ ದರವನ್ನು (interest rate increased) ಹೆಚ್ಚಿಸಿದೆ.
ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಸರ್ಕಾರ ಹೆಚ್ಚಿಸಿದೆ, ಈ ಹಿನ್ನೆಲೆಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲೂ ಕೂಡ ಬಡ್ಡಿ ದರದಲ್ಲಿ ಹೆಚ್ಚಳವಾಗಿದ್ದು, ಇದರಿಂದ ಫಲಾನುಭವಿಗಳು ಇನ್ನೂ ಹೆಚ್ಚಿನ ಹಣಕಾಸು ಪ್ರಯೋಜನ ಪಡೆಯಬಹುದಾಗಿದೆ.
ಎಲ್ಐಸಿಯಿಂದ ಹಿರಿಯ ನಾಗರೀಕರಿಗೆ ಸಿಗುತ್ತೆ 12,000 ರೂಪಾಯಿ ಪಿಂಚಣಿ! ಅರ್ಜಿ ಸಲ್ಲಿಸಿ
ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರದಲ್ಲಿ ಹೆಚ್ಚಳ
ಈ ಯೋಜನೆಯಲ್ಲಿ 20 ಬೇಸಿಸ್ ಪಾಯಿಂಟ್ ಗಳನ್ನು ಹೆಚ್ಚಿಸಲಾಗಿದೆ. ಅಂದರೆ 8% ನಷ್ಟು ಇದ್ದ ಬಡ್ಡಿದರ ಈಗ 8.2% ರಷ್ಟು ಏರಿಕೆ ಕಂಡಿದೆ. 2024 ತ್ರೈಮಾಸಿಕ ಬಡ್ಡಿ ಪರಿಷ್ಕರಣೆಯಲ್ಲಿ ಈ ಹೊಸ ಬಡ್ಡಿ ದರ ಅನ್ವಯವಾಗಲಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior citizen saving scheme)
ಸುಕನ್ಯಾ ಸಮೃದ್ಧಿ ಯೋಜನೆ ಯಂತೆ ಇನ್ನೊಂದು ಯೋಜನೆಯಲಿ ನೀವು ಹೆಚ್ಚು ಬಡ್ಡಿ ದರ ಪಡೆದುಕೊಳ್ಳಬಹುದು ಎಂದಾದರೆ ಅದು ಹಿರಿಯ ನಾಗರಿಕರ ಉಳಿತಾಯ ಯೋಜನೆಯಾಗಿದೆ. ಈ ಉಳಿತಾಯ ಯೋಜನೆಗೂ ಕೂಡ 8.2% ನಷ್ಟು ಬಡ್ಡಿ ದರವನ್ನು ನೀಡಲಾಗುತ್ತದೆ. ಹೆಚ್ಚಿನ ಹಿರಿಯ ನಾಗರಿಕರು ಈ ಉಳಿತಾಯ ಯೋಜನೆಯ ಪ್ರಯೋಜನ ಪಡೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆಗೆ ನೀವು ಹತ್ತಿರದ ಅಂಚೆ ಕಛೇರಿ (post office) ಯಲ್ಲಿ ಅಥವಾ ಬ್ಯಾಂಕ್ (Bank) ನಲ್ಲಿ ಉಳಿತಾಯ ಖಾತೆ ತೆರೆಯುವುದರ ಮೂಲಕ ಆರಂಭಿಸಬಹುದು.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ಯೋ ಇಲ್ವೋ ಕುಳಿತಲ್ಲಿಯೇ ತಿಳಿದುಕೊಳ್ಳಿ
ಸುಕನ್ಯಾ ಸಮೃದ್ಧಿ ಯೋಜನೆ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಮೀಸಲಾಗಿರುವ ಯೋಜನೆಯಾಗಿದ್ದು, ಮನೆಯಲ್ಲಿ ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆ ಪ್ರಯೋಜನ ಸಿಗುತ್ತದೆ.
ನಿಮ್ಮ ಮಗು 10 ವರ್ಷದ ಒಳಗಿನ ಹೆಣ್ಣು ಮಗು ಆಗಿದ್ದರೆ ಆ ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ಆರಂಭಿಸಿ ಹಾಗೂ ಸರ್ಕಾರದಿಂದ ಹೆಚ್ಚು ಪ್ರಯೋಜನ ಪಡೆದುಕೊಳ್ಳಿ. 15 ರಿಂದ 20 ವರ್ಷಗಳ ಅವಧಿಯವರೆಗೆ ಹೂಡಿಕೆ (investment) ಮಾಡಬಹುದು ಕನಿಷ್ಠ ಹೂಡಿಕೆಯ ಮೊತ್ತ 1,50,000 ರೂ.ಗರಿಷ್ಠ ಹೂಡಿಕೆಗೆ ಮಿತಿ ಇಲ್ಲ.
More benefit for girl Child through this scheme