Business News

ಇನ್ಮುಂದೆ ಇದಕ್ಕಿಂತ ಹೆಚ್ಚು ಹಣ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ! ಹೊಸ ರೂಲ್ಸ್

ಪ್ರತಿಯೊಂದು ತೆರಿಗೆಗೆ (Tax) ಸಂಬಂಧಪಟ್ಟಹಾಗೆ ತೆರಿಗೆ ಇಲಾಖೆ (Tax department) ಯಿಂದ ಹೊಸ ಹೊಸ ನಿಯಮಗಳು (you tax rules) ಜಾರಿಗೆ ಬರುತ್ತಿದೆ, ಅಂತಹ ನಿಯಮಗಳಲ್ಲಿ ಮನೆಯಲ್ಲಿ ಎಷ್ಟು ನಗದು ಹಣ (Cash) ಇಟ್ಟುಕೊಳ್ಳಬೇಕು ಎನ್ನುವ ನಿಯಮವು ಕೂಡ ಒಂದು.

ಹೌದು, ನೀವು ಆದಾಯ ತೆರಿಗೆ ಪಾವತಿ ಮಾಡುವವರಾಗಿದ್ದರೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ಇರಬೇಕು. ನೀವು ಯಾವುದೇ ರೀತಿಯ ಹಣಕಾಸಿನ ವ್ಯವಹಾರ (financial transaction) ಮಾಡುವುದಿದ್ದರೆ, ಅದು ನಗದು ರೂಪದಲ್ಲಿ ಆಗಿರಲಿ ಅಥವಾ ಬ್ಯಾಂಕ್ ಹಣಕಾಸಿನ ವ್ಯವಹಾರವೇ ಆಗಿರಲಿ, ಅದರ ಮಿತಿಯನ್ನು ತಿಳಿದುಕೊಂಡು ವ್ಯವಹಾರ ಮಾಡಿದ್ರೆ ಹೆಚ್ಚು ಸೂಕ್ತ.

Big update for those who are taking loan in bank and paying EMI

ನಿಮಿಷಗಳಲ್ಲಿ ಪರ್ಸನಲ್ ಲೋನ್ ಪಡೆಯಿರಿ! ಸೆಕೆಂಡುಗಳಲ್ಲಿ ಹಣ ಖಾತೆಗೆ ಜಮಾ

ಇದಕ್ಕಿಂತ ಹೆಚ್ಚು ಹಣ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ! (Cash limitation)

ಇಂದು ಬಹುತೇಕ ಎಲ್ಲರೂ ಯುಪಿಐ ಮೂಲಕ ಪೇಮೆಂಟ್ (UPI payment) ಮಾಡುವುದೇ ಹೆಚ್ಚು. ಆದರೆ ಕೆಲವೊಂದು ಅನಿವಾರ್ಯತೆ ಪರಿಸ್ಥಿತಿಗೆ ಬೇಕಾಗಿ ಮನೆಯಲ್ಲಿ ಒಂದಿಷ್ಟು ನಗದು ಹಣವನ್ನು ಇಟ್ಟುಕೊಳ್ಳುವುದು ಸಹಜ. ಹಾಗಂದ ಮಾತ್ರಕ್ಕೆ ನೀವು ಒಂದು ಮಿತಿಯನ್ನು ಇಟ್ಟುಕೊಂಡರೆ ಆಗ ತೆರಿಗೆ ಇಲಾಖೆಯ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ.

ಮನೆಯಲ್ಲಿ ಇಡಬಹುದಾದ ಹಣದ ಮಿತಿ!

ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು ಎನ್ನುವುದಕ್ಕೆ ಆರ್‌ಬಿಐ ಆಗಲಿ ಅಥವಾ ಆದಾಯ ಇಲಾಖೆ ಆಗಲಿ ಯಾವುದೇ ರೀತಿಯ ನಿಯಮವನ್ನು ಇಟ್ಟಿಲ್ಲ. ಹಾಗಂತ ನಿಮ್ಮ ಬಳಿ ಎಷ್ಟೇ ಹಣ ಇದ್ದರೂ ಕೂಡ ಅದಕ್ಕೆ ಸರಿಯಾದ ದಾಖಲೆ ಹೊಂದಿರುವುದು ಕಡ್ಡಾಯ.

ಯಾವುದೇ ಸಂದರ್ಭದಲ್ಲಿ ನಿಮ್ಮನ್ನು ಆದಾಯ ತೆರಿಗೆ ಇಲಾಖೆ ಪ್ರಶ್ನೆ ಮಾಡಿದ್ರೆ, ನಿಮ್ಮ ಬಳಿ ಇರುವ ಪ್ರತಿಯೊಂದು ರೂಪಾಯಿಗಳಿಗೂ ಕೂಡ ನೀವು ದಾಖಲೆ (documents) ನೀಡಬೇಕು. ನೀವು ಐ ಟಿ ಆರ್ ಫೈಲಿಂಗ್ (ITR filing) ಮಾಡಿದರೆ ಚಿಂತಿಸುವ ಅಗತ್ಯವಿಲ್ಲ. ಆದರೆ ನಿಮ್ಮ ಬಳಿ ದಾಖಲೆಗಳು ಇಲ್ಲದೆ ಇದ್ದರೆ ಆದಾಯ ತೆರಿಗೆ ನೋಟಿಸ್ ಗೆ ಉತ್ತರಿಸಬೇಕು.

ಸ್ಟೇಟ್ ಬ್ಯಾಂಕ್ ಸೇರಿದಂತೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ 6 ದೊಡ್ಡ ಬ್ಯಾಂಕ್‌ಗಳು!

Cash Limit at Homeದಾಖಲೆಗಳಿಲ್ಲದ ಹಣ ಇಟ್ಟುಕೊಂಡ್ರೆ ಏನಾಗುತ್ತೆ ಗೊತ್ತಾ?

ಮನೆಯಲ್ಲಿ ಇಟ್ಟುಕೊಳ್ಳುವ ಹಣಕ್ಕೆ, ಮಿತಿ ಇಲ್ಲದೆ ಇದ್ದರೂ ಹಣಕ್ಕೆ ದಾಖಲೆಗಳು ಇರಲೇಬೇಕು. ಒಂದು ವೇಳೆ ದಾಖಲೆ ಇಲ್ಲದೆ ಇದ್ದರೆ ನೀವು ಹೆಚ್ಚುವರಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ನೀವು ಹಿಂಪಡೆದುಕೊಂಡ ಹಣಕ್ಕೆ 137% ನಷ್ಟು ತೆರಿಗೆ ಪಾವತಿ ಕೊಡಬೇಕು.

ಇನ್ನು ಬ್ಯಾಂಕ್ (Bank) ವ್ಯವಹಾರಕ್ಕೆ ಬಂದರೆ ಒಂದು ವರ್ಷದಲ್ಲಿ 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಠೇವಣಿ (deposit) ಇಟ್ಟರೆ ಅಥವಾ ಒಂದು ಬಾರಿಗೆ 50,000 ಠೇವಣಿ ಇಡುವುದು ಅಥವಾ ಹಿಂಪಡೆಯುವುದನ್ನು ಮಾಡಿದ್ರೆ ಅದಕ್ಕೆ ಆಧಾರ್ ಕಾರ್ಡ್ (Aadhaar card) ಮತ್ತು ಪ್ಯಾನ್ ಕಾರ್ಡ್ (PAN Card) ದಾಖಲೆಯನ್ನು ಸಲ್ಲಿಸಬೇಕು.

ಈ ಬ್ಯಾಂಕ್ ಅಕೌಂಟ್ ಇರೋ ಗ್ರಾಹಕರಿಗೆ ನಿಮಿಷಗಳಲ್ಲಿ ಸಿಗುತ್ತೆ ಹೋಮ್ ಲೋನ್!

ಬ್ಯಾಂಕುಗಳಲ್ಲಿ (Banks) ಎರಡು ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಠೇವಣಿಗೆ ಟಿಡಿಎಸ್ ಪಾವತಿ (TDS) ಮಾಡಿರಬೇಕು ಹಾಗೂ ಪ್ರಮಾಣ ಪತ್ರವನ್ನು ಬ್ಯಾಂಕ್ ಗೆ ಒದಗಿಸಬೇಕು.

ಇನ್ನು ಮನೆಯಲ್ಲಿ 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ನಗದು ಹಣ ಇಟ್ಟುಕೊಂಡರೆ, ಅದನ್ನು ಆದಾಯ ಇಲಾಖೆ ಜಪ್ತಿ ಮಾಡಬಹುದು. ಈ ಸಂದರ್ಭದಲ್ಲಿಯೂ ಸರಿಯಾದ ದಾಖಲೆ ಇಟ್ಟುಕೊಳ್ಳುವುದು ಬಹಳ ಮುಖ್ಯ. ಅದೇ ರೀತಿ ಒಂದು ದಿನದಲ್ಲಿ ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಸಂಬಂಧಿಕರಿಂದ ತೆಗೆದುಕೊಳ್ಳುವಂತಿಲ್ಲ.

ಈ ನಿಯಮಗಳನ್ನು ತಿಳಿದುಕೊಂಡು ಹಣಕಾಸಿನ ವ್ಯವಹಾರ ಮಾಡಿದ್ರೆ ಹೆಚ್ಚುವರಿ ದಂಡ ಪಾವತಿಸುವ ಸಮಸ್ಯೆಯಿಂದ ಪಾರಾಗಬಹುದು.

No more money can be kept at home, New Rules

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories