ಎಲ್ಐಸಿಯಿಂದ ಹಿರಿಯ ನಾಗರೀಕರಿಗೆ ಸಿಗುತ್ತೆ 12,000 ರೂಪಾಯಿ ಪಿಂಚಣಿ! ಅರ್ಜಿ ಸಲ್ಲಿಸಿ
LIC Pension : ಎಲ್ಐಸಿಯಿಂದ ಹಿರಿಯ ನಾಗರೀಕರಿಗೆ ಗುಡ್ ನ್ಯೂಸ್; ಸಿಂಗಲ್ ಪ್ರಿಮಿಯಂ ಪಾವತಿಸಿದ್ರೆ ಸಿಗುತ್ತೆ 12,000 ರೂ. ಪಿಂಚಣಿ
LIC Pension : ಪ್ರತಿಯೊಬ್ಬ ವ್ಯಕ್ತಿಯು ದುಡಿಯುವುದು (working) ತನ್ನ ಬದುಕು ಕಟ್ಟಿಕೊಳ್ಳಲು. ಹೀಗಾಗಿ ದುಡಿದ ಹಣದಲ್ಲಿ ನಿವೃತ್ತಿಯ (retirement) ನಂತರವೂ ಯಾರದೆ ಹಂಗಲ್ಲಿ ಬದುಕದೆ ಸ್ವಾಭಿಮಾನದ ಜೀವನ (independence life) ನಡೆಸಲು ಪಿಂಚಣಿ (pension) ಅವಶ್ಯ.
ಹಾಗಾಗಿ ಹಲವರು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿರುತ್ತಾರೆ. ಇನ್ನು ಕೆಲವರು ಎಲ್ಐಸಿಯಲ್ಲಿ ಹೂಡಿಕೆ ಮಾಡುತ್ತಾರೆ. ಇದೀಗ ಎಲ್ಐಸಿ ಹಿರಿಯ ನಾಗರೀಕರಿಗಾಗಿಯೇ ಒಂದು ವಿಶೇಷ ಪಾಲಿಸಿಯನ್ನು ಪರಿಚಯಿಸಿದೆ. ಇದರಲ್ಲಿ ಹೂಡಿಕೆ ಮಾಡಿದರೆ ಅವರು ಪ್ರತಿ ತಿಂಗಳು 12000 ರೂ. ಪಿಂಚಣಿ ಪಡೆಯಬಹುದಾಗಿದೆ.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ಯೋ ಇಲ್ವೋ ಕುಳಿತಲ್ಲಿಯೇ ತಿಳಿದುಕೊಳ್ಳಿ
ಭಾರತೀಯ ಜೀವ ವಿಮಾ ನಿಗಮವು (Life Insurance Corporation) ಜನರ ರಕ್ಷಣೆಗಾಗಿ ಹಲವು ಪಾಲಿಸಿಯನ್ನು ಪರಿಚಯಿಸಿದೆ. ಆರೋಗ್ಯಕ್ಕಾಗಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೀಗೆ ಹಲವು ರೀತಿಯ ವಿಮೆ (insurance) ಗಳನ್ನು ಪರಿಚಯಿಸಿದೆ. ಇದರ ಜೊತೆಗೆ ಅನೇಕ ಸಣ್ಣ ಉಳಿತಾಯ ಯೋಜನೆ (small savings scheme) ಯನ್ನು ಜಾರಿ ಮಾಡಿದೆ.
ನೀವು ಅತಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಅತಿ ಹೆಚ್ಚು ಲಾಭ ಗಳಿಸುವ ಅನೇಕ ಪಾಲಿಸಿಗಳು ಎಲ್ಐಸಿಯಲ್ಲಿ ಇವೆ. ಎಲ್ಐಸಿ (LIC) ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಇಲ್ಲಿ ನೀವು ಹೂಡಿಕೆ ಮಾಡಿರುವ ಹಣ ಭದ್ರವಾಗಿರುತ್ತದೆ. ಯಾವುದೇ ರೀತಿಯ ಮೋಸ ಹೋಗುವ ಸಾಧ್ಯತೆ ಇರುವುದಿಲ್ಲ. ಜನರು ತಮ್ಮ ಭವಿಷ್ಯದ ಭದ್ರತೆಗಾಗಿ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಇಷ್ಟ ಪಡುತ್ತಾರೆ.
ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 8000 ರೂಪಾಯಿ ಸ್ಕಾಲರ್ಶಿಪ್; ಕೂಡಲೇ ಅಪ್ಲೈ ಮಾಡಿ
ಎಲ್ಐಸಿ ಸರಳ್ ಪೆನ್ಶನ್ ಸ್ಕೀಂ (LIC saral pension scheme)
ಭಾರತೀಯ ಜೀವ ವಿಮಾ ನಿಗಮವು ಹಿರಿಯ ನಾಗರೀಕರಿಗಾಗಿ ಸರಳ್ ಪೆನ್ಶನ್ ಸ್ಕೀಂ ಪರಿಚಯಿಸಿದೆ. 60 ವರ್ಷ ಮೇಲ್ಪಟ್ಟು ಪಿಂಚಣಿ ಪಡೆಯಲು ಇಚ್ಚಿಸುವವರಿಗೆ ಇದು ಉತ್ತಮ ಪಾಲಿಸಿಯಾಗಿದೆ. ಈ ಯೋಜನೆ ಅಡಿಯಲ್ಲಿ ಸಿಂಗಲ್ ಪ್ರಿಮಿಯಂ (single premium) ಪಾವತಿಸಿ ಪ್ರತಿ ತಿಂಗಳು ಪಿಂಚಣಿ ಪಡೆಯಬಹುದಾಗಿದೆ. ನೀವು ಎಷ್ಟು ಮೊತ್ತವನ್ನು ಹೂಡಿಕೆ (investment) ಮಾಡುತ್ತೀರಿ ಎನ್ನುವದರ ಆಧಾರದ ಮೇಲೆ ನಿಮ್ಮ ಪಿಂಚಣಿ ಮೊತ್ತ ನಿರ್ಧಾರವಾಗುತ್ತದೆ.
ಸಿಂಗಲ್ ಪ್ರಿಮಿಯಂ ಪಾವತಿಸಿ; ಪ್ರತಿ ತಿಂಗಳು ಪಡೆಯಿರಿ ಪಿಂಚಣಿ: (get monthly pension)
ಯಾವುದೇ ಯೋಜನೆ ಆಗಲಿ ಅದರ ಲಾಭ ನಷ್ಟಗಳನ್ನು ಅರಿತು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಆ ಯೋಜನೆಯ ಸಂಪೂರ್ಣ ವಿವರ ನಿಮಗೆ ತಿಳಿದಿರುವುದು ಅವಶ್ಯಕವಾಗಿದೆ. ಎಲ್ಐಸಿ ಸರಳ್ ಪೆನ್ಶನ್ ಸ್ಕೀಂ ಅಡಿಯಲ್ಲಿ 40 ವರ್ಷದಿಂದ 80 ವರ್ಷದ ವರೆಗಿನವರು ಪಾಲಿಸಿ ಮಾಡಿಸಬಹುದಾಗಿದೆ. ಈ ಪಾಲಿಸಿಯಲ್ಲಿ ಒಂದು ಬಾರಿ ಮಾತ್ರ ಪ್ರಿಮಿಯಂ ಠೇವಣಿ ಮಾಡಬೇಕಾಗುತ್ತದೆ. ಒಂದು ವೇಳೆ ಅರ್ಜಿ ಸಲ್ಲಿಸಿದ ವ್ಯಕ್ತಿ ಮರಣ ಹೊಂದಿದಲ್ಲಿ ಆತ ಯಾರನ್ನು ನಾಮಿನಿ ಮಾಡಿರುತ್ತಾನೋ ಆತನಿಗೆ ಹಣ ಸಿಗಲಿದೆ.
ಆಸ್ತಿ, ಜಮೀನು ದಾಖಲೆಗಳಿಗೂ ಆಧಾರ್ ಲಿಂಕ್ ಕಡ್ಡಾಯ; ಇದ್ರಿಂದ ಏನು ಲಾಭ ಗೊತ್ತಾ?
ಒಮ್ಮೆ ಹೂಡಿಕೆ ಮಾಡಿದ್ರೆ ಸಿಗುತ್ತೆ 12,000 ರೂ. ಪಿಂಚಣಿ:
ಎಲ್ಐಸಿ ಸರಳ್ ಪೆನ್ಶನ್ ಸ್ಕೀಂ ಯೋಜನೆಯ ಪಾಲಿಸಿದಾರರು ಆರು ತಿಂಗಳ ನಂತರ ಯಾವಾಗ ಬೇಕಾದರೂ ಪಾಲಿಸಿಯನ್ನು ಸರಂಡರ್ (policy surrender) ಮಾಡಬಹುದು. ಪಾಲಿಸಿ ಮಾಡಿದ ನಂತರ ಜೀವನ ಪರ್ಯಂತ ಪಿಂಚಣಿ ಪಡೆಯಬಹುದಾಗಿದೆ.
ಎಲ್ಐಸಿ ಪಿಂಚಣಿ ಯೋಜನೆ ಅಡಿಯಲ್ಲಿ ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ, ಮಾಸಿಕ ಪ್ರಿಮಿಯಂ ಆಯ್ಕೆ ಮಾಡಿಕೊಳ್ಳಬಹುದು. 42 ವರ್ಷದ ಒಬ್ಬ ವ್ಯಕ್ತಿಯು 30 ಲಕ್ಷ ರೂ. ಪಾಲಿಸಿ ಮಾಡಿಸಿದ್ದಲ್ಲಿ ಆತನಿಗೆ ನಿವೃತ್ತಿಯ ನಂತರ 12000 ರೂ. ಪಿಂಚಣಿ ದೊರೆಯುತ್ತದೆ. ಈ ಯೋಜನೆಯಲ್ಲಿ ಕಡಿಮೆ ಎಂದರೂ 1000 ರೂ. ಹೂಡಿಕೆ ಮಾಡಬೇಕಾಗುತ್ತದೆ.
ಆಧಾರ್ ಕಾರ್ಡ್ ನಿಯಮದಲ್ಲಿ ಬದಲಾವಣೆ! ಇನ್ಮುಂದೆ 6 ತಿಂಗಳು ಕಾಯಲೇಬೇಕು
12,000 rupees pension for senior citizens from LIC