ಇನ್ಮುಂದೆ ಮನೆ ಖರೀದಿ ಮಾಡುವವರಿಗೆ ಹೊಸ ರೂಲ್ಸ್; ಭಾರೀ ಬದಲಾವಣೆ
ಭೂ ನೋಂದಣಿ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳನ್ನ ತರಲಾಗಿದೆ. ಈ ಬದಲಾವಣೆಗಳು ಜನವರಿ 1, 2025 ರಿಂದ ಜಾರಿಗೆ ಬಂದಿದ್ದು, ಪ್ರತಿಯೊಬ್ಬರು ಸರ್ಕಾರದ ಈ ನಿಯಮವನ್ನು ಪಾಲಿಸಲೇಬೇಕು.
- ಆಸ್ತಿ ನೋಂದಣಿಗೂ ಮೊದಲು ಈ ವಿಷಯ ತಿಳಿದಿರಲಿ
- ಆಸ್ತಿ ನೋಂದಣಿ ಪ್ರಕ್ರಿಯೆ ಈಗ ಮತ್ತಷ್ಟು ಸುಲಭ
- ಪರಿಷ್ಕೃತ ನೋಂದಣಿ ಶುಲ್ಕ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ
ನೀವು ಹೊಸ ಮನೆ ಖರೀದಿ ಮಾಡಬೇಕು ಅಥವಾ ಹೊಸ ಮನೆಯನ್ನು ನಿರ್ಮಾಣ ಮಾಡಬೇಕು ಅಂದುಕೊಂಡಿದ್ದರೆ ಸರ್ಕಾರದ ಈ ಕೆಲವು ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು.
ಮೊದಲನೆಯದಾಗಿ ಭೂ ನೋಂದಣಿ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳನ್ನ ತರಲಾಗಿದೆ. ಈ ಬದಲಾವಣೆಗಳು ಜನವರಿ 1, 2025 ರಿಂದ ಜಾರಿಗೆ ಬಂದಿದ್ದು, ಪ್ರತಿಯೊಬ್ಬರು ಸರ್ಕಾರದ ಈ ನಿಯಮವನ್ನು ಪಾಲಿಸಲೇಬೇಕು.
ಬ್ಯಾಂಕ್ ಸಾಲ ಮಾಡಿದ ವ್ಯಕ್ತಿ ಸತ್ತರೆ, ಮನೆಯವರು ಸಾಲ ತೀರಿಸಬೇಕಾ?
ನೋಂದಣಿ ಪ್ರಕ್ರಿಯೆಯಲ್ಲಿ ಬದಲಾವಣೆ!
ಡಿಜಿಟಲ್ ನೋಂದಣಿ: ಸರ್ಕಾರದಿಂದ ಬಂದಿರುವ ಸುತ್ತೋಲೆಯ ಪ್ರಕಾರ ಭೂ ನೋಂದಣಿ ಪ್ರಕ್ರಿಯೆ ಈಗ ಮತ್ತಷ್ಟು ಸುಲಭವಾಗಿದೆ. ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ನೋಂದಣಿಯನ್ನು ಮಾಡಿಕೊಳ್ಳಬಹುದು.
ಯಾವುದೇ ಕಡತಗಳನ್ನು ಹಿಡಿದುಕೊಂಡು ನೋಂದಾವಣೆ ಕಚೇರಿಗೆ ಅಲೆದಾಡಬೇಕಿಲ್ಲ. ನೋಂದಣಿ ಮಾಡಿಕೊಂಡರೆ ಡಿಜಿಟಲ್ ಸಹಿ ಹಾಗೂ ಪ್ರಮಾಣ ಪತ್ರ ತಕ್ಷಣವೇ ಸಿಗುತ್ತದೆ, ಬಹಳ ವೇಗವಾಗಿ ಮುಗಿಯುವ ಪ್ರಕ್ರಿಯೆ ಇದಾಗಿದೆ.
ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ; ಸಮಯದಲ್ಲಿ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಭೂ ರಿಜಿಸ್ಟ್ರೇಷನ್ ಸಂಖ್ಯೆಯೊಂದಿಗೆ ಲಿಂಕ್ ಆಗಿರಬೇಕು. ಇದು ಸಂಪೂರ್ಣವಾಗಿ ಬಯೋಮೆಟ್ರಿಕ್ ಪರಿಶೀಲನೆಯಾಗಿರುತ್ತದೆ. ಹೀಗಾಗಿ ಯಾವುದೇ ವಂಚನೆ ಆಗದಂತೆ ಎಚ್ಚರವಹಿಸಬಹುದು.
ಆಸ್ತಿಗೆ ಸಂಬಂಧ ಪಟ್ಟ ಎಲ್ಲಾ ದಾಖಲೆಗಳನ್ನ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಆಸ್ತಿಯನ್ನು ಬೇರೆ ಯಾರು ತಮ್ಮ ಆಸ್ತಿ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ, ಕಾನೂನು ಬದ್ಧವಾಗಿ ನಿಮ್ಮ ಹೆಸರಿನಲ್ಲಿ ಇರುವ ಆಸ್ತಿ ನಿಮ್ಮದೇ ಆಗಿರುತ್ತದೆ.
ಫೆಬ್ರವರಿ ತಿಂಗಳಲ್ಲಿ ಬ್ಯಾಂಕಿಗೆ ವಾರಕ್ಕೂ ಹೆಚ್ಚು ದಿನ ರಜೆ, ಇಲ್ಲಿದೆ ಸಂಪೂರ್ಣ ಮಾಹಿತಿ
ವಿಡಿಯೋ ರೆಕಾರ್ಡ್; ಹೊಸ ನಿಯಮದ ಪ್ರಕಾರ ನೋಂದಣಿ ಪ್ರಕ್ರಿಯೆಯ ಸಂಪೂರ್ಣ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಈ ರೀತಿ ಮಾಡುವುದರಿಂದ ಕಾನೂನಾತ್ಮಕ ವಿವಾದಗಳು ಸೃಷ್ಟಿಯಾದಾಗ ಸಾಕ್ಷಿಯ ರೂಪದಲ್ಲಿ ನೋಂದಣಿ ರೆಕಾರ್ಡ್ ವಿಡಿಯೋವನ್ನ ಸಬ್ಮಿಟ್ ಮಾಡಬಹುದು.
ಆನ್ಲೈನ್ ನಲ್ಲಿ ಪಾವತಿ ಮಾಡುವುದು; ಯಾವುದೇ ನೋಂದಣಿ ಶುಲ್ಕ ಅಥವಾ ತೆರಿಗೆಯನ್ನು ಕಚೇರಿಗೆ ಹೋಗದೆ ಸುಲಭವಾಗಿ ಆನ್ಲೈನ್ ನಲ್ಲಿಯೇ ಪಾವತಿ ಮಾಡಬಹುದಾಗಿದೆ. ಈ ರೀತಿ ಮಾಡುವುದರಿಂದ ಹಣಕಾಸಿನ ಮಹಿವಾಟಿನಲ್ಲಿ ಪಾರದರ್ಶಕತೆ ಇರುತ್ತದೆ ಎನ್ನುವುದು ಸರ್ಕಾರದ ಅಂಬೋಣ.
ಭೂ ನೋಂದಣಿಗೆ ಬೇಕಾಗಿರುವ ದಾಖಲೆಗಳು!
- ಕಾನೂನು ಬದ್ಧ ಮಾಲಿಕತ್ವವನ್ನು ಹೇಳುವಂತಹ ದಾಖಲೆ
- ಆಸ್ತಿ ಖರೀದಿ ಅಥವಾ ಮಾರಾಟದ ಅಗ್ರಿಮೆಂಟ್
- ತೆರಿಗೆ ರಿಸಿಪ್ಟ್
- ಖರೀದಿದಾರ ಮತ್ತು ಮಾರಾಟಗಾರ ಇಬ್ಬರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಮೊದಲಾದ ಗುರುತಿನ ಪುರಾವೆಗಳು.
ನೋಂದಣಿ ಶುಲ್ಕ ಎಷ್ಟು?
- 20 ಲಕ್ಷ ರೂಪಾಯಿಯವರೆಗಿನ ಆಸ್ತಿ ನೋಂದಣಿಗೆ ಸ್ಟ್ಯಾಂಪ್ ಡ್ಯೂಟಿ ಶುಲ್ಕ 2%
- 21 ಲಕ್ಷ ರೂಪಾಯಿಯಿಂದ 45 ಲಕ್ಷ ರೂಪಾಯಿಯವರೆಗಿನ ಆಸ್ತಿ ನೋಂದಾವಣೆ ಶುಲ್ಕ 3%
- 45 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಆಸ್ತಿ ನೋಂದಾವಣೆಗೆ ವಿಧಿಸಲಾಗುವ ಶುಲ್ಕ 5%
- ಇನ್ನು ನಗರ ಪ್ರದೇಶದಲ್ಲಿ 10% ಮತ್ತು ಗ್ರಾಮೀಣ ಪ್ರದೇಶದಲ್ಲಿ 2-3% ಹೆಚ್ಚಿಸಲಾಗಿದೆ.
New rules for home buyers from now on, major changes ahead