ಮನೆ ಬಾಡಿಗೆಗೆ ನೀಡುವ ಮನೆ ಮಾಲೀಕರಿಗೆ ಹೊಸ ನಿಯಮ! ಮಹತ್ವದ ಮಾಹಿತಿ
ಮನೆ ಮಾಲಿಕ ಬಾಡಿಗೆ ಕೊಡುವಾಗ ರೆಂಟ್ ಅಗ್ರಿಮೆಂಟ್ ಮಾಡುವುದು ಬಹಳ ಮುಖ್ಯ. ಸಾಕಷ್ಟು ಜನರಿಗೆ ಈ ಕಾನೂನು ಗೊತ್ತಿಲ್ಲದೆ ಇರಬಹುದು.
ಎಲ್ಲರಿಗೂ ತಮ್ಮದೇ ಆಗಿರುವ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಪೇಟೆಗಳಿಗೆ ನಾನಾ ಕಾರಣಕ್ಕೆ ಹೋಗಿ ಜೀವನ ನಡೆಸುವವರು ಅಲ್ಲಿ ವಾಸಿಸಲು ಒಂದು ಬಾಡಿಗೆ ಮನೆ (rented house) ಯನ್ನು ಹುಡುಕಿಕೊಳ್ಳುವುದು ಸಹಜ.
ಬಾಡಿಗೆ ಮನೆ ಹುಡುಕಿಕೊಳ್ಳುವುದು ಸಹಜ ಪ್ರಕ್ರಿಯೆ ಆಗಿದ್ದರು ಕೂಡ, ಇಲ್ಲಿ ಅಡಗಿರುವ ಸಾಕಷ್ಟು ವಿಚಾರಗಳ ಬಗ್ಗೆ ನೀವು ತಿಳಿದುಕೊಂಡಿರಬೇಕು. ಇಲ್ಲವಾದರೆ ಸಮಸ್ಯೆ ಅನುಭವಿಸಬೇಕಾಗುತ್ತದೆ.
ಒಬ್ಬ ಮನೆಯ ಓನರ್ (house owner) ಆಗಿರಲಿ ಅಥವಾ ಬಾಡಿಗೆದಾರನೇ (tenant) ಆಗಿರಲಿ ಅವರಿಬ್ಬರ ನಡುವೆ ಕೆಲವು ಒಪ್ಪಂದಗಳನ್ನು ಮಾಡಿಕೊಂಡು ಆ ಮನೆಯಲ್ಲಿ ವಾಸ ಮಾಡಬೇಕಾಗುತ್ತದೆ.
ಮನೆಯಲ್ಲಿಯೇ ಕುಳಿತು 50 ಸಾವಿರದಿಂದ 1 ಲಕ್ಷ ರೂಪಾಯಿ ಆದಾಯ ಗಳಿಸಿ; ಕೈತುಂಬಾ ಹಣ
ಬಾಡಿಗೆ ಕೊಡುವಾಗ ಅಥವಾ ತೆಗೆದುಕೊಳ್ಳುವಾಗ ಕೆಲವು ಪ್ರಮುಖ ನಿಯಮಗಳನ್ನು ತಿಳಿದುಕೊಂಡಿರುವುದು ಮುಖ್ಯ. ಒಂದು ವೇಳೆ ನೀವು ಈ ಕೆಲಸ ಮಾಡದೇ ಇದ್ರೆ ಬಾಡಿಗೆದಾರನಿಗೆ ಹಾಗೂ ಮನೆಯ ಮಾಲೀಕರಿಗೆ ಇಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ಆಗಬಹುದು.
ಅದರಲ್ಲೂ ಮನೆ ಮಾಲೀಕರು ಜಾಗರೂಕತೆಯಿಂದ ಇರದೆ ಇದ್ದರೆ ಬಾಡಿಗೆದಾರ ಆ ಮನೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಹುದು. ಇದಕ್ಕೆ ಕಾನೂನಿನ ಬೆಂಬಲವು ಇದೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ.
ಹಾಗಾದ್ರೆ ಈ ರೀತಿ ಆಗಬಾರದು ಅಂದ್ರೆ ಮನೆ ಮಾಲೀಕರು ಯಾವ ಕೆಲಸ ಮಾಡಬೇಕು, ತಮ್ಮನ್ನ ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ರೆಂಟ್ ಅಗ್ರಿಮೆಂಟ್! (Rent agreement)
ಬಾಡಿಗೆದಾರ ಹಾಗೂ ಮನೆ ಮಾಲೀಕರ ನಡುವೆ ಇರಲೇಬೇಕಾದ ಬಹಳ ಮುಖ್ಯವಾಗಿರುವ ವಿಷಯ ಇದು. ಬಾಡಿಗೆದಾರ ಮತ್ತು ಮನೆ ಮಾಲೀಕ ಯಾವುದೇ ರೀತಿಯ ಒಪ್ಪಂದಗಳನ್ನು ಮಾಡಿಕೊಂಡಿದ್ದರು ಕೂಡ, ಅದನ್ನು ಕೇವಲ ಬಾಯಿ ಮಾತಿನಲ್ಲಿ ಮಾಡಿಕೊಳ್ಳದೆ, ಅಂದರೆ ಕೇವಲ ಮೌಕಿಕವಾಗಿ ಅಲ್ಲದೆ ಲಿಖಿತ ರೂಪದಲ್ಲಿ ಮಾಡಬೇಕು. ಇದನ್ನು ರೆಂಟ್ ಅಗ್ರಿಮೆಂಟ್ ಎಂದು ಹೇಳಲಾಗುತ್ತದೆ.
ನಿಮ್ಮ ಮಗಳ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಿ, ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್
ಬಾಡಿಗೆದಾರ ಎಷ್ಟು ಸಮಯ ಮನೆಯಲ್ಲಿ ವಾಸಿಸಬಹುದು? ಬಾಡಿಗೆ ಹಣ ಎಷ್ಟು? ತಿಂಗಳಿನ ಯಾವ ದಿನಾಂಕ ಪಾವತಿ ಮಾಡಬೇಕು? ಡಿಪೋಸಿಟ್ ಹಣ ಎಷ್ಟು? ಕರೆಂಟ್ ಬಿಲ್ ವಿದ್ಯುತ್ ಬಿಲ್ ಪಾವತಿ ಮಾಡುವುದು ಹೀಗೆ ಪ್ರತಿಯೊಂದು ವಿಚಾರಗಳನ್ನು ಕೂಡ ರೆಂಟ್ ಅಗ್ರಿಮೆಂಟ್ ನಲ್ಲಿ ಬರೆಸಬೇಕು. ನಂತರ ಈ ಅಗ್ರಿಮೆಂಟ್ ಗೆ ಇಬ್ಬರೂ ಸಹ ಹಾಕಬೇಕು ಜೊತೆಗೆ ಸಾಕ್ಷಿದಾರರು ಕೂಡ ಇರುತ್ತಾರೆ.
ಇನ್ನು ಬಾಡಿಗೆದಾರ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳುವುದಕ್ಕೆ, ಅಥವಾ ಮನೆಗೆ ಬೇಕಾಗಿರುವ ಯಾವುದೇ ವಸ್ತು ಖರೀದಿ ಮಾಡುವುದಕ್ಕೆ ಇದೆ ಅಗ್ರಿಮೆಂಟ್ ಅನ್ನು ಮುಖ್ಯ ದಾಖಲೆಯಾಗಿ ಕೊಡಬಹುದು.
11 ತಿಂಗಳಿಗೆ ರೆಂಟ್ ಅಗ್ರಿಮೆಂಟ್! (Rent agreement for 11 months only)
ಮನೆ ಮಾಲಿಕ ಬಾಡಿಗೆ ಕೊಡುವಾಗ ರೆಂಟ್ ಅಗ್ರಿಮೆಂಟ್ ಮಾಡುವುದು ಬಹಳ ಮುಖ್ಯ. ಸಾಕಷ್ಟು ಜನರಿಗೆ ಈ ಕಾನೂನು ಗೊತ್ತಿಲ್ಲದೆ ಇರಬಹುದು. ಒಬ್ಬ ಬಾಡಿಗೆದಾರ ಒಂದು ಮನೆಯಲ್ಲಿ 12 ವರ್ಷಗಳ ಕಾಲ ನಿರಂತರವಾಗಿ ವಾಸ ಮಾಡಿ 13ನೇ ವರ್ಷವೂ ಕೂಡ ಅದೇ ಮನೆಯಲ್ಲಿ ವಾಸ ಮಾಡುತ್ತಾನೆ ಎಂದಾದರೆ ಆತ ಆ ಮನೆಯನ್ನು ತನ್ನದಾಗಿಸಿಕೊಳ್ಳಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು.
ಒಂದು ವೇಳೆ ಮನೆಯ ಮಾಲೀಕನ ಬಳಿ ಇದು ತನ್ನ ಮನೆ ಎಂದು ಹೇಳಿಕೊಳ್ಳಲು ಅಥವಾ ರೆಂಟ್ ಅಗ್ರಿಮೆಂಟ್ ಇಲ್ಲದೆ ಇದ್ದರೆ ಆ ಮನೆಯನ್ನು ಬಿಟ್ಟು ಕೊಡಬೇಕಾಗುತ್ತದೆ.
ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ, ಹೇಗಿದೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ; ಇಲ್ಲಿದೆ ಡೀಟೇಲ್ಸ್
ಹೀಗಾಗಬಾರದು ಅಂದ್ರೆ ಯಾವುದೇ ಕಾರಣಕ್ಕೂ ಬಾಡಿಗೆ ಕೊಡುವಾಗ ರೆಂಟ್ ಅಗ್ರಿಮೆಂಟ್ ಮಾಡಿಸಿಕೊಳ್ಳದೆ ಇರಬೇಡಿ. ಇನ್ನು ರೆಂಟ್ ಅಗ್ರಿಮೆಂಟ್ ಅನ್ನು ಒಂದು ವರ್ಷಕ್ಕೆ ಅಲ್ಲ ಬದಲಾಗಿ 11 ತಿಂಗಳಿಗೆ ಮಾಡಿಸಲಾಗುತ್ತದೆ. 11 ತಿಂಗಳಾದ ಬಳಿಕ ಪ್ರತಿ ವರ್ಷ ರಿನಿವಲ್ ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ ಪ್ರತಿ ವರ್ಷವೂ ಕೂಡ ಹೊಸ ರೆಂಟ್ ಅಗ್ರಿಮೆಂಟ್ ಆಗುತ್ತದೆ. ಈ ರೀತಿ 11 ತಿಂಗಳಿಗೆ ರೆಂಟ್ ಅಗ್ರಿಮೆಂಟ್ ಮಾಡುವುದಕ್ಕೂ ಕೂಡ ಒಂದು ಪ್ರಮುಖ ಕಾರಣ ಇದೆ.
ನೀವು ಒಂದು ವರ್ಷಕ್ಕೆ ರೆಂಟ್ ಅಗ್ರಿಮೆಂಟ್ ಮಾಡಿಸಿದರೆ, ಅದನ್ನು ಕಾನೂನಾತ್ಮಕವಾಗಿ ರಿಜಿಸ್ಟರ್ ಮಾಡಬೇಕಾಗುತ್ತದೆ. ಅಲ್ಲಿಗೆ ಬಾಡಿಗೆದಾರ ಅದೇ ಮನೆಯಲ್ಲಿ 12 ವರ್ಷಗಳವರೆಗೆ ಉಳಿದರೆ ರೆಂಟ್ ಅಗ್ರಿಮೆಂಟ್ ರಿಜಿಸ್ಟರ್ ಮಾಡಿದ ದಿನಾಂಕದಿಂದ ಲೆಕ್ಕಾಚಾರ ಮಾಡಿ ಆತ ಆ ಮನೆಯಲ್ಲಿ ಇಷ್ಟು ವರ್ಷಗಳ ಕಾಲ ಇದ್ದಿದ್ದು ಹೌದು ಎನ್ನುವುದು ಸಾಬೀತಾಗುತ್ತದೆ.
ಸ್ವಂತ ವ್ಯಾಪಾರ ಮಾಡುವ ಮಹಿಳೆಯರಿಗೆ ಸಿಗಲಿದೆ 10 ಲಕ್ಷ ರೂಪಾಯಿಗಳ ಸಾಲ!
ಅದರ ಬದಲು 11 ತಿಂಗಳಿಗೆ ರೆಂಟ್ ಅಗ್ರಿಮೆಂಟ್ ಮಾಡಿದರೆ ಪ್ರತಿ ವರ್ಷ ರಿನಿವಲ್ ಆಗುತ್ತದೆ. ಹಾಗೂ ಆತ ಅದೇ ಮನೆಯಲ್ಲಿ 50 ವರ್ಷಗಳ ಕಾಲ ವಾಸವಾಗಿದ್ದರು ಕೂಡ ಪ್ರತಿ ವರ್ಷ ಹೊಸ ವರ್ಷವೇ ಆಗಿರುತ್ತದೆ.
ಈ ನಿಯಮಗಳನ್ನು ಚೆನ್ನಾಗಿ ತಿಳಿದುಕೊಂಡು ಬಾಡಿಗೆ ಕೊಡುವಾಗ ನಿಮ್ಮ ರೆಂಟ್ ಅಗ್ರಿಮೆಂಟ್ಗಳಲ್ಲಿ ಈ ಎಲ್ಲಾ ನಿಯಮಗಳನ್ನು ಅಳವಡಿಸಿಕೊಳ್ಳಿ.
New rules for house owners who rent houses, Important information