ನವೆಂಬರ್ ತಿಂಗಳಿನಲ್ಲಿ 15 ದಿನ ಬ್ಯಾಂಕ್ ರಜೆ, ಈಗಲೇ ಬ್ಯಾಂಕ್ ಕೆಲಸ ಇದ್ರೆ ಮುಗಿಸಿಕೊಳ್ಳಿ

Story Highlights

November Bank Holiday : ಹಬ್ಬದ ಸೀಸನ್ (festival season) ಆರಂಭವಾಗಿದೆ, ಹಾಗಾಗಿ ಸರ್ಕಾರಿ ಕಚೇರಿಗಳು (government office) ಹಾಗೂ ಬ್ಯಾಂಕ್ (bank) ಗಳಿಗೆ ಹೆಚ್ಚು ದಿನಗಳ ರಜೆ (bank holidays) ಇರುತ್ತದೆ

November Bank Holiday : ಈಗಂತೂ ಹಬ್ಬದ ಸೀಸನ್ (festival season) ಆರಂಭವಾಗಿದೆ, ಹಾಗಾಗಿ ಸರ್ಕಾರಿ ಕಚೇರಿಗಳು (government office) ಹಾಗೂ ಬ್ಯಾಂಕ್ (bank) ಗಳಿಗೆ ಹೆಚ್ಚು ದಿನಗಳ ರಜೆ (bank holidays) ಇರುತ್ತದೆ

ನವೆಂಬರ್ ತಿಂಗಳಿನಲ್ಲಿ ಬ್ಯಾಂಕ್ ಅರ್ಧ ತಿಂಗಳಿನಷ್ಟು ರಜೆ ಹೊಂದಿರುವುದರಿಂದ ಗ್ರಾಹಕರು ಬ್ಯಾಂಕಿನ ಕೆಲಸಗಳನ್ನು ಬೇಗ ಮುಗಿಸಿಕೊಳ್ಳುವುದು ಒಳ್ಳೆಯದು.

ಇನ್ನೂ ಒಂದು ವಾರಗಳಲ್ಲಿ ಅಕ್ಟೋಬರ್ ತಿಂಗಳು ಮುಗಿಯಲಿದೆ, ಪ್ರತಿ ತಿಂಗಳಿನ ಬ್ಯಾಂಕ್ ರಜಾ ಗಳ ಬಗ್ಗೆ ಆರ್ ಬಿ ಐ (RBI) ರಜೆಗಳ ಲಿಸ್ಟ್ ಅನ್ನು ಬಿಡುಗಡೆ ಮಾಡುತ್ತದೆ.

ಅದರಂತೆ ನವೆಂಬರ್ ತಿಂಗಳಿನ ರಜಾ ಲಿಸ್ಟ್ ಬಿಡುಗಡೆ (November month holiday list announced) ಆಗಿದ್ದು ಹಬ್ಬಗಳ ಕಾರಣದಿಂದಾಗಿ ಬಹುತೇಕ ಅರ್ಧ ತಿಂಗಳು ಬ್ಯಾಂಕುಗಳಿಗೆ ರಜೆ ಇದೆ. ನವೆಂಬರ್ ತಿಂಗಳಲ್ಲಿ ಯಾವ ಯಾವಾಗ ರಜಾ ದಿನಗಳು ಘೋಷಣೆಯಾಗಿವೆ ನೋಡೋಣ.

ಅಕ್ಟೋಬರ್ ತಿಂಗಳಿನಲ್ಲಿಯೂ ದಸರಾ ಹಬ್ಬದ ನಿಮಿತ್ತ ಬ್ಯಾಂಕ್ ಗೆ ಸುಮಾರು ವಾರಕ್ಕಿಂತ ಹೆಚ್ಚಿನ ದಿನಗಳ ಕಾಲ ರಜಾ ಇತ್ತು. ಇದೀಗ ನವೆಂಬರ್ ತಿಂಗಳಿನಲ್ಲಿಯೂ ಕೂಡ ಹೆಚ್ಚಿನ ರಜಾ ದಿನಗಳು ಇರುವುದರಿಂದ ಬ್ಯಾಂಕ್ ಹದಿನೈದು ದಿನಗಳಷ್ಟು ಕಾಲ ಮುಚ್ಚಿರುತ್ತದೆ

ಆದರೆ ಸ್ಥಳೀಯ ರಜೆಗಳ ಆಧಾರದ ಮೇಲೆ ಈ ರಜಾ ದಿನಗಳು ನಿರ್ಧಾರಿತವಾಗುತ್ತವೆ. ಆದ್ದರಿಂದ ಗ್ರಾಹಕರು ತಮ್ಮ ಬ್ಯಾಂಕ್ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿಕೊಂಡರೆ ಉತ್ತಮ.

ಮಹಿಳೆಯರು ವ್ಯಾಪಾರ ಮಾಡಿಕೊಳ್ಳಲು ಸಿಗಲಿದೆ 10 ಲಕ್ಷ! ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಿ

ನವೆಂಬರ್ ತಿಂಗಳಿನ ಬ್ಯಾಂಕ್ ರಜಾ ದಿನಗಳು – November Bank Holidays

Bank Holidaysನವೆಂಬರ್ 1 ಕನ್ನಡ ರಾಜ್ಯೋತ್ಸವ
ನವೆಂಬರ್ 5 ಭಾನುವಾರ
ನವೆಂಬರ್ 10 ಶುಕ್ರವಾರ ಮಂಗಳ ಉತ್ಸವ
ನವೆಂಬರ್ 11 ಎರಡನೆಯ ಶನಿವಾರ
ನವೆಂಬರ್ 12 ಭಾನುವಾರ
ನವೆಂಬರ್ 13 14 ಮತ್ತು 15 ದೀಪಾವಳಿ ಪೂಜೆಗಳು
ನವೆಂಬರ್ 19 ಭಾನುವಾರ
ನವೆಂಬರ್ 20 ಛತ್ ಕರಣ್
ನವೆಂಬರ್ 23 ಏಗಾಸ್ ಬಗ್ವಾಲ್
ನವೆಂಬರ್ 25 ನಾಲ್ಕನೇ ಶನಿವಾರ
ನವೆಂಬರ್ 26 ಭಾನುವಾರ
ನವೆಂಬರ್ 27 ಗುರುನಾನಕ ಜಯಂತಿ
ನವೆಂಬರ್ 30 ಕನಕದಾಸ ಜಯಂತಿ

ಸ್ಥಳೀಯ ರಜೆಗಳು ಆಯಾ ಭಾಗಕ್ಕೆ ಅನ್ವಯವಾಗಿ ಇರುತ್ತವೆ. ಹಾಗೂ ಯಾವುದೇ ರಾಜಾ ದಿನಗಳಲ್ಲಿಯೂ ನೀವು ಇಂಟರ್ನೆಟ್ ಬ್ಯಾಂಕಿಂಗ್ (Internet Banking) ಅಥವಾ ಮೊಬೈಲ್ ಬ್ಯಾಂಕಿಂಗ್ (Mobile Banking) ಮೂಲಕ ಬ್ಯಾಂಕಿಂಗ್ ಹಣಕಾಸು ಕೆಲಸಗಳನ್ನು ಮಾಡಿಕೊಳ್ಳಬಹುದು.

November 2023 Month Bank Holidays List

Related Stories