ಮಹಿಳೆಯರಿಗಾಗಿ ಹೊಸ ಯೋಜನೆ; ಸಿಗಲಿದೆ 15,000 ರೂಪಾಯಿ ಜೊತೆಗೆ ಉಚಿತ ಟ್ರೈನಿಂಗ್!

ಮಹಿಳೆಯರನ್ನು ಇನ್ನಷ್ಟು ಉತ್ತೇಜಿಸುವ ಸಲುವಾಗಿ, ಕೃಷಿ ಕ್ಷೇತ್ರವನ್ನು ಇನ್ನಷ್ಟು ಬೆಳೆಸುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಪರಿಚಯಿಸಿದೆ.

ದೇಶದಲ್ಲಿ ಕೇಂದ್ರ ಸರ್ಕಾರ (Central government) ಸಾಮಾನ್ಯ ಜನರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಪರಿಚಯಿಸಿದೆ. ಅದರಲ್ಲೂ ದೇಶದ ಬೆನ್ನೆಲುಬು ರೈತರಿಗೆ (farmer) ಅನುಕೂಲವಾಗುವಂತಹ ಯೋಜನೆಗಳ ಮೂಲಕ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವ ಹಾಗೆ ಕೃಷಿಯಲ್ಲಿ (agriculture) ಹೆಚ್ಚಾಗಿ ತೊಡಗಿಕೊಂಡಿರುವವರು ಪುರುಷರು. ಗದ್ದೆಯಲ್ಲಿ ಕೆಲಸ ಮಾಡುವುದರಿಂದ ಹಿಡಿದು ಕೃಷಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆ ಇದ್ದರೂ ಅದನ್ನು ಪುರುಷ ರೈತರು ಮಾಡುತ್ತಾರೆ. ಆದರೆ ಪುರುಷರಿಗೂ ಬೆನ್ನೆಲುಬಾಗಿ ಕೃಷಿಯನ್ನು ಮಾಡುತ್ತಿರುವ ಸಾಕಷ್ಟು ಹೆಣ್ಣುಮಕ್ಕಳು ಕೂಡ ಇದ್ದಾರೆ.

ಈ ಎಲ್ಐಸಿ ಯೋಜನೆಯಲ್ಲಿ ಐದು ವರ್ಷಕ್ಕೆ ನಿಮ್ಮ ಹಣ ಒನ್ ಟು ಡಬಲ್ ಆಗುತ್ತೆ!

ಮಹಿಳೆಯರಿಗಾಗಿ ಹೊಸ ಯೋಜನೆ; ಸಿಗಲಿದೆ 15,000 ರೂಪಾಯಿ ಜೊತೆಗೆ ಉಚಿತ ಟ್ರೈನಿಂಗ್! - Kannada News

ಹೌದು, ಪುರುಷರಿಗೆ ಹೋಲಿಸಿದರೆ ಕೃಷಿ ಮಾಡುವ ಹೆಂಗಸರ ಸಂಖ್ಯೆ ಕಡಿಮೆ ಇರಬಹುದು ಆದರೆ ಸಾಕಷ್ಟು ಮಹಿಳೆಯರು ಕೃಷಿಯನ್ನು ಪೋಷಿಸಿಕೊಂಡು ಬಂದಿದ್ದಾರೆ, ಈ ನಿಟ್ಟಿನಲ್ಲಿ ಕೃಷಿ ಮಾಡುವ ಮಹಿಳೆಯರ ಸಬಲೀಕರಣವನ್ನು (women empowerment) ಸಾಧಿಸುವುದಕ್ಕಾಗಿ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಪರಿಚಯಿಸಿದೆ.

ಆ ಯೋಜನೆ ಯಾವುದು? ಮಹಿಳೆಯರು ಯಾವ ರೀತಿ ಪ್ರಯೋಜನ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಮಹಿಳೆಯರಿಗೆ ಕೇಂದ್ರದಿಂದ Namo drone didi scheme!

ಕೃಷಿ ಮಾಡುವ ಮಹಿಳೆಯರನ್ನು ಇನ್ನಷ್ಟು ಉತ್ತೇಜಿಸುವ ಸಲುವಾಗಿ, ಕೃಷಿ ಕ್ಷೇತ್ರವನ್ನು ಇನ್ನಷ್ಟು ಬೆಳೆಸುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಪರಿಚಯಿಸಿದೆ.

ಈ ಯೋಜನೆಯ ಅಡಿಯಲ್ಲಿ ಮಹಿಳೆಯರು 15,000ಗಳವರೆಗೆ ಪಡೆದುಕೊಳ್ಳಬಹುದು. ಹಾಗೂ ಕೃಷಿಯ ಬಗ್ಗೆ ಮಹಿಳೆಯರಲ್ಲಿ ಇನ್ನಷ್ಟು ಆಸಕ್ತಿ ಮೂಡಿಸಲು ಉಚಿತವಾಗಿ ತರಬೇತಿಯನ್ನು ಕೂಡ ನೀಡಲಾಗುವುದು.

ಸಿಹಿ ಸುದ್ದಿ! ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹಣ ಡಬಲ್ ಆಗುತ್ತೆ

Namo drone didi schemeನಮೋ ಡ್ರೋನ್ ಬೀದಿ ಯೋಜನೆ ಪ್ರಯೋಜನಗಳು!

ಕೃಷಿ ಮಾಡುವ ಮಹಿಳೆಯರಿಗೆ 15 ದಿನಗಳ ಕಾಲ ಈ ಯೋಜನೆಯ ಅಡಿಯಲ್ಲಿ ತರಬೇತಿ (training) ನೀಡಲಾಗುತ್ತದೆ, ಈ ತರಬೇತಿಯಲ್ಲಿ ಮಹಿಳೆಯರು ಅನ್ನು ಹೇಗೆ ಚಲಾಯಿಸಬೇಕು ಎನ್ನುವುದನ್ನು ತಿಳಿದುಕೊಳ್ಳಬಹುದು. 15 ದಿನಗಳ ಈ ತರಬೇತಿ ಜೊತೆಗೆ 15,000ಗಳನ್ನು ಕೂಡ ಸರ್ಕಾರ ಒದಗಿಸುತ್ತದೆ. ಇದರಿಂದ ಡ್ರೋನ್ ಖರೀದಿಸಿ ಆ ಮೂಲಕ ಕೃಷಿ ಗೆ ನಾಶಕ ಗೊಬ್ಬರ ಮೊದಲಾದವುಗಳನ್ನು ಸಿಂಪಡಿಸಬಹುದು.

18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು. ಕೃಷಿಯ ಬಗ್ಗೆ ಆಸಕ್ತಿ ಇರುವ ಹಾಗೂ ಈಗಾಗಲೇ ಕೃಷಿಯಲ್ಲಿ ತೊಡಗಿಕೊಂಡಿರುವ ಮಹಿಳೆಯರು ಡ್ರೋಣ್ ತರಬೇತಿಯನ್ನ ಪಡೆದುಕೊಳ್ಳಬಹುದು.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹತ್ತು ಸಾವಿರ ಡಿಪಾಸಿಟ್ ಇಟ್ರೆ 7 ಲಕ್ಷ ಸಿಗಲಿದೆ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)

ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಬಯಸುವ ಮಹಿಳೆಯರು ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ನಿವಾಸ ಪ್ರಮಾಣ ಪತ್ರ, ಪಾಸ್ ಪೋರ್ಟ್ ಅಳತೆಯ ಫೋಟೋ, ಸ್ವ ಸಹಾಯ ಗುಂಪಿನಲ್ಲಿ ಇದ್ದರೆ ಅದರ ಗುರುತಿನ ಚೀಟಿ ಮೊದಲಾದ ಬೇಸಿಕ್ ದಾಖಲೆಗಳನ್ನು ನೀಡಬೇಕು.

New scheme for women, Will get 15,000 rupees and free training

Follow us On

FaceBook Google News

New scheme for women, Will get 15,000 rupees and free training