ಸಿಬಿಲ್ ಸ್ಕೋರ್ ಚೆನ್ನಾಗಿಲ್ಲ ಅಂತ ಲೋನ್ ಸಿಗ್ತಾಯಿಲ್ವಾ? 15 ದಿನಗಳಲ್ಲಿ CIBIL Score ಹೆಚ್ಚಿಸಿಕೊಳ್ಳಿ!
CIBIL Score : ಕ್ರೆಡಿಟ್ ಕಾರ್ಡ್ ಹಲವರ ಬಳಿ ಇರುತ್ತದೆ. ಇದರಿಂದ ಬಿಲ್ ಪೇಮೆಂಟ್ಸ್ ಮಾಡಬಹುದು, ಸಾಲ ಪಡೆಯಬಹುದು. ಆದರೆ ಕ್ರೆಡಿಟ್ ಕಾರ್ಡ್ (Credit Card) ಇದೆ ಎಂದು ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡಿದರೆ, ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ (Credit Card Bill) ಪಾವತಿ ಮಾಡದೇ ಇದ್ದರೆ, ಸಿಬಿಲ್ ಸ್ಕೋರ್ ಕಡಿಮೆ ಆಗುತ್ತದೆ.
ಇದರಿಂದ ನಿಮಗೆ ತೊಂದರೆ, ಮುಂದೆ ಸಾಲ ಪಡೆಯಲು ಆಗುವುದಿಲ್ಲ. ಹಾಗಾಗಿ ಸಿಬಿಲ್ ಸ್ಕೋರ್ (Credit Score) ಬಗ್ಗೆ ಗಮನ ಹರಿಸಬೇಕು. ಕ್ರೆಡಿಟ್ ಕಾರ್ಡ್ ಹೊಂದಿರುವವರು ಈ 5 ಟಿಪ್ಸ್ ಫಾಲೋ ಮಾಡಿದರೆ, ನಿಮ್ಮ ಸಿಬಿಲ್ ಸ್ಕೋರ್ ಅನ್ನು ಉತ್ತಮವಾಗಿ Maintain ಮಾಡಬಹುದು.
1. ಅಗತ್ಯವಿದ್ದಾಗ ಮಾತ್ರ ಸಾಲ ತೆಗೆದುಕೊಳ್ಳಿ: ಕ್ರೆಡಿಟ್ ಕಾರ್ಡ್ ಇರುವಾಗ ನಿಮಗೆ ತೀರಾ ಅವಶ್ಯಕತೆ ಇರುವಾಗ ಮಾತ್ರ ಸಾಲ ಪಡೆದುಕೊಳ್ಳಿ. ಕ್ರೆಡಿಟ್ ಕಾರ್ಡ್ ಇರುವ ಕಾರಣಕ್ಕೆ ಅವಶ್ಯಕತೆ ಇಲ್ಲದೇ ಹೋದರು ಕೂಡ, ಸುಮ್ಮನೆ ಸಾಲ ಮಾಡುತ್ತಾ ಇರುವುದನ್ನು, ಮರುಪಾವತಿ ಮಾಡಲು ತೊಂದರೆ ಮಾಡಿಕೊಳ್ಳುವುದು, ಈ ರೀತಿ ಮಾಡಿದರೆ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ನೆಗಟಿವ್ ಪರಿಣಾಮ ಬೀರುತ್ತದೆ. ಸಿಬಿಲ್ ಸ್ಕೋರ್ ಕಡಿಮೆ ಕೂಡ ಆಗುತ್ತದೆ. ಹಾಗಾಗಿ ಸಾಲಗಳನ್ನು ಕಂಟ್ರೋಲ್ ನಲ್ಲಿಟ್ಟು, ಕ್ರೆಡಿಟ್ ಸ್ಕೋರ್ maintain ಮಾಡಿ.
ಮಹಿಳೆಯರಿಗಾಗಿ ಸ್ಟ್ಯಾಂಡ್ ಅಪ್ ಇಂಡಿಯಾ ಸ್ಕೀಮ್! ಕೇಂದ್ರದಿಂದಲೇ ಸಿಗಲಿದೆ 10 ಲಕ್ಷ ರೂಪಾಯಿ!
2. ಅತಿಯಾಗಿ ಕ್ರೆಡಿಟ್ ಕಾರ್ಡ್ ಬಳಸಬೇಡಿ: ಕ್ರೆಡಿಟ್ ಕಾರ್ಡ್ ಹೊಂದಿರುವವರು ಎಲ್ಲಾ ಕಡೆ ಸ್ವೈಪ್ ಮಾಡುವುದು ಮಾಡುತ್ತಾರೆ. ಇದರಿಂದ ಪಾವತಿ ಮಾಡಬೇಕಾದ ಬಿಲ್ ಜಾಸ್ತಿಯಾಗುತ್ತದೆ. ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದೇ ಇದ್ದರೆ, ಅದರಿಂದ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ಹಾಗೆಯೇ ಸಮಯಕ್ಕೆ ಬಿಲ್ ಪಾವತಿ ಮಾಡದೇ ಹೋದರೆ, ಅದಕ್ಕೂ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಇದೆಲ್ಲವೂ ಆಗಬಾರದು ಎಂದರೆ, ಎಲ್ಲಾ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ.
3. ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡಿ: ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಎಲ್ಲಾ ಕ್ರೆಡಿಟ್ ಕಾರ್ಡ್ ಗಳ ಬಿಲ್ ಪಾವತಿ ದಿನಾಂಕವನ್ನು ನೆನಪಿನಲ್ಲಿ ಇಟ್ಟುಕೊಂಡು, ಅದರ ಬಿಲ್ ಪಾವತಿ ಮಾಡುವುದು ಕಷ್ಟ ಅನ್ನಿಸಬಹುದು.
ಇದಕ್ಕಾಗಿ ನೀವು ಕ್ರೆಡಿಟ್ ಕಾರ್ಡ್ ಗೆ ಆಟೋ ಡೆಬಿಟ್ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿಕೊಂಡು ಬಿಟ್ಟರೆ, ಆಗ ಪ್ರತಿ ತಿಂಗಳು ನಿಗದಿತ ಡೇಟ್ ಗೆ ಕ್ರೆಡಿಟ್ ಕಾರ್ಡ್ ಬಿಲ್ ಹಣ ಡೆಬಿಟ್ ಆಗುತ್ತದೆ. ಇದರಿಂದ ನೀವು ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡಿದ ಹಾಗೆ ಆಗುತ್ತದೆ, ಹಾಗೆಯೇ ಸಿಬಿಲ್ ಸ್ಕೋರ್ ಕಡಿಮೆ ಆಗುವ ಪ್ರಮೇಯ ಕೂಡ ಬರುವುದಿಲ್ಲ.
ಸಿಹಿ ಸುದ್ದಿ, ರೈತರಿಗೂ ಸಿಗುತ್ತೆ ಕ್ರೆಡಿಟ್ ಕಾರ್ಡ್! ಸಾಲದ ಮೇಲಿನ ಬಡ್ಡಿ ಕೂಡ ಸಿಕ್ಕಾಪಟ್ಟೆ ಕಡಿಮೆ
4. ಎಮರ್ಜೆನಿ ವೇಳೆ ಕ್ರೆಡಿಟ್ ಕಾರ್ಡ್ ಬಳಸಿ: ಬಹಳಷ್ಟು ಜನರು ಕ್ರೆಡಿಟ್ ಕಾರ್ಡ್ ಪಡೆಯುವುದು ಎಮರ್ಜೆನ್ಸಿ ಸಮಯದಲ್ಲಿ ಸಹಾಯ ಆಗಲಿ ಎನ್ನುವ ಕಾರಣಕ್ಕೆ. ಕ್ರೆಡಿಟ್ ಕಾರ್ಡ್ ನಲ್ಲಿ ಎಮರ್ಜೆನ್ಸಿ ಸಮಯಕ್ಕೆ ಸಿಗುವ ಸಾಲವೆ (Loan) ಹೆಚ್ಚು ಅನುಕೂಲ ಆಗಿರುತ್ತದೆ.
ಆದರೆ ಈ ಥರ ಕ್ರೆಡಿಟ್ ಲೈನ್ ಸಿಗಬೇಕು ಎಂದರೆ ಮೊದಲಿಗೆ ನೀವು ಅನುಮೋದನೆ ಪಡೆದುಕೊಳ್ಳಬೇಕು. ಇದೆಲ್ಲವನ್ನು ಮಾಡುವ ಮೂಲಕ ನಿಮ್ಮ ಕ್ರೆಡಿಟ್ ಸಾಲ ಚೆಕ್ ನಲ್ಲಿ ಇಟ್ಟುಕೊಳ್ಳಲು ಸಹಾಯ ಆಗುತ್ತದೆ.
ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಕೊಡೋ ಬ್ಯಾಂಕ್ ಗಳಿವು! 20 ಲಕ್ಷಕ್ಕೆ ಬಡ್ಡಿ, ಇಎಂಐ ಲೆಕ್ಕಾಚಾರ ಇಲ್ಲಿದೆ
5. ಕ್ರೆಡಿಟ್ ಬಳಕೆ ಅನುಪಾತ ಲಿಮಿಟ್: ನಿಮ್ಮ ಕ್ರೆಡಿಟ್ ಕಾರ್ಡ್ ನ ಸಿಬಿಲ್ ಸ್ಕೋರ್ ಉತ್ತಮವಾಗಿ ಇರಬೇಕು ಎಂದರೆ, ಕ್ರೆಡಿಟ್ ಬಳಕೆ ಅನುಪಾತ (CUR) 30% ಗಿಂತಲು ಕಡಿಮೆ ಇಟ್ಟುಕೊಳ್ಳಬೇಕು. CUR ನಲ್ಲಿ ನಿಮ್ಮ ಕ್ರೆಡಿಟ್ ಲಿಮಿಟ್ ಇಂದ ನೀವು ಬಳಸಿರುವ ಆವರ್ತಕ ಕ್ರೆಡಿಟ್ ಪರ್ಸೆಂಟೇಜ್ ಹಾಗೂ ಕ್ರೆಡಿಟ್ ಸ್ಕೋರ್ ಮೇಲೆ ನೇರ ಬೋರಿಂಗ್ ಇರುತ್ತದೆ.
ಕಡಿಮೆ ಕ್ರೆಡಿಟ್ ಅನುಪಾತ ಇದ್ದರೆ, ನೀವು ಕ್ರೆಡಿಟ್ ಕಾರ್ಡ್ ಅನ್ನು ಸರಿಯಾಗಿ ಬಳಕೆ ಮಾಡುತ್ತಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ. ಸಾಲ ಪಡೆಯುವ ವೇಳೆ Loan ನೀಡುವವರು ಇದೆಲ್ಲವನ್ನು ಗಮನಿಸಿ ನಿಮಗೆ Loan ಕೊಡುತ್ತಾರೆ.
Not getting a loan because of the CIBIL score, Increase CIBIL Score in 15 Days
Our Whatsapp Channel is Live Now 👇