Business News

ಪಿಎಂ ಕಿಸಾನ್ 17ನೇ ಕಂತು ಬಿಡುಗಡೆ, ಆದರೆ ಇಂತಹ ರೈತರ ಖಾತೆಗೆ ಹಣ ಈ ಕಾರಣಕ್ಕೆ ಬರಲ್ಲ!

PM Kisan Scheme : ರೈತರ ಅಭಿವೃಧಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ. ಹೌದು ಈಗಾಗಲೇ ಬೆಳೆವಿಮೆ, ಕಿಸಾನ್ ವಿಕಾಸ್, ರೈತ ಸಿರಿ ಇಂತಹ ಯೋಜನೆಗಳನ್ನು ಸರಕಾರ ಜಾರಿಗೆ ತಂದಿದ್ದು ಅದರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡ ಬಹಳಷ್ಟು ಪ್ರಮುಖವಾಗಿದೆ.‌

ಈಗಾಗಲೇ ಈ ಯೋಜನೆಯ ಮೂಲಕ ಹಲವು ರೈತರು ಸೌಲಭ್ಯ ಪಡೆದುಕೊಂಡಿದ್ದು ಇದೀಗ ಕಿಸಾನ್ ಯೋಜನೆಯ 17ನೇ ಕಂತಿನ ಬಿಡುಗಡೆ ಬಗ್ಗೆ ಅಪ್ಡೇಟ್ ಮಾಹಿತಿ ಬಂದಿದ್ದು, ಯಾವಾಗ ಜಮೆಯಾಗಲಿದೆ? ಯಾವೆಲ್ಲ ರೈತರಿಗೆ ಹಣ ಬಿಡುಗಡೆ ಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.

Subsidy Loan

ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ಭರ್ಜರಿ ಸಬ್ಸಿಡಿ! ಬಂಪರ್ ಕೊಡುಗೆ ಮಿಸ್ ಮಾಡ್ಕೋಬೇಡಿ

ಏನಿದು ಕಿಸಾನ್ ಯೋಜನೆ?

ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಎಂಬುದು ‌ ರೈತರ (Farmer) ಅಭಿವೃದ್ಧಿ ಗಾಗಿ ಜಾರಿ ಮಾಡಿರುವಂತಹ ಮುಖ್ಯ ಯೋಜನೆ. ಕೇಂದ್ರ ಸರ್ಕಾರವು ರೂಪಿಸಿರುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

ಇದರ ಮೂಲಕ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಬೆಂಬಲ ನೀಡಲಾಗುತ್ತದೆ. ಕೃಷಿಗಾಗಿ ಬಿತ್ತನೆ ಬೀಜ ಖರೀದಿಗೆ ಹಾಗೂ ರಸಗೊಬ್ಬರ ಖರೀದಿ, ಕೃಷಿ ಉಪಕರಣ ಸೇರಿದಂತೆ ಖರೀದಿ ಮಾಡಲು ಹಣ ಪ್ರಯೋಜನ ವಾಗಲಿದೆ.

ಇಷ್ಟು ಹಣ ಬಿಡುಗಡೆ

ಪಿಎಂ ಕಿಸಾನ್ ಯೋಜನೆಯ ಮೂಲಕ ಅರ್ಹ ರೈತರಿಗೆ ವರ್ಷಕ್ಕೆ ಒಟ್ಟು 6,000 ಮೊತ್ತ ನೀಡಲಾಗುತ್ತದೆ. ಖಾತೆಗೆ (Bank Account) 2,000 ರೂಗಳಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಈ ಆರು ಸಾವಿರ ರೂ ಅನ್ನು ಜಮೆ ಮಾಡಲಾಗುತ್ತಿದ್ದು ಇದುವರೆಗೆ ಹದಿನಾರು ಕಂತಿನ ವರೆಗೆ ಹಣ ಬಿಡುಗಡೆಯಾಗಿದ್ದು ಇದೀಗ ಪಿಎಂ ಕಿಸಾನ್ 17ನೇ ಕಂತು ಹಣ ಬಿಡುಗಡೆ ಮಾಡಿದೆ.

ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ₹2000 ರೂಪಾಯಿ ಸಿಗಲಿದೆ! ಪಿಎಂ ಕನ್ಯಾ ಯೋಜನೆ ಬಗ್ಗೆ ಸ್ಪಷ್ಟನೆ

PM Kisanಹದಿನೇಳನೆಯ ಕಂತಿನ ಹಣ ಬಿಡುಗಡೆ?

ಇದೀಗ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ಕೇಂದ್ರ ಸರ್ಕಾರ ದೇಶಾದ್ಯಂತ ಒಟ್ಟು 9.26 ಕೋಟಿ ರೈತರಿಗೆ ಒಟ್ಟು 20 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಿರುವ ಬಗ್ಗೆ ಗುಡ್ ನ್ಯೂಸ್ ನೀಡಿದ್ದು ಹಾಗಾಗಿ ಇದೇ ತಿಂಗಳಿನ ಒಳಗೆ ನಿಮ್ಮ‌ ಖಾತೆಗೆ ಈ ಹಣ ಬಿಡುಗಡೆಯಾಗಬಹುದು.

ಇದುವರೆಗು ಸುಮಾರು 11 ಕೋಟಿಗೂ ಹೆಚ್ಚು ಅರ್ಹ ರೈತ ಕುಟುಂಬಗಳು ಪಿಎಂ ಕಿಸಾನ್ ಸೌಲಭ್ಯ ಪಡೆದು ಕೊಂಡಿದ್ದು ಇದೀಗ ಹದಿನೇಳನೆಯ ಕಂತಿನ ಹಣ ಬಿಡುಗಡೆ ವಿಚಾರವಾಗಿ ರೈತರು ಪುಲ್ ಖುಷ್ ಆಗಿದ್ದಾರೆ.

ದೇಶದ ರೈತರಿಗಾಗಿ ಬಂತು ಕ್ರೆಡಿಟ್ ಕಾರ್ಡ್ ಸೌಲಭ್ಯ! ಸಿಗಲಿದೆ ₹50,000 ತನಕ ಸುಲಭ ಸಾಲ

ಆದ್ರೆ ಇಂತಹ ರೈತರಿಗೆ ಹಣ ಬರಲ್ಲ

ಪಿಎಂ‌ ಕಿಸಾನ್ ಹಣ ಖಾತೆಗೆ ಬರಬೇಕಾದರೆ ಇ-ಕೆವೈಸಿ ಕಡ್ಡಾಯ ವಾಗಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಕಡ್ಡಾಯ. ಇಲ್ಲದಿದ್ದಲ್ಲಿ ಈ ಹಣ ನಿಮ್ಮ ಖಾತೆಗೆ ಬರಲ್ಲ. ಇನ್ನು ಪಿಎಂ ಕಿಸಾನ್ ಯೋಜನೆಯ ಹಣ ನಿಮ್ಮ ಖಾತೆಗೆ ಬರಬೇಕಾದರೆ ನಿಮ್ಮ ಜಮೀನಿನ ಪಹಣಿಗೆ ಮಾಲೀಕನ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕೂಡ ಕಡ್ಡಾಯವಾಗಿದೆ.

ಹಾಗಾಗಿ ಈಗಾಗಲೇ ಸರಕಾರ ಹಣ ಬಿಡುಗಡೆ ಮಾಡಿದ್ದು ಹಣ ಜಮೆಯಾಗಿರುವ ಬಗ್ಗೆ ತಿಳಿಯಲು‌ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪೋರ್ಟಲ್ www.pmkisan.gov.in ಗೆ ಕ್ಲಿಕ್ ಮಾಡಿ ತಿಳಿಯಿರಿ. ಹೆಚ್ಚಿನ ಮಾಹಿತಿಗೆ‌ ನಿಮ್ಮ ಹತ್ತಿರದ ಕೃಷಿ ಕೇಂದ್ರ ಕ್ಕೆ ಭೇಟಿ ಮಾಡಬಹುದು‌.

PM Kisan 17th installment released, but the money does not come to the account of such farmers

Our Whatsapp Channel is Live Now 👇

Whatsapp Channel

Related Stories