ಇನ್ಮುಂದೆ ಮನೆ, ಸೈಟ್ ಖರೀದಿ ಮತ್ತುಆಸ್ತಿ ಮಾರಾಟಕ್ಕೆ ಹೊಸ ರೂಲ್ಸ್ ಜಾರಿ!
ಆಸ್ತಿ ವರ್ಗಾವಣೆ (property transfer) ಮಾಡಿದರೆ ಸಾಲದು ಜೊತೆಗೆ ಜೆ ಫಾರಂ ಅನ್ನು ತುಂಬಿಕೊಡಬೇಕಾಗುತ್ತದೆ. ಈ ವೇಳೆ ಯಾವುದೇ ಆಕ್ಷೇಪಣೆಗಳು ಬಾರದೆ ಇದ್ದರೆ ಮಾತ್ರ ಆಸ್ತಿ ಹಕ್ಕು ವರ್ಗಾವಣೆ ಆಗುತ್ತದೆ
ಯಾವುದೇ ವ್ಯಕ್ತಿ ತನ್ನ ಆಸ್ತಿ ಮಾರಾಟ (property sale) ಮಾಡುವಾಗ ಅಥವಾ ಕೊಂಡುಕೊಳ್ಳುವ ಸಮಯದಲ್ಲಿ ಆಸ್ತಿಯು ತನ್ನ ಹೆಸರಿನಲ್ಲಿ ರಜಿಸ್ಟ್ರೇಶನ್ (property registration) ಆಯಿತು ಎಂದರೆ ಆ ಆಸ್ತಿಯು ತನ್ನ ಹೆಸರಿಗೆ ಆದಂತೆ ಎಂದು ಭಾವಿಸುತ್ತಾನೆ.
ಆದರೆ ಇದು ಸಂಪೂರ್ಣ ಸರಿಯಲ್ಲ. ಈ ಆಸ್ತಿ ವರ್ಗಾವಣೆ (property transfer) ಮಾಡಿದರೆ ಸಾಲದು ಜೊತೆಗೆ ಜೆ ಫಾರಂ ಅನ್ನು ತುಂಬಿಕೊಡಬೇಕಾಗುತ್ತದೆ. ಈ ವೇಳೆ ಯಾವುದೇ ಆಕ್ಷೇಪಣೆಗಳು ಬಾರದೆ ಇದ್ದರೆ ಮಾತ್ರ ಆಸ್ತಿ ಹಕ್ಕು ವರ್ಗಾವಣೆ ಆಗುತ್ತದೆ.
ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಮಾಡೋಕೆ ಲಿಮಿಟ್! ಕಟ್ಟಾಗುತ್ತೆ ಹೆಚ್ಚು ಹಣ
ಜೆ ಫಾರಂ ನಂಬರ್ 12 ಹಾಗೂ 21 ರ ಮೂಲಕ ಈ ಪ್ರಕ್ರಿಯೆ ಮಾಡಲಾಗುತ್ತದೆ. ಯಾವುದೇ ಆಸ್ತಿ ಹಕ್ಕಿನ ವರ್ಗಾವಣೆ ಆಗುವ ಸಮಯದಲ್ಲಿ ಆಸ್ತಿಯು ಕೊಂಡುಕೊಂಡುವರ ಹೆಸರಿಗೆ ರಿಜಿಸ್ಟರ್ ಆದ 3೦ ದಿನದ ಒಳಗಾಗಿ ಕಾಲವಕಾಶ ನೀಡಿ ಯಾವುದಾದರೂ ಆಕ್ಷೇಪಣೆ ಇದ್ದರೆ ಸಲ್ಲಿಸುವಂತೆ ತಿಳಿಸುತ್ತಾರೆ.
3೦ ದಿನಗಳ ನಂತರೂ ಆ ಆಸ್ತಿಗೆ ಸಂಬಂಧಪಟ್ಟಂತೆ ಯಾರಿಂದಲೂ ಆಕ್ಷೇಪಣೆ ವ್ಯಕ್ತವಾಗದಿದ್ದರೆ ಆಸ್ತಿ ಕೊಂಡುಕೊಂಡ ವ್ಯಕ್ತಿ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಫಾರಂ ಜೆಗೆ ಸಹಿ ಮಾಡಿಸಿಕೊಂಡು ತೆರಳುತ್ತಾರೆ. 15 ದಿನಗಳಾದ ನಂತರವೂ ಹಕ್ಕು ಬದಲಾವಣೆಗೆ ಸೂಚಿಸಬಹುದಾಗಿದೆ. ಒಟ್ಟಿನಲ್ಲಿ ೪೫ ದಿನಗಳ ನಂತರ ಆಸ್ತಿ ಹಕ್ಕು ಬದಲಾವಣೆ ಆಗಿ ನಿಮ್ಮ ಕೈ ಸೇರಲಿದೆ.
ಸ್ವಂತ ಮನೆ ಕಟ್ಟಿಕೊಳ್ಳಲು 6.5 ಲಕ್ಷ ರೂಪಾಯಿ ಸಹಾಯಧನ! ಆಸಕ್ತರು ಅರ್ಜಿ ಸಲ್ಲಿಸಿ
ಏನಿದು ಫಾರಂ ನಂಬರ್ 12, 21?:
ಜೆ ಫಾರಂ 12 ಎಂದರೆ ಆಸ್ತಿಯ ಮಾರಾಟದ ವಿಚಾರವನ್ನು ಸಾರ್ವಜನಿಕರ ಗಮನಕ್ಕೆ ತರುವ ಸಲುವಾಗಿ ಪ್ರಚಾರ ಮಾಡುವುದಾಗಿದೆ. ಇದರ ಅವಧಿ 15 ದಿನಗಳಾಗಿರುತ್ತದೆ. ಇನ್ನು ಜೆ ಫಾರಂ (J form ) ನಂಬರ್ 21 ಎಂದರೆ ಇದು ಜಮೀನಿಗೆ ಸಂಬಂಧಪಟ್ಟ ಆಸಕ್ತರಿಗೆ ನೋಟಿಸ್ (notice) ಕಳುಹಿಸುವುದಾಗಿದೆ. ಇದರ ಅವಧಿ 3೦ ದಿನಗಳಾಗಿವೆ.
ಒಂದು ವೇಳೆ 3೦ ದಿನಗಳು ಅಂದರೆ ತಿಂಗಳ ಒಳಗಾಗಿ ಆ ಆಸ್ತಿಗೆ ಸಂಬಂಧಪಟ್ಟಂತೆ ಯಾರಾದರೂ ತಕರಾರು ಸಲ್ಲಿಸಿದರೆ ಅಥವಾ ಸರ್ಕಾರ ಜಮೀನು ಮಾರಾಟಕ್ಕೆ ಸಂಬಂಧಪಟ್ಟಂತೆ ರೂಪಿಸಿರುವ ನಿಯಮಗಳನ್ನು ಮೀರಿ ಮಾರಾಟ ಮಾಡಿದ್ದೆ ಆದಲ್ಲಿ ಇದನ್ನು ವಿವಾದಾತ್ಮಕ ಪ್ರಕರಣಗಳ ಪಟ್ಟಿಗೆ ಸೇರಿಸಲಾಗುತ್ತದೆ.
ಸ್ವಂತ ಬಿಸಿನೆಸ್ ಮಾಡೋಕೆ ಲೋನ್ ಸಿಗ್ತಾಯಿಲ್ವಾ? ಹಾಗಾದ್ರೆ ಇಷ್ಟು ಮಾಡಿ ಸಾಕು
ಈ ರೀತಿ ಫಾರಂ ನಂಬರ್ ಜೆ 21 ರ ಅಡಿಯಲ್ಲಿ ಸ್ವೀಕರಿಸಿದ ಎಲ್ಲ ಅರ್ಜಿಗಳನ್ನು 30 ದಿನಗಳ ಒಳಗಡೆ ಆ ವ್ಯಾಪ್ತಿಗೆ ಒಳಪಡುವ ತಹಶೀಲ್ದಾರ್ಗಳ ಸಮ್ಮುಖದಲ್ಲಿ ನ್ಯಾಯಾಲಯಗಳು ಇತ್ಯರ್ಥಪಡಿಸುತ್ತವೆ.
ರೈತರಿಗೆ (farmers), ಗ್ರಾಮೀಣ ಭಾಗದ ಜನರು ಕೆಲವೊಂದು ಬಾರಿ ವಿಚಾರಗಳು ಗೊತ್ತಿಲ್ಲದೆ ಹಣದ ಆಸೆಗಾಗಿ ಜಮೀನನ್ನು ಮಾರಾಟ (land sale) ಮಾಡಲು ಮುಂದಾಗುತ್ತಾರೆ. ಹಾಗಾಗಿ ಅವರಿಗೆ ಮೋಸ ಆಗಬಾರದು. ಅವರ ಜಮೀನಿಗೆ ನ್ಯಾಯಯುತವಾದ ಬೆಲೆ ಸಿಗಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರವು ಈ ನಿಯಮವನ್ನು ರೂಪಿಸಿದೆ.
ಪ್ರಪಂಚದಲ್ಲೇ ಹೆಚ್ಚು ಚಿನ್ನ ಯಾರ ಬಳಿ ಇದೆ ಗೊತ್ತಾ? ಇಲ್ಲಿದೆ ಬೆಚ್ಚಿಬೀಳುವ ಸಂಗತಿ
New rules for house, site buying and Property selling