ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಗಂಡ-ಹೆಂಡತಿ ಇಬ್ಬರಿಗೂ ಬಡ್ಡಿಯೇ ₹1,11,000 ರೂಪಾಯಿ ಸಿಗುತ್ತೆ!

Story Highlights

ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಪೆನ್ಶನ್ (Pension) ರೂಪದಲ್ಲಿ ಆದಾಯ ಪಡೆಯಬಹುದು. ಇದು ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆ ಆಗಿದೆ.

ನೀವು ಹೂಡಿಕೆ ಮಾಡಬೇಕು ಎಂದು ಪ್ಲಾನ್ ಮಾಡಿದರೆ, ಪೋಸ್ಟ್ ಆಫೀಸ್ ಗಿಂತ (Post Office Scheme) ಉತ್ತಮವಾದ ಹೂಡಿಕೆ ಇರುವುದಕ್ಕೆ ಸಾಧ್ಯವಿಲ್ಲ ಎಂದರೂ ತಪ್ಪಲ್ಲ. ಏಕೆಂದರೆ ಇದು ಕೇಂದ್ರ ಸರ್ಕಾರಕ್ಕೆ ಸೇರಿದ ಇಲಾಖೆ ಆಗಿದ್ದು, ಇಲ್ಲಿ ನೀವು ಹೂಡಿಕೆ ಮಾಡುವ ಎಲ್ಲಾ ಯೋಜನೆಗಳು ಕೂಡ ಒಳ್ಳೆಯ ಆದಾಯವನ್ನೇ ನೀಡುತ್ತದೆ.

ಹಾಗೆಯೇ ನಿಮ್ಮ ಹಣ ಸುರಕ್ಷಿತವಾಗಿಯೂ ಇರುತ್ತದೆ. ಹಾಗಾಗಿ ಎಲ್ಲರೂ ಸಹ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್ ನಲ್ಲಿ ಬಹಳ ಹೆಚ್ಚು ಹಣವನ್ನು ಮಾತ್ರ ಹೂಡಿಕೆ ಮಾಡಬೇಕು ಎನ್ನುವ ಹಾಗೇನು ಇಲ್ಲ. ಮಧ್ಯಮವರ್ಗಕ್ಕೆ ಸೇರಿದವರು, ಬಡವರು ಕೂಡ ಕಡಿಮೆ ಮೊತ್ತದಿಂದಲೇ ಹೂಡಿಕೆ (Savings Scheme) ಶುರು ಮಾಡಬಹುದು.

ಅಂಥ ಹಲವು ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿದೆ. ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು, ಹಿರಿಯರಿಗೆ ಬರುವ ಪೆನ್ಶನ್ ವರೆಗೂ ಕೂಡ ಪೋಸ್ಟ್ ಆಫೀಸ್ ನಲ್ಲಿ ಯೋಜನೆಗಳು ಲಭ್ಯವಿದೆ. ಅಂಥದ್ದೇ ಒಂದು ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಕೆನರಾ ಬ್ಯಾಂಕ್ ನಲ್ಲಿ 3 ವರ್ಷಕ್ಕೆ ಅಂತ 1 ಲಕ್ಷ ಇಟ್ರೆ ಹಿರಿಯ ನಾಗರಿಕರಿಗೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಡೀಟೇಲ್ಸ್

ಒಂದು ವೇಳೆ ನೀವು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದು ಉತ್ತಮ ಅಂದುಕೊಂಡಿದ್ದರೆ, ನಿಮಗೆ ಒಳ್ಳೆಯ ಆದಾಯ ಬರುವಂಥ ಒಂದು ಯೋಜನೆಯ ಬಗ್ಗೆ ಇಂದು ತಿಳಿಸುತ್ತೇವೆ.

ಹಿರಿಯ ನಾಗರೀಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಪೆನ್ಶನ್ (Pension) ರೂಪದಲ್ಲಿ ಆದಾಯ ಪಡೆಯಬಹುದು. ಇದು ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆ ಆಗಿದೆ. ಈ ಒಂದು ಯೋಜನೆಯ ಅಡಿಯಲ್ಲಿ ನೀವು ಪ್ರತಿ ತಿಂಗಳು ಆದಾಯ ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಪೋಸ್ಟ್ ಆಫೀಸ್ ಮಂತ್ಲಿ ಇನ್ವೆಸ್ಟ್ಮೆಂಟ್ ಸ್ಕೀಮ್ ನಲ್ಲಿ (Monthly Investment Scheme) ಒಂದು ಸಾರಿ ನೀವು ಹೂಡಿಕೆ ಮಾಡಬೇಕು, ನೀವು ಹೂಡಿಕೆ ಮಾಡುವ ಮೊತ್ತಕ್ಕೆ ಬಡ್ಡಿ ಸೇರಿಸಲಾಗುತ್ತದೆ, ಪ್ರತಿ ತಿಂಗಳು ಬಡ್ಡಿಯ ಆದಾಯ ಸಿಗುತ್ತದೆ. ಇಲ್ಲಿ ನಿಮ್ಮ ಹಣ ಕೂಡ ಸುರಕ್ಷಿತವಾಗಿ ಇರುತ್ತದೆ.

ಹಾಗಾಗಿ 60ರ ನಂತರ ಜೀವನ ಚೆನ್ನಾಗಿರಬೇಕು ಎಂದರೆ, ಎರಡನೇ ಯೋಚನೆ ಮಾಡದೆಯೇ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಶುರು ಮಾಡಬಹುದು. ಹಾಗಿದ್ದಲ್ಲಿ ಪ್ರತಿ ತಿಂಗಳು ₹5000 ಆದಾಯ ಬರಬೇಕು ಎಂದರೆ ನೀವು ಎಷ್ಟು ಹೂಡಿಕೆ ಮಾಡಬೇಕು ಎಂದು ತಿಳಿಯೋಣ..

ಯಾವುದೇ ಬ್ಯಾಂಕಿನಿಂದ ಲೋನ್ ತಗೊಂಡು ಕಟ್ಟದೆ ಇರೋರಿಗೆ ಬಿಗ್ ಅಪ್ಡೇಟ್! ಇನ್ಮುಂದೆ ಹೊಸ ರೂಲ್ಸ್

ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯ ಅಡಿಯಲ್ಲಿ ಸಿಂಗಲ್ ಖಾತೆ ಮತ್ತು ಜಾಯಿಂಟ್ ಖಾತೆ ಎರಡನ್ನು ಕೂಡ ತೆರೆಯಬಹುದು. ಸಿಂಗಲ್ ಖಾತೆಯಲ್ಲಿ ಮ್ಯಾಕ್ಸಿಮಮ್ 9 ಲಕ್ಷ ಹೂಡಿಕೆ ಮಾಡಬಹುದು, ಈ ಮೊತ್ತಕ್ಕೆ ನಿಮಗೆ ಪ್ರತಿ ತಿಂಗಳು ₹5550 ರೂಪಾಯಿ ಆದಾಯ ಬರುತ್ತದೆ.

ಗಂಡ ಹೆಂಡತಿ ಇಬ್ಬರು ಸೇರಿ, ಜಾಯಿಂಟ್ ಅಕೌಂಟ್ ಓಪನ್ ಮಾಡಿದರೆ ₹15ಲಕ್ಷದವರೆಗೂ ಹೂಡಿಕೆ ಮಾಡಬಹುದು, 15 ಲಕ್ಷ ಹೂಡಿಕೆಗೆ ವಾರ್ಷಿಕವಾಗಿ ನಿಮಗೆ ₹1,11,000 ರೂಪಾಯಿ ಆದಾಯ ಸಿಗುತ್ತದೆ. ಇದು ಉತ್ತಮವಾದ ಯೋಜನೆ ಆಗಿದ್ದು, ನೀವು ಕೂಡ ಇದರಲ್ಲಿ ಹೂಡಿಕೆ ಮಾಡಬಹುದು.

Pension Guarantee of 5000 per month in this scheme of Post Office

Related Stories