ಉಚಿತ ಮನೆ ಯೋಜನೆ ಮೂಲಕ ವಸತಿ ಹಂಚಿಕೆಯ ಲಿಸ್ಟ್ ಬಿಡುಗಡೆ! ಪಟ್ಟಿ ಚೆಕ್ ಮಾಡಿ

ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಲಿಸ್ಟ್ ಬಿಡುಗಡೆ, ನಿಮ್ಮ ಹೆಸರು ಇರಬಹುದು ಚೆಕ್ ಮಾಡಿ!

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕರು ಕೂಡ ತನ್ನದೇ ಆಗಿರುವ ಸ್ವಂತ ಮನೆ (own house) ಯನ್ನು ಹೊಂದಿರಬೇಕು ಎನ್ನುವ ಕನಸು ಇಟ್ಟುಕೊಂಡಿರುತ್ತಾರೆ, ಅದನ್ನು ನನಸು ಮಾಡುವುದಕ್ಕಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ (pradhanmantri aawas Yojana) ಯೋಜನೆ ಜಾರಿಗೆ ತಂದಿದೆ.

ಯೋಜನೆ ಅಡಿಯಲ್ಲಿ ಈಗಾಗಲೇ ದೇಶದಾದ್ಯಂತ ಲಕ್ಷಾಂತರ ಜನರು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗಿದೆ. ಇದರ ಜೊತೆಗೆ ಮುಂಬರುವ ದಿನಗಳಲ್ಲಿ ಒಂದು ಕೋಟಿಗೂ ಹೆಚ್ಚಿನ ಮನೆ ನಿರ್ಮಾಣ ಮಾಡಿಕೊಡುವ ಕನಸನ್ನು ಕೇಂದ್ರ ಸರ್ಕಾರ ಹೊಂದಿದೆ.

ಈ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಇದ್ರೂ ಸರ್ಕಾರವೇ ಕೊಡಲಿದೆ 10,000 ರೂಪಾಯಿ!

ಉಚಿತ ಮನೆ ಯೋಜನೆ ಮೂಲಕ ವಸತಿ ಹಂಚಿಕೆಯ ಲಿಸ್ಟ್ ಬಿಡುಗಡೆ! ಪಟ್ಟಿ ಚೆಕ್ ಮಾಡಿ - Kannada News

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನಗಳು! (Benefits of PMAY )

ದೇಶದಲ್ಲಿ ವಾಸಿಸುವ ಬಡವ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸರ್ಕಾರದಿಂದ ಸಬ್ಸಿಡಿ ಸಾಲ (subsidy loan) ವನ್ನು ಪಡೆದುಕೊಳ್ಳಲು ಈ ಯೋಜನೆ ಸಹಕಾರಿಯಾಗಿದೆ.

ಇಲ್ಲಿ ಬೇರೆ ಬೇರೆ ವರ್ಗಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಹಣಕಾಸಿನ ಸೌಲಭ್ಯ ನೀಡಲಾಗುವುದು. ಸರ್ಕಾರ 3 ಲಕ್ಷ ರೂಪಾಯಿಗಳವರೆಗಿನ ಸಬ್ಸಿಡಿ ಹಣವನ್ನು ನೀಡುತ್ತದೆ. 12 ಲಕ್ಷ ರೂಪಾಯಿಗಳವರೆಗಿನ ಸಾಲವನ್ನು ನೀವು ಬ್ಯಾಂಕ್ ನಲ್ಲಿ (Bank Loan) ತೆಗೆದುಕೊಂಡರೆ ಅದಕ್ಕೆ ಸುಮಾರು 3 ಲಕ್ಷ ರೂಪಾಯಿಗಳ ಹಣವನ್ನು ಸರ್ಕಾರ ಒದಗಿಸುತ್ತದೆ. ಅಂದರೆ ನೀವು ಕೇವಲ ಒಂಬತ್ತು ಲಕ್ಷ ರೂಪಾಯಿಗಳನ್ನು ಮಾತ್ರ ಪಾವತಿ ಮಾಡಬೇಕು.

ಕೇವಲ ಆಧಾರ್ ಕಾರ್ಡ್ ಇದ್ರೆ ಸಿಗುತ್ತೆ ಬಡ್ಡಿಯಿಲ್ಲದೆ 50 ಸಾವಿರ ಸಾಲ! ಹೊಸ ಯೋಜನೆ

ಹೊಸ ಲಿಸ್ಟ್ ಬಿಡುಗಡೆ (check your application status)

ಪ್ರಧಾನ್ ಮಂತ್ರಿ ಅವಾಸ್ ಯೋಜನೆಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎನ್ನುವ ಕುತೂಹಲ ನಿಮ್ಮಲ್ಲಿ ಇದ್ರೆ ಹಾಗೂ ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಹೊಸದಾಗಿ ಬಿಡುಗಡೆ ಆಗಿರುವ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು ಮೊಬೈಲ್ ನಲ್ಲಿಯೇ ಕೆಲವೇ ಕ್ಷಣಗಳಲ್ಲಿ ಈ ಕೆಲಸ ಮಾಡಿಕೊಳ್ಳಬಹುದು ಆದ್ದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ.

* ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ನೀವು ಅರ್ಜಿ ಸಲ್ಲಿಸಿದ್ದು ನಿಮ್ಮ ಹೆಸರು ಇದೆಯಾ ಇಲ್ವಾ ಅಂತ ಚೆಕ್ ಮಾಡಿಕೊಳ್ಳಲು ಮೊದಲು ಆವಾಸ ಯೋಜನೆಯ ಅಧಿಕೃತ ವೆಬ್ಸೈಟ್ https://pmaymis.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

* AavasSoft ಮೇಲೆ ಕ್ಲಿಕ್ ಮಾಡಿದ್ರೆ ವರದಿ ಅನ್ನು ಕಂಡುಕೊಳ್ಳಿ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

* ಈಗ ಕೆಳಬಾಗದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿರುವವರ ಲಿಸ್ಟ್ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದ್ರೆ ನೀವು ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸಬ್ಸಿಡಿ ಹಣ ಪಡೆದುಕೊಳ್ಳಲು ಅರ್ಹರಾಗಿದ್ದೀರಿ ಎಂದು ಅರ್ಥ.

ಕೋಳಿ ಫಾರ್ಮ್ ಆರಂಭಿಸೋಕೆ ಸರ್ಕಾರದಿಂದಲೇ ಸಿಗುತ್ತೆ 30 ಲಕ್ಷ ಸಹಾಯಧನ! ಅರ್ಜಿ ಹಾಕಿ

Free Housing Schemeಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply)

ನಿಮ್ಮ ವಾರ್ಷಿಕ ವರಮಾನದ ಆಧಾರದ ಮೇಲೆ, ನೀವು ಎಷ್ಟು ಹಣವನ್ನು ಬ್ಯಾಂಕಿನಲ್ಲಿ ತೆಗೆದುಕೊಳ್ಳುತ್ತೀರಿ ಎನ್ನುವುದರ ಆಧಾರದ ಮೇಲೆ ಸಬ್ಸಿಡಿ ಹಣ ನಿರ್ಧಾರವಾಗುತ್ತದೆ. ಹೊಸದಾಗಿ ಮನೆ ಕಟ್ಟಲು ಗೃಹ ಸಾಲ (Home loan) ವನ್ನು ಬ್ಯಾಂಕ್ ನಲ್ಲಿ ತೆಗೆದುಕೊಳ್ಳುವಾಗ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಸಾಲ ತೆಗೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಬೇಕು

ಈ ಹಿಂದೆಯೇ ಬ್ಯಾಂಕ್ ನಲ್ಲಿ ಸಾಲ (Bank Loan) ತೆಗೆದುಕೊಂಡಿದ್ದು ಈಗ ಹೋಗಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸಬ್ಸಿಡಿ ಕೊಡಿ ಅಂದರೆ ಅದು ನಿಮಗೆ ಸಿಗುವುದಿಲ್ಲ.

ಬ್ಯಾಂಕ್ ಅಕೌಂಟ್ ಮಿನಿಮಂ ಬ್ಯಾಲೆನ್ಸ್ ಎಷ್ಟಿರ ಬೇಕು ಗೊತ್ತಾ? ಬಂತು ಹೊಸ ರೂಲ್ಸ್

ಇನ್ನು ಹೊಸದಾಗಿ ಅರ್ಜಿ ಹಾಕಲು ಬಯಸಿದರೆ ಹತ್ತಿರದ ಬ್ಯಾಂಕ್ಗೆ ಹೋಗಿ ನಿಮ್ಮ ಆದಾಯ ಪ್ರಮಾಣ ಪತ್ರ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್, ವಿಳಾಸ ಪುರಾವೆ ಮೊದಲಾದವುಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು. ನೀವು ಫಲಾನುಭವಿಗಳಾಗಿದ್ದರೆ ಸಬ್ಸಿಡಿ ಹಣವನ್ನು ನೇರವಾಗಿ ನಿಮ್ಮ ಖಾತೆಗೆ (Bank Account) ಜಮಾ ಮಾಡಲಾಗುವುದು.

Release of housing allocation list through free housing Loan Scheme

Follow us On

FaceBook Google News

Release of housing allocation list through free housing Loan Scheme