ಜುಲೈ 1ರಿಂದ ಸಿಲಿಂಡರ್, ಪ್ಯಾನ್‑ಕಾರ್ಡ್, ಕ್ರೆಡಿಟ್‑ಕಾರ್ಡ್ ಸೇರಿ ಹೊಸ ರೂಲ್ಸ್

ಜುಲೈ 2025ರಿಂದ ಪ್ಯಾನ್‑ಕಾರ್ಡ್, ತತ್ಕಾಲ್ ಟಿಕೆಟ್, ಕ್ರೆಡಿಟ್‑ಕಾರ್ಡ್, ಎಟಿಎಂ ಶುಲ್ಕ, ಆದಾಯ ತೆರಿಗೆ ಮುಂತಾದ ನವಿನ ನಿಯಮಗಳು ಜಾರಿಗೆ ಬರುತ್ತಿವೆ; ಈಗಲೇ ತಿಳಿದುಕೊಳ್ಳಿ.

  • ಪಾನ್ ಕಾರ್ಡ್ ಗೆ ಆಧಾರ್ ಕಡ್ಡಾಯ
  • ತತ್ಕಾಲ್ ಟಿಕೆಟ್‌ಗಾಗಿ ಆಧಾರ್ ವೆರಿಫಿಕೇಶನ್ ಅಗತ್ಯ
  • ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೊಸ ಶುಲ್ಕ

ಜುಲೈ ತಿಂಗಳಿಂದ ಜಾರಿಗೆ ಬರುವ ಹೊಸ ನಿಯಮಗಳು (new rules) ನಿಮಗೆ ನೇರವಾಗಿ ಪ್ರಭಾವ ಬೀರುತ್ತದೆ. ಪ್ರಮುಖವಾಗಿ, ಪ್ಯಾನ್‑ಕಾರ್ಡ್ ಪಡೆಯಲು ಆಧಾರ್ ಕಡ್ಡಾಯವಾಗಲಿದೆ. ಇನ್ಮುಂದೆ ಪ್ಯಾನ್ ಪಡೆಯಬೇಕು ಅಂದ್ರೇ, ಮೂಲ ಆಧಾರ್ ಹೊಂದಿರಬೇಕು ಮತ್ತು ಅದರ ಮೂಲಕ ವೆರಿಫಿಕೇಶನ್ ಕೂಡ ಆಗಬೇಕು.

ಇನ್ನು ಭಾರತೀಯ ರೈಲುಗಳ ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೂ ಹೊಸ ನಿಯಮ ಬರುತ್ತಿದೆ. IRCTC ಅಪ್‌ಪಲ್ಲಿ ತತ್ಕಾಲ್ ಬುಕ್ಕಿಂಗ್ ಮಾಡಲು ಆಧಾರ್ ವೆರಿಫಿಕೇಶನ್ ನಿರ್ಬಂಧ ಇರುತ್ತದೆ (ಆನ್‌ಲೈನ್‌ನಲ್ಲಿ 15 ಜುಲೈ ನಿಂದ ಆರಂಭ).

ಇದನ್ನೂ ಓದಿ: ₹10 ಲಕ್ಷ ಲೋನ್‌ಗೆ ಬಡ್ಡಿ ಎಷ್ಟು? EMI ಎಷ್ಟು ಕಟ್ಟಬೇಕಾಗುತ್ತೆ! ಇಲ್ಲಿದೆ ಲೆಕ್ಕಾಚಾರ

ಹೌದು, ಜುಲೈ 2025 ಕ್ಕೆ ಎಣಿಕೆ ಶುರುವಾಗಿದೆ. ಹೊಸ ತಿಂಗಳು ಪ್ರಾರಂಭವಾಗುತ್ತಿರುವ ಈ ಸಮಯದಲ್ಲಿ ಹಲವು ನಿಯಮಗಳು ಜಾರಿಗೆ ಬರಲಿವೆ. ಪ್ರತಿವರ್ಷದಂತೆ ಈ ವರ್ಷವೂ ಪಾನ್ ಕಾರ್ಡ್ (PAN card), ಆಧಾರ್ (Aadhaar), ತತ್ಕಾಲ್ ಟಿಕೆಟ್ ಬುಕ್ಕಿಂಗ್ (Tatkal ticket booking), ಕ್ರೆಡಿಟ್ ಕಾರ್ಡ್ (credit card) ಹಾಗೂ ಎಟಿಎಂ ಸೇವೆಗಳ ವಿಷಯದಲ್ಲಿ ಪ್ರಮುಖ ಬದಲಾವಣೆಗಳಿವೆ.

ಬಳಕೆದಾರರಿಗೆ HDFC ಬ್ಯಾಂಕ್ ಹೊಸ ಶೂಲ್ಕವನ್ನು ಜಾರಿಗೆ ತರುತ್ತಿದೆ. ನೀವು ತಿಂಗಳಿಗೆ ₹10,000 ಕ್ಕಿಂತ ಹೆಚ್ಚಿನ ಮೊತ್ತವನ್ನು Paytm, Mobikwik ಅಥವಾ Freecharge ನಂತಹ ವಾಲೆಟ್‌ಗಳಲ್ಲಿ ಲೋಡ್ ಮಾಡಿದರೆ, 1% ಹೆಚ್ಚುವರಿ ಶುಲ್ಕ ಅನಿವಾರ್ಯವಾಗುತ್ತದೆ.

ಇದನ್ನೂ ಓದಿ: ಬರಿ ₹500 ರೂಪಾಯಿಗೆ ಲಕ್ಷ ಲಕ್ಷ ಗಳಿಸುವ ಪೋಸ್ಟ್ ಆಫೀಸ್ ಯೋಜನೆಗಳು ಇವು

ಅಷ್ಟೇ ಅಲ್ಲದೆ, Dream11, MPL ಅಥವಾ Rummy Culture ನಂತಹ ಆನ್‌ಲೈನ್ ಆಟದ ಆಪ್‌ಗಳಲ್ಲಿ ಹೆಚ್ಚು ವೆಚ್ಚ ಮಾಡಿದರೆ ಸಹ ಈ ಶುಲ್ಕ ಜಾರಿಗೆ ಬರುತ್ತದೆ.

Pan Card Rules

ಪಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಜುಲೈ 1ರಿಂದ ಈ ನಿಯಮ ಜಾರಿಗೆ ಬರುತ್ತಿದ್ದು, ಯಾವುದೇ ವ್ಯಕ್ತಿಗೆ PAN ಪಡೆಯಬೇಕಾದರೆ ಅವರು ಆಧಾರ್ ಹೊಂದಿರುವುದು ಮತ್ತು ಆಧಾರ್ ಪ್ರಮಾಣೀಕರಣ ಮಾಡಿಸುವುದು ಕಡ್ಡಾಯವಾಗಿದೆ. CBDT (Central Board of Direct Taxes) ಈ ಬಗ್ಗೆ ನವೀಕರಿಸಿದ ನಿಯಮವನ್ನು ಹೊರಡಿಸಿದೆ.

ಇದೇ ಸಮಯದಲ್ಲಿ, ಐಸಿಐಸಿಐ ಬ್ಯಾಂಕ್‌ ತನ್ನ ATM ಬಳಕೆಯ ನಿಯಮಗಳನ್ನು ಬದಲಾಯಿಸಿದೆ. ಇತರ ಬ್ಯಾಂಕ್ ATM ನಿಂದ ತಿಂಗಳಲ್ಲಿ ಮೂರು ಬಾರಿ ಹಣ ತೆಗೆಯುವವರೆಗೆ ಯಾವುದೇ ಶುಲ್ಕವಿಲ್ಲ. ಆದರೆ ಮೂರನೆಯ ಬಾರಿ ನಂತರ ಹಣ ತೆಗೆಯುವುದಾದರೆ ₹23 ಶುಲ್ಕ ವಿಧಿಸಲಾಗುತ್ತದೆ. ಇತರ ಲಾವಾದೇವಿಗಳಿಗಾಗಿ ₹8.50 ಶುಲ್ಕ ಇದೆ.

ಇದನ್ನೂ ಓದಿ: ಹೊಸ ಮನೆಕಟ್ಟೋ ಕೆನರಾ ಬ್ಯಾಂಕ್ ಗ್ರಾಹಕರಿಗೆ ಕಡಿಮೆ ಬಡ್ಡಿಗೆ ಸಾಲ! ಬಂಪರ್ ಕೊಡುಗೆ

ಜುಲೈ 15ರಿಂದ ತತ್ಕಾಲ್ ಟಿಕೆಟ್‌ಗಳ ಆನ್ಲೈನ್ ಬುಕ್ಕಿಂಗ್‌ಗೆ ಆಧಾರ್ ವೆರಿಫಿಕೇಶನ್ (Aadhaar verification) ಕಡ್ಡಾಯವಾಗಲಿದೆ. ಭಾರತೀಯ ರೈಲ್ವೆ (IRCTC) ಹೊಸ ನಿಯಮಗಳನ್ನು ಪ್ರಕಟಿಸಿದ್ದು, ತತ್ಕಾಲ್ ಟಿಕೆಟ್‌ಗಳನ್ನು ಮೊಬೈಲ್ ಆಪ್ ಅಥವಾ ವೆಬ್‌ಸೈಟ್ ಮೂಲಕ ಬುಕ್ ಮಾಡುವವರಿಗೆ ಈ ದೃಢೀಕರಣ ಅನಿವಾರ್ಯವಾಗಿದೆ.

Credit Card

ಇನ್ನು ಕ್ರೆಡಿಟ್ ಕಾರ್ಡ್ ಬಳಕೆದಾರರಿಗಾಗಿ HDFC ಯಿಂದ ಇನ್ನೊಂದು ಹೊಸ ನಿಬಂಧನೆ ಏನೆಂದರೆ, ಜುಲೈ ತಿಂಗಳಿಂದ utility bill payments ₹50,000 ಕ್ಕಿಂತ ಹೆಚ್ಚು ಆದರೆ 1% ಹೆಚ್ಚುವರಿ ಶುಲ್ಕ ವಸೂಲಿಸಲಾಗುತ್ತದೆ. ಈ ನಿಯಮ ಇಂಧನ ಬಳಕೆ ₹15,000 ಕ್ಕಿಂತ ಹೆಚ್ಚಾದರೂ ಅನ್ವಯವಾಗುತ್ತದೆ.

ಇದನ್ನೂ ಓದಿ: ಬ್ಯಾಂಕ್ ಚೆಕ್ ಮೇಲೆ Only ಅಂತ ಬರೆಯೋದು ಏಕೆ ಗೊತ್ತಾ? 99% ಜನಕ್ಕೆ ಗೊತ್ತಿಲ್ಲ

ಜೊತೆಗೆ, ಗ್ಯಾಸ್ ಸಿಲಿಂಡರ್ ದರಗಳಲ್ಲಿ ಸಹ ಬದಲಾವಣೆ ಆಗುವ ಸಾಧ್ಯತೆ ಇದೆ. ಪೆಟ್ರೋಲ್ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಲ್ಲೇ LPG ದರಗಳನ್ನು ಪರಿಷ್ಕರಿಸುತ್ತಿದ್ದು, ಈ ಬಾರಿ ಸಹ ಅದೇ ನಿರೀಕ್ಷೆ ಇದೆ.

ಅಂತಿಮವಾಗಿ, ಆದಾಯ ತೆರಿಗೆ ಸಲ್ಲಿಸಲು (income tax filing) ಇಚ್ಛಿಸುವವರಿಗಿದು ಎಚ್ಚರಿಕೆ: 2024–25ನೇ ಹಣಕಾಸು ವರ್ಷಕ್ಕೆ ITR ಸಲ್ಲಿಸಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 15, 2025 ಎಂದು ಘೋಷಿಸಲಾಗಿದೆ.

New Rules from July 1, PAN, Tatkal Tickets, Credit Card Charges and More

About Author:

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್…🔸ಇನ್ನಷ್ಟು ಓದಿ »

Related Stories