ನಿಮ್ಮ ಬ್ಯಾಂಕ್ ಖಾತೆಗೆ ಬೇರೆ ಯಾರದ್ದೋ ಹಣ ಮಿಸ್ ಆಗಿ ಬಂದ್ರೆ ಏನ್ ಮಾಡಬೇಕು ಗೊತ್ತಾ?
ಎಷ್ಟೋ ಬಾರಿ ನಮ್ಮ ಖಾತೆಗೆ (Bank Account) ಇದ್ದಕ್ಕಿದ್ದ ಹಾಗೆ ಒಂದು ಲಕ್ಷ ರೂಪಾಯಿಗಳು ಬಂದು ಬಿದ್ದರೆ ಎಷ್ಟು ಚೆನ್ನಾಗಿರುತ್ತೆ ಎಂದು ಭಾವಿಸುತ್ತೇವೆ ಅಲ್ಲವೇ
ಬ್ಯಾಂಕಿಂಗ್ ವ್ಯವಹಾರ (Bank transaction) ದಲ್ಲಿ ಎಷ್ಟೇ ಹುಷಾರಿತನ ಇದ್ದರೂ ಸಾಲದು. ಕೆಲವೊಮ್ಮೆ ನಮ್ಮ ಜಾಣ್ಮೆ ಮೀರಿ ತಪ್ಪುಗಳು ನಡೆದು ಹೋಗುತ್ತವೆ ,ಹೀಗೆ ತಪ್ಪುಗಳು (mistakes) ನಡೆದಾಗ ಅದರಿಂದ ಸಮಸ್ಯೆ ಅನುಭವಿಸ ಬೇಕಾಗಿರುವುದು ಕೂಡ ನಾವೇ! ಹಾಗಾಗಿ ಬ್ಯಾಂಕಿಂಗ್ (Banking) ವ್ಯವಹಾರ ಎನ್ನುವುದು ಬಹಳ ಮುತುವರ್ಜಿಯಿಂದ ಮಾಡಬೇಕಾದ ಕೆಲಸ.
ಎಷ್ಟೋ ಬಾರಿ ನಮ್ಮ ಖಾತೆಗೆ (Bank Account) ಇದ್ದಕ್ಕಿದ್ದ ಹಾಗೆ ಒಂದು ಲಕ್ಷ ರೂಪಾಯಿಗಳು ಬಂದು ಬಿದ್ದರೆ ಎಷ್ಟು ಚೆನ್ನಾಗಿರುತ್ತೆ ಎಂದು ಭಾವಿಸುತ್ತೇವೆ ಅಲ್ಲವೇ? ಹಾಗೆ ವಾಸ್ತವದಲ್ಲಿ ನಿಮ್ಮ ಖಾತೆಗೆ ಯಾರದ್ದೋ ಹಣ ನಿಮಗೆ ಗೊತ್ತಿಲ್ಲದ ಹಾಗೆ ವರ್ಗಾವಣೆ ಆದರೆ ನೀವೇನು ಮಾಡುತ್ತೀರಿ ಅಥವಾ ನೀವೇನು ಮಾಡಬೇಕು ಎನ್ನುವುದು ನಿಮಗೆ ಗೊತ್ತಾ?
ಎಲ್ಐಸಿಯಿಂದ ಹಿರಿಯ ನಾಗರೀಕರಿಗೆ ಸಿಗುತ್ತೆ 12,000 ರೂಪಾಯಿ ಪಿಂಚಣಿ! ಅರ್ಜಿ ಸಲ್ಲಿಸಿ
ಬೇರೆಯವರ ಖಾತೆಯಿಂದ ಹಣ ವರ್ಗಾವಣೆ ಆದರೆ ಏನು ಮಾಡಬೇಕು?
ಬೇರೆಯವರ ಖಾತೆಯಿಂದ ಇನ್ಯಾರಿಗೋ ಹೋಗಬೇಕಿದ್ದ ಹಣ (money) ಆಕಸ್ಮಿಕವಾಗಿ ನಿಮ್ಮ ಖಾತೆ ಸೇರಿತ್ತು ಎಂದು ಭಾವಿಸಿ. ಆಗ ಸಿಕ್ಕಿದ್ದೇ ಸೀರುಂಡೆ ಎನ್ನುವಂತೆ ಆ ಹಣವನ್ನು ನೀವು ಬಳಸಿಕೊಳ್ಳಬಹುದು ಎಂದು ಭಾವಿಸಿದರೆ ಖಂಡಿತವಾಗಿಯೂ ತಪ್ಪು.
ಬೇರೆಯವರ ಖಾತೆಯಿಂದ ತಪ್ಪಾಗಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದ್ದರೆ ಅದನ್ನು ಯಾವುದೇ ಕಾರಣಕ್ಕೂ ಬಳಸುವುದಕ್ಕೆ ಹೋಗಬೇಡಿ. ಹಾಗೇನಾದ್ರೂ ಮಾಡಿದ್ರೆ ನಂತರ ಬ್ಯಾಂಕ್ ಗೆ ಬಾರಿ ದೊಡ್ಡ ಪ್ರಮಾಣದಲ್ಲಿ ದಂಡ (penalty) ಪಾವತಿಸಬೇಕಾಗುತ್ತದೆ.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ಯೋ ಇಲ್ವೋ ಕುಳಿತಲ್ಲಿಯೇ ತಿಳಿದುಕೊಳ್ಳಿ
ಬೇರೆಯವರ ಖಾತೆಯಿಂದ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದ್ದು ನಿಮ್ಮ ಗಮನಕ್ಕೆ ಬಂದರೆ ಮೊದಲು ಈ ಮಾಹಿತಿಯನ್ನು ಬ್ಯಾಂಕ್ ಸಿಬ್ಬಂದಿಗಳಿಗೆ ತಿಳಿಸಿ. ನೀವು ಯಾವ ಬ್ಯಾಂಕ್ ಖಾತೆಗೆ ಹಣ ಸ್ವೀಕರಿಸಿರುತ್ತೀರೋ ಅದೇ ಬ್ಯಾಂಕ್ ಗೆ ಕರೆ ಮಾಡಿ ಅಥವಾ ಭೇಟಿ ನೀಡಿ ನಿಮಗೆ ಯಾರ ಖಾತೆಯಿಂದ ಹಣ ಬಂದಿದೆ? ಯಾವಾಗ ಜಮಾ ಆಗಿದೆ ?ಎಷ್ಟು ಮೊತ್ತ? ಮೊದಲಾದ ವಿವರಗಳನ್ನು ನೀಡಬೇಕು.
ನೀವು ಈ ವಿವರಗಳನ್ನು ನೀಡುತ್ತಿದ್ದಂತೆ ಬ್ಯಾಂಕ್, ತಕ್ಷಣ ಸಂಬಂಧಪಟ್ಟ ಖಾತೆಯ ಮಾಲೀಕರನ್ನು ಸಂಪರ್ಕಿಸಿ, ಯಾರ ಖಾತೆಗೆ ಹಣ ವರ್ಗಾವಣೆ ಆಗಬೇಕು ಅಥವಾ ಯಾರ ಖಾತೆಯಿಂದ ತಪ್ಪಾಗಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆಯೋ ಅಂತವರಿಗೆ ನಿಮ್ಮ ಖಾತೆಯಿಂದ ಹಣವನ್ನು ತೆಗೆದು ಪುನಃ ವರ್ಗಾವಣೆ ಮಾಡಲಾಗುತ್ತದೆ.
ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 8000 ರೂಪಾಯಿ ಸ್ಕಾಲರ್ಶಿಪ್; ಕೂಡಲೇ ಅಪ್ಲೈ ಮಾಡಿ
ಈ ರೀತಿ ತಪ್ಪಾಗಿ ನಿಮ್ಮ ಖಾತೆಗೆ ಬಂದಿರುವ ಹಣವನ್ನು ಪುನಃ ಹಿಂತಿರುಗಿ ಕಳುಹಿಸುವ ಪ್ರಕ್ರಿಯೆ ಸ್ವಲ್ಪ ದೀರ್ಘವಾಗಿರುವುದರಿಂದ ನೀವು ಆ ಸಮಯದಲ್ಲಿ ಯಾವುದೇ ಕಾರಣಕ್ಕೂ ಖಾತೆಯಲ್ಲಿ ಇರುವ ಹಣವನ್ನು ಬಳಸಿಕೊಳ್ಳಬೇಡಿ.
ಒಂದು ವೇಳೆ ನೀವು ಹಣವನ್ನು ಬಳಸಿಕೊಂಡಿದ್ದರೆ ಆ ಹಣವನ್ನು ಬ್ಯಾಂಕಿಗೆ ನೀವೇ ಕಟ್ಟಿ ಕೊಡಬೇಕಾಗುತ್ತದೆ. ಹಾಗಾಗಿ ಬೇರೆಯವರ ಖಾತೆಯಿಂದ ತಪ್ಪಾಗಿ ನಿಮ್ಮ ಖಾತೆಗೆ ಹಣ ಬಂದಾಗ ಅದನ್ನ ಬ್ಯಾಂಕ್ ಗಮನಕ್ಕೆ ತರಬೇಕೇ ಹೊರತು ಬಳಸಿಕೊಳ್ಳುವಂತಿಲ್ಲ.
Do you know what to do if someone money Comes into your bank account by mistake