ಕೃಷಿ ಭೂಮಿ ಅಥವಾ ವ್ಯವಸಾಯ ಯೋಗ್ಯ ಭೂಮಿಯಲ್ಲಿ ಮನೆ ಕಟ್ಟೋರಿಗೆ ಇನ್ಮುಂದೆ ಹೊಸ ರೂಲ್ಸ್!
ಇದೀಗ ಸರ್ಕಾರವು ಕೃಷಿ ಭೂಮಿಯಲ್ಲಿ (Agriculture Land) ಫಾರ್ಮ್ ಹೌಸ್ (Farm House) ಮಾಡಿಕೊಳ್ಳುವವರಿಗೆ ಒಂದು ಹೊಸ ಆದೇಶವನ್ನು ಜಾರಿಗೆ ತಂದಿದೆ. ಅದು ಏನು ನೋಡೋಣ
ನಮ್ಮ ದೇಶದ ಪ್ರಮುಖವಾದ ವೃತ್ತಿ ಕೃಷಿ (Agriculture). ನಮ್ಮ ದೇಶದ ಮೂಲ ಆದಾಯ ಬರುವುದು ಕೃಷಿ ಇಂದ, ದೇಶದ ಬೆನ್ನೆಲುಬು ರೈತ. ಹಾಗಾಗಿ ನಮ್ಮ ದೇಶದಲ್ಲಿ ಕೃಷಿಗೆ ಸಂಬಂಧಿಸಿದ ಹಾಗೆ ಹಲವು ವಿಚಾರಗಳನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತದೆ, ಕೃಷಿ ಭೂಮಿಗಳು ಬೆಳವಣಿಗೆ ಆಗುವುದಕ್ಕೆ ಸಹಾಯ ಮಾಡುತ್ತದೆ.
ಇದೀಗ ಸರ್ಕಾರವು ಕೃಷಿ ಭೂಮಿಯಲ್ಲಿ (Agriculture Land) ಫಾರ್ಮ್ ಹೌಸ್ (Farm House) ಮಾಡಿಕೊಳ್ಳುವವರಿಗೆ ಒಂದು ಹೊಸ ಆದೇಶವನ್ನು ಜಾರಿಗೆ ತಂದಿದೆ. ಅದು ಏನು ಎಂದು ನೋಡುವುದಾದರೆ..
ಹಲವು ಜನರು ಕೃಷಿ ಭೂಮಿ ಹೊಂದಿದ್ದು, ವ್ಯವಸಾಯ ಮಾಡಲು ಬಯಸುತ್ತಾರೆ. ಆದರೆ ಅವರು ಒಂದು ಕಡೆ ಇದ್ದು, ಕೃಷಿ ಭೂಮಿ ಇನ್ನೊಂದು ಕಡೆ ಇದ್ದರೆ ಎಲ್ಲವನ್ನು ನೋಡಿಕೊಳ್ಳುವುದಕ್ಕೂ ಕಷ್ಟ ಆಗುತ್ತದೆ.
ದೇಶದ ಯಾವುದೇ ಊರಿನಲ್ಲಿ ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ಸೂಚನೆ! ಬ್ಯಾಂಕ್ ಅಪ್ಡೇಟ್
ಆ ಕಾರಣಕ್ಕೆ ತಮ್ಮ ಕೃಷಿ ಭೂಮಿ ಇರುವ ಜಾಗದಲ್ಲೇ ಒಂದು ಫಾರ್ಮ್ ಹೌಸ್ ಮಾಡಿಕೊಳ್ಳಬೇಕು, ಆಗ ಕೃಷಿ ಕೆಲಸಗಳನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದುಕೊಳ್ಳುತ್ತಾರೆ. ಅಂಥ ಪ್ಲಾನ್ ಹೊಂದಿರುವವರಿಗೆ ಸರ್ಕಾರ ಈಗ ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದೆ, ಅದರ ಬಗ್ಗೆ ನೀವು ತಿಳಿದುಕೊಳ್ಳುವುದು ಉತ್ತಮ..
ಈಗೆಲ್ಲಾ ಏನಾಗುತ್ತಿದೆ ಎಂದು ಗಮನಿಸಿದರೆ, ಕೃಷಿಗಾಗಿ ಇರುವ ಜಾಗವನ್ನು ಬೇರೆ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕೃಷಿ ನಡೆಯಬೇಕಾದ ಜಾಗದಲ್ಲಿ ದೊಡ್ಡ ಬಿಲ್ಡಿಂಗ್ ಗಳ ನಿರ್ಮಾಣ ಮಾಡುವುದು, ಬೇರೆ ಕೆಲಸಗಳಿಗೆ ಬಳಸಿಕೊಳ್ಳುವುದು ಇದೆಲ್ಲವೂ ನಡೆಯುತ್ತಿರುವ ಕಾರಣ ಸರ್ಕಾರ ಈ ಒಂದು ವಿಷಯದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ,
ಕೃಷಿ ಭೂಮಿ ಹೊಂದಿರುವ ಎಲ್ಲರೂ ಕೂಡ ಸರ್ಕಾರದ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ, ನೀವೇ ತೊಂದರೆಗೆ ಸಿಲುಕಿಕೊಳ್ಳಬಹುದು..
ಚಿನ್ನದ ಬೆಲೆ ಕಡಿಮೆ ಏನೋ ಸರಿ, ಆದ್ರೆ ವಿದೇಶ ಅಥವಾ ದುಬೈನಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಗೊತ್ತಾ?
ಇದೀಗ ನಡೆದಿರುವುದು ಏನು ಎಂದರೆ, ಗೃಹ ನಿರ್ಮಾಣ ಸಹಕಾರಿ ಸಂಘ ಮಂಡ್ಯ ಅಭಿವೃದ್ಧಿ ಯೋಜನಾಧಿಕಾರದ ವಿರೋಧವಾಗಿ ಹೈಕೋರ್ಟ್ ನಲ್ಲಿ ಒಂದು ಕೇಸ್ ದಾಖಲಾಗಿದೆ. ಅಷ್ಟಕ್ಕೂ ಏನಾಗಿದೆ ಎಂದರೆ, ಲೇಔಟ್ ಕಟ್ಟಿಸುವುದಕ್ಕೆ ಅನುಮತಿ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಹೈಕೋರ್ಟ್ ನಲ್ಲಿ ಗೃಹ ನಿರ್ಮಾಣ ಸಹಕಾರಿ ಸಂಘ ಮಂಡ್ಯ ಅಭಿವೃದ್ಧಿ ಯೋಜನೆಯ ವಿರುದ್ಧವಾಗಿ ಕೋರ್ಟ್ ನಲ್ಲಿ ಕೇಸ್ ಹಾಕಿದ್ದು, ಹೈಕೋರ್ಟ್ ನಲ್ಲಿ ಈ ಕೇಸ್ ಗೆ ಮಹತ್ವದ ತೀರ್ಪನ್ನು ನೀಡಲಾಗಿದೆ ಎಂದು ಮಾಹಿತಿಗಳ ಪ್ರಕಾರ ತಿಳಿದುಬಂದಿದೆ.
ಒಬ್ಬ ವ್ಯಕ್ತಿ ವ್ಯವಸಾಯದ ಭೂಮಿಯನ್ನು ಬೇರೆ ಕಾರಣಕ್ಕೆ ಬಳಸುವ ಹಾಗಿಲ್ಲ, ಹಾಗೇನಾದರು ಬೇರೆ ಕಟ್ಟಡ ಕಟ್ಟಲೇಬೇಕಾದ ತುರ್ತು ಪರಿಸ್ಥಿತಿ ಎದುರಾದರೆ, ಅಂಥ ಸಮಯದಲ್ಲಿ ಕೃಷಿ ಭೂಮಿಯನ್ನಿ ಕೃಷಿಯೇತರ ಚಟುವಟಿಕೆಯ ಭೂಮಿ ಎಂದು ಪರಿಗಣಿಸಿ, ತಾವು ಕೆಲಸ ಶುರು ಮಾಡುವುದಕ್ಕೆ ಸರ್ಕಾರದ ಅನುಮತಿ ಅಂದರೆ, ಮೊದಲಿಗೆ 1965ನ 95 ಸೆಕ್ಷನ್ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು.
ಜೊತೆಗೆ ಸೆಕ್ಷನ್ 14ರ KTCP ನಿಯಮ ಪಾಲಿಸಬೇಕು. ಇದರ ಜೊತೆಗೆ ಭೂ ಕಬಳಿಕೆ ಕುರಿತಾಗಿ ಭೂ ಪ್ರಾಧಿಕಾರದ ಒಪ್ಪಿಗೆಯನ್ನು ಕೂಡ ಪಡೆಯಬೇಕಾಗುತ್ತದೆ. ಈ ಎಲ್ಲಾ ನಿಯಮಗಳನ್ನು ನೀವು ಪಾಲಿಸಬೇಕು.
ಬೇರೆ ಬೇರೆ ಕಲರ್ ಇರೋ ನಂದಿನಿ ಹಾಲಿನ ಪ್ಯಾಕ್ ಏನು ಸೂಚಿಸುತ್ತೆ ಗೊತ್ತಾ? ಎಷ್ಟೋ ಜನಕ್ಕೆ ಗೊತ್ತೇ ಇಲ್ಲ
New rules for building a houses on agricultural land