Personal Loan: ಆಧಾರ್ ಮತ್ತು ಪ್ಯಾನ್ ಕಾರ್ಡ್ ಇದ್ದರೆ ಸಾಕು, ಕ್ಷಣಗಳಲ್ಲಿ ಪರ್ಸನಲ್ ಲೋನ್‌ ಸಿಗುತ್ತೆ!

Personal Loan: ಆನ್‌ಲೈನ್ ಪರ್ಸನಲ್ ಲೋನ್‌ಗಳು ತಕ್ಷಣದ ನೆರವಿನಂತೆ ಕಂಡರೂ, ಮರೆಮಾಚಿದ ಷರತ್ತುಗಳು, ಡೇಟಾ ದುರುಪಯೋಗ ಮತ್ತು ಕಿರುಕುಳದ ಅಪಾಯಗಳು ಹೆಚ್ಚಾಗಿವೆ; ಸಾಲ ಪಡೆಯುವ ಮುನ್ನ ಎಚ್ಚರಿಕೆ ಅಗತ್ಯ.

Personal Loan: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಪರ್ಸನಲ್ ಲೋನ್ ಅಪ್ಲಿಕೇಶನ್‌ಗಳು ವೇಗವಾಗಿ ಹೆಚ್ಚಾಗಿವೆ. ಕೇವಲ ಆಧಾರ್ ಮತ್ತು ಪ್ಯಾನ್ ಕಾರ್ಡ್ ಇದ್ದರೆ ಸಾಕು, ಕ್ಷಣಗಳಲ್ಲಿ ಸಾಲ ಮಂಜೂರಾಗುತ್ತಿದೆ. ಆದರೆ ಇದೇ ಸುಲಭತೆ ಹಲವರನ್ನು ಅನಿರೀಕ್ಷಿತ ಸಂಕಷ್ಟಗಳಿಗೆ ತಳ್ಳುತ್ತಿರುವುದು ವಾಸ್ತವ.

ಕೆಲವು ಲೋನ್ ಆ್ಯಪ್‌ಗಳು ನೀಡಿದ ಮೊತ್ತಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ದೂರುಗಳು ಹೆಚ್ಚಾಗಿವೆ. ಸಾಲ ಸಂಪೂರ್ಣ ತೀರಿಸಿದ ಬಳಿಕವೂ ಮತ್ತೆ ಹಣ ಕಟ್ಟಬೇಕೆಂದು ಕರೆಗಳು, ಸಂದೇಶಗಳ ಮೂಲಕ ಕಿರುಕುಳ ನೀಡುವ ಘಟನೆಗಳು ಕಳೆದ ಕೆಲವು ವರ್ಷಗಳಿಂದ ಕೇಳಿಬರುತ್ತಿವೆ. ಇತ್ತೀಚೆಗೆ ನಿಯಂತ್ರಣ ಸ್ವಲ್ಪ ಬಲವಾಗಿದ್ರೂ, ಅಪಾಯ ಇನ್ನೂ ಸಂಪೂರ್ಣವಾಗಿ ಕಡಿಮೆಯಾಗಿಲ್ಲ.

ಆನ್‌ಲೈನ್ ಪರ್ಸನಲ್ ಲೋನ್‌ಗೆ ಅರ್ಜಿ ಹಾಕುವಾಗ, ನಿಮ್ಮ ಪ್ಯಾನ್, ಆಧಾರ್, ಬ್ಯಾಂಕ್ ವಿವರಗಳಂತಹ ಮಾಹಿತಿಯನ್ನು ನೀಡಬೇಕಾಗುತ್ತದೆ. ಈ ಡೇಟಾ ಕೆಲವೊಮ್ಮೆ ತೃತೀಯ ಪಕ್ಷಗಳ ಕೈಗೆ ಹೋಗುವ ಸಾಧ್ಯತೆ ಇರುತ್ತದೆ. ಇಂತಹ ಮಾಹಿತಿ ದುರುಪಯೋಗವಾದರೆ ಹಣಕಾಸು ಮೋಸಕ್ಕೆ ದಾರಿ ತೆರೆದುಕೊಳ್ಳಬಹುದು.

ಇದನ್ನೂ ಓದಿ: ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿ! ಚಿನ್ನದ ಬೆಲೆ ಭಾರೀ ಇಳಿಕೆ, ರಾತ್ರೋ-ರಾತ್ರಿ ಕುಸಿತ

ಸಾಲ ತೆಗೆದುಕೊಳ್ಳುವ ಮುನ್ನ ಗಮನಿಸಬೇಕಾದ ಅಂಶಗಳು

ಯಾವುದೇ ಲೋನ್ ಆ್ಯಪ್ ಅಥವಾ ವೆಬ್‌ಸೈಟ್ ಬಳಸುವ ಮುನ್ನ ಅದು RBI ನಿಯಂತ್ರಣದಲ್ಲಿ ಇರುವ ಸಂಸ್ಥೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಪ್ಲಿಕೇಶನ್ ಕೇಳುವ ಎಲ್ಲ ಅನುಮತಿಗಳನ್ನು ಅಂಧವಾಗಿ ಒಪ್ಪಿಕೊಳ್ಳಬೇಡಿ. ವಿಶೇಷವಾಗಿ ಕಾನ್ಟಾಕ್ಟ್‌ ಲಿಸ್ಟ್, ಫೋಟೋ ಗ್ಯಾಲರಿ ಪ್ರವೇಶ ನೀಡುವುದು ಅಪಾಯಕಾರಿ.

ಗೋಚರವಾಗದೆ ಇರುವ ಷರತ್ತುಗಳು, ಗೌಪ್ಯತಾ ನೀತಿ ಮತ್ತು ನಿಯಮಗಳನ್ನು ಜಾಗ್ರತೆಯಿಂದ ಓದಿದ ಬಳಿಕವೇ ಅರ್ಜಿ ಸಲ್ಲಿಸುವುದು ಉತ್ತಮ. ತಕ್ಷಣದ ಅಗತ್ಯಕ್ಕಾಗಿ ತೆಗೆದುಕೊಳ್ಳುವ ಸಾಲ, ಮುಂದಿನ ದಿನಗಳಲ್ಲಿ ದೊಡ್ಡ ತಲೆನೋವಾಗದಂತೆ ಎಚ್ಚರಿಕೆ ವಹಿಸುವುದೇ ಸುರಕ್ಷಿತ ಮಾರ್ಗ.

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories