ಬರಿ ₹100 ರೂಪಾಯಿ ಕಟ್ಟಿದ್ರೆ, ಪೋಸ್ಟ್ ಆಫೀಸ್ ನೀಡುತ್ತೆ 8 ಲಕ್ಷ! ಬಂಪರ್ ಯೋಜನೆ

ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಜಿಟ್ (Recurring Deposit) ಯೋಜನೆ ಕೇವಲ 100 ರೂಪಾಯಿಯಿಂದ ಆರಂಭಿಸಿ, 10 ವರ್ಷದಲ್ಲಿ ರೂ.8 ಲಕ್ಷಕ್ಕೂ ಹೆಚ್ಚು ಲಾಭದೊಂದಿಗೆ ಭವಿಷ್ಯವನ್ನು ಸುರಕ್ಷಿತಗೊಳಿಸಲು ಅವಕಾಶ ನೀಡುತ್ತದೆ.

  • ಕಡಿಮೆ ಮೊತ್ತದಿಂದ ಭದ್ರತೆ ಹೊಂದಿದ ಉಳಿತಾಯ ಯೋಜನೆ
  • 6.7% ಬಡ್ಡಿದರ, 5 ರಿಂದ 10 ವರ್ಷಗಳ ಅವಧಿ
  • ತುರ್ತು ಅವಸ್ಥೆಗೆ ಸಾಲ ಸೌಲಭ್ಯವಿದೆ

ಪೋಸ್ಟ್ ಆಫೀಸ್ ಆರ್ ಡಿ ಯೋಜನೆಯು ಸರ್ಕಾರದ ಬೆಂಬಲ ಹೊಂದಿರುವ low-risk investment ಆಯ್ಕೆಯಾಗಿದೆ. ಈ ಯೋಜನೆಗೆ ದೇಶದಾದ್ಯಂತ 1.55 ಲಕ್ಷಕ್ಕೂ ಅಧಿಕ ಶಾಖೆಗಳ ಮೂಲಕ ಸುಲಭ ಪ್ರವೇಶವಿದೆ.

ಗ್ರಾಮೀಣ ಮತ್ತು ನಗರ ಭಾಗದ ಎಲ್ಲರಿಗೂ ಇದು ಸುಲಭವಾಗಿ ಲಭ್ಯ. 10 ವರ್ಷದ ಒಳಗಿನ ಮೈನರ್‌ಗೂ, ಜಾಯಿಂಟ್ ಅಕೌಂಟ್ ಮೂಲಕ ಖಾತೆ ಆರಂಭಿಸಬಹುದು.

ಈ ಯೋಜನೆಯ ವೈಶಿಷ್ಟ್ಯತೆ ಎಂದರೆ, ಈ ಯೋಜನೆ ಕೇವಲ ₹100 ರೂಪಾಯಿ ಮೂಲಕ ಪ್ರಾರಂಭಿಸಬಹುದಾಗಿದೆ. ಯಾವುದೇ ಮ್ಯಾಕ್ಸಿಮಮ್ ಲಿಮಿಟ್ ಇಲ್ಲದ ಕಾರಣದಿಂದು (flexible investment option) ಆಗಿ ಜನರನ್ನು ಸೆಳೆಯುತ್ತಿದೆ. ಯೋಜನೆಯ ಅವಧಿ 5 ವರ್ಷಗಳಾಗಿದ್ದು, ಅವಶ್ಯಕತೆ ಇದ್ದರೆ ಇನ್ನೊಂದು 5 ವರ್ಷಗಳ ಕಾಲ ವಿಸ್ತರಿಸಬಹುದು.

ಇದನ್ನೂ ಓದಿ: ಮಹಿಳೆಯರಿಗೆ 5 ಲಕ್ಷ ಸಾಲ, 25% ಬಡ್ಡಿ ರಿಯಾಯಿತಿ! ಟಾಪ್ ಲೋನ್ ಸ್ಕೀಮ್‌ಗಳು

ಇಂದು ವರ್ಷಕ್ಕೆ 6.7% ಬಡ್ಡಿದರದೊಂದಿಗೆ ಇದು ಉತ್ತಮ compound interest scheme ಆಗಿ ಬೆಳೆಯುತ್ತಿದೆ. ಒಬ್ಬರು ತಿಂಗಳಿಗೆ ₹5,000 ಹೂಡಿದರೆ, 5 ವರ್ಷಗಳಲ್ಲಿ ₹3,00,000 ಉಳಿತಾಯವಾಗಿ ₹56,830 ಬಡ್ಡಿ ಲಭಿಸುತ್ತದೆ – ಒಟ್ಟಾರೆ ₹3,56,830. ಹೀಗಾಗಿ ನಿಮ್ಮ financial goals ತಲುಪಲು ಇದು ಸಹಕಾರಿಯಾಗುತ್ತದೆ.

ಇದೇ ಹಣವನ್ನು ಇನ್ನೂ 5 ವರ್ಷಗಳವರೆಗೆ ಹೂಡಿದರೆ, ₹6 ಲಕ್ಷ ಡಿಪಾಜಿಟ್ ಹಾಗೂ ₹2,54,272 ಬಡ್ಡಿಯೊಂದಿಗೆ ₹8,54,272 ಮೊತ್ತ ರೂಪುಗೊಳ್ಳುತ್ತದೆ. ಇದನ್ನು ನಿವೃತ್ತಿ ಯೋಜನೆಗೆ ಅಥವಾ ತುರ್ತು ನಿಧಿಗಾಗಿ ಬಳಸಬಹುದು.

ಇದನ್ನೂ ಓದಿ: ಮನೆ, ಸೈಟ್ ಖರೀದಿ ನಿಮ್ಮ ಹೆಂಡತಿ ಹೆಸರಿನಲ್ಲಿ ಮಾಡಿ! ಲಕ್ಷ ಲಕ್ಷ ಉಳಿತಾಯ

Post office RD Scheme

ಆರ್ ಡಿ ಖಾತೆಯು ಪ್ರಾರಂಭಿಸಲು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್‌ಗೆ ಹೋಗಿ ಫಾರ್ಮ್ ತುಂಬಿ, ಆಧಾರ್ ಹಾಗೂ ಪ್ಯಾನ್ ನೀಡಬೇಕು. ಖಾತೆ ಆರಂಭದ ದಿನಾಂಕದ ಆಧಾರದ ಮೇಲೆ ತಿಂಗಳಿನಲ್ಲಿ 15ನೇ ತಾರೀಖು ಅಥವಾ ಕೊನೆಯ ದಿನದೊಳಗೆ ಹಣ ಹಾಕಬೇಕು.

ಇಲ್ಲವಾದರೆ ₹1 ರೂಪಾಯಿ ಪೆನಾಲ್ಟಿ ವಿಧಿಸಲಾಗುತ್ತದೆ. ನಾಲ್ಕು ಬಾರಿ ಇದೆ ರೀತಿ ಆದರೆ ಖಾತೆ discontinue ಆಗುತ್ತದೆ.

ಇದನ್ನೂ ಓದಿ: ಫೋನ್‌ಪೇ ಮೂಲಕವೇ ಗೋಲ್ಡ್ ಖರೀದಿ ಸಾಧ್ಯ! ಜೊತೆಗೆ ಬಂಪರ್ ಆಫರ್‌ಗಳು

ಅಗತ್ಯದ ಸಂದರ್ಭದಲ್ಲಿ ಈ ಯೋಜನೆಯ ಮೂಲಕ ಸಾಲ (Loan) ಸಹ ಪಡೆಯಬಹುದು. ಕನಿಷ್ಠ 12 ತಿಂಗಳ ಹೂಡಿಕೆ ನಂತರ, ಖಾತೆಯ ಶೇಕಡಾ 50ರಷ್ಟನ್ನು ಸಾಲವಾಗಿ (Loan) ಪಡೆಯಬಹುದು. ಈ ಸಾಲದ ಬಡ್ಡಿದರ ಸಾಮಾನ್ಯ ಬಡ್ಡಿದರಕ್ಕಿಂತ 2% ಹೆಚ್ಚು ಇರುತ್ತದೆ. ಇದು ತುರ್ತು ಸಂದರ್ಭಗಳಲ್ಲಿ ಬಹುಪಯೋಗಿಯಾಗಬಹುದು.

ಪೋಸ್ಟ್ ಆಫೀಸ್ ಆರ್ಡಿ ಯೋಜನೆಯು ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿದೆ. Monthly savings, long-term corpus ಮತ್ತು government-backed security ಬೇಕಾದವರು ಈ ಯೋಜನೆಯನ್ನು ಪರಿಗಣಿಸಬಹುದು.

Post Office RD Scheme gives 8 Lakh in 10 Years

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories