ಹೊಸ ಗ್ಯಾಸ್ ಕನೆಕ್ಷನ್ ಪಡೆಯೋಕೆ ಒಂದು ಮಿಸ್ ಕಾಲ್ ಸಾಕು! ಮನೆ ಬಾಗಿಲಿಗೆ ಬರುತ್ತೆ ಗ್ಯಾಸ್ ಸಿಲೆಂಡರ್

ಇನ್ನು ಹೊಸ ಸಿಲೆಂಡರ್ ಕನೆಕ್ಷನ್ (New gas connection) ಪಡೆದುಕೊಳ್ಳಲು ಯಾರು ಬಯಸುತ್ತಾರೋ ಅಂಥವರಿಗೆ ಈಗ ಗ್ಯಾಸ್ ಬುಕ್ (Gas Booking) ಮಾಡುವುದು ಇನ್ನಷ್ಟು ಸುಲಭವಾಗಲಿದೆ.

ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲೆಂಡರ್ (gas cylinder) ಬಳಸದೆ ಇರುವವರು ಯಾರೂ ಇಲ್ಲ ಎನ್ನಬಹುದು. ಗೃಹ ಬಳಕೆಯ ಎಲ್ ಪಿಜಿ (LPG) ದರದಲ್ಲಿಯೂ ಕೂಡ ಈಗ 200ರೂಪಾಯಿಗಳನ್ನು ಕಡಿತಗೊಳಿಸಿದೆ.

ಇನ್ನು ಹೊಸ ಸಿಲೆಂಡರ್ ಕನೆಕ್ಷನ್ (New gas connection) ಪಡೆದುಕೊಳ್ಳಲು ಯಾರು ಬಯಸುತ್ತಾರೋ ಅಂಥವರಿಗೆ ಈಗ ಗ್ಯಾಸ್ ಬುಕ್ (Gas Booking) ಮಾಡುವುದು ಇನ್ನಷ್ಟು ಸುಲಭವಾಗಲಿದೆ.

ಮದುವೆ ಆದ ಮಗ ಮರಣ ಹೊಂದಿದ್ರೆ ಆತನ ಆಸ್ತಿ, ತಂದೆ-ತಾಯಿಗೋ? ಹೆಂಡತಿಗೋ? ಕಾನೂನು ಏನು ಹೇಳುತ್ತೆ

Book gas cylinder like this and get Rupees 80 extra cash back

ಒಂದು ಮಿಸ್ ಕಾಲ್ ಕೊಟ್ರೆ ಗ್ಯಾಸ್ ಬುಕ್ ಆಗತ್ತೆ!

ಹೌದು, ಎಲ್ಲರಿಗೂ ಗೊತ್ತಿರುವ ಹಾಗೆ HP, indane, Bharath gas ಮೊದಲಾದವು ಅನ್ ಲೈನ್ (Online) ಮೂಲಕವೇ ತಮ್ಮ ಸೇವೆಯನ್ನು ನೀಡುತ್ತಿವೆ. ಮೊಬೈಲ್ ನಲ್ಲಿ ಆಯಾ ನಂಬರ್ ಗೆ ಕರೆ ಮಾಡುವುದರ ಮೂಲಕ ಗ್ಯಾಸ್ ಖಾಲಿ ಆದ್ರೆ ತಕ್ಷಣ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಇದೀಗ ಅನ್ ಲೈನ್ ಮೂಲಕ ಹೊಸ ಕನೆಕ್ಷನ್ ಕೂಡ ತೆಗೆದುಕೊಳ್ಳಲು ಸಾಧ್ಯವಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಶನ್ ನ ಗ್ಯಾಸ್ ಸಂಪರ್ಕ ಪಡೆಯುವುದು ಇನ್ನಷ್ಟು ಸುಲಭವಾಗಿದೆ. ಕೇವಲ ಒಂದೇ ಒಂದು ಮಿಸ್ ಕಾಲ್ ನಿಂದ ಕ್ಷಣಮಾತ್ರದಲ್ಲಿ ಗ್ಯಾಸ್ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಸಮಸ್ತ ದೇಶದಲ್ಲಿಯೇ ಮಹಿಳೆಯರು ಗ್ಯಾಸ್ ಸಿಲೆಂಡರ್ ಬಳಸಿ ಅಡುಗೆ ಮಾಡುವಂತಹ ಕೆಲಸ ಮಾಡಿಕೊಟ್ಟಿದೆ ಕೇಂದ್ರ ಸರ್ಕಾರ. ಪಿಎಂ ಉಜ್ವಲಾ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನ್ನು ಕೂಡ ಬಿಪಿಎಲ್ (BPL Ration Card) ಹಾಗೂ ಬಡತನ ರೇಖೆಗಿಂತ ಕೆಳಗಿನವರು ಬುಕ್ಕಿಂಗ್ ಮಾಡಬಹುದು.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಕೇವಲ ₹50 ರೂಪಾಯಿ ಉಳಿಸಿ, ₹35 ಲಕ್ಷ ಗಳಿಸಿ!

ಇಂಡಿಯನ್ ಆಯಿಲ್ ಕಾರ್ಪೋರೇಶನ್ ನ ಹೊಸ ಸೇವೆ!

Gas Cylinderದೆಹಲಿ ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಈ ಅನ್ ಲೈನ್ ಸೇವೆಯನ್ನು ಆರಂಭಿಸಲಾಯಿತು. ಆನ್ ಲೈನ್ ಮೂಲಕವೇ ತಡೆರಹಿತ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈ ಸೇವೆಯನ್ನು IOC ಆರಂಭಿಸಿದೆ. ಇದನ್ನ 2015ರಲ್ಲಿಯೆ ಆರಂಭಿಸಲಾಗಿದ್ದು, ಹಂತ ಹಂತವಾಗಿ ದೇಶಾದ್ಯಂತ ವಿಸ್ತರಿಸಲಾಗುತ್ತದೆ.

ಮಿಸ್ ಕಾಲ್ ಕೊಡಿ ಗ್ಯಾಸ್ ಸಂಪರ್ಕ ಪಡೆಯಿರಿ;

ಹೊಸ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಸಂಪರ್ಕ ಪಡೆಯಲು ಬಯಸುವವರು ಇಂಡಿಯನ್ ಗ್ಯಾಸ್ ನ whatsApp ನಂಬರ್ 8454955555 ಈ ಸಂಖ್ಯೆಗೆ ಒಂದು ಮಿಸ್ ಕಾಲ್ ಕೊಟ್ರೆ ನಿಮಗೆ ಅಲ್ಲಿಂದ ಸಂದೇಶ ಬರುತ್ತದೆ.

ಎಸ್ ಎಂ ಎಸ್ ನಲ್ಲಿ ಕೊಡಲಾಗುವ ಲಿಂಕ್ ಕ್ಲಿಕ್ ಮಾಡಬೇಕು. ಅಲ್ಲಿ ಕೇಳಲಾಗುವ ಮಾಹಿತಿ ಭರ್ತಿ ಮಾಡಿ ಮುಂಗಡ ಹಣ ಪಾವತಿ ಮಾಡಿದರೆ ಹೊಸ ಗ್ಯಾಸ್ ಸಂಪರ್ಕ ಬುಕ್ ಆಗುತ್ತದೆ. ಇನ್ನು ಇಂಡೆನ್ ಗ್ಯಾಸ್ ಅಧಿಕೃತ ವೆಬ್ಸೈಟ್ ಮೂಲಕವೂ ಬುಕ್ಕಿಂಗ್ ಮಾಡಿಕೊಳ್ಳಬಹುದು.

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇಡಬಹುದು? ಹೆಚ್ಚು ಹಣ ಇಟ್ರೆ ಏನಾಗುತ್ತೆ ಗೊತ್ತಾ?

ಗ್ಯಾಸ್ ಹೊಸ ಸಂಪರ್ಕಕ್ಕೆ ಬೇಕಾಗಿರುವ ದಾಖಲೆಗಳು:

ಆಧಾರ್ ಸಂಖ್ಯೆ
ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಬ್ಯಾಂಕ್ ಖಾತೆಯ ವಿವರ
ವಾಸ ಸ್ಥಳ ವಿಳಾಸ

ಇಷ್ಟು ದಾಖಲೆಗಳನ್ನು ನೀಡಿ ಸುಲಭವಾಗಿ ಹೊಸ ಗ್ಯಾಸ್ ಸಿಲೆಂಡರ್ ಸಂಪರ್ಕ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಿಲೆಂಡರ್ ವಿತರಕರನ್ನು ಸಂಪರ್ಕಿಸಿ.

One missed call is enough to get a new gas connection

Related Stories