ಸ್ವಂತ ವ್ಯವಹಾರ ನಡೆಸಲು ಸಣ್ಣ ವ್ಯಾಪಾರಿಗಳಿಗೆ 90 ಸಾವಿರ! ಕೇಂದ್ರದಿಂದ ಶುಭ ಸುದ್ದಿ

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಮೂಲಕ ಸಣ್ಣ ವ್ಯಾಪಾರಿಗಳಿಗೆ ಭದ್ರತೆ ಇಲ್ಲದೇ ₹90,000ವರೆಗೆ ಸಾಲ ಲಭ್ಯ. ಹಂತ ಹಂತವಾಗಿ ಸಾಲ ಸಿಗುತ್ತದೆ, 2030ರವರೆಗೆ ಕೇಂದ್ರ ಸರ್ಕಾರ ಈ ಯೋಜನೆ ವಿಸ್ತರಿಸಿದೆ.

Loan Scheme: ಸಣ್ಣ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದಿಂದ ದೊಡ್ಡ ಸಿಹಿ ಸುದ್ದಿ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ (PM Svanidhi Yojana) ಅಡಿಯಲ್ಲಿ ಈಗ ಯಾವುದೇ ಭದ್ರತೆ ಇಲ್ಲದೇ ₹90,000ವರೆಗೆ ಸಾಲ ಸಿಗಲಿದೆ.

ಈ ಯೋಜನೆಯನ್ನು ಮೊದಲ ಬಾರಿಗೆ 2020ರ ಜೂನ್‌ನಲ್ಲಿ ಪ್ರಾರಂಭಿಸಲಾಗಿತ್ತು. ನಗರ ಬೀದಿ ವ್ಯಾಪಾರಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆ ಆರಂಭವಾಯಿತು.

ಈ ಸಾಲವನ್ನು ಹಂತ ಹಂತವಾಗಿ ಪಡೆಯಬಹುದು. ಮೊದಲ ಹಂತದಲ್ಲಿ ₹15,000, ಎರಡನೇ ಹಂತದಲ್ಲಿ ₹25,000, ಹಾಗೂ ಮೂರನೇ ಹಂತದಲ್ಲಿ ₹50,000 ಲಭ್ಯ. ಹಿಂದಿನ ಯೋಜನೆಯಲ್ಲಿ ₹80,000ವರೆಗೆ ಮಾತ್ರ ಸಾಲ ಸಿಗುತ್ತಿತ್ತು, ಈಗ ಅದನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಭರ್ಜರಿ ಪೋಸ್ಟ್ ಆಫೀಸ್ ಯೋಜನೆ, 5 ಲಕ್ಷ ಹೂಡಿಕೆ ಮಾಡಿದ್ರೆ 15 ಲಕ್ಷ ಲಾಭ! ಬಂಪರ್ ಸ್ಕೀಮ್

ಸಾಲವನ್ನು ಸರಿಯಾಗಿ (Loan Repayment) ಪಾವತಿಸಿದರೆ ಮುಂದಿನ ಹಂತದಲ್ಲಿ ಹೆಚ್ಚು ಮೊತ್ತ ದೊರೆಯುತ್ತದೆ. ಉದಾಹರಣೆಗೆ, ಮೊದಲ ಹಂತದ ಸಾಲವನ್ನು ತೀರಿಸಿದ ನಂತರ ಎರಡನೇ ಹಂತಕ್ಕೆ ಅರ್ಜಿ ಹಾಕಬಹುದು. ಹಾಗೆಯೇ ಎರಡನೇ ಹಂತ ತೀರಿಸಿದ ಬಳಿಕ ಮೂರನೇ ಹಂತದ ₹50,000 ಲಭ್ಯವಾಗುತ್ತದೆ.

Business Loan

ಸಾಲದ ಅವಧಿ ಸಾಮಾನ್ಯವಾಗಿ 12 ತಿಂಗಳಿರುತ್ತದೆ. ಯಾವುದೇ ಪೈಪೋಟಿ ಅಥವಾ ಮಾರುಕಟ್ಟೆ ಅಪಾಯ ಇಲ್ಲದೆ ಈ ಸಾಲ ಸಿಗುತ್ತದೆ ಎಂಬುದು ಯೋಜನೆಯ ಪ್ರಮುಖ ಲಾಭ.

ಅರ್ಜಿಯ ಪ್ರಕ್ರಿಯೆ ಸುಲಭವಾಗಿದೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಫಾರ್ಮ್ ಭರ್ತಿ ಮಾಡಬೇಕು. ಆಧಾರ್ ಸಂಖ್ಯೆಯನ್ನು ಮೊಬೈಲ್ ನಂಬರೊಂದಿಗೇ ಲಿಂಕ್ ಮಾಡುವುದು ಕಡ್ಡಾಯ. e-KYC ಪರಿಶೀಲನೆಯೂ ನಡೆಯುತ್ತದೆ. ನಗರ ಸ್ಥಳೀಯ ಸಂಸ್ಥೆಯಿಂದ ದೃಢೀಕರಣ ಪತ್ರ ಕೂಡ ಅಗತ್ಯ.

ಕಾಮನ್ ಸರ್ವೀಸ್ ಸೆಂಟರ್ (CSC), ವಾಣಿಜ್ಯ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು (RRB), ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು (SFB), ಸಹಕಾರ ಬ್ಯಾಂಕುಗಳ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ.

ಸರ್ಕಾರ ಈ ಯೋಜನೆಯನ್ನು 2030ರವರೆಗೆ ವಿಸ್ತರಿಸಿದ್ದು, ಸಾವಿರಾರು ಸಣ್ಣ ವ್ಯಾಪಾರಿಗಳಿಗೆ ಜೀವನೋಪಾಯದಲ್ಲಿ ನೆರವಾಗಲಿದೆ.

PM Svanidhi Yojana, Loan for Small Vendors Without Security

English Summary

Related Stories