ಯಾವುದೇ ಅಡಮಾನ ಬೇಕಿಲ್ಲ, ಈ ಯೋಜನೆ ಅಡಿ ಸಿಗುತ್ತೆ 10 ಲಕ್ಷ ರೂಪಾಯಿ ಸಾಲ!
ಇಲ್ಲಿಯವರೆಗೆ ಸಾಕಷ್ಟು ಜನ ಮುದ್ರಾ ಯೋಜನೆಯ ಅಡಿ ಸಾಲ ಸೌಲಭ್ಯ (Loan facility) ಪಡೆದು ತಮ್ಮ ಸ್ವಂತ ಉದ್ಯಮ ಆರಂಭಿಸಿದ್ದಾರೆ
Loan Scheme : ಸ್ವಂತ ಉದ್ಯಮ ಮಾಡುವವರಿಗೆ ದೇಶದಲ್ಲಿ ಸಾಕಷ್ಟು ಅವಕಾಶಗಳು ಇದೆ, ಬೇರೆ ಬೇರೆ ಕಂಪನಿಗಳಲ್ಲಿ ಉದ್ಯೋಗ ಮಾಡುವುದಕ್ಕಿಂತಲೂ ಸ್ವಂತ ಉದ್ಯಮ (own business) ಮಾಡಿದರೆ ಹೆಚ್ಚು ಹಣ ಸಂಪಾದನೆ ಮಾಡಬಹುದು ಎಂದು ಅರಿತಿರುವ ಇತ್ತೀಚಿನ ಯುವಕರು ಸ್ವಂತ ಉದ್ಯಮ ಮಾಡಲು ಮುಂದಾಗಿದ್ದಾರೆ
ಅಂತವರಿಗಾಗಿಯೇ ಕೇಂದ್ರ ಸರ್ಕಾರ (Central government) ಒಂದು ಅತ್ಯುತ್ತಮ ಯೋಜನೆ ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ 50,000 ದಿಂದ 10 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ (Loan) ಪಡೆಯಬಹುದು.
ಚಿನ್ನ ಅಸಲಿಯೋ ನಕಲಿಯೋ ಚೆಕ್ ಮಾಡಲು ಟಿಪ್ಸ್ ಇಲ್ಲಿದೆ! ಸುಲಭವಾಗಿ ಕಂಡು ಹಿಡಿಯಿರಿ
ಪ್ರಧಾನ ಮಂತ್ರಿ ಮುದ್ರಾ ಯೋಜನೆ! (Pradhanmantri mudra Yojana)
ಇಲ್ಲಿಯವರೆಗೆ ಸಾಕಷ್ಟು ಜನ ಮುದ್ರಾ ಯೋಜನೆಯ ಅಡಿ ಸಾಲ ಸೌಲಭ್ಯ (Loan facility) ಪಡೆದು ತಮ್ಮ ಸ್ವಂತ ಉದ್ಯಮ ಆರಂಭಿಸಿದ್ದಾರೆ. ಅದರಲ್ಲೂ ಮಹಿಳೆಯರು ಹೆಚ್ಚಾಗಿ ಮುದ್ರಾ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮುದ್ರಾ ಯೋಜನೆಯಲ್ಲಿ ನೀವು ಮೂರು ಪ್ರಕಾರಗಳನ್ನು ನೋಡಬಹುದು.
1. 50,000ಗಳವರೆಗೆ ಸಾಲ ನೀಡುವ ಶಿಶು ಸಾಲ
2. 50 ರಿಂದ 5 ಲಕ್ಷ ರೂಪಾಯಿಗಳ ವರೆಗೆ ಸಾಲ ನೀಡುವ ಕಿಶೋರ ಸಾಲ
3. 10 ಲಕ್ಷದವರೆಗೆ ಸಾಲ ನೀಡುವ ತರುಣ ಸಾಲ
ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ 24 ವರ್ಷದಿಂದ 70 ವರ್ಷ ವಯಸ್ಸಿನವರು ಸಾಲ ಪಡೆಯಬಹುದಾಗಿದೆ.
ಮೇಕೆ ಸಾಕಾಣಿಕೆಗೆ ಇದು ಬೆಸ್ಟ್ ತಳಿ, ಪ್ರತಿ ತಿಂಗಳು 50 ಸಾವಿರ ಆದಾಯ ಗ್ಯಾರಂಟಿ
ಪ್ರಧಾನ ಮಂತ್ರಿ ಮುದ್ರಾ ಯೋಜನೆಗೆ ಸಾಲ ಸೌಲಭ್ಯ ಪಡೆಯಲು ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ಪಾನ್ ಕಾರ್ಡ್
ಬ್ಯಾಂಕ ಖಾತೆಯ ಬಗ್ಗೆ ಮಾಹಿತಿ
ಆದಾಯ ತೆರಿಗೆ ಪಾವತಿ ವಿವರ
ಉದ್ಯೋಗದ ಬಗ್ಗೆ ಮಾಹಿತಿ
ಇದೊಂದು ದಾಖಲೆ ಇದ್ದರೆ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳವರೆಗೆ ಸಾಲ!
ಮುದ್ರಾ ಯೋಜನೆಯ ಸಾಲ ಪಡೆಯುವುದು ಹೇಗೆ?
ನೀವು ಯಾವುದೇ ತರದ ಬ್ಯಾಂಕ್ ಶಾಖೆಗೆ ಹೋಗಿ ನೀವು ಮಾಡುವ ಉದ್ಯಮದ ಬಗ್ಗೆ ಮಾಹಿತಿಯನ್ನು ಕೊಡಬೇಕು, ನಂತರ ನಿಮ್ಮ ದಾಖಲೆಗಳನ್ನು ತೆಗೆದುಕೊಂಡು ಬ್ಯಾಂಕ್ ನವರು ಅರ್ಜಿ ಪರಿಶೀಲನೆ ಮಾಡಿ ನಂತರ ಹಣ ಬಿಡುಗಡೆ ಮಾಡುತ್ತಾರೆ.
10 ಲಕ್ಷದವರೆಗೆ ನಿಮ್ಮ ಉದ್ಯಮಕ್ಕೆ ತಕ್ಕಂತೆ ಸಾಲ ಪಡೆಯಬಹುದು, 25% ನಷ್ಟು ನೀವು ಪಾವತಿಸಿದರೆ 75% ನಷ್ಟು ಬಂಡವಾಳದ ಹಣವನ್ನು ಸರ್ಕಾರದಿಂದ ಪಡೆಯಬಹುದಾಗಿದೆ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಮಾಡಲು ಬಯಸುವವರು ಮುದ್ರಾ ಯೋಜನೆಯ ಸಾಲಕ್ಕೆ ಅಪ್ಲೈ ಮಾಡಬಹುದು.
ಇನ್ನು ಆನ್ಲೈನ್ ಮೂಲಕ ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, https://mudra.org.in/ ಈ ವೆಬ್ ಸೈಟಿಗೆ ಹೋಗಿ ಸರಿಯಾದ ಮಾಹಿತಿಯನ್ನ ಭರ್ತಿ ಮಾಡಿ ದಾಖಲೆಗಳನ್ನು ನೀಡಿದರೆ ಸಾಲ ಮಂಜೂರಾಗುತ್ತದೆ.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರಿಗೆ ಇಲ್ಲಿದೆ ಬಿಗ್ ಅಪ್ಡೇಟ್! ಹೊಸ ರೂಲ್ಸ್
ಮುದ್ರಾ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ ಅಡಮಾನ ಇಡಬೇಕಿಲ್ಲ, ಬೇರೆ ಬೇರೆ ಬ್ಯಾಂಕುಗಳಲ್ಲಿ ಬಡ್ಡಿ ದರ ಬೇರೆ ಬೇರೆ ರೀತಿಯಲ್ಲಿದ್ದು. ನೀವು ಬ್ಯಾಂಕಿಗೆ ಹೋಗಿ ಮಾಹಿತಿಯನ್ನು ಪಡೆಯುವುದು ಉತ್ತಮ.
No mortgage required, under this scheme you can get a loan of 10 lakh rupees