ಗ್ಯಾಸ್ ಸಿಲಿಂಡರ್, ಬ್ಯಾಂಕ್ ಅಕೌಂಟ್ ಸೇರಿದಂತೆ ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ
ಒಂದು ತಿಂಗಳು ಮುಗಿತಿದ್ದಂತೆ ಇನ್ನೊಂದು ತಿಂಗಳು ಆರಂಭವಾಗುತ್ತದೆ. ಅದೇ ರೀತಿ ಪ್ರತಿ ತಿಂಗಳು ಸರ್ಕಾರದ ಕೆಲವು ನಿಯಮಗಳನ್ನು (new rules by government) ಪರಿಷ್ಕರಿಸಿ ಅವುಗಳಲ್ಲಿ ಅಗತ್ಯ ಇರುವ ಬದಲಾವಣೆಗಳನ್ನು ತರಲಾಗುತ್ತದೆ.
ಆದರೆ ಈ ತಿಂಗಳು ವಿಶೇಷವಾಗಿದ್ದು ಯಾಕಂದ್ರೆ ಹೊಸ ಹಣಕಾಸಿನ ವರ್ಷ (financial year 2024) ಅಂದ್ರೆ ಏಪ್ರಿಲ್ ತಿಂಗಳು ಆರಂಭವಾಗುತ್ತಿದೆ ಹಾಗಾಗಿ ಹಣಕಾಸು ಕ್ಷೇತ್ರದಿಂದ ಹಿಡಿದು ಪ್ರತಿಯೊಂದು ಸರ್ಕಾರಿ ನಿಯಮಗಳನ್ನು ಕೂಡ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತದೆ.
ಪಿಂಚಣಿ ಯೋಜನೆ, ಗ್ಯಾಸ್ಸ್ ವಿತರಣೆ, ಬ್ಯಾಂಕಿನ ವ್ಯವಹಾರಗಳು ಮೊದಲಾದ ಕ್ಷೇತ್ರದಲ್ಲಿ ಸಾಕಷ್ಟು ನಿಯಮ ಬದಲಾವಣೆಗಳನ್ನು ಮಾಡಲಾಗುವುದು. ಹೊಸ ಹಣಕಾಸು ವರ್ಷದ ಮೊದಲ ಕೆಲವು ಪ್ರಮುಖ ಬದಲಾವಣೆಗಳು ಯಾವವು ನೋಡೋಣ.
ಉಚಿತ ಮನೆ ಯೋಜನೆ ಮೂಲಕ ವಸತಿ ಹಂಚಿಕೆಯ ಲಿಸ್ಟ್ ಬಿಡುಗಡೆ! ಪಟ್ಟಿ ಚೆಕ್ ಮಾಡಿ
NPS ನಿಯಮಗಳಲ್ಲಿ ಬದಲಾವಣೆ!
ಪಿಂಚಣಿ ನಿಧಿ ನಿಯಂತ್ರಣ ಪ್ರಾಧಿಕಾರವು ಪಿಂಚಣಿ (pension) ವ್ಯವಸ್ಥೆಯನ್ನು ಇನ್ನಷ್ಟು ಸುಭದ್ರಗೊಳಿಸುವ ಸಲುವಾಗಿ ಈ ಹೊಸ ನಿಯಮವನ್ನು ಜಾರಿಗೆ ತರಲಿದ್ದು ಏಪ್ರಿಲ್ 1 20124 ರಿಂದ ಅನ್ವಯವಾಗಲಿದೆ. ಮೊದಲನೆಯದಾಗಿ ಎನ್‌ಪಿಎಸ್ (NPS) ಖಾತೆ ಹೊಂದಿರುವವರು ತಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯ. ಇದನ್ನ ಲಾಗಿನ್ ನಲ್ಲಿಯೂ ಕೂಡ ಬಳಕೆ ಮಾಡಲಾಗುತ್ತದೆ.
ಇನ್ನು ಎರಡನೆಯದಾಗಿ 2FA. ಇದು ಯೋಜನೆ ಖಾತೆಯನ್ನು ಇನ್ನಷ್ಟು ಸುರಕ್ಷಿತವಾಗಿಸಲು ರೂಪಿಸಲಾಗಿರುವ ನಿಯಮ ಆಗಿದೆ, ಅಂದರೆ ನಿಮ್ಮ ಖಾತೆಗೆ ಅಥೆಂಟಿಕೇಶನ್ ನಡೆಸಲಾಗುವುದು ಈ ಮೂಲಕ ನಿಮ್ಮ ಖಾತೆಯನ್ನು ಭದ್ರಪಡಿಸಲಾಗುವುದು. ಇದು ಕೂಡ ಏಪ್ರಿಲ್ 1.2024 ಅನ್ವಯವಾಗುವಂತದ್ದು. https://www.pfrda.org.in/ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಈ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಇದ್ರೂ ಸರ್ಕಾರವೇ ಕೊಡಲಿದೆ 10,000 ರೂಪಾಯಿ!
ಫಾಸ್ಟ್ ಟ್ಯಾಗ್ ಕೆ ವೈ ಸಿ!
ಸರ್ಕಾರ ಈಗಾಗಲೇ ತಿಳಿಸಿರುವಂತೆ ನೀವು ರಾಷ್ಟ್ರೀಯ ಹೆದ್ದಾರಿ ನಿಯಮದ ಪ್ರಕಾರ ಹೆದ್ದಾರಿಗಳಲ್ಲಿ ಚಲಿಸುವುದಾದರೆ ಫಾಸ್ಟ್ ಟ್ಯಾಗ್ ಹೊಂದಿರಬೇಕು. ಹಾಗೂ ಟೋಲ್ ನಲ್ಲಿ ಮುಂದೆ ಸಾಗುವಾಗ ನೀವು ಹೊಂದಿರುವ ಫಾಸ್ಟ್ ಟ್ಯಾಗ್ ಗೆ ಕೆವೈಸಿ ಆಗಿರಬೇಕು.
ಮಾರ್ಚ್ 31.2024ರ ಒಳಗೆ ನಿಮ್ಮ ಫಾಸ್ಟ್ ಟ್ಯಾಗ್ ಕೆ ವೈ ಸಿ ಪ್ರಕ್ರಿಯೆ ಪೂರ್ಣಗೊಳ್ಳದೆ ಇದ್ದರೆ, ಸಮಸ್ಯೆ ಎದುರಿಸಬೇಕಾಗುತ್ತದೆ ನಿಮ್ಮ ಕಾರ್ಡ್ ನಲ್ಲಿ ಹಣ ಇದ್ದರೂ ಕೂಡ ಅದು ಕಡಿತಗೊಳ್ಳದೆ ಇರಬಹುದು. ಅಥವಾ ನಿಮ್ಮ ಫಾಸ್ಟ್ ಟ್ಯಾಗ್ ನಿಷ್ಕ್ರಿಯಗೊಳ್ಳಬಹುದು.
ಕೇವಲ ಆಧಾರ್ ಕಾರ್ಡ್ ಇದ್ರೆ ಸಿಗುತ್ತೆ ಬಡ್ಡಿಯಿಲ್ಲದೆ 50 ಸಾವಿರ ಸಾಲ! ಹೊಸ ಯೋಜನೆ
ಎಲ್ ಪಿ ಜಿ ಗ್ಯಾಸ್ ನಿಯಮಗಳಲ್ಲಿ ಬದಲಾವಣೆ!
ಪ್ರತಿ ತಿಂಗಳು ಕೂಡ ಎಲ್ಪಿಜಿ ಗ್ಯಾಸ್ ಬೆಲೆ ಪರಿಷ್ಕರಣೆ ನಡೆಸಲಾಗುತ್ತದೆ ಈಗಂತೂ ಲೋಕಸಭಾ ಚುನಾವಣೆ ಹತ್ತಿರ ಇರುವುದರಿಂದ ಗ್ಯಾಸ್ ಬೆಲೆ ಸಂಬಂಧ ಪಟ್ಟ ಹಾಗೆ ಜನರಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ. ಹಾಗಾಗಿ ಹೊಸ ನಿಯಮದ ಬಗ್ಗೆ ಜನರು ಕುತುಹಲರಾಗಿದ್ದಾರೆ.
ತೆರಿಗೆ ನಿಯಮಗಳಲ್ಲಿ ಬದಲಾವಣೆ!
ಏಪ್ರಿಲ್ ಒಂದು 2024 ರಿಂದ ಡೀಫಾಲ್ಟ್ ತೆರಿಗೆ ನಿಯಮಗಳು ಜಾರಿಗೆ ಬರಲಿವೆ. ಈ ನಿಯಮದ ಪ್ರಕಾರ ಸ್ವಯಂ ಚಾಲಿತವಾಗಿ ತೆರಿಗೆ ಪಾವತಿ ಮಾಡಲು ಅವಕಾಶ ಇರುತ್ತದೆ. ಏಪ್ರಿಲ್ ಒಂದರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.
ಬ್ಯಾಂಕ್ ಅಕೌಂಟ್ ಮಿನಿಮಂ ಬ್ಯಾಲೆನ್ಸ್ ಎಷ್ಟಿರ ಬೇಕು ಗೊತ್ತಾ? ಬಂತು ಹೊಸ ರೂಲ್ಸ್
ಎಸ್ ಬಿ ಐ ಬ್ಯಾಂಕ್ ನಿಯಮಗಳಲ್ಲಿ ಬದಲಾವಣೆ
ಎಸ್ ಬಿ ಐ ನ (SBI Bank) ಕೆಲವು ಪ್ರಮುಖ ಕಾರ್ಡ್ಗಳನ್ನು ಹೊಂದಿರುವವರಿಗೆ ಏಪ್ರಿಲ್ 1, 2024 ರಿಂದ ಹೊಸ ನಿಯಮ ಅನ್ವಯವಾಗಲಿದ್ದು ಕಾರ್ಡ್ ಗಳ ಬಾಡಿಗೆ ಪಾವತಿ ವಹಿವಾಟಿನ ಮೇಲೆ ನೀಡಲಾಗುವ ಪಾಯಿಂಟ್ ಸಂಗ್ರಹವನ್ನು ಕಡಿತಗೊಳಿಸಲಾಗುವುದು.
ಇನ್ನು ರಿವಾರ್ಡ್ ಪಾಯಿಂಟ್ ಗಳನ್ನು ಸಂಗ್ರಹಿಸಲು ಏಪ್ರಿಲ್ 15 2024 ಕೊನೆಯ ದಿನಾಂಕವಾಗಿದೆ. https://www.sbicard.com/ ಎಸ್ ಬಿ ಐ ನ ಈ ಅಧಿಕೃತ ವೆಬ್ಸೈಟ್ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್!
ನೀವು ಆಧಾರ್ ಕಾರ್ಡ್ ಹೊಂದಿದ್ರೆ ಅದಕ್ಕೆ ನಿಮ್ಮ ಪಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳಬೇಕು. ಎಂದು ಸರ್ಕಾರ ಬಹಳ ಹಿಂದೆಯೇ ತಿಳಿಸಿದೆ. ಒಂದು ವೇಳೆ ನೀವು ಮಾರ್ಚ್ 31 2024 ಒಳಗೆ ಈ ಕೆಲಸ ಮಾಡಿಕೊಳ್ಳದೆ ಇದ್ದರೆ ಸಾವಿರ ರೂಪಾಯಿಗಳನ್ನು ಪಾವತಿಸಿ ನಂತರ ಲಿಂಕ್ ಮಾಡಿಕೊಳ್ಳಬೇಕಾಗುತ್ತದೆ.
ಇವಿಷ್ಟು ಪ್ರಮುಖ ಬದಲಾವಣೆಗಳನ್ನು ನೀವು ಹೊಸ ಹಣಕಾಸಿನ ವರ್ಷದಲ್ಲಿ ಅಂದರೆ ಏಪ್ರಿಲ್ 1, 2024 ಕ್ಕೆ ನಿರೀಕ್ಷಿಸಬಹುದು.
New rules from April 1, including gas cylinder, bank account etc
Our Whatsapp Channel is Live Now 👇