ಕೇವಲ 14,000ಕ್ಕೆ ಪತಂಜಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ! ವೈರಲ್ ಸುದ್ದಿ
ಪತಂಜಲಿ ₹14,000 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಇದು ನಿಜವೇ? ಕಂಪನಿಯ ಸ್ಪಷ್ಟನೆ ಇಲ್ಲದೆ ಗೊಂದಲ ಹೆಚ್ಚಾಗಿದೆ.

- ಪತಂಜಲಿಯಿಂದ ಇವಿ ಸ್ಕೂಟರ್ ವೈರಲ್ ಸುದ್ದಿ
- ₹14,000 ಕ್ಕೆ, 440 ಕಿಮೀ ರೇಂಜ್ ಎಲೆಕ್ಟ್ರಿಕ್ ಸ್ಕೂಟರ್
- ಪತಂಜಲಿ ಯಾವುದೇ ಅಧಿಕೃತ ಘೋಷಣೆ ನೀಡಿಲ್ಲ
Patanjali EV scooter : ಸಾಮಾಜಿಕ ಜಾಲತಾಣಗಳಲ್ಲಿ ಪತಂಜಲಿ ಕಂಪನಿಯಿಂದ ₹14,000 ಕ್ಕೆ ಹೊಸ Electric Scooter ಬಿಡುಗಡೆ ಆಗುತ್ತಿದೆ ಎಂಬ ಸುದ್ದಿಗಳು ವೈರಲ್ ಆಗಿದೆ. ಈ EV Scooter ಒಂದು ಚಾರ್ಜ್‌ನಲ್ಲಿ 440 ಕಿಮೀ ದೂರ ಸಾಗುತ್ತದೆ ಎಂಬ ಪೋಸ್ಟುಗಳು ಕೂಡ ವೈರಲ್ ಆಗಿವೆ.
ಇದರ ಬೆಂಬಲವಾಗಿ ಸ್ಕೂಟರ್‌ನ ಫೋಟೋ ಕೂಡ ಹರಿದಾಡುತ್ತಿದೆ. ಆದರೆ ಈ ಸ್ಕೂಟರ್ ನಿಜವಾಗಿಯೂ ಪತಂಜಲಿಗೆ ಸಂಬಂಧವಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.
ಆದರೆ, ಈ ಸ್ಕೂಟರ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಪತಂಜಲಿ ನೀಡಿಲ್ಲ. ಯಾವುದೇ ಪತ್ರಿಕಾ ಪ್ರಕಟಣೆ (Press Release) ಇಲ್ಲದಿರುವ ಕಾರಣದಿಂದಾಗಿ ಇದು ಕೇವಲ ನಕಲಿ ಸುದ್ದಿ ಎಂಬ ಅನುಮಾನ ದಟ್ಟವಾಗುತ್ತಿದೆ.
ಇದನ್ನೂ ಓದಿ: ಸ್ಟೇಟ್ ಬ್ಯಾಂಕಿನಲ್ಲಿ ₹45 ಲಕ್ಷ ಹೋಮ್ ಲೋನ್ ಬೇಕಾದ್ರೆ ನಿಮ್ಮ ಸಂಬಳ ಎಷ್ಟಿರಬೇಕು?
ಪತಂಜಲಿಯು ಈವರೆಗೂ ಯಾವುದೇ ಇವಿ ಉತ್ಪನ್ನ ಅಥವಾ ವಾಹನ ಕ್ಷೇತ್ರದ ಪ್ರಯೋಗಕ್ಕೆ ಮುಂದಾಗಿಲ್ಲ ಎಂಬುದು ವರದಿಗಳಲ್ಲಿದೆ.
ಇದೇ ಸಂದರ್ಭದಲ್ಲಿ ಪತಂಜಲಿ ಬ್ರ್ಯಾಂಡ್ ಬಗ್ಗೆ ಹೇಳಬೇಕು ಅಂದ್ರೆ, ಇದು ಆಯುರ್ವೇದ ಔಷಧಗಳು, ಸೌಂದರ್ಯ ಪದಾರ್ಥಗಳು, ಆಹಾರ ಸಾಮಗ್ರಿಗಳು ಮುಂತಾದವುಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ.
ಬಾಬಾ ರಾಮದೇವ್‌ನ ನೇತೃತ್ವದಲ್ಲಿ ಈ ಸಂಸ್ಥೆ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡದಾಗಿ ನೆಲೆಯೂರಿದೆ. ಆದರೆ ಇವತ್ತು ವೈರಲ್ ಆಗಿರುವ ಇವಿ ಸ್ಕೂಟರ್ (Electric Scooter) ಬಗ್ಗೆ ಕಂಪನಿಯಿಂದ ಯಾವುದೇ ಅಧಿಕೃತ ಸ್ಪಷ್ಟನೆ (official confirmation) ಇಲ್ಲ.
ಇದನ್ನೂ ಓದಿ: ನಮ್ಮ ದೇಶದಲ್ಲಿತ್ತು ₹10 ಸಾವಿರದ ನೋಟು! 99% ಜನಕ್ಕೆ ಇದು ಗೊತ್ತೇ ಇಲ್ಲ
ಈ ಸುದ್ದಿ ವೈರಲ್ ಆಗಿದ್ದರೂ, ಪತಂಜಲಿ ಕಂಪನಿಯು ಈವರೆಗೂ ಯಾವುದೇ ಇ-ಸ್ಕೂಟರ್ ಬಗ್ಗೆ ಮಾಹಿತಿ ಬಿಡುಗಡೆ ಮಾಡಿಲ್ಲ. ₹14,000 ಕ್ಕೆ, 440 ಕಿಮೀ ರೇಂಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಸಿಗುತ್ತೆ ಎಂಬ ಅಂಶಗಳು ಸದ್ಯಕ್ಕೆ ಕೇವಲ Fake News ಆಗಿರುವ ಸಾಧ್ಯತೆ ಹೆಚ್ಚು. ಇಂತಹ ಅಸತ್ಯ ಸುದ್ದಿಗಳಿಗೆ ಬಲಿಯಾಗದೇ, ಅಧಿಕೃತ ಪ್ರಕಟಣೆಗಳನ್ನು ಕಾಯುವುದು ಒಳಿತು.
No, Patanjali Has Not Launched an EV Scooter




