ಆಸ್ತಿ ಅಡವಿಟ್ಟು ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರೋ ಎಲ್ಲರಿಗೂ ರಾತ್ರೋರಾತ್ರಿ ಹೊಸ ರೂಲ್ಸ್

ಕೆಲವು ಸಂದರ್ಭಗಳಲ್ಲಿ ಸಾಲ (Loan) ತೆಗೆದುಕೊಳ್ಳುತ್ತಾರೆ. ಅದು ಸಣ್ಣ ಮೊತ್ತದ ಸಾಲವಾಗಿರಬಹುದು ಅಥವಾ ದೊಡ್ಡ ಮೊತ್ತದ ಸಾಲವಾಗಿರಬಹುದು, ವೈಯಕ್ತಿಕ ಸಾಲವಾಗಿರಬಹುದು (personal loan) ಅಥವಾ ಗ್ರಹ ಸಾಲವೇ (home loan) ಆಗಿರಬಹುದು.

ಗ್ರಾಹಕರು ಆಯಾ ಬ್ಯಾಂಕ್ಗಳಲ್ಲಿ (Bank) ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವು ಸಂದರ್ಭಗಳಲ್ಲಿ ಸಾಲ (Loan) ತೆಗೆದುಕೊಳ್ಳುತ್ತಾರೆ. ಅದು ಸಣ್ಣ ಮೊತ್ತದ ಸಾಲವಾಗಿರಬಹುದು ಅಥವಾ ದೊಡ್ಡ ಮೊತ್ತದ ಸಾಲವಾಗಿರಬಹುದು, ವೈಯಕ್ತಿಕ ಸಾಲವಾಗಿರಬಹುದು (personal loan) ಅಥವಾ ಗ್ರಹ ಸಾಲವೇ (home loan) ಆಗಿರಬಹುದು.

ಬ್ಯಾಂಕಿನಿಂದ ಸಾಲ ತೆಗೆದುಕೊಂಡ ಮೇಲೆ ಅದನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕು. ಇನ್ನು ಹೀಗೆ ಮರುಪಾವತಿ ಮಾಡುವುದು ಗ್ರಾಹಕರ ಜವಾಬ್ದಾರಿಯಾಗಿದ್ದರೆ ಈ ಸಂದರ್ಭದಲ್ಲಿ ಬ್ಯಾಂಕುಗಳು ಕೂಡ ಕೆಲವು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಇಲ್ಲದೆ ಹೋದಲ್ಲಿ ಬ್ಯಾಂಕುಗಳು ಸಹ ದಂಡ ಪಾವತಿಸಬೇಕು.

ಕೈಗೆಟಕುವ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ದೇಶದ ಅತ್ಯುತ್ತಮ ಸಿಎನ್‌ಜಿ ಕಾರುಗಳು, ಈಗಲೇ ಹೊಸ ಕಾರ್ ಖರೀದಿಸಿ

ಆಸ್ತಿ ಅಡವಿಟ್ಟು ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರೋ ಎಲ್ಲರಿಗೂ ರಾತ್ರೋರಾತ್ರಿ ಹೊಸ ರೂಲ್ಸ್ - Kannada News

ಸಾಲ ತೆಗೆದುಕೊಳ್ಳುವಾಗ ಗ್ರಾಹಕರು ಗ್ಯಾರಂಟಿ ಕೊಡಬೇಕು!

ಇದು ಎಲ್ಲರಿಗೂ ಗೊತ್ತಿರುವ ವಿಚಾರ, ಯಾವುದೇ ಸಾಲವನ್ನು ಬ್ಯಾಂಕುಗಳಲ್ಲಿ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಪಡೆದುಕೊಳ್ಳುವುದಿದ್ದರೆ ಅದಕ್ಕೆ ಗ್ಯಾರಂಟಿಯಾಗಿ ಸ್ಥಿರಾಸ್ತಿ (immovable property) ಅಥವಾ ಚರಾಸ್ತಿಗಳ ಪತ್ರ ವನ್ನು ಬ್ಯಾಂಕ್ ನಲ್ಲಿ ಅಡಮಾನ (property documents) ಇಡಬೇಕು. ಹೀಗೆ ಎಷ್ಟು ಮೊತ್ತದ ಸಾಲ ತೆಗೆದುಕೊಳ್ಳುತ್ತಾರೋ ಅದಕ್ಕೆ ಸರಿ ಹೊಂದುವಂತೆ ದಾಖಲಾತಿಗಳನ್ನ ನೀಡಬೇಕಾಗುತ್ತದೆ.

ಸಾಲ ಮರುಪಾವತಿ ನಂತರ ಮೂಲ ದಾಖಲೆಗಳನ್ನು ಹಿಂತಿರುಗಿಸಬೇಕು;

ಸರಿಯಾದ ಸಮಯಕ್ಕೆ ಗ್ರಾಹಕರು ಸಾಲವನ್ನು ಮರುಪಾವತಿ ಮಾಡಿದರೆ, ಅವರು ಅಡವಿಟ್ಟ ಆಸ್ತಿ ಪತ್ರವನ್ನು ಹಿಂತಿರುಗಿಸಬೇಕು. ಆದರೆ ಅದೆಷ್ಟೋ ಸಂದರ್ಭದಲ್ಲಿ ಬ್ಯಾಂಕುಗಳು (Banks) ಗ್ರಾಹಕರು ಸಾಲ ತೀರಿಸಿದ (Loan Re Payment) ನಂತರವು ಅವರಿಗೆ ಅವರ ಅಡಮಾನ ಪತ್ರವನ್ನು ಹಿಂತಿರುಗಿಸದೆ ಇರುವ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಗ್ರಾಹಕರು ದೂರು ಸಲ್ಲಿಸಿದ್ದಾರೆ.

ಈ ಒಂದು ಯೋಜನೆಯ ಮೂಲಕ ಬರೀ 210 ರೂ ಹೂಡಿಕೆ ಮಾಡಿ ತಿಂಗಳಿಗೆ 60 ಸಾವಿರ ಗಳಿಸಿ!

30 ದಿನಗಳ ಒಳಗೆ ಹಿಂತಿರುಗಿಸಬೇಕು ಅಡಮಾನ ಪತ್ರ;

ಡಿಸೆಂಬರ್ 1 2023 ರಿಂದ ಆರ್ಬಿಐ ಈ ಹೊಸ ನಿಯಮ ಜಾರಿಗೆ ಬರಲಿದೆ. ಇದರ ಪ್ರಕಾರ ಗ್ರಾಹಕರು ಸಾಲ ತೀರಿಸಿದ 30 ದಿನಗಳ ಒಳಗೆ ಅವರು ಅಡವಿಟ್ಟ ದಾಖಲಾತಿ ಪತ್ರವನ್ನು ಅವರಿಗೆ ಹಿಂತಿರುಗಿಸಬೇಕು, ಒಂದು ವೇಳೆ ಬ್ಯಾಂಕ್ ಹಿಂತಿರುಗಿಸದೆ ಇದ್ದಲ್ಲಿ ಭಾರಿ ಮೊತ್ತದ ದಂಡ ತೆರಬೇಕಾಗುತ್ತದೆ.

property Documentsದಿನಕ್ಕೆ 5000 ರೂ.ಗಳ ದಂಡ!

ಬ್ಯಾಂಕ್ ಗಳು ಗ್ರಾಹಕರಿಂದ ಸಾಲ ಪತ್ರವನ್ನು ಅಡವಿಟ್ಟುಕೊಂಡಿದ್ದರೆ ಸಾಲ ತೀರಿದ 30 ದಿನಗಳ ಒಳಗೆ ಅಂದರೆ ಒಂದು ತಿಂಗಳಲ್ಲಿ ಅಡಮಾನ ಪತ್ರವನ್ನು ತಿರುಗಿಸಿ ಕೊಡಬೇಕು. ಒಂದು ವೇಳೆ ಒಂದು ತಿಂಗಳಾದರೂ ಅಡಮಾನಪತ್ರ ಹಿಂತಿರುಗಿಸದೆ ಇದ್ದಲ್ಲಿ ಇದಕ್ಕಾಗಿ ಗ್ರಾಹಕರು ಬ್ಯಾಂಕ್ ಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾದರೆ ಅಡಮಾನ ಪತ್ರವನ್ನು ಕೊಡುವವರೆಗೂ ಪ್ರತಿದಿನ ಸಂಬಂಧಪಟ್ಟ ಗ್ರಾಹಕನಿಗೆ 5000 ದಂಡ ನೀಡಬೇಕು ಎಂದು ಆರ್‌ಬಿಐ ತಿಳಿಸಿದೆ.

ಗ್ರಾಹಕ ಅಡಬಿಟ್ಟ ಆಸ್ತಿ ಪತ್ರ ಕಳೆದು ಹೋದರೆ ಅಥವಾ ಅದಕ್ಕೆ ಹಾನಿಯಾಗಿದ್ದರೆ ಹೊಸದಾಗಿ ರಿಜಿಸ್ಟರ್ (register) ಮಾಡಿಕೊಡುವ ವರೆಗೂ ಮತ್ತೆ ಒಂದು ತಿಂಗಳ ಕಾಲಾವಕಾಶ ಕೊಡಲಾಗುತ್ತದೆ. ಇನ್ನು ಹೊಸದಾಗಿ ಕಾಗದಪತ್ರ ಮಾಡಿಸುವ ಸಂಪೂರ್ಣ ವೆಚ್ಚವನ್ನು ಬ್ಯಾಂಕ್ ನವರೇ ಭರಿಸಬೇಕು.

ಕೊಟ್ಟು 60 ದಿನಗಳ ಒಳಗೆ ದಾಖಲಾತಿ ಪತ್ರವು ಗ್ರಾಹಕರ ಕೈ ಸೇರಬೇಕು. ಇಷ್ಟಾಗಿಯೂ ಗ್ರಾಹಕರಿಗೆ ಅವರ ಆಸ್ತಿ ಪತ್ರವನ್ನು ಬ್ಯಾಂಕುಗಳು ಹಿಂತಿರುಗಿಸುವುದೇ ಇದ್ದಲ್ಲಿ ಗ್ರಾಹಕರು ಅದನ್ನ ಆರ್ ಬಿ ಐ ಗಮನಕ್ಕೆ ತಂದರೆ ಆರ್‌ಬಿಐ ಕಠಿಣ ಕ್ರಮ ಕೈಗೊಳ್ಳಲಿದೆ.

ಸ್ವಂತ ಮನೆ ಕಟ್ಟಿಕೊಳ್ಳೋಕೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್; ಮತ್ತೊಂದು ಯೋಜನೆ ಆರಂಭ

ಯಾರಿಗೆ ಅನ್ವಯವಾಗುತ್ತೆ ಈ ಹೊಸ ನಿಯಮ?

ಬ್ಯಾಂಕ್ ಗಳು, ಸಣ್ಣ ಪುಟ್ಟ ಹಣಕಾಸು ಸಂಸ್ಥೆಗಳು (finance company), ಎಲ್ಲಾ ಪ್ರಾದೇಶಿಕರು ಬ್ಯಾಂಕ್ ಗಳು, ಪ್ರಾಥಮಿಕ ಸಹಕಾರಿ ಬ್ಯಾಂಕ್ ಗಳು, ರಾಜ್ಯ ಸಹಕಾರಿ ಬ್ಯಾಂಕ್ ಗಳು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಳು, ಎನ್ ಬಿ ಎಫ್ ಸಿ (NBFC) ಗಳು ಹಾಗೂ ಆಸ್ತಿ ಪುನರ್ ನಿರ್ಮಾಣ ಸಂಸ್ಥೆಗಳು ಒಳಗೊಂಡಂತೆ ಎಲ್ಲಾ ವಾಣಿಜ್ಯ ಬ್ಯಾಂಕ್ ಗಳಿಗೂ ಅನ್ವಯಿಸುತ್ತದೆ.

New rules for all those who have mortgaged property and taken loan in any bank

Follow us On

FaceBook Google News

New rules for all those who have mortgaged property and taken loan in any bank